ಮುಲುoಡ್ ಬಂಟ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿಯವರ ಮಾರ್ಗದರ್ಶನದೊoದಿಗೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಕ್ಷಿತಿಜ್ ಶೆಟ್ಟಿ ಮತ್ತು ಪದಾಧಿಕಾರಿಗಳ ನೇತೃತ್ವದ ಅಯೋಜನೆಯಲ್ಲಿ ಮತ್ತು ಡಾಕ್ಟರ್ಸ್ ಎಸೋಸಿಯೇಷನ್ ಮುಂಬಯಿ ಇದರ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ವಿನಯ ಶೆಟ್ಟಿಯವರ ಸಹಯೋಗದೊಂದಿಗೆ ಮುಲುoಡ್ ನಲ್ಲಿ ರಕ್ತದಾನ ಶಿಬಿರವು ನವೆಂಬರ್ 22 ರವಿವಾರ ಬೆಳಿಗ್ಗೆ ಗಂಟೆ 9:00 ರಿಂದ ಮಧ್ಯಾಹ್ನ 3ರವರೆಗೆ ಜರಗಲಿದೆ. ಕಾರ್ಯಕ್ರಮದಲ್ಲಿ ಮುಲುoಡ್ ಬಂಟ್ಸ್ ನ ಸದಸ್ಯರೆಲ್ಲರೂ ಆಗಮಿಸಿ ರಕ್ತದಾನ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಲುoಡ್ ಬಂಟ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಡಾ. ಸತ್ಯಪ್ರಕಾಶ್ ಶೆಟ್ಟಿ, ಪದಾಧಿಕಾರಿಗಳಾದ ಡಾ. ಸದಾನಂದ ಶೆಟ್ಟಿ, ಡಾ. ರಂಜನ್ ಶೇಣವ, ಡಾ. ಅಜಿತ್ ಶೆಟ್ಟಿ, ಡಾ. ಶ್ರವಣ್ ಶೆಟ್ಟಿ, ಡಾ. ತುಷಾರ್ ಹೆಗ್ಡೆ, ಡಾ. ಪ್ರಥ್ವಿ ಶೆಟ್ಟಿ, ಡಾ. ಸ್ವರೂಪ್ ಹೆಗ್ಡೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊ.ನಂ- 9820140843 ಮತ್ತು ಮೊ. ನಂ- 9920211010 ರಲ್ಲಿ ಸಂಪರ್ಕಿಸಬಹುದಾಗಿದೆ.






















































































































