ಪುಣೆಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬಂಟರ ಸಂಘ ಪುಣೆ ಇದರ ಉತ್ತರ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ನಾರಾಯಣ ರಾಜೀವ್ ಹೆಗ್ಡೆಯವರು ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾದರು. ಜನವರಿ 13 ರಂದು ಪುಣೆ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ಅಧ್ಯಕ್ಷತೆಯಲ್ಲಿ ಸಂಘದ ಮಹಾಸಭೆಯು ಜರಗಿತು. ಈ ಸಂದರ್ಭದಲ್ಲಿ ಉತ್ತರ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ನೂತನ ಸಮಿತಿಯನ್ನು ಆಯ್ಕೆ ಮಾಡಿ ಅಧಿಕೃತವಾಗಿ ಘೋಷಿಸಲಾಯಿತು.
2024 – 26 ರ ಸಾಲಿಗೆ ಉತ್ತರ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರುಗಳಾಗಿ ಉದಯ ಎಚ್ ಶೆಟ್ಟಿ ಕಳತ್ತೂರು, ವಸಂತ್ ಅರ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸನ್ನ ಎಸ್ ಶೆಟ್ಟಿ, ಕೊಶಾಧಿಕಾರಿಯಾಗಿ ಸಂತೋಷ್ ಅರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಯೋಗೇಶ್ ಪಿ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ಗಣೇಶ್ ಎನ್ ಶೆಟ್ಟಿ, ಸಮಿತಿಯ ಪ್ರಧಾನ ಸಲಹೆಗಾರರಾಗಿ ರಾಜಾರಾಂ ಶೆಟ್ಟಿ, ಮ್ಯಾರೇಜ್ ಬ್ಯೂರೋ ಕಾರ್ಯಾಧ್ಯಕ್ಷರಾಗಿ ರಾಘು ಬಿ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷರಾಗಿ ಹರೀಶ್ ಜಿ ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಯಶವಂತ್ ಜೆ ಶೆಟ್ಟಿ, ಶಿಕ್ಷಣ ಸಮಿತಿಯ ಸಂಯೋಜಕರಾಗಿ ವಸಂತ್ ಎಸ್ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾಗಿ ಪ್ರಕಾಶ್ ಎಚ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾಗಿ ಮಂಜುನಾಥ್ ಅರ್ ಶೆಟ್ಟಿ, ವೈದ್ಯಕೀಯ ವಿಬಾಗದ ಕಾರ್ಯಾಧ್ಯಕ್ಷರಾಗಿ ಆನಂದ್ ವಿ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷರಾಗಿ ದಿವಾಕರ್ ಎಸ್. ಶೆಟ್ಟಿ, ಕ್ರೀಡಾ ಸಂಯೋಜಕರಾಗಿ ಪ್ರದೀಪ್ ವಿ ಶೆಟ್ಟಿ, ಜನ ಸಂಪರ್ಕಾಧಿಕಾರಿಗಳಾಗಿ ಸತೀಶ್ ಪಿ ಶೆಟ್ಟಿ ಮತ್ತು ಪ್ರಖ್ಯಾತ್ ಅರ್ ಶೆಟ್ಟಿ, ಸಮಿತಿ ಸದಸ್ಯರಾಗಿ ರಾಕೇಶ್ ಮಾಡ ಮತ್ತು ಜಯಕರ್ ಶೆಟ್ಟಿ, ಆಮಂತ್ರಿತ ಸದಸ್ಯರಾಗಿ ಕರುಣಾಕರ್ ಜೆ ಶೆಟ್ಟಿ, ಕರುಣಾಕರ್ ಸಿ ಶೆಟ್ಟಿ, ಸುನಿಲ್ ಬಿ ಶೆಟ್ಟಿ, ಉದಯ್ ಶೆಟ್ಟಿ, ದಿವಾಕರ್ ಶೆಟ್ಟಿ ಮಾಣಿಬೆಟ್ಟು, ಜಯಶೀಲ್ ಶೆಟ್ಟಿ ಮತ್ತು ಚಂದ್ರಹಾಸ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಉತ್ತರ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಪ್ರೇಮ ರಾಘವ ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಉಪಕಾರ್ಯಾಧ್ಯಕ್ಷೆಯರುಗಳಾಗಿ ರೇಣುಕಾ ದಿನೇಶ್ ಶೆಟ್ಟಿ ಮತ್ತು ಶಕುಂತಲಾ ವಸಂತ್ ಶೆಟ್ಟಿ, ಕಾರ್ಯದರ್ಶಿಯಾಗಿ ಸುಕನ್ಯಾ ದಿಲೀಪ್ ಶೆಟ್ಟಿ, ಕೋಶಾಧಿಕಾರಿಯಾಗಿ ಅರುಣಾ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ನಿಕಿತಾ ಪಿ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ರೇಖಾ ಎ ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷೆಯಾಗಿ ಶರ್ಮಿಳಾ ಪ್ರಕಾಶ್ ಶೆಟ್ಟಿ, ಸಾಂಸ್ಕ್ರತಿಕ ಕಾರ್ಯಾಧ್ಯಕ್ಷೆಯಾಗಿ ಪದ್ಮಾಕ್ಷಿ ಎಸ್ ಶೆಟ್ಟಿ, ಜೊತೆ ಕಾರ್ಯಾಧ್ಯಕ್ಷೆಯಾಗಿ ಸರಿತಾ ವಸಂತ್ ಶೆಟ್ಟಿ, ಶೈಕ್ಷಣಿಕ ವಿಭಾಗ ಕಾರ್ಯಾಧ್ಯಕ್ಷೆಯಾಗಿ ಜ್ಯೋತಿ ನಾರಾಯಣ ಹೆಗ್ಡೆ, ಆಮಂತ್ರಿತ ಸದಸ್ಯರಾಗಿ ಸಂಗೀತಾ ಉದಯ್ ಶೆಟ್ಟಿ, ಶೋಭಾ ಆನಂದ್.ಶೆಟ್ಟಿ, ದೀಪಾ ಯಶವಂತ್ ಶೆಟ್ಟಿ, ಆಶಾ ದಿನೇಶ್ ಶೆಟ್ಟಿ, ರಂಜಿತಾ ರಮೇಶ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾತ್ಮಕವಾಗಿ ಕಾರ್ಯಗೈಯ್ಯಲು ಪುಣೆ ಬಂಟರ ಸಂಘದಿಂದ ಉತ್ತರ ವಲಯದ ಸಮನ್ವಯಕರಾಗಿ ಹಾಗೂ ಸಲಹೆಗಾರರಾಗಿ ಹಿರಿಯರಾದ ಮಾಧವ ಶೆಟ್ಟಿ ಮತ್ತು ಗಣೇಶ್ ಪೂಂಜಾರವರು ಕಾರ್ಯ ನಿರ್ವಹಿಸಲಿದ್ದಾರೆ. ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ನಾರಾಯಣ ಹೆಗ್ಡೆಯವರಿಗೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಶಾಲು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ಪ್ರೇಮ ಅರ್ ಶೆಟ್ಟಿಯವರಿಗೆ ಬಂಟರ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಆಯ್ಕೆಯಾದ ಸಮಿತಿಯ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ನಾರಾಯಣ್ ಹೆಗ್ಡೆಯವರ ಕಿರು ಪರಿಚಯ :
ಪುಣೆಯಲ್ಲಿ ಹೋಟೆಲ್ ಉದ್ಯಮಿಯಾಗಿರುವ ನಾರಾಯಣ ರಾಜೀವ್ ಹೆಗ್ಡೆಯವರು ಮೂಲತ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊರ್ಗಿ ಹೊಸಮಠದವರು. ತವರೂರಿನಲ್ಲಿ ಪ್ರೌಡ ಶಿಕ್ಷಣವನ್ನು ಮುಗಿಸಿ ಪುಣೆಯಲ್ಲಿ ತನ್ನ ಕಾಲೇಜ್ ವಿಧ್ಯಾಭ್ಯಾಸ ಪೂರ್ತಿ ಗೊಳಿಸಿ ಸ್ವಂತ ಪರಿಶ್ರಮದಿಂದ ಹೋಟೆಲ್ ಉದ್ಯಮಿಯಾಗಿ ಬೆಳೆದು ಬಂದ ಇವರು ಉದ್ಯಮದಲ್ಲಿ ಹಂತ ಹಂತವಾಗಿ ಮೇಲೇರಿ ಯಶಸ್ಸನ್ನು ಕಂಡವರು. ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ, ಪುಣೆ ತುಳುಕೂಟದಲ್ಲಿ ಕ್ರೀಡಾ ಕಾರ್ಯಾಧ್ಯಕ್ಷರಾಗಿ ಸೇವೆಗೈಯುತ್ತಿದ್ದ ಇವರು ಇದೀಗ ಪುಣೆ ಬಂಟರ ಸಂಘದ ಉತ್ತರ ಪಶ್ಚಿಮ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ ಸೇವಾ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಶೈಕ್ಷಣಿಕ, ಕಲಾ ಕ್ಷೇತ್ರಗಳಿಗೆ ಪ್ರೋತ್ಸಾಹಕರಾಗಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಇವರ ಕಾಲಾವಧಿಯಲ್ಲಿ ಸಂಘವು ಮತ್ತಷ್ಟು ಸಮಾಜದ ಅಭಿವೃದ್ದಿ ಕಾರ್ಯ ಯೋಜನೆಗಳ ಮೂಲಕ ಉತ್ತರೋತ್ತರ ಅಭಿವೃದ್ದಿಯನ್ನು ಹೊಂದಲಿ ಎಂದು ನಾರಾಯಣ ಹೆಗ್ಡೆಯವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇವೆ.
ವರದಿ, ಚಿತ್ರ : ಹರೀಶ್ ಮೂಡಬಿದ್ರಿ