ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗವು ಖ್ಯಾತ ಸಂಘಟಕ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರಿಗೆ ‘ಸಾರ್ವಭೌಮ’ ಗೌರವ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 10ರಂದು ಶನಿವಾರ ಮಧ್ಯಾಹ್ನ 2 ರಿಂದ ವಿಶ್ವವಿದ್ಯಾಲಯದ ಕಲೀನಾ ಕ್ಯಾಂಪಸ್ಸಿನಲ್ಲಿರುವ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಮಾನ್ಯ ಸುನಿಲ್ ಕುಮಾರ್ ಅವರು ಈ ಗೌರವ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಂಬಯಿಯ ಗಣ್ಯರ ಉಪಸ್ಥಿತಿಯಲ್ಲಿ ಈ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ಗೌರವಾನ್ವಿತ ಅತಿಥಿಗಳಾಗಿ ಸದಾಶಿವ ಶೆಟ್ಟಿ, ಕೂಳೂರು ಕನ್ಯಾನ (ಆಡಳಿತ ನಿರ್ದೇಶಕರು, ಹೇರಂಬ ಇಂಡಸ್ಟ್ರೀಸ್), ಆನಂದ ಶೆಟ್ಟಿ (ಆಡಳಿತ ನಿರ್ದೇಶಕರು, ಆರ್ಗಾನಿಕ್ ಕೆಮಿಕಲ್ಸ್), ಸುಧಾಕರ ಹೆಗ್ಡೆ (ಆಡಳಿತ ನಿರ್ದೇಶಕರು, ತುಂಗಾ ಗ್ರೂಪ್ ಆಫ್ ಹೊಟೇಲ್ಸ್), ರವಿ ಎಸ್. ಶೆಟ್ಟಿ (ಆಡಳಿತ ನಿರ್ದೇಶಕರು, ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್) ಚಂದ್ರಹಾಸ ಕೆ. ಶೆಟ್ಟಿ (ಆಧ್ಯಕ್ಷರು, ಬಂಟರ ಸಂಘ, ಮುಂಬಯಿ), ಡಾ. ಸುನೀತಾ ಎಂ. ಶೆಟ್ಟಿ (ಹಿರಿಯ ಸಾಹಿತಿ, ಮುಂಬಯಿ), ಡಾ. ಸುರೇಶ್ ರಾವ್ (ಖ್ಯಾತ ವೈದ್ಯರು, ಸಂಜೀವಿನಿ ಆಸ್ಪತ್ರೆ, ಮುಂಬಯಿ), ಹರೀಶ್ ಜಿ. ಅಮೀನ್ (ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್, ಮುಂಬಯಿ), ಸುರೇಶ್ ಕಾಂಚನ್ (ಗೌರವ ಅಧ್ಯಕ್ಷರು, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ, ಹೋಬಳಿ, ಮುಂಬಯಿ), ಶ್ರೀಮತಿ ಉಮಾ ಕೃಷ್ಣ ಶೆಟ್ಟಿ (ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ, ಬಂಟರ ಸಂಘ ಮುಂಬಯಿ) ಇವರು ಗೌರವಾನ್ವಿತ ಅತಿಥಿಗಳಾಗಿ ಪಾಳ್ಗೊಳ್ಳಲಿದ್ದಾರೆ.
ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾದ ಚಂದ್ರಶೇಖರ ಪಾಲೆತ್ತಾಡಿ ಅವರು ಪ್ರಧಾನ ಸಂಪಾದಕರಾಗಿ ಹಾಗೂ ಸಂಪಾದಕರಾಗಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮ ಸುಧಾಕರ ಶೆಟ್ಟಿ ಅವರು ಕಾರ್ಯ ನಿರ್ವಹಿಸಿದ್ದಾರೆ.
ಕರ್ನಿರೆ ವಿಶ್ವನಾಥ ಶೆಟ್ಟಿ (ಉಪಾಧ್ಯಕ್ಷರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಜಯಕರ ಶೆಟ್ಟಿ, ಇಂದ್ರಾಳಿ (ಕಾರ್ಯದರ್ಶಿ, ಜಾಗತಿಕ ಬಂಟರ ಸಂಘ, ಒಕ್ಕೂಟ), ಸತೀಶ್ ಅಡಪ್ಪ ಸಂಕಬೈಲ್ (ಜೊತೆ ಕಾರ್ಯದರ್ಶಿ, ಜಾಗತಿಕ ಬಂಟರ ಸಂಘ, ಒಕ್ಕೂಟ), ರತ್ನಾಕರ ಶೆಟ್ಟಿ, ಮುಂಡ್ಕೂರು (ಉಪಾಧ್ಯಕ್ಷರು, ಎಸ್.ಎಂ., ಶೆಟ್ಟಿ ಶಿಕ್ಷಣ ಸಂಸ್ಥೆ, ಪೊವಾಯಿ), ಉಳ್ತೂರು ಮೋಹನದಾಸ ಶೆಟ್ಟಿ (ಕಾರ್ಯಾಧ್ಯಕ್ಷರು, ಮಾತೃಭೂಮಿ ಕೋ-ಅಪರೇಟಿವ್ ಸೊಸೈಟಿ, ಬಂಟರ ಸಂಘ, ಮುಂಬಯಿ), ಪ್ರವೀಣ್ ಭೋಜ ಶೆಟ್ಟಿ (ನಿರ್ದೇಶಕರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಡಾ. ಆರ್.ಕೆ. ಶೆಟ್ಟಿ (ಗೌ.ಪ್ರ. ಕಾರ್ಯದರ್ಶಿ, ಬಂಟರ ಸಂಘ, ಮುಂಬಯಿ), ಶಶಿಧರ ಕೆ. ಶೆಟ್ಟಿ, ಇನ್ನಂಜೆ (ಅಧ್ಯಕ್ಷರು, ತುಳುಕೂಟ ಫೌಂಡೇಶನ್, ನಾಲಾಸೋಪಾರ), ರವೀಂದ್ರನಾಥ ಭಂಡಾರಿ (ಕಾರ್ಯಾಧ್ಯಕ್ಷರು, ಬಂಟರವಾಣಿ) ಇವರು ಸಲಹಾ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಅಶೋಕ ಪಕ್ಕಳ (ಪ್ರಧಾನ ಸಂಪಾದಕರು, ಬಂಟರವಾಣಿ), ಪ್ರೇಮನಾಥ ಮುಂಡ್ಕೂರು (ಸಂಪಾದಕರು, ಬಂಟರವಾಣಿ), ಕರ್ನೂರು ಮೋಹನ್ ರೈ (ಸಂಘಟಕರು, ಮುಂಬಯಿ), ಜಗನ್ನಾಥ ಬಾಳ (ಸದಸ್ಯರು, ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು), ಕೊಲ್ಲಾಡಿ ಬಾಲಕೃಷ್ಣ ರೈ (ಮಾಜಿ ಕೋಶಾಧಿಕಾರಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಡಾ. ದಿನೇಶ ಶೆಟ್ಟಿ, ರೆಂಜಾಳ (ಹಿರಿಯ ಉಪಸಂಪಾದಕರು, ಉದಯವಾಣಿ, ಮುಂಬಯಿ ಆವೃತ್ತಿ), ದಿನೇಶ್ ಕುಲಾಲ್ (ಪತ್ರಕರ್ತರು, ಮುಂಬಯಿ) ಇವರು ಸಂಪಾದಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವೂ ನಡೆಯಲಿದೆ.