ಯು.ಎ.ಇ ಬಂಟ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಯುಎಇಯ ತುಳು ಕನ್ನಡಿಗರ ಜನಾನುರಾಗಿದ್ದ ದಿ. ದೇವೇಶ್ ಆಳ್ವರವರ ಸಂತಾಪ ಸೂಚಕ ಕಾರ್ಯಕ್ರಮವು ಜ.14 ರಂದು ನಗರದ ಬರ್ ದುಬೈಯ ಫಾರ್ಚೂನ್ ಅಟ್ರ್ಯೂಂ ಹೋಟೆಲ್ ರೂಫ್ ಟವರ್ ನಲ್ಲಿ ನಡೆಯಿತು. ಡಿ.30 ರಂದು ದುಬಾಯಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದೇವೇಶ್ ಆಳ್ವರವರ ಯುಎಇಯಲ್ಲಿ ಇರುವ ನೂರಾರು ಆತ್ಮೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆತ್ಮೀಯ ಮಿತ್ರನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಮೊದಲಿಗೆ ಯುಎಇಯ ಬಂಟ್ಸ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಲವಾರು ಸಾಧನೆಗಳನ್ನು ಮಾಡಿ ದೇವರ ಪಾದ ಸೇರಿದ ದೇವೇಶ್ ರವರು ನಮ್ಮ ಮುಂದೆ ಈಗಲೂ ಇದ್ದಾರೆ. 2001 ರಂದು ದುಬಾಯಿಗೆ ಬಂದು ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಊರಿನ ಯುವಕರಿಗೆ ಉದ್ಯೋಗದಾತರಾಗಿದ್ದರು. ಯುಎಇ ಬಂಟ್ಸ್ ಸಂಘದ ಪ್ರಧಾನ ಕಾರ್ಯದರ್ಶಿಯಾದ ಮೇಲೆ ಹಲವಾರು ಕಾರ್ಯಕ್ರಮಗಳ ಯಶಸ್ವಿಗೆ ಕಾರಣಕರ್ತರಾಗಿದ್ದರು. ಬಂಟ ಕ್ರೀಡಾ ಅಭಿಮಾನಿಗಳಿಗೆ ಬಿ.ಪಿ.ಎಲ್ (ಬಂಟ್ಸ್ ಪ್ರೀಮಿಯರ್ ಲೀಗ್) ಆರಂಭಿಸಿ ಉತ್ತಮವಾಗಿ ನಡೆಸಿಕೊಂಡು ಬಂದಿರುವ ವಿಷಯಗಳನ್ನು ನೆನಪಿಸಿ ದೇವೆಶ್ ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಕೆ.ಎನ್.ಆರ್ ಐ. ಫೋರಂನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡುತ್ತಾ, ಸದಾ ನಗುಮುಖದ ವ್ಯಕ್ತಿಯಾಗಿದ್ದು ಸದಾ ಚೈತನ್ಯದ ಚಿಲುಮೆಯಂತೆ ಇದ್ದ ದೇವೇಶ್ ದೇವರ ಪಾದ ಸೇರಿಲ್ಲ. ಅವರು ನಮ್ಮ ನಿಮ್ಮೊಂದಿಗೆ ಈಗಲೂ ಇದ್ದಾರೆ. ಸಾವು ಬದುಕಿನ ನಡುವೆ ಹಲವು ತಿಂಗಳ ಕಾಲ ಹೋರಾಟ ಮಾಡಿ ಗೆಲುವನ್ನು ಕಾಣದೆ ಬಾರದ ಲೋಕಕ್ಕೆ ಹೋದಂತಹ ದೇವೇಶ್ ನ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ದುಃಖವನ್ನು ಸಹಿಸುವಂತಹ ಶಕ್ತಿಯನ್ನು ಪರಮಾತ್ಮನು ಮಡದಿ ರೇಶ್ಮ ದೇವೆಶ್, ಮಗ ಲಕ್ಷ್ ಆಳ್ವ, ತಂದೆ ತಾಯಿಗೆ ಹಾಗೂ ಸ್ನೇಹಿತರಿಗೆ ನೀಡಲಿ ಎಂದು ಪ್ರಾರ್ಥಿಸಿದರು. ಚಿತ್ರ ನಿರ್ಮಾಪಕ ಶೋಧನ್ ಪ್ರಸಾದ್ ರವರು ಮಾತನಾಡುತ್ತಾ, ಹಿರಿಯವರಲ್ಲಿ ಕಿರಿಯವನಾಗಿ ಕಿರಿಯವರಲ್ಲಿ ಹಿರಿಯಣ್ಣನಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ದೇವೇಶ್ ಆಳ್ವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಸುಂದರ ಶೆಟ್ಟಿ ಅಬುಧಾಬಿ, ಮನೋಹರ ತೋನ್ಸೆ ಅಬುಧಾಬಿ, ದೇವೇಶ್ ರವರ ಕಂಪನಿ ಪಾಲುದಾರರಾದ ಅರವಿಂದ ಕಾಮತ್, ಸ್ನೇಹಿತರಾದ ವಿಘ್ನೇಶ್ ರವರು ಮಾತನಾಡಿದರು.
ಉದ್ಯಮಿ ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್, ಉದ್ಯಮಿ ಜೋಸೆಫ್ ಮಥಾಯಿಸ್, ಬ್ರಾಹ್ಮಣ ಸಮಾಜದ ಸುಧಾಕರ ರಾವ್ ಪೇಜಾವರ, ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾದ ಸತೀಶ್ ಪೂಜಾರಿ, ಕರ್ನಾಟಕ ಸಂಘದ ದುಬಾಯಿಯ ಶಶಿಧರ್ ನಾಗರಾಜಪ್ಪ, ದಯಾ ಕಿರೋಡಿಯಾನ್, ನಾಗರಾಜ ರಾವ್, ಯಕ್ಷಗಾನ ಅಭ್ಯಾಸ ಕೇಂದ್ರದ ದಿನೇಶ್ ಶೆಟ್ಟಿ ಕೊಟ್ಟಿಂಜ, ಯಕ್ಷ ಮಿತ್ರರು ದುಬಾಯಿಯ ಜಯಂತ್ ಶೆಟ್ಟಿ, ಪಟ್ಲ ಫೌಂಡೇಶನ್ ಘಟಕ ದುಬಾಯಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಚಿತ್ರ ನಿರ್ಮಾಪಕರಾದ ಈಶ್ವರಿದಾಸ್ ಶೆಟ್ಟಿ, ಉದ್ಯಮಿಗಳಾದ ಪ್ರೇಮ್ ನಾಥ್ ಶೆಟ್ಟಿ, ಗುಣಶೀಲ್ ಶೆಟ್ಟಿ, ರತ್ನಾಕರ ಶೆಟ್ಟಿ, ಗಮ್ಮತ್ ಕಲಾವಿದರು ದುಬಾಯಿಯ ವಿಶ್ವನಾಥ ಶೆಟ್ಟಿ, ವಾಸು ಶೆಟ್ಟಿ ಹಾಗೂ ಯುಎಇಯಲ್ಲಿ ಇರುವ ತುಳು ಕನ್ನಡದ ಐವತ್ತಕ್ಕೂ ಅಧಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜೇಶ್ ಕುತ್ತಾರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಗೆ ದೇವೇಶ್ ಆಳ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)