ಬಂಟರ ಸಂಘ ಪುಣೆ ಇದರ ಯುವ ವಿಭಾಗದ ವತಿಯಿಂದ ಬಂಟ ಸಮಾಜ ಬಾಂಧವರಿಗಾಗಿ ಬಂಟ್ಸ್ ಬಾಕ್ಸ್ ಕ್ರಿಕೆಟ್ ಲೀಗ್ ಸೀಸನ್ 3 ರ ಬಾಕ್ಸ್ ಕ್ರಿಕೆಟ್ ಪಂದ್ಯಾಟವು ಜ 13 ರಂದು ಗ್ರೀನ್ ಬಾಕ್ಸ್ ಟರ್ಫ್, ಬಂಡಾರ್ಕರ್ ಇನ್ಸ್ಟಿಟ್ಯೂಟ್, ಲಾ ಕಾಲೇಜು ರೋಡ್ ಪುಣೆ ಇಲ್ಲಿ ಜರಗಿತು. ಪುಣೆ ಬಂಟರ ಸಂಘದ ಯುವ ವಿಬಾಗದ ಕಾರ್ಯಾಧ್ಯಕ್ಷ ಉದಯ್ ಜೆ ಶೆಟ್ಟಿ ಮತ್ತು ಯುವ ಸಮಿತಿಯ ನೇತೃತ್ವದಲ್ಲಿ ನಡೆದ ಈ ಬಾಕ್ಸ್ ಕ್ರಿಕೆಟ್ ಪಂದ್ಯಾಟಕ್ಕೆ ಮುಖ್ಯ ಅತಿಥಿಗಳಾಗಿ ಅಗಮೀಸಿದ್ದ ಪುಣೆ ಕನ್ನಡ ಸಂಘದ ಅಧ್ಯಕ್ಷ ಶ್ರೀ ಕುಶಾಲ್ ಹೆಗ್ಡೆ, ಗೌರವ ಅತಿಥಿಗಳಾದ ಪುಣೆ ಬಂಟರ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಉಪಸ್ಥಿತರಿದ್ದು ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಪ್ರಮುಖರಾದ ಚಂದ್ರಹಾಸ್ ಶೆಟ್ಟಿ ಎರ್ಮಾಳ್, ಪ್ರವೀಣ್ ಶೆಟ್ಟಿ ಪುತ್ತೂರು, ಅಜಿತ್ ಹೆಗ್ಡೆ, ಸುಲತಾ ಎಸ್.ಶೆಟ್ಟಿ, ಶಮ್ಮಿ ಎ ಹೆಗ್ಡೆ, ದಿನೇಶ್ ಶೆಟ್ಟಿ ಕಳತ್ತೂರು, ಗಣೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಮಾಧವ ಶೆಟ್ಟಿ, ಕಿಶೋರ್ ಹೆಗ್ಡೆ, ಚಂದ್ರಶೇಖರ್ ಶೆಟ್ಟಿ ನಿಟ್ಟೆ, ಗಣೇಶ್ ಪೂಂಜಾ, ಶೇಖರ್ ಶೆಟ್ಟಿ ,ನಾರಾಯಣ್ ಹೆಗ್ಡೆ ,ವಸಂತ್ ಶೆಟ್ಟಿ, ಪ್ರಸನ್ನ ಶೆಟ್ಟಿ, ದಾಮೋದರ್ ಶೆಟ್ಟಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪಂದ್ಯಾಟ ಉದ್ಘಾಟಿಸಿದ ಕುಶಾಲ್ ಹೆಗ್ಡೆ ಮತ್ತು ಸಂತೋಷ್ ಶೆಟ್ಟಿಯವರು ಸಾಂದರ್ಭಿಕವಾಗಿ ಮಾತನಾಡಿದರು. ಈ ಬಾಕ್ಸ್ ಕ್ರಿಕೆಟ್ ಲೀಗ್ ನಲ್ಲಿ ಪುಣೆ ನಗರದ ಬಂಟ ಸಮಾಜದ ಕಟೀಲ್ ಸ್ಟಾರ್ಸ್, ದೇಹು ರೋಡಿಸ್ ಎ, ಸಾಯಿ, ಸೆವೆನ್ ಸೂಪರ್ ಸ್ಟಾರ್ಸ್, ವೈ.ಬಿ.ಎಸ್ ವಾರಿಯರ್ಸ್, ನಾರ್ತ್ ವೆಸ್ಟ್ ಬಂಟ್ಸ್, ಫೀನಿಕ್ಸ್ 7, ಬಂಟ್ಸ್ ಅಸೋಸಿಯೇಷನ್ ಪುಣೆ, ವೈ.ಬಿ.ಎಸ್ ಟೈಟಾನ್, ದೇಹು ರೋಡಿಸ್ ಬಿ, ಯೂತ್ ಬಂಟ್ಸ್ ಪಿ. ಸಿ. ಎಂ. ಸಿ, ಕಟೀಲ್ ವಾರಿಯರ್ಸ್, ವೈ. ಬಿ. ಎಸ್ ಲಯನ್ಸ್, ಇನ್ಕ್ರೇಡಿಬ್ಲಸ್, ತುಳುವ ವಾರಿಯರ್ಸ್, ಯೂತ್ ಲೆಜೆಂಡ್ಸ್, ಟೀಂ ಅರ್. ಕೆ ಸೇರಿದಂತೆ 18 ತಂಡಗಳು ಪಾಲ್ಗೊಂಡಿದ್ದವು.
ಪಂದ್ಯಾವಳಿಯ ವಿವಿಧ ವಿಭಾಗಗಳ ಜವಾಬ್ದಾರಿಯ ಪ್ರಾಯೋಜಕತ್ವವನ್ನು ಬಂಟರ ಸಂಘ ಪುಣೆ, ಬಂಟರ ಸಂಘ ಮಹಿಳಾ ವಿಬಾಗ, ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಪ್ರವೀಣ್ ಶೆಟ್ಟಿ ಪುತ್ತೂರು, ಗೀತಾ ಶೆಟ್ಟಿ, ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಬಾಲಚಂದ್ರ ಶೆಟ್ಟಿ ಎರ್ಮಾಳ್, ಅಜಿತ್ ಹೆಗ್ಡೆ, ಗಣೇಶ್ ಶೆಟ್ಟಿ, ದಿನೇಶ್ ಶೆಟ್ಟಿ ಕಳತ್ತೂರು, ಗಣೇಶ್ ಹೆಗ್ಡೆ, ಶೇಖರ್ ಶೆಟ್ಟಿ, ಸುಧಾಕರ ಶೆಟ್ಟಿ, ಸಂತೋಷ್ ಶೆಟ್ಟಿ ಮಟ್ಟಾರ್, ವಿವೇಕಾನಂದ ಶೆಟ್ಟಿ, ನಾರಾಯಣ ಹೆಗ್ಡೆ , ಉದಯ ಶೆಟ್ಟಿ ಕಳತ್ತೂರು, ಪ್ರಸನ್ನ ಶೆಟ್ಟಿ, ದಾಮೋಧರ್ ಶೆಟ್ಟಿ, ಸುಧಾಕರ ಶೆಟ್ಟಿ, ಮಾಧವ ಶೆಟ್ಟಿ, ಮೋಹನ್ ಶೆಟ್ಟಿ, ಸಂಧ್ಯಾ ವಿ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಗಣೇಶ್ ಪೂಂಜಾ, ವಿಟ್ಟಲ್ ಶೆಟ್ಟಿ, ರವಿ ಶೆಟ್ಟಿ, ನೀಲೇಶ್ ಜೆ ಶೆಟ್ಟಿ, ಧೀರಜ್ ಶೆಟ್ಟಿ ವಹಿಸಿಕೊಂಡು ಸಹಕರಿಸಿದರು.
ಲೀಗ್ ಮಾದರಿಯಲ್ಲಿ ಜರಗಿದ ಈ ಪಂದ್ಯಾಟದ ಫೈನಲ್ ಪಂದ್ಯವು ವೈ. ಬಿ ಎಸ್ ವಾರಿಯರ್ಸ್ ಮತ್ತು ಬಂಟ್ಸ್ ನಾರ್ತ್ ವೆಸ್ಟ್ ನಡುವೆ ನಡೆಯಿತು. ವೈ. ಬಿ ಎಸ್ ವಾರಿಯರ್ಸ್ ಪಂದ್ಯದಲ್ಲಿ ಜಯ ಗಳಿಸಿ ಬಂಟ್ಸ್ ಬಾಕ್ಸ್ ಕ್ರಿಕೆಟ್ ಲೀಗ್ ಸೀಸನ್ 3 ರ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ಬಂಟ್ಸ್ ನಾರ್ತ್ ವೆಸ್ಟ್ ರನ್ನರ್ಸ್ ಆಗಿ ಟ್ರೋಫಿ ಪಡೆಯಿತು. ವಿಜೇತ ತಂಡಗಳಿಗೆ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಟ್ರೋಫಿ ನೀಡಿ ಅಭಿನಂದಿಸಿದರು. ಪುಣೆ ಬಂಟರ ಸಂಘದ ಯುವ ವಿಬಾಗದ ಸದಸ್ಯರುಗಳು ಬಾಕ್ಸ್ ಕ್ರಿಕೆಟ್ ಲೀಗ್ ಪಂದ್ಯಾಟ ಯಶಸ್ವಿಯಾಗಿ ನಡೆಯಲು ಸಹಕರಿಸಿದರು.
ವರದಿ, ಚಿತ್ರ : ಹರೀಶ್ ಮೂಡಬಿದ್ರಿ