
ಆಳ್ವಾಸ್ ಹೆಲ್ತ್ ಸೆಂಟರ್ ವತಿಯಿಂದ ಮಾರ್ಚ್ 08 ರಂದು ಬೆಳಿಗ್ಗೆ 10ರಿಂದ 1 ಘಂಟೆಯವರೆಗೆ ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ನಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಹೈಡ್ರೋಸಿಲ್, ಮೂಲವ್ಯಾಧಿ, ಹರ್ನಿಯ, ಥೈರಾಯ್ಡ್ ಸಮಸ್ಯೆ, ಮಧುಮೇಹ ಪಾದದ ಚಿಕಿತ್ಸೆ, ಅಬ್ಸೆಸ್ ಡ್ರೆನೇಜ್, ಪಿತ್ತ ಕೋಶದ ಕಲ್ಲುಗಳ ಚಿಕಿತ್ಸೆ, ಸ್ತನದ ಗಡ್ಡೆ/ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸೇರಿದಂತೆ ಮುಂತಾದ ರೋಗಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ತಜ್ಞರ ಸಲಹೆ ಲಭಿಸಲಿದೆ. ಹೊಟ್ಟೆ ನೋವು ವಿಶೇಷವಾಗಿ ಬಲಭಾಗದಲ್ಲಿ ತೀವ್ರ ನೋವು, ಹೊಟ್ಟೆಯಲ್ಲಿ ಅಥವಾ ದೇಹದ ಬೇರೆ ಭಾಗದಲ್ಲಿ ಗಡ್ಡೆ, ಹರ್ನಿಯದ ಲಕ್ಷಣಗಳು, ಮಲಬದ್ಧತೆ ಜೊತೆಗೆ ರಕ್ತ ಸ್ರಾವ, ಮಲದ್ವಾರದಲ್ಲಿ ನೋವು/ಉಬ್ಬರಗಳ ಸಂಧರ್ಭದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಈ ಶಿಬಿರದ ಮೂಲಕ ಉಚಿತ ಶಸ್ತ್ರಚಿಕಿತ್ಸೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 9945722671 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.



























































































































