ಬಂಟ್ವಾಳದ ಬಂಟರ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬಂಟರ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ವತಿಯಿಂದ ಸ್ವರ್ಧಿಸಿ ಮಹಿಳೆಯರ ವಿಭಾಗದ ತ್ರೋಬಾಲ್ ಸ್ವರ್ಧೆಯಲ್ಲಿ ಅತ್ತ್ಯುತ್ತಮವಾಗಿ ಆಟವಾಡಿ ಹಲವು ಬಲಿಷ್ಠ 14 ತಂಡಗಳು ಫೈನಲ್ ಪಂದ್ಯದಲ್ಲಿ ಜಿದ್ದಾಜಿದ್ದಿನ ಸ್ವರ್ಧೆ ನೀಡಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.


ಪುತ್ತೂರು ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸವಿತಾ ಭಂಡಾರಿ ನೇತೃತ್ವದ ಪುತ್ತೂರು ಬಂಟರ ಸಂಘದ ಮಹಿಳಾ ವಿಭಾಗದ ತಂಡದಲ್ಲಿ ನಾಯಕತ್ವವನ್ನು ದೀಕ್ಷಾ ರೈ ಪಟ್ಟೆಯವರು ವಹಿಸಿಕೊಂಡಿದ್ದರು. ಅವನಿ ರೈ, ಖುಷಿ ರೈ, ವೈಷ್ಣವಿ ರೈ, ಸಾಕ್ಷಿ ರೈ, ರೇಖಾ ರೈ, ಶಾಂಭವಿ ರೈ, ಶ್ವೇತ ರೈ, ಧನ್ವಿ ರೈಯವರು ಭಾಗವಹಿಸಿದ್ದರು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಪದಾಧಿಕಾರಿಗಳು ಸಹಕಾರ ನೀಡಿದರು. ರಾಷ್ಟ್ರೀಯ ಕ್ರೀಡಾಪಟು, ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮನಾಥ ಶೆಟ್ಟಿ ಕಾವುರವರು ಕ್ರೀಡಾಪಟುಗಳಿಗೆ ತರಬೇತು ನೀಡಿದರು.









































































































