Author: admin
ಸಗ್ರಿ ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇಗುಲದ ನೂತನ ಧ್ವಜಸ್ತಂಭ ಶೋಭಾಯಾತ್ರೆಗೆ ಚಾಲನೆ ಕಾರ್ಯಕ್ರಮ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ನಡೆಯಿತು. ಚಾಲನೆ ನೀಡಿದ ಶ್ರೀ ಕಾಣಿಯೂರು ಶ್ರೀಪಾದರು ಮಾತನಾಡಿ, 1.41 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ದೇಗುಲದ ಕಾರ್ಯ ಶೀಘ್ರವಾಗಿ ವ್ಯವಸ್ಥಿತವಾಗಿ ನೆರವೇರಲಿ ಎಂದು ಆಶೀರ್ವಚನ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಜ್ವಲ್ ಡೆವಲಪರ್ನ ಎಂಡಿ ಪುರುಷೋತ್ತಮ ಪಿ. ಶೆಟ್ಟಿ, ಆರ್ಕಿಟೆಕ್ಟ್ ಶ್ರೀನಾಗೇಶ್ ಹೆಗ್ಡೆ, ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಕಾಪು ಹೊಸ ಮಾರಿಗುಡಿ ದೇಗುಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಉದ್ಯಮಿ ಡಾ| ತಲ್ಲೂರು ಶಿವರಾಮ ಶೆಟ್ಟಿ, ಮಟ್ಟು ಶ್ರೀ ವಿಷ್ಣುಮೂರ್ತಿ ದೇಗುಲದ ಅಧ್ಯಕ್ಷ ಮಟ್ಟು ಲಕ್ಷ್ಮೀನಾರಾಯಣ ರಾವ್, ಕೊಡವೂರು ಶ್ರೀ ಶಂಕರನಾರಾಯಣ ದೇಗುಲದ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ತಿಕ್ ಎಸ್ಟೇಟ್ನ ಹರಿಯಪ್ಪ ಕೋಟ್ಯಾನ್, ಸ್ವರ್ಣೋದ್ಯಮಿ ಮುರಹರಿ ಕೆ. ಆಚಾರ್ಯ, ಉದ್ಯಮಿ ಗಳಾದ ರಂಜನ್ ಕಲ್ಕೂರ್, ತೋನ್ಸೆ ಮನೋಹರ ಶೆಟ್ಟಿ, ನಗರಸಭೆ…
ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಮಹಿಳೆಯರು ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಾಗಿದೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿಕಾ ಶೆಟ್ಟಿ ಆಗಮಿಸಿರುವುದು ಸಂತಸದ ವಿಚಾರವಾಗಿದೆ. ಡಾ. ಪ್ರೀತಿಕಾ ಶೆಟ್ಟಿಯಂತಹ ಸಂಪನ್ಮೂಲ ಮಹಿಳೆಯರು ನಮ್ಮ ಸಮಾಜದಲ್ಲಿ ಮಾದರಿಯಾಗಿ ಗುರುತಿಸಿಕೊಳ್ಳುತ್ತಾರೆ. ಯಾಕೆಂದರೆ ನಮ್ಮ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದುಕೊಂಡು ಡಾಕ್ಟರ್, ಇಂಜಿನಿಯರ್ ಗಳಾಗಿ ಜೀವನದಲ್ಲಿ ಹೇಗೆ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಬಹುದೆಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ, ಮಕ್ಕಳು ಇವರನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಿ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದಾಗಿದೆ ಎಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ರಾಕೆಶ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು. ಅವರು ಮಾ ೧೯ ರಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಿನಿ ಸಭಾಗೃಹದಲ್ಲಿ ನಡೆದ ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿಕಾ ಶೆಟ್ಟಿಯವರಿಂದ ಮಹಿಳಾ ಆರೋಗ್ಯದ ಬಗ್ಗೆ…
ಕೊರ್ಗಿ ವಿಠಲ ಶೆಟ್ಟಿ ಅವರು ಕಳೆದ ಹಲವು ವರ್ಷಗಳಿಂದಲೂ ಸಹಾಯ, ಸಹಕಾರ ಹಾಗೂ ಸಮ್ಮಿಲನದೊಂದಿಗೆ ವಿಶಿಷ್ಟ ಕಾರ್ಯ ವೈಖರಿಯ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾಗಿವುದು ನಿಜಕ್ಕೂ ಹೆಮ್ಮೆಯ ವಿಚಾರ. ನಮ್ಮ ದೇಹದ ಯಾವುದೇ ಭಾಗಕ್ಕೂ ಕೂಡಾ ನೋವಾದರೂ ಪಂಚೇಂದ್ರಿಯಗಳೊಂದಿಗೆ ಇಡೀ ದೇಹವೇ ಆ ಯಾವ ಭಾಗವನ್ನು ಕೇಂದ್ರೀಕರಿಸಿ ,ಶಮನಗೊಳಿಸುವ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವಂತೆ, ಅದೇ ರೀತಿಯಲ್ಲಿ ಸಮಾಜದ ನೋವು ನಲಿವುಗಳಿಗೆ ಟ್ರಸ್ಟ್ ಮೂಲಕ ಸದಾ ಸ್ಪಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಹೇಳಿದರು. ಅವರು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ (ರಿ.)ಕುಂಭಾಶಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ವಿಶೇಷ ಚೇತನ ವಿದ್ಯಾರ್ಥಿಗಳ ಪರಿಕರ ವಿತರಣೆ, ಕ್ರೀಡೆ ಹಾಗೂ ಕಲಿಕೆಯಲ್ಲಿ ಸಾಧನೆಗೈದ ಸಾರ್ಥಕ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ಸಮನ್ವಯ ಸಾಂಗತ್ಯ -2023…
ಭಾರತ್ ಫೌಂಡೇಶನ್ ವತಿಯಿಂದ ಐದನೇ ಆವೃತ್ತಿಯ ಮಂಗಳೂರು ಲಿಟ್ಫೆಸ್ಟ್ ನ ಎರಡನೇ ದಿನದ ಕಾರ್ಯಕ್ರಮಗಳು ರವಿವಾರ ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಭವನದಲ್ಲಿ ನಡೆಯಿತು. ಬೆಳಗ್ಗಿನಿಂದ ಸಂಜೆಯ ವರಗೆ ವಿವಿಧ ಗೋಷ್ಠಿಗಳು ಆಯೋಜನೆಗೊಂಡು ಎರಡು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು. ರಜಾ ದಿನವಾದ್ದ ರಿಂದ ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕಂಡು ಬಂತು. ಆದಿಜಾಂಬವ ಮೂಲ ಪುರುಷರಾಗಿದ್ದು, ಭೂಮಿ ಹುಟ್ಟುವ 6 ತಿಂಗಳು ಮೊದಲೇ ಆತನ ಜನನ. ಆಗ ಎಲ್ಲ ಕಡೆಗಳಲ್ಲಿ ಸಮುದ್ರವಿತ್ತು. ಕಡಲಿನಲ್ಲಿ ಹುಟ್ಟಿದ ಕಾರಣ ಆತನಿಗೆ ಜಾಂಬವ ಎನ್ನುವ ಹೆಸರು ಬಂತು. ಅನಂತರದಲ್ಲಿ ಆದಿಮಾಯೆ, ಬ್ರಹ್ಮ,ವಿಷ್ಣು ಮಹೇಶ್ವರರ ಜನನವಾಗುತ್ತದೆ ಹೀಗೆಂದು ದಕ್ಕಲ ಜಾಂಬವ ಪುರಾಣದ 18 ಯುಗಗಳ ಕತೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟವರು ದಕ್ಕಲ ಮುನಿಸ್ವಾಮಿ. ಹರಟೆ ಕಟ್ಟೆಯಲ್ಲಿ ತಮ್ಮ ದಕ್ಕಲ ಜಾಂಬವ ಪುರಾಣದ ಕುರಿತು ಮಾತನಾಡಿದರು. ದಕ್ಕಲ ಮುನಿಸ್ವಾಮಿ ಅವರ ಒಡನಾಡಿಯಾಗಿರುವ ಘನಶ್ಯಾಮ್ ಅವರು ವಿವರಣೆ ನೀಡಿ, ಊರಿಂದ ಊರಿಗೆ ಹೋಗಿ ದಕ್ಕಲ ಜಾಂಬವ ಪುರಾಣವನ್ನು ಜನರಿಗೆ…
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ದಾನಿಗಳಾದ ಬೆಂಗಳೂರಿನ ಉದ್ಯಮಿ ಸುನಿಲ್ ಆರ್. ಶೆಟ್ಟಿ ಅವರಿಂದ ಕೊಡಮಾಡಿದ ನೂತನ ಬ್ರಹ್ಮರಥದ ಪುರಪ್ರವೇಶ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಫೆ. 15 ಹಾಗೂ 16 ರಂದು ನಡೆಯಲಿದೆ. ಫೆ.15 ರಂದು ಕುಂಭಾಶಿ. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಬಗ್ವಾಡಿ, ನೆಂಪು ವಂಡ್ಸೆ, ಚಿತ್ತೂರು, ಈಡೂರು, ಜಡ್ಕಲ್ ಹಾಲ್ಕಲ್ ಮಾರ್ಗವಾಗಿ ಪುರಮೆರವಣಿಗೆಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುವುದು. ರಥ ಸಾಗುವ ಮಾರ್ಗದಲ್ಲಿ ಅಲ್ಲಿನ ಮುಖ್ಯ ದೇಗುಲಗಳ ವತಿಯಿಂದ ನೂತನ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಕಾಂತಾರ…ಕಾಂತಾರ…ಕಾಂತಾರ…ಎಲ್ಲರ ಬಾಯಲ್ಲೂ ಈಗ ಈ ಸಿನಿಮಾದ್ದೇ ಸುದ್ದಿ. ‘ಹೊಂಬಾಳೆ ಫಿಲ್ಮ್ಸ್’ ನಿರ್ಮಿಸಿ, ರಿಷಬ್ ಶೆಟ್ಟಿ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಆಭಿನಯಿಸಿರುವ ಈ ಕನ್ನಡ ಚಲನಚಿತ್ರ ಇತ್ತೀಚೆಗೆ ಬೆಳ್ಳಿ ತೆರೆಗೆ ಅಪ್ಪಳಿಸಿದ ವೇಗಕ್ಕೆ ಗಲ್ಲಾಪೆಟ್ಟಿಗೆ ಅಕ್ಷರಶಃ ಉಡಾಯಿಸಲ್ಪಟ್ಟಿದೆ! ವಿಶ್ವದೆಲ್ಲೆಡೆ ಭರ್ಜರಿ ಪ್ರದರ್ಶನಗಳನ್ನು ಕಂಡು ಕೋಟಿ-ಕೋಟಿ ರೂ.ಬಾಚುತ್ತಿರುವ ಈ ಚಿತ್ರದ ಯಶಸ್ಸು ಕಂಡು ಇಡೀ ಸ್ಯಾಂಡಲ್ವುಡ್ ಬೆಕ್ಕಸ ಬೆರಗಾಗಿದೆ! ಕರ್ನಾಟಕದ ಕರಾವಳಿಯ ಅತ್ಯಂತ ಶ್ರೀಮಂತ ಸಂಸ್ಕೃತಿ ಎನಿಸಿರುವ ದೈವಾರಾಧನೆಯ ಜೊತೆಗೆ ಜಮೀನ್ದಾರಿ ವ್ಯವಸ್ಥೆ, ಅರಣ್ಯ ಒತ್ತುವರಿ ಇತ್ಯಾದಿ ಸೂಕ್ಷ್ಮ ವಿಷಯಗಳನ್ನು ಆಧರಿಸಿ ನಿರ್ಮಿಸಲಾದ ವಿಭಿನ್ನ ಕಥಾವಸ್ತುವುಳ್ಳ ಈ ಚಲನಚಿತ್ರ ವೀಕ್ಷಕರನ್ನು ಮೋಡಿ ಮಾಡುತ್ತಿದೆ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಆಪ್ತ ಸಂಬಂಧ ಚಿತ್ರದುದ್ದಕ್ಕೂ ಅನಾವರಣಗೊಂಡಿದೆ. ಆಸ್ತಿಕರು ಶ್ರದ್ಧಾ-ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ದೈವದ ಕಾರಣಿಕವನ್ನು ಜಗದಗಲ ಪಸರಿಸುತ್ತಿರುವ ಈ ಚಲನಚಿತ್ರ ನಾಸ್ತಿಕರನ್ನೂ ಒಮ್ಮೆಗೆ ನಿಬ್ಬೆರಗಾಗಿಸುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಕಂಬಳ ಓಟಗಾರನಾಗಿ ಹಾಗೂ ದೈವ ನರ್ತಕನಾಗಿ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ತನ್ನ ಪಾತ್ರದೊಳಗೆ…
ಆಲ್ ಅಮೇರಿಕಾ ತುಳು ಅಸೋಸಿಯೇಶನ್ ಆಯೋಜಿಸಿದ ತುಳು ಉಚ್ಚಯ ತುಳುನಾಡಿನ ಮಂತ್ರಿ-ಶಾಸಕರು ತುಳುಭಾಷಾ ಮಾನ್ಯತೆಗೆ ಶ್ರಮಿಸಬೇಕು-ಭಾಸ್ಕರ್ ಶೇರಿಗಾರ್
ಮುಂಬಯಿ (ಆರ್ಬಿಐ), ಅ.18: ನೆರೆಯ ಗೋವಾದಂತಹ ಸಣ್ಣ ರಾಜ್ಯದ ಭಾಷೆ ಕೊಂಕಣಿಗೆ ಮಾನ್ಯತೆ ಸಿಗುವುದಾದರೆ ಸಾಹಿತ್ಯ, ಸಂಸ್ಕೃತಿ, ಲಿಪಿ ಸಂಪನ್ನ ವಿಸ್ತಾರ ನಾಡಿನ ತುಳು ಭಾಷೆಗೆ ಕೂಡಾ ಅಂತಹುದೇ ಮಾನ್ಯತೆ ಸಿಗಬೇಕು. ಅದಕ್ಕಾಗಿ ತುಳುನಾಡಿನ ರಾಜಕಾರಣಿಗಳು ಎಲ್ಲರೂ ಒಮ್ಮತದಿಂದ ಒತ್ತಾಯಿಸ ಬೇಕು ಎಂದು ಅಮೆರಿಕಾ ಅಲ್ಲಿನ ಆಲ್ ಅಮೇರಿಕಾ ತುಳು ಅಸೋಸಿಯೇಷನ್ (ಎಎಟಿಎ-ಆಟ) ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆಯ ಸಚಿವ ವಿ.ಸುನೀಲ್ಕುಮಾರ್ ಮತ್ತು ತುಳುನಾಡಿನ ಮಂತ್ರಿ, ಇತರ ಇತರ ಶಾಸಕರÀನ್ನು ವಿನಂತಿಸಿದರು. ಆಟ ಆಯೋಜಿಸಿದ್ದ ವರ್ಷದ ತುಳು ಉಚ್ಚಯ-2022 ವರ್ಚುಯಲ್ ಕಾರ್ಯಕ್ರಮದಲ್ಲಿ ದೇಶ ವಿದೇಶದ ತುಳು ಅಭಿಮಾನಿಗಳನ್ನು ಉದ್ದೇಶಿಸಿ ಆಟ ನಡೆದುಬಂದ ಮತ್ತು ಅದರ ಉದ್ದೇಶಗಳ ಪರಿಚಯ ಮಾಡುತ್ತಾ ಈ ಮೇಲಿನ ಒತ್ತಾಯವನ್ನು ಮಂಡಿಸಿದರು. ತುಳು ಭಾಷೆ ತುಳು ಲಿಪಿ ಮತ್ತು ಸಾಹಿತ್ಯ ಸಂಸ್ಕೃತಿಯನ್ನು ಉಳಿಸುವುದು ಮತ್ತು ಬೆಳೆಸುವುದು ಆಟ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ವರ್ಷಕ್ಕೆ ಎರಡು ಬಾರಿ …
ಅನ್ಯಾಯ್ ನಿವಾರಣ್ ನಿರ್ಮೂಲನ ಸೇವಾ ಸಮಿತಿ ಮತ್ತು ಗೋ ರಕ್ಷಾ ಫೌಂಡೇಶನ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹನ್ಮುಂಬಯಿ ಮಲಬಾರ್ಹಿಲ್ ಅಲ್ಲಿನ ಮಹಾರಾಷ್ಟ್ರ ರಾಜಭವನದಲ್ಲಿ ಜನಹಿತ ಅನುಪಮ ಸೇವೆಗಾಗಿ ಸಮಾಜ ರತ್ನ ಸಮ್ಮಾನ 2021-2022 ಪುರಸ್ಕಾರ ಪ್ರದಾನ ಕಾರ್ಯಕ್ರಮ ಇಂದಿಲ್ಲಿ ಸೋಮವಾರ ಆಯೋಜಿಸಿತ್ತು. ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಸಮಲೋಚನಾ ಸಭಾಗೃಹದಲ್ಲಿ ನಡೆಸಲ್ಪಟ್ಟ ಸರಳ ಕಾರ್ಯಕ್ರಮದ ಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಹೆಸರಾಂತ ತುಳು ಕನ್ನಡಿಗ, ಸಮಾಜ ಸೇವಕ ಎರ್ಮಾಳ್ ಹರೀಶ್ ಶೆಟ್ಟಿ ಇವರಿಗೆ ವಿಶೇಷವಾಗಿ ಕೊರೊನಾ ಸಂಧಿಗ್ಧ ಕಾಲದಲ್ಲಿ ಸಲ್ಲಿಸಿದ ಗಣನೀಯ ಸೇವೆ ಹಾಗೂ ರಾಷ್ಟ್ರೀಯ ಭಾವೈಕ್ಯತೆಗಾಗಿ ಸಮಾಜ ರತ್ನ ಸಮ್ಮಾನ 2021-2022 ಪುರಸ್ಕಾರ ಮತ್ತು ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಚೇತನ, ದೇಶ ಸೇವೆ, ಸಮಾಜ ಸೇವೆಯನ್ನಾಗಿಸಿ ಜನತಾ ಹಿತಚಿಂತಕರಾಗಿ ಕಾರ್ಯ ನಿರ್ವಾಹಿಸಿದ ತುಳು-ಕನ್ನಡಿಗ ಎರ್ಮಾಳ್ ಹರೀಶ್ ಶೆಟ್ಟಿ ಸೇರಿದಂತೆ ಸುಮಾರು 30 ಮಂದಿ ಸರ್ವೋತ್ಕೃಷ್ಟ ಸಮಾಜ ಸೇವಕರಿಗೆ ಸಮಾಜ ರತ್ನ ಸಮ್ಮಾನ ಪ್ರದಾನಿಸಿ…
ಪುಣೆಯಲ್ಲಿ ತುಳು ಕನ್ನಡಿಗರ ನೂತನ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆ “ತುಳುನಾಡ ಫೌಂಡೇಶನ್” ಅಸ್ತಿತ್ವಕ್ಕೆ ಬಂದಿದೆ. ಡಿಸೆಂಬರ್ 16ರಂದು ದಿ. ಡಾ. ಶಾಮರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಶಾಲೆಯ ದಿ. ಗುಂಡೂರಾಜ್ ಎಂ ಶೆಟ್ಟಿ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಂಸ್ಥೆಯನ್ನು ಅನಾವರಣಗೊಳಿಸಲಾಯಿತು. ನೂತನ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ ನ್ಯಾಯವಾದಿ ರೋಹನ್ ಪುರುಷೋತ್ತಮ ಶೆಟ್ಟಿ ಅವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಗೊಳಿಸಲಾಯಿತು. ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಪುಣೆ ಬಂಟರ ಸಂಘದ ಜೊತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ನಿಟ್ಟೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಹಾಗೂ ಖ್ಯಾತ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿ, ಪುಣೆ ಬಂಟರ ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ತಾರಾನಾಥ ರೈ ಮೇಗಿನ ಗುತ್ತು, ಬಿಜೆಪಿ ಎಜುಕೇಶನ್ ಸೆಲ್ ನ ಪುಣೆ ನಗರ ಉಪಾಧ್ಯಕ್ಷೆ ವಿಂದಿ ಪೂಜಾರಿ, ಕನ್ನಡ ಮಾಧ್ಯಮ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕೂಡೆ, ಗೋವರ್ಧನ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆಯರಾದ ಲತಾ…
ಯಕ್ಷಗಾನವು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಹುಟ್ಟಿಕೊಂಡ ಸಾಂಪ್ರದಾಯಿಕ ನೃತ್ಯ ನಾಟಕ ರೂಪವಾಗಿದೆ. ಪ್ರಾಚೀನ ಕಾಲದಿಂದಲೂ ಯಕ್ಷಗಾನವು ಶ್ರೀಮಂತ ಮತ್ತು ರೋಮಾಂಚಕ ಕಲಾ ಪ್ರಕಾರವಾಗಿ ವಿಕಸನಗೊಂಡಿದೆ. ಅದು ತನ್ನ ವರ್ಣರಂಜಿತ ವೇಷಭೂಷಣಗಳು, ಲಯಬದ್ಧ ಸಂಗೀತ ಮತ್ತು ಕ್ರಿಯಾತ್ಮಕ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಹೀಗೆ ಈ ಶ್ರೀಮಂತ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ನೀಡುತ್ತಿರುವ ಹಿರಿಯ ಕಲಾವಿದರು ಪೆರ್ಲ ಜಗನ್ನಾಥ ಶೆಟ್ಟಿ. ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆಯ ಪಟ್ಲದಲ್ಲಿ 21.10.1966 ರಂದು ಮಂಜಪ್ಪ ಶೆಟ್ಟಿ ಹಾಗೂ ಕಮಲಾ ಎಂ ಶೆಟ್ಟಿ ಇವರ ಮಗನಾಗಿ ಜನನ. ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ನಾಟ್ಯ ಗುರುಗಳು ಕುಂಞರಾಮ ಮಣಿಯಾಣಿ (ಪ್ರಥಮ ಗುರುಗಳು)ಯವರಿಂದ ಕಲಿತು ನಂತರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ಗೋವಿಂದ ಭಟ್ ಬಳಿ ಯಕ್ಷಗಾನವನ್ನು ಅಭ್ಯಾಸ ಮಾಡಿರುತ್ತಾರೆ. ಒಡನಾಡಿ ಹಿರಿಯರು ಗುರು ಸ್ವರೂಪರೆನಿಸಿದವರು ತೆಕ್ಕಟ್ಟೆ ಆನಂದ ಮಾಸ್ತರರು. ಯಕ್ಷಗಾನ ರಂಗದಲ್ಲಿ ಸರ್ವ ಸಾಧಾರಣ ಎಲ್ಲಾ ವೇಷಗಳು ಮಾಡಿರುವ ಅನುಭವ ಪೆರ್ಲ ಜಗನ್ನಾಥ…