ಮೂಡುಬಿದಿರೆ:ಎಲ್ಲ 10 ಕೂಟ ದಾಖಲೆಗಳನ್ನು ಬರೆದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಇಲ್ಲಿನ ಸ್ವರಾಜ್
ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘21ನೇ ಅಂತರ ಕಾಲೇಜು ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್ಶಿಪ್ 2023-24’ರ ಪುರುಷ ಮತ್ತು ಮಹಿಳಾ ಚಾಂಪಿಯನ್ಗಳ ಸಹಿತ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಆಳ್ವಾಸ್ ಆಯುರ್ವೇದ ವೈದ್ಯಕೀಯಕಾಲೇಜಿನ ಆತಿಥ್ಯದಲ್ಲಿ ಮೂರು ದಿನ ನಡೆದ ಕ್ರೀಡಾಕೂಟದಲ್ಲಿ ಆಳ್ವಾಸ್
ಅಲೈಡ್ ಹೆಲ್ತ್ಸೈನ್ಸಸ್ನ ರಾಕೇಶ್ ಹಾಗೂ ದುರ್ಗಾ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದರು. 20 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಜಯಿಸಿ, ಒಟ್ಟು 144 ಅಂಕ ಪಡೆದ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪುರುಷರ ವಿಭಾಗದಲ್ಲಿ 11 ಚಿನ್ನ, 7 ಬೆಳ್ಳಿ ಹಾಗೂ 4 ಕಂಚಿನ ಪದಕಗಳ ಮೂಲಕ 91 ಅಂಕಗಳನ್ನು ಪಡೆದ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜು ಪ್ರಶಸ್ತಿ ಎತ್ತಿ ಹಿಡಿಯಿತು. 3 ಚಿನ್ನ ಮತ್ತು 2 ಬೆಳ್ಳಿ ಸಹಿತ 26 ಅಂಕ ಪಡೆದ ಮಂಡ್ಯ ವೈದ್ಯಕೀಯ ಕಾಲೇಜು ರನ್ನರ್ಅಫ್ ಆಯಿತು. ಮಹಿಳೆಯರ ವಿಭಾಗದಲ್ಲಿ 9 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ
ಪದಕದ ಮೂಲಕ 63 ಅಂಕ ಗಳಿಸಿದ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ ಕಾಲೇಜು ಪ್ರಶಸ್ತಿ ಪಡೆಯಿತು. 2 ಚಿನ್ನ, 4 ಬೆಳ್ಳಿ ಮತ್ತು 2 ಕಂಚು ಸಹಿತ 33 ಅಂಕ ಪಡೆದ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತುಯೋಗ ವಿಜ್ಞಾನಗಳ ಕಾಲೇಜು ರನ್ನರ್ ಅಫ್ ಪ್ರಶಸ್ತಿ ಪಡೆಯಿತು.
ನೂತನ ಕೂಟ ದಾಖಲೆಗಳು ಈ ಕ್ರೀಡಾಕೂಟವು ಒಟ್ಟು 10 ಕೂಟ ದಾಖಲೆಗಳಿಗೆ ಸಾಕ್ಷಿಯಾಯಿತು. ಹಿಂದಿನ 8 ಕೂಟ ದಾಖಲೆಗಳನ್ನು ಈ ಬಾರಿ ಕ್ರೀಡಾಪಟುಗಳು ಮುರಿದರೆ, 2 ದಾಖಲೆಗಳನ್ನು ಸಮಗೊಳಿಸಿದರು. ಆಳ್ವಾಸ್ ಅಲೈಡ್ ಹೆಲ್ತ್
ಸೈನ್ಸಸ್ನ ಕ್ರೀಡಾಪಟುಗಳೇ ಎಲ್ಲ ಕೂಟ ದಾಖಲೆಗಳನ್ನು ಮಾಡಿರುವುದು ವಿಶೇಷ.
ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸ್ನ ಸರಣ್(ಪುರುಷರ 200ಮೀ. ಓಟ, 400 ಮೀ ಓಟ
ಹಾಗೂ 4×400 ಮೀ.ರಿಲೇ) ಮೂಲಕ 3 ಕೂಟ ದಾಖಲೆ ಹಾಗೂ ವಿಸ್ಮಯ (ಮಹಿಳೆಯರ 100 ಮೀ. ಮತ್ತು400 ಮೀ. ಹರ್ಡಲ್ಸ್)ಎರಡು ಕೂಟ ದಾಖಲೆ ಮೂಲಕ ವಿಶಿಷ್ಟ ಗೌರವಕ್ಕೆ ಪಾತ್ರರಾದರು.
ಮೊದಲ ದಿನ:
1. ಪುರುಷರಎತ್ತರ ಜಿಗಿತದಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ನ ಮನು 1.86 ಮೀ ಜಿಗಿದು, ಸಿಎಚ್ಎಂಎಸ್ನ ರಾಘವೇಂದ್ರಅವರ 1.80 ಮೀ (2002-03) ದಾಖಲೆಯನ್ನು ಮುರಿದರು.
2. ಪುರುಷರ ಜಾವಲಿನ್ ಥ್ರೋನಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸ್ಸ್ರಾಕೇಶ್ 50.89 ಮೀ. ದೂರಎಸೆದು, ಉಜಿರೆಯಎಸ್ಡಿಎಂ ಪ್ರಕೃತಿಚಿಕಿತ್ಸೆಕಾಲೇಜಿನಅರುಣ್ತೇಜಸ್ಅವರ 46.56 ಮೀ (2013-14) ದಾಖಲೆಯನ್ನು
ಮುರಿದರು.
3. ಪುರುಷರ 400 ಮೀ ಹರ್ಡಲ್ಸ್ನಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸ್ಸ್ನಕಾರ್ತಿಕ್ 53.4 ಸೆಕೆಂಡುಗಳಲ್ಲಿ
ಕ್ರಮಿಸಿ, ಮಂಗಳೂರು ಸಿಟಿ ಕಾಲೇಜಿನಅರ್ಜುನಜೋಯ್ಅವರ 1 ನಿ. 0.66 ಸೆಕೆಂಡ್ (2006-07) ದಾಖಲೆಯನ್ನು ಮುರಿದರು.
4. ಮಹಿಳೆಯರ 400 ಮೀ. ಹರ್ಡಲ್ಸ್ನಲ್ಲಿ ಆಳ್ವಾಸ್ಅಲೈಡ್ ಹೆಲ್ತ್ಸೈನ್ಸಸ್ನ ವಿಸ್ಮಯ 1 ನಿ.08.4 ಸೆಕೆಂಡ್ಗಳಲ್ಲಿ ಕ್ರಮಿಸಿ, ಮಂಗಳೂರು ಬಿಎಂಸಿ ಕಾಲೇಜಿನಖ್ಯಾತಿಎಸ್.ವಿ. ಅವರ 1 ನಿ. 18.88 ಸೆಕೆಂಡ್ (2007-08) ದಾಖಲೆಯನ್ನು ಮುರಿದರು.
5. ಪುರುಷರ 100 ಮೀ. ಓಟದಲ್ಲಿಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ನ ಶ್ರವಣಗಿರಿ 10.09 ಸೆಕೆಂಡ್ಗಳಲ್ಲಿ ಕ್ರಮಿಸಿ, ದಾವಣಗೆರೆಯ ಜೆಜೆಎಂಸಿ ಅನಿಲ್ ಕುಮಾರ್ ಗುಪ್ತಾ ಅವರ 11.02 ಸೆಕೆಂಡ್ (2000-01) ದಾಖಲೆಯನ್ನು ಮುರಿದರು.
ಎರಡನೇ ದಿನ:
6. ಪುರುಷರ 4×400 ಮೀ.ರಿಲೇಯಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ಸ್ಓಟಗಾರರು3ನಿ. 27.2 ಸೆಕೆಂಡ್ಗಳಲ್ಲಿ
ಕ್ರಮಿಸುವ ಮೂಲಕತಮ್ಮದೇಕಾಲೇಜಿನ 3ನಿ 36.0 ಸೆಕೆಂಡ್ಗಳ (2019-20)ದಾಖಲೆಯನ್ನು ಮುರಿದರು.
7. ಪುರುಷರ 200 ಮೀ. ಓಟದಲ್ಲಿಆಳ್ವಾಸ್ ಅಲೈಡ್ ಹೆಲ್ತ್ಸೈನ್ಸ್ಸ್ಕಾಲೇಜಿನ ಸರಣ್ 22.1 ಸೆಕೆಂಡ್ಗಳಲ್ಲಿ ಕ್ರಮಿಸಿ, ಸುಳ್ಯದ ಕೆವಿಜಿಡಿಸಿ ಕಾಲೇಜಿನ ಸುರೇಶ್ಕುಮಾರ್ (1999-00)ದಾಖಲೆಯನ್ನು ಸಮಗೊಳಿಸಿದರು.
8. ಮಹಿಳೆಯರ ದೂರಜಿಗಿತದಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ಕಾಲೇಜಿನದುರ್ಗಾ 4.56 ಮೀ.ಜಿಗಿದು, ಆಳ್ವಾಸ್ ಯೋಗ ವಿಜ್ಞಾನಕಾಲೇಜಿನ ಸೃಜನಾ ಕೆ. (2013- 14)ದಾಖಲೆಯನ್ನು ಸಮಗೊಳಿಸಿದರು.
ಮೂರನೇದಿನ:
9. ಮಹಿಳೆಯರ 100 ಮೀ. ಹರ್ಡಲ್ಸ್ನಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜಿನ ವಿಸ್ಮಯ 18.0 ಸೆಂಕೆಂಡ್ಗಳಲ್ಲಿ ಕ್ರಮಿಸಿ, ಮಂಗಳೂರು ಬಿಎಂಸಿ ಕಾಲೇಜಿನಖ್ಯಾತಿಎಸ್.ವಿ. ಅವರ 19.91 ಸೆಕೆಂಡ್ಗಳ (2007-08) ದಾಖಲೆಯನ್ನು ಮುರಿದರು.
10. ಪುರುಷರ 400 ಮೀ. ಓಟದಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜಿನ ಸರಣ್ 49.4 ಸೆಕೆಂಡುಗಳಲ್ಲಿ
ಕ್ರಮಿಸಿ, ತಮ್ಮದೇಕಾಲೇಜಿನದೇವಯ್ಯಟಿ.ಎಚ್. ಅವರ 50.0 ಸೆಕೆಂಡ್ಗಳ (2019- 20)ದಾಖಲೆಯನ್ನು ಮುರಿದರು.
ಮೂರನೇ ದಿನದ ಫಲಿತಾಂಶ:
ಪುರುಷರ ವಿಭಾಗ: 400 ಮೀ. ಓಟ: ಸರಣ್ (ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)-1, ಶದನ್(ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)-2, ಕ್ರಿಸ್ಪಿನ್ ದಾಸ್
(ಎಸ್.ವಿ. ನರ್ಸಿಂಗ್ ಕಾಲೇಜು ಬೆಂಗಳೂರು)-3, 110 ಮೀ.
ಹರ್ಡಲ್ಸ್: ರಘು (ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)-1,
ಸೂರ್ಯ(ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)- 2,ಅಂಕಿತ್ ಬಿ. ಶೆಟ್ಟಿ (ಎಸ್ಡಿಎಂ ವೈದ್ಯಕೀಯ ವಿಜ್ಞಾನ ಮತ್ತುಆಸ್ಪತ್ರೆಕಾಲೇಜು, ಧಾರವಾಡ)-3
ಟ್ರಿಪಲ್ಜಂಪ್:ರಾಜೇಶ್ (ಮಂಡ್ಯ ವೈದ್ಯಕೀಯಕಾಲೇಜು, ಮಂಡ್ಯ)-1, ಪ್ರಿನ್ಸನ್ ಪಿಂಟೊ (ಲಕ್ಷ್ಮೀ ಮೆಮೋರಿಯಲ್ಕಾಲೇಜು, ಮಂಗಳೂರು)-2, ರಘು (ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)-3, 10 ಸಾವಿರ ಮೀ. ಓಟ: ಪ್ರಣವ್ಜಗದೀಶ್ (ಲಕ್ಷ್ಮೀ ಮೆಮೋರಿಯಲ್ ಫಿಸಿಯೊ ಕಾಲೇಜು,
ಮಂಗಳೂರು)-1, ಚಂದನ್ಎಸ್. (ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)-2, ವಿರೂಪಾಕ್ಷಿ
ಸುಭಾಷ್ದೊಡಮನಿ (ಬಿಎಲ್ಡಿಇ’ಸ್ ಎವಿಎಸ್ಆಯುರ್ವೇದ ಮಹಾವಿದ್ಯಾಲಯ, ವಿಜಯಪುರ)
3 4×400 ಮೀ.ರಿಲೇ: ಮಂಡ್ಯ ವೈದ್ಯಕೀಯ ಕಾಲೇಜು-1, ಆಳ್ವಾಸ್ ಹೋಮಿಯೊಪಥಿ ವೈದ್ಯಕೀಯಕಾಲೇಜು ಮೂಡುಬಿದಿರೆ-2, ಎಸ್ಡಿಎಂ ಪ್ರಕೃತಿಚಿಕಿತ್ಸೆ ಮತ್ತುಯೋಗವಿಜ್ಞಾನಕಾಲೇಜು, ಉಜಿರೆ-3 ಮಹಿಳೆಯರ ವಿಭಾಗ: 400 ಮೀ. ಓಟ: ವಿಸ್ಮಯ (ಆಳ್ವಾಸ್ಅ ಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)-1, ಲಕ್ಷ್ಮೀ ವೈಷ್ಣವಿ (ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತುಯೋಗ ವಿಜ್ಞಾನಗಳ ಕಾಲೇಜು, ಮೂಡುಬಿದಿರೆ)-2, ತ್ರೀಷಾಜೋಸೆಫ್ (ಡಾ. ಅಂಬೇಡ್ಕರ್ ನರ್ಸಿಂಗ್ ಕಾಲೇಜು, ಬೆಂಗಳೂರು)-3
10 ಸಾವಿರ ಮೀ. ಓಟ: ಐಶ್ವರ್ಯಎಸ್.ವಿ. (ಸಜ್ಜಲಶ್ರೀ ನರ್ಸಿಂಗ್ ಕಾಲೇಜು, ಬಾಗಲಕೋಟೆ)-1, ಮುಕ್ತಾಯಿ ಗುರಿಕಾರ್(ಸಜ್ಜಲಶ್ರೀ ನರ್ಸಿಂಗ್ ಕಾಲೇಜು, ಬಾಗಲಕೋಟೆ)-2,ಅಮೀನ್ ಫರಿಹಾ (ಸರ್ಕಾರಿ ಪ್ರಕೃತಿಚಿಕಿತ್ಸೆ
ಮತ್ತುಯೋಗ ವೈದ್ಯಕೀಯಕಾಲೇಜು, ಮೈಸರೂರು)-3, 110 ಮೀ. ಹರ್ಡಲ್ಸ್: ವಿಸ್ಮಯ (ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)-1, ಎವ್ಲಿನ್ತ್ರೀಸಾಜಾಯ್ (ಅಥೆನಾನರ್ಸಿಂಗ್ ಕಾಲೇಜು, ಮಂಗಳೂರು)-2, ದಾಲಿಯಾ ಸಿ.ಸಿ. (ಸೈಂಟ್ಆ್ಯನ್ಸ್ ನರ್ಸಿಂಗ್ ಕಾಲೇಜು, ಮೂಲ್ಕಿ)-3 ಹ್ಯಾಮರ್ಥ್ರೋ: ಅತಿರಾಎನ್.ಕೆ. (ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತುಯೋಗ ವಿಜ್ಞಾನಕಾಲೇಜು, ಮೂಡುಬಿದಿರೆ)-1, ವಮಿಕಾ ಆರ್. (ಡಾ.ಬಿ.ಆರ್. ಅಂಬೇಡ್ಕರ್ ನಸಿಂಗ್ ಕಾಲೇಜು, ಬೆಂಗಳೂರು)-2, ನೆಹಾ ಮರಿಟಾ ಪಾಯಸ್ (ಫಾ.ಮುಲ್ಲರ್ ಹೋಮಿಯೊಪಥಿ ವೈದ್ಯಕೀಯಕಾಲೇಜು, ಬೆಂಗಳೂರು)-3,
ಟ್ರಿಪಲ್ಜಂಪ್: ದುರ್ಗಾ (ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ)-1, ಅಮಲಾ ಸುರೇಶ್ (ಮಸೂದ್ ನರ್ಸಿಂಗ್ ಕಾಲೇಜು, ಮಂಗಳೂರು)-2, ಜ್ಯೋತಿಕಾ ಪಿ. (ಮಲ್ಲಿಗೆ ನರ್ಸಿಂಗ್ ಕಾಲೇಜು, ಬೆಂಗಳೂರು)-3, 4×400 ಮೀ.ರಿಲೇ: ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ಕಾಲೇಜು, ಮೂಡುಬಿದಿರೆ-1, ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತುಯೋಗ ವಿಜ್ಞಾನಕಾಲೇಜು, ಮೂಡುಬಿದಿರೆ-2, ಎಸ್ಡಿಎಂ ಪ್ರಕೃತಿಚಿಕಿತ್ಸೆ ಮತ್ತುಯೋಗ ವಿಜ್ಞಾನಕಾಲೇಜು, ಉಜಿರೆ-3
ಸಮಾರೋಪ:ಗುರುವಾರ ಸಂಜೆ ನಡೆದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂಡುಬಿದಿರೆಯ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಮಾತನಾಡಿ, ‘ಸೋಲು-ಗೆಲುವು ಸಹಜ. ಆದರೆ, ಶಿಸ್ತಿಗೆ ಇನ್ನೊಂದು ಹೆಸರೇ ಆಳ್ವಾಸ್. ಯಾವುದೇಕಾರ್ಯ ಮಾಡಿದರೂ, ಪರಿಪೂರ್ಣವಾಗಿ ನಿರ್ವಹಿಸುತ್ತಾರೆ’ ಎಂದು ಶ್ಲಾಘಿಸಿದರು.ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವ್ಯವಸ್ಥಾಪಕ ಟ್ರಸ್ಟಿ ಡಾ.ವಿನಯ್ ಆಳ್ವ ಮಾತನಾಡಿ, ‘ಮೂರು ದಿನಗಳ ಕಾಲ ಶಿಸ್ತು ಹಾಗೂ
ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡಎಲ್ಲ ಕಾಲೇಜುಗಳ ಕ್ರೀಡಾಪಟುಗಳು ಈ ಕ್ರೀಡಾಕೂಟವನ್ನು ಯಶಸ್ಸುಗೊಳಿಸಿದ್ದಾರೆ’ ಎಂದು ಶ್ಲಾಘಿಸಿದರು.
ವೇಗದ ಓಟಗಾರ್ತಿ ಸ್ನೇಹಾ ಎಸ್.ಎಸ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಮಂಡಳಿಯ ನಾರಾಯಣ ಪಿ.ಎಮ್, ಉದ್ಯಮಿ ಅಬ್ದುಲ್ಲ ಪುತ್ತಿಗೆ, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಡಾ.ಸಜಿತ್ ಎಂ, ಕನ್ನಡ ಭವನದ ವ್ಯವಸ್ಥಾಪಕಿ ರಜನಿ ಶೆಟ್ಟಿ, ಕ್ರೀಡಾಕೂಟದ ಸಂಚಾಲಕ ಅವಿನಾಶ್, ವಿವಿಧ ಕಾಲೇಜುಗಳ ಪ್ರಾಚಾರ್ಯರು ಇದ್ದರು. ಚಂದ್ರಕಾಂತ್ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.
ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತುಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ವನಿತಾ ಶೆಟ್ಟಿ ಸ್ವಾಗತಿಸಿ,
ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ ಹೆರಾಲ್ಡ್ರೋಶನ್ ಪಿಂಟೊ ವಂದಿಸಿದರು. ಪ್ರಾಧ್ಯಾಪಕಿ ಡಾ.ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.