ಮುಂಬಯಿ (ಆರ್ಬಿಐ), ನ.29: ಮಂಗಳೂರು ಅಡ್ಯಾರ್ ಇಲ್ಲಿನ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜ್ನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ್ರಯಗಿ ಕಾರ್ಯ ನಿರ್ವಹಿಸುತ್ತಿರುವ ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಇವರು ಬೆಳ್ಳಿಪಯಡಿ ಡಾ| ಶಮಂತ್ ರೈ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಮಂಡಿಸಿದ “ಎ ಫಾರ್ಮಲ್ ಸ್ಟಾಟಿಸ್ಟಿಕಲ್ ಡೇಟಾ ಮಾಡೆಲಿಂಗ್ ಆಂಡ್ ಪೆÇ್ರೀಗ್ಲೋಸ್ಟಿಕ್ ರೀಸನಿಂಗ್ಯೂ ಸಿಂಗ್ ಡೇಟಾ ಅನಲಿಟಿಕ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ದೇಶದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರಾಪ್ತಿಸಿದೆ.
ರಿತೇಶ್ ಪಕ್ಕಳ ಇವರು ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ತನ್ನ ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಪಿಹೆಚ್.ಡಿ ಪದವಿಯನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ನಿಂದ ಪಡೆದ ಪ್ರಪ್ರಥಮ ವಿದ್ಯಾರ್ಥಿ ಆಗಿದ್ದಾರೆ. ರಿತೇಶ್ ಇವರು ಪೆರ್ಮಂಕಿ ಗುತ್ತು ಮೋಹನ್ ಪಕ್ಕಳ ದಂಪತಿ ಸುಪುತ್ರರಾಗಿದ್ದಾರೆ.