Author: admin
ಬಾಳ ತೊತ್ತಾಡಿ ಶ್ರೀ ನಾಗಬ್ರಹ್ಮ ಸ್ಥಾನ ಶ್ರೀ ಕ್ಷೇತ್ರದ ಆರಾಧ್ಯ ಶ್ರೀ ನಾಗಬ್ರಹ್ಮ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಭಕ್ತ ಸಮುದಾಯದ ಸಮ್ಮುಖದಲ್ಲಿ ನಡೆಯಿತು. ಕ್ಷೇತ್ರದ ತಂತ್ರವರೇಣ್ಯರಾದ ಅನಂತ ಪದ್ಮನಾಭ ಪಾಂಗಳ ಇವರ ನೇತ್ರತ್ವದಲ್ಲಿ ಕ್ಷೇತ್ರದ ಅರ್ಚಕ ಗುರುರಾಜ ಭಟ್ ಉಪಸ್ಥಿತಿಯಲ್ಲಿ ಬ್ರಹ್ಮ ಕಲಶೋತ್ಸವದ ಧಾರ್ಮಿಕ ವಿಧಿವಿಧಾನಗಳು ನಡೆದವು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ, ಆಡಳಿತ ಸಮಿತಿಯ ಅಧ್ಯಕ್ಷ ದೇವದಾಸ ಶೆಟ್ಟಿ ಬಾಳ ಸಾನದ ಹೊಸಮನೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅನಿಲ್ ಶೆಟ್ಟಿ, ಮುಂಬಯಿ ಸಮಿತಿಯ ಅಧ್ಯಕ್ಷ ಕುಶಲ್ ಭಂಡಾರಿ ಐಕಳಬಾವ, ಕರುಣಾಕರ ಶೆಟ್ಟಿ ಬಾಳದಗುತ್ತು , ಬಾಲಕೃಷ್ಣ ಶೆಟ್ಟಿ ಗುತ್ತಿನಾರ್ ಉಳಾಯಿಬೆಟ್ಟು, ಶಿವಪ್ರಸಾದ್ ಬಾಳ, ಜಯಲಕ್ಷೀ ಶೆಟ್ಟಿ ಮೇಗಿನ ಮನೆ, ಭಾಸ್ಕರ ರಾವ್ ಬಾಳ, ಜೆ ಡಿ ವೀರಪ್ಪ, ಮುಕ್ತಾನಂದ ಮೇಲಾಂಟ, ಅರುಣ್ ಚೌಟ ಬಾಳದ ಗುತ್ತು, ಸಂತೋಷ್ ಪೂಂಜ ಬಾಳದ ಗುತ್ತು , ಬಾಳ ಮೇಗಿನಮನೆ ಜಗನ್ನಾಥ ಭಂಡಾರಿ, ಸುಧಾಮ ಶೆಟ್ಟಿ, ನಾಗೇಶ್ ಶೆಟ್ಟಿ ಬಾಳ ಸಾನದ…
ಮುಂಬಯಿ (ಆರ್ಬಿಐ), ಮಾ.12: ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧಿಪತಿ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಅವರು ಇಂದಿಲ್ಲಿ ಉಪನಗರ ಥಾಣೆಗೆ ಪಾದಾರ್ಪಣೆಗೈದು ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಇದರ ಭಕ್ತರ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿ ಅವರಿಗೆ ಆರತಿ ಬೆಳಗಿಸಿ ಅನುಗ್ರಹಿಸಿದರು. ಯೋಗಾಶ್ರಮ ಸಮಿತಿ ಮುಂಬಯಿ ಇದರ ಕಾರ್ಯದರ್ಶಿ ಹರೀಶ್ ಕೆ.ಚೇವಾರ್ ಅವರು ಥಾಣೆ ಕಾಪೂರ್ ಬಾವ್ಡಿ ಅಲ್ಲಿನ ಸಮಿತಿಯ ಕೋಶಾಧಿಕಾರಿ ಸದಸ್ಯ, ಭಾರತ್ ಬ್ಯಾಂಕ್ನ ಮಾಜಿ ನಿರ್ದೇಶಕ ಅಶೋಕ್ ಎಂ.ಕೋಟ್ಯಾನ್ ಅವರ ಕೋಸ್ಮಸ್ ಹಾಬಿಟಾಟ್ ನಿವಾಸದಲ್ಲಿ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೆರೆದ ಭಗವದ್ಭಕ್ತರಿಗೆ ಹರಸಿದರು. ಈ ಸಂದರ್ಭದಲಿ ಶ್ರೀ ನಿತ್ಯಾನಂದ ಯೋಗಾಶ್ರಮ ಸಮಿತಿ ಮುಂಬಯಿ ಸಮಿತಿಯ ಅಧ್ಯಕ್ಷ ರಾಜೇಶ್ ರೈ, ಮಾಜಿ ಗೌ| ಪ್ರ| ಕಾರ್ಯದರ್ಶಿ ನಿತ್ಯಾನಂದ ಡಿ.ಕೋಟ್ಯಾನ್, ತೋನ್ಸೆ ಸಂಜೀವ ಪೂಜಾರಿ, ಯಶೋಧಾ ಭಟ್ಟಿಪಾಡಿ, ರಮೇಶ್ ಕೋಟ್ಯಾನ್, ಜಯರಾಮ ಪೂಜಾರಿ, ಎಸ್.ಎಸ್ ಪೂಜಾರಿ.ಎಸ್.ಸುಧಾಕರ್, ಜಾನಕಿ ಅಶೋಕ್…
ಭೂಮಿಯನ್ನು ಹೆಣ್ಣು ಎನ್ನುವ ಭಾವನೆಯೊಂದಿಗೆ ಪ್ರೀತಿ ಗೌರವ ನೀಡಿ ನಮ್ಮಪೊರೆವ ತಾಯಿಯೆಂದು ನಂಬಿಕೊಂಡು ಬಂದ ಮಾತೃಪ್ರಧಾನ ಸಮಾಜ ತಲೆ ಎತ್ತಿ ನಿಂತ ತುಳುನಾಡಿನಲ್ಲಿ ಭೂಮಿ ಮೈನರೆವಳೆಂಬ ನಂಬಿಕೆ ಅಥವಾ ಭೂಮಿತಾಯಿ ರಜಸ್ವಲೆಯಾಗುವ ದಿನದ ಹಬ್ಬ ತುಳುವರ ಆಚರಣೆಯ ಕೆಡ್ಡಸ . ವರ್ಷದಲ್ಲೊಮ್ಮೆ ಭೂಮಿಯು ಮುಟ್ಟಾಗುತ್ತಾಳೆ ಎನ್ನುವ ತುಳುವರ ಪ್ರತೀತಿ ಇದೆ. ಆ ಸಮಯದಲ್ಲಿ ಪ್ರಕೃತಿಯಲ್ಲಿ ವಿಶೇಷ ಬದಲಾವಣೆ ಆಗುವುದು ಇಲ್ಲಿ ಗಮನಿಸಬೇಕಾದ ವಿಚಾರ. ಗಿಡ ಮರಗಳಲ್ಲಿ ಚಿಗುರು ಮೂಡಿ ಫಲವತ್ತತೆಗೆ ಅಣಿಯಾಗುವ ಸಂಭ್ರಮದ ಕಾಲ. ಪ್ರಕೃತಿಯನ್ನು ಹೆಣ್ಣುಎಂದು ನಂಬಿದವರು ತುಳುವರು ಆಕೆ ವರ್ಷಕ್ಕೊಮ್ಮೆ ಮುಟ್ಟಾಗುವ ದಿನವೆ ಕೆಡ್ಡಸ ಎಂದು ಆಚರಿಸುವ ಹಬ್ಬ. ಮಕರ ಮಾಸದ 27 ನೇ ದಿನದ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಕೆಡ್ಡಸವನ್ನು ಮೂರು ದಿನಗಳವರೆಗೆ ಆಚರಿಸುತ್ತಾರೆ. ಭೂಮಿಯನ್ನು ಅಕ್ಕರೆಯಿಂದ ಪೂಜಿಸುವದಿನವಿದು . ಭೂಮಿ ಮುಟ್ಟಾದಳು ಎಂಬ ನಂಬಿಕೆಯಲ್ಲಿ ಆಚರಿಸುವ ಮೂರುದಿನದಲ್ಲಿ ಕೆಡ್ಡಸ, ನಡುಕೆಡ್ಡಸ, ಕಡೆಕೆಡ್ಡಸ ಎಂದು ಸಮೃದ್ಧಿ ಮತ್ತು ಫಲಾಪೇಕ್ಷೆಯ ಆಶಯದ ಆಚರಣೆ. ಈ ಮೂರು ದಿನಗಳಲ್ಲಿ ಭೂಮಿತಾಯಿಗೆ…
ಮಧ್ಯಪ್ರದೇಶದ ಭೋಪಾಲ್ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಯೋಧ ಮುರಳೀಧರ ರೈ (37) ಅವರ ಅಂತ್ಯಸಂಸ್ಕಾರ ಸರಕಾರಿ ಗೌರವಗಳೊಂದಿಗೆ ಬುಧವಾರ ಶಕ್ತಿನಗರದಲ್ಲಿ ನೆರವೇರಿತು.ಪಾರ್ಥಿವ ಶರೀರವನ್ನು ಶಕ್ತಿನಗರದ ಮುಗ್ರೋಡಿ ಸಂಜಯನಗರದ ಅವರ ಮನೆಯಿಂದ ಮೆರವಣಿಗೆ ಮೂಲಕ ಆಂಜನೇಯ ಸಭಾಭವನ ಮೈದಾನಕ್ಕೆ ತಂದು ಅಲ್ಲಿ ಸರಕಾರಿ ಗೌರವ ಸಲ್ಲಿಸಲಾಯಿತು. ಅನಂತರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, ಪಾಲಿಕೆ ಸದಸ್ಯರಾದ ಶಕೀಲಾ ಕಾವಾ, ಸುಧೀರ್ ಶೆಟ್ಟಿ, ವನಿತಾ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಸಶಸ್ತ್ರ ಸೀಮಾಬಲ್ನಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ಮಾಡುತ್ತಿದ್ದ ಮುರಳೀಧರ ರೈ ಅವರು ರವಿವಾರ ಮಲಗಿದ ಬಳಿಕ ಹೃದಯಾಘಾತವಾಗಿತ್ತು. ಅವರು ಮೃತಪಟ್ಟಿರುವುದು ಸೋಮವಾರ ಬೆಳಗ್ಗೆ ಗೊತ್ತಾಗಿತ್ತು.
ಅಡಿಕೆ ಬೆಳೆ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವು ದನ್ನು ನೋಡಿದರೆ ಅದುವೇ ರೈತರಿಗೆ ಮಾರಕವಾಗುವ ದಿನಗಳು ದೂರವಿಲ್ಲ ಎಂಬುದಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸದನದಲ್ಲಿ ನೀಡಿರುವ ಹೇಳಿಕೆ ಅಡಿಕೆ ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಹೇಳಿದ್ದಾರೆ. ಅಡಿಕೆ ಬೆಳೆಗೆ ಚುಕ್ಕಿ ರೋಗ ದಿಂದಾಗಿ ಬೆಳೆಗಾರರು ಈಗಾ ಗಲೇ ತತ್ತರಿಸಿ ಹೋಗಿದ್ದಾರೆ. ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದಲೂ ಬೆಲೆ ಕುಸಿತ ವಾಗುತ್ತಿದೆ. ರಾಸಾಯನಿಕ ಗೊಬ್ಬರ, ಉಪಕರಣಗಳ ಬೆಲೆಯೂ ಹೆಚ್ಚುತ್ತಿದೆ. ಬೇರೆ ದೇಶಗಳಿಂದಲೂ ಅಡಿಕೆ ಕಳ್ಳ ಸಾಗಣೆ ಮೂಲಕ ಭಾರತಕ್ಕೆ ಬರುತ್ತಿದೆ. ಈಗ ಗೃಹ ಸಚಿವರು ನೀಡಿರುವ ಹೇಳಿಕೆಯಿಂದ ಅಡಿಕೆಯ ಬೆಲೆ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇದೆ. ಸಚಿವರ ಹೇಳಿಕೆ ಅಡಿಕೆ ಬೆಳೆಗಾರರಿಗೆ ಆಘಾತವನ್ನುಂಟು ಮಾಡಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
2002 ರಲ್ಲಿ ಸ್ಥಾಪನೆಗೊಂಡ ಬಂಟ್ಸ್ ಬಹರೈನ್ ತನ್ನ 20 ನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇತ್ತೀಚಿಗೆ ಸಂಪನ್ನಗೊಂಡ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಹಿರಿಯ ಸದಸ್ಯರಲ್ಲೋರ್ವರಾದ ಶ್ರೀ ಸೌಕೂರು ಅರುಣ್ ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವಕೀಲರಾಗಿದ್ದ ದಿವಂಗತ ಶ್ರೀ ಮೋಹನ್ ದಾಸ್ ಶೆಟ್ಟಿ ಹಾಗೂ ದಿವಂಗತ ಶ್ರೀಮತಿ ಸೌಕೂರು ಹೇಮಲತಾ ಶೆಟ್ಟಿಯವರ ಪುತ್ರ ಶ್ರೀ ಅರುಣ್ ಶೆಟ್ಟಿಯವರು ಈ ಹಿಂದೆ ಸೆಷನ್ ಕೋರ್ಟ್ ನ್ಯಾಯಾಧೀಶರಾಗಿದ್ದ ಸೌಕೂರು ನಾರಾಯಣ ಶೆಟ್ಟಿಯವರ ಮೊಮ್ಮಗ ಕೂಡ. ನಗುಮೊಗದ, ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿದ್ದ ಶ್ರೀ ಅರುಣ್ ಶೆಟ್ಟಿಯವರ ಆಯ್ಕೆ ಬಂಟ್ಸ್ ಬಹರೈನ್ ನ ಸರ್ವ ಸದಸ್ಯರಿಗೂ ಸಂತೋಷವನ್ನುಂಟುಮಾಡಿದೆ. ಅರುಣ್ ಶೆಟ್ಟಿಯವರು ಪ್ರಸ್ತುತ ಬಹರೈನ್ ನ ಪ್ರಸಿದ್ಧ ನಾಸ್ಸರ್ ಫಾರ್ಮಸಿ ಸಂಸ್ಥೆಯಲ್ಲಿ ಬ್ರಾಂಡ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಉಡುಪಿಯ MGM ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ, ಕಬ್ಬಡ್ಡಿ ಆಟಗಾರನಾಗಿ…
ಮಾತೆಕ್ಲಾ ದರ್ಬಾರ್ಡ್ ಖರ್ಚಿ ಮಲ್ಪುನಕುಲು ಅಕಲೆಗ್ ಬೋಡಾಯಿನಕುಲು ಸೀಕಿಡ್ ಆಸ್ಪತ್ರೆಡ್ ಇತ್ತೆರ್ಡ್ ತೂವರೆ ಪೋನಗ ಬೊಂಡ್ಡಲಾ ಮುಸುಂಬಿಲಾ ಪತೊಂದು ಪೋಪಿನಿ. 😃 ಪಾಪದಕುಲು ಪನ್ದ್ ದೊಡ್ಡು ಕೊರಯೆರ್. ಆಸ್ಪತ್ರೆಡ್ ಸೀಕಿಡ್ ಇತ್ತಿನಕಲೆಗ್ ಬೊಂಡ್ಡಾ, ಮುಸುಂಬಿದ ಅಗತ್ಯ ಉಪ್ಪುಜಿ, ಅಕಲೆಗ್ ನಿಜವಾದ್ಲಾ ಅಗತ್ಯ ಉಪ್ಪುನು ಮರ್ದಿಗ್ ಬೊಕ್ಕ ಆಸ್ಪತ್ರೆದ ಬಿಲ್ಲ್ ಕಟ್ಟರೆ ದೊಡ್ಡುದ ಅವಶ್ಯಕತೆ. ಅಯಿಡ್ದಾತ್ರ ನಮ ಒಂತೆ ಸುಧಾರಿಗಾ, ಸೀಕಿಡ್ ಆಸ್ಪತ್ರೆಡ್ ಇತ್ತಿನ ಬಂಧುಲೆಗ್ ಬೊಂಡ್ಡಾ, ಮುಸುಂಬಿ ಕೊನೊಪಿನ ಉಂತಾದ ಸಾಧ್ಯ ಇತ್ತಿಂಡ್ಡಾ ದೊಡ್ಡುಡೇ ಸಹಾಯ ಮಲ್ಪುನ ಮಲ್ಲಾ ಮನಸ್ಸ್ ಮಲ್ಪುಗಾ ಪನ್ಪಿನ ಆಶಯ ಮಲ್ತ್ ಬಯ್ಯದ ಮದಿಪುನು ಮುಗ್ಯುಪುವೆ. * * * * * * ಓಂ ನಮ: ಶಿವಾಯ:
ಯುವ ಬಂಟ ಸಂಘ ಪುತ್ತೂರು ಇದರ ವತಿಯಿಂದ ಜನವರಿಯಲ್ಲಿ ನಡೆಯಲಿರುವ ಪುತ್ತೂರ್ದ ಬಂಟ ಜವನೆರೆ ಗೊಬ್ಬು ದಿ| ಅಗರಿ ಜೀವನ್ ಭಂಡಾರಿ ಸ್ಮರಣಾರ್ಥ ಜನವರಿ 6 ಮತ್ತು 7 ರಂದು ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ “ಬಂಟ್ಸ್ ಪ್ರೀಮಿಯರ್ ಲೀಗ್” ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆವರಣದಲ್ಲಿ ನಡೆಯಿತು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ, ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕೋಶಾಧಿಕಾರಿ ಕೆ ಸಿ ಅಶೋಕ್ ಶೆಟ್ಟಿ, ಕ್ರೀಡಾ ಸಂಚಾಲಕ ನವೀನ್ ರೈ ಪಂಜಳ, ಬಿಪಿಎಲ್ ಸಂಚಾಲಕ ಸಂದೇಶ್ ರೈ ಸಂಪ್ಯ, ಕ್ರಿಕೆಟ್ ಸಂಯೋಜಕರಾದ ಕಾರ್ತಿಕ್ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ, ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷ ಶಿಕ್ಷಣ ದೇವರ ಪೂಜೆಗೆ ಸಮಾನ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ 40 ಸರಕಾರಿ ಶಾಲೆಗಳ 4 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಯಕ್ಷ ಶಿಕ್ಷಣ ನೀಡಲಾಗುತ್ತಿದೆ. ಯಕ್ಷಗುರು ರಾಕೇಶ್ ರೈ ಅಡ್ಕ ಜಿಲ್ಲೆಯ ಅಗ್ರಮಾನ್ಯ ಯಕ್ಷಗಾನ ಗುರುಗಳಲ್ಲಿ ಒಬ್ಬರಾಗಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಹೇಳಿದರು. ಸುರತ್ಕಲ್ ಬಂಟರ ಸಂಘ ವತಿಯಿಂದ ನಡೆಯುತ್ತಿರುವ ಯಕ್ಷಸಿರಿ ಯಕ್ಷಗಾನ ತರಬೇತಿ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು. ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಕಟ್ಲ ಪ್ರಾಸ್ತಾವಿಕ ಮಾತನಡಿದರು. ಸಂಘದ ನಿಕಟ ಪೂರ್ವಾಧ್ಯಕ್ಷ ಸುಧಾಕರ್ ಎಸ್. ಪೂಂಜ, ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಕೇಸರಿ ಎಸ್.ಪೂಂಜ, ಜಗನ್ನಾಥ ಶೆಟ್ಟಿ ಬಾಳ, ಯಕ್ಷಸಿರಿ ಸಂಘಟಕಿ ಕವಿತಾ ಪುಷ್ಪರಾಜ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಯಕ್ಷಮಿತ್ರರು ಸುರತ್ಕಲ್ ಇದರ ಅಧ್ಯಕ್ಷ ಜಗದೀಪ್ ಶೆಟ್ಟಿ, ಉದ್ಯಮಿಗಳಾದ…
“ಮನೋರಂಜನೆ ಜತೆಗೆ ಮನೋವಿಕಸನ ಮಾಡುವ ಮತ್ತು ಮಕ್ಕಳ ಬದುಕಿನ ಸ್ಫೂರ್ತಿ ನೀಡುವ ಸಿನಿಮಾಗಳ ಅಗತ್ಯ ಇದೆ. ಈ ಪೈಕಿ ಬನ್ – ಟೀ ಚಲನಚಿತ್ರ ಸಮಾಜ ಮುಖಿ ಚಿಂತನೆಗೆ ಹಚ್ಚುವ ಪ್ರಯತ್ನವಾಗಿ ನಿರ್ಮಿಸಿರುವುದು ಶ್ಲಾಘನೀಯ” ಎಂದು ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್ ಹೇಳಿದರು. ನಗರದ ನಕ್ಸಲ್ ಮಾಲ್ ನ ಪಿವಿಆರ್ ಮಲ್ಟಿಫ್ಲೆಕ್ಸ್ ನಲ್ಲಿ ಶುಕ್ರವಾರ ಡಾ. ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತುತಿಯ ಉದಯ್ ಕುಮಾರ್ ಪಿ. ಎಸ್. ನಿರ್ದೇಶನದ ಬನ್ – ಟೀ ಕನ್ನಡ ಚಲನಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹಿರಿಯ ಕಲಾವಿದ ಕದ್ರಿ ನವನೀತ ಶೆಟ್ಟಿ ಮಾತನಾಡಿ, “ಇಂದಿನ ಯುವ ಪೀಳಿಗೆಗೆ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಯ ಸಂದೇಶ ನೀಡಬಲ್ಲ ಬನ್ – ಟೀ ಎಂಬ ಮೌಲ್ಯಯುತ ಸಿನಿಮಾದಲ್ಲಿ ಮಂಗಳೂರಿನ ಬಾಲನಟ ತನ್ಮಯ್ ಶೆಟ್ಟಿ ಅಭಿನಯಿಸಿರುವುದು ಕರಾವಳಿಗರಿಗೆ ಹೆಮ್ಮೆಯ ವಿಷಯ” ಎಂದರು. ಈ ಸಂದರ್ಭ ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ವಿಜಯ…














