ಅಧ್ಯಾತ್ಮಿಕತೆಯೊಂದಿಗೆ ಕೂಡಿ ಬದುಕುವ ಕಲೆ ,ಜೀವನ ಮೌಲ್ಯ,ಆದರ್ಶಗಳಿಂದ ಸಂಸ್ಕಾರ ಯುತವಾದ ಜೀವನ ಸಾಧ್ಯ, ನಮ್ಮ ಪೌರಾಣಿಕ ಹಿನ್ನಲೆಯ ಯಕ್ಷಗಾನದಿಂದ ಭಾಷಾ ಶುದ್ದತಿ .ತತ್ವ ಮತ್ತು ಚರಿತ್ರೆಯನ್ನು ತಿಳಿದಂತೆ , ಭಕ್ತಿ ಮತ್ತು ಸಂಸ್ಕಾರ ಪಾಠವನ್ನು ಭಜನೆ ಕಳಿಸುತ್ತದೆ. ಸುಜ್ಞಾನದಿಂದ ಕೂಡಿದ ಉತ್ತಮ ವಿಚಾರಗಳೊಂದಿಗೆ ಮಕ್ಕಳಿಗೆ ಸಂಸ್ಕಾರ, ಧರ್ಮದ ಪ್ರಜ್ಞೆಯನ್ನು ಕಳಿಸುವ ಕಾರ್ಯ ಆಗಬೇಕು ,ಅದು ಇಂದು ಇಲ್ಲಿ ನಡೆದಿದೆ, ಉತ್ತಮ ಕಾರ್ಯ ಸೇವಾ ಬಳಗದಿಂದ ನಡೆದಿದೆ . ಭಾರತದ ಮೂಲ ಕೃಷಿ ಸಂಸ್ಕ್ರತಿಯಿಂದ ಹಳ್ಳಿಯಿಂದ ದೇಶದ ಪ್ರಗತಿಯಾದಂತೆ ಋಷಿ ಪರಂಪರೆಯಿಂದ, ಸಂಸ್ಕ್ರತಿ ,ಧರ್ಮ ಸಂರಕ್ಷಣೆ ಕಾರ್ಯ ಆಗುತಿದೆ. ತ್ಯಾಗ ಮತ್ತು ಸೇವೆಯಿಂದ ಸಮಾಜದ ಅಭಿವ್ರದ್ದಿ ಸಾದ್ಯ .ಪ್ರತಿಯೊಂದು ಉತ್ತಮ ವಿಚಾರಗಳು ಸಂಸ್ಕಾರಯುತವಾಗಿ ನಡೆದರೆ ಸದೃಡ ಸಮಾಜ ನಿರ್ಮಾಣ ಆಗಬಹುದು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಆಶಿರ್ವಚನ ನೀಡಿದರು .
ನವೆಂಬರ್ 26 ರಂದು ಪುಣೆಯ ಬಾಣೇರ್ ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರದಲ್ಲಿ ಜರಗಿದ ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರ ದ 20 ನೆ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಭಗವದ್ಭಕ್ತರನ್ನು ಉದ್ದೇಶಿಸಿ ಅಶಿರ್ವಚನ ನಿಡಿದ ಶ್ರೀಗಳು ಮೌಲ್ಯಯುತವಾದ ಉತ್ತಮ ವಿಚಾರಗಳು ನಮ್ಮಲ್ಲಿರಬೇಕು . ಜೀವನದಲ್ಲಿ ದಾರಿ ತಪ್ಪೀದರೆ ಮತ್ತು ಮಾತು ತಪ್ಪಿದರೆ ಕಷ್ಟ, ನಡೆ ನುಡಿಯಲ್ಲಿ ದರ್ಮದ ಮಾರ್ಗ ಅಡಗಿದೆ ,ಆತ್ಮಾವಲೋಕನ ಮಾಡಿಕೊಂಡಾಗ ಯಾವುದೇ ಧರ್ಮದ ಚೌಕಟ್ಟಿನಲ್ಲಿ ತನ್ನ ಅತ್ಮೊದ್ದಾರದ ಮೂಲ ಸಿಗಬಹುದು .ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಉತ್ತಮ ಕಾರ್ಯಗಳನ್ನು ಮಾಡುತಿದೆ,ಮಕ್ಕಳಿಗೆ ನಮ್ಮ ಸಂಸ್ಕ್ರತಿ , ಸಂಸ್ಕಾರ ಕಲಿಸುವ ಕಾರ್ಯ ಮುಂದುವರಿಯಲಿ , ಅಂತೆಯೇ ಪುಣೆಯ ಸದ್ಭಕ್ತರ ಸೇವಾ ಸಹಕಾರ ಸಿಕ್ಕಿದೆ ಈ ಪುಣೆಯ ಹೆಮ್ಮೆ ಬಂಟರ ಭವನದಲ್ಲಿ ಸೇರಿದ ಎಲ್ಲಾ ಭಗವದ್ಭಕ್ತತರಿಗೆ ಶ್ರೀ ದತ್ತಾತ್ರೇಯ ಶ್ರೀ ಹನುಮಂತನ ಕೃಪೆ ಸದಾ ಇರಲಿ ಎಂದು ನುಡಿದರು .
ಶ್ರೀಗಳನ್ನು ವಾದ್ಯ ಘೋಷ , ಕಲಶಜ್ಯೋತಿಯೊಂದಿಗೆ ಬರಮಾಡಿಕೊಳ್ಳಲಾಯಿತು , ಶ್ರೀಗಳನ್ನು ಬಳಗದ ಅದ್ಯಕ್ಷ ಪ್ರಭಾಕರ ಶೆಟ್ಟಿ ದಂಪತಿಗಳು ಹೂ ಹಾರ ಹಾಕಿ ಸ್ವಾಗತಿಸಿದರು, ಹಾಗೂ ಸಾದ್ವಿ ಮಾತೆಯವರನ್ನು ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ ಯವರು ಹೂ ಹಾರ ಹಾಕಿ ಸ್ವಾಗತಿಸಿದರು ದಾರ್ಮಿಕ ಕಾರ್ಯಕ್ರಮವಾಗಿ ಶ್ರೀಗಳ ಪಾದುಕಾ ಪೂಜೆಯನ್ನು ಪುಣೆ ಭಕ್ತರ ಪರವಾಗಿ ,ಪುಣೆಯ ಖ್ಯಾತ ಉದ್ಯಮಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ,ಆಶಾ ಪಿ.ಶೆಟ್ಟಿ ದಂಪತಿಗಳು ನೆರವೇರಿಸಿದರು , ಮುತ್ತೈದೆಯರು ಆರತಿ ಬೆಳಗಿದರು.
ನಂತರ ನಡೆದ ದಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ,ಸಾದ್ವಿ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು , ಮುಖ್ಯ ಅಥಿತಿ ಗಳಾಗಿ ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳೆಪ್ಪಾಡಿ ಗುತ್ತು ಆಗಮಿಸಿದ್ದು .ಗೌರವ ಅತಿಥಿಗಳಾಗಿ ಪುಣೆ ಬಂಟರ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ್ ಶೆಟ್ಟಿ ನೇರೋಳ್,ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ,ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘ ಕಾತ್ರಜ್ ಪುಣೆ ಅಧ್ಯಕ್ಷ ಸುಭಾಷ್ ಶೆಟ್ಟಿ ಉಪಸ್ಥಿತರಿದ್ದು , ಪುಣೆ ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ .ಶೆಟ್ಟಿಯವರು ವೇದಿಕೆಯಲ್ಲಿದ್ದರು . ಪೂಜ್ಯ ಶ್ರೀಗಳು ,ಸಾದ್ವಿ ಮಾತೆ , ಅತಿಥಿ ಗಣ್ಯರು 20ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಶುಭ ಕೋರಿದರು, ಮುತ್ತೈದೆಯರು ಪ್ರಾರ್ಥನೆಗೈದರು.
ಪುಣೆ ಬಳಗದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಯವರು ಸ್ವಾಗತಿಸಿದರು , ಅಥಿತಿ ಗಣ್ಯರನ್ನು ಸದಾನಂದ ಕೆ .ಶೆಟ್ಟಿ ,ಉಷಾಕುಮಾರ್ ಶೆಟ್ಟಿ ,ನಾರಾಯಣಶೆಟ್ಟಿ, ಪದ್ಮನಾಭ ಶೆಟ್ಟಿ ,ರೋಹಿತ್ ಶೆಟ್ಟಿ ,ರಂಜಿತ್ ಶೆಟ್ಟಿ ,ಸುಧಾಕರ್ ಶೆಟ್ಟಿ ಯವರು ಪಲ ತಾಂಬೂಲ ನೀಡಿ ಗೌರವಿಸಿದರು .ಹಾಗೂ ಪೂಜ್ಯ ಸ್ವಾಮಿಜಿಯವರು ಅಥಿತಿಗಣ್ಯರಿಗೆ ಪಲ ಮಂತ್ರಾಕ್ಷತೆ ನೀಡಿ ಹರಸಿದರು ,ಬಳಗದ ಪ್ರ.ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಬಳಗದ ಸಮಾಜ ಸೇವಾ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡಿದರು . ಈ ಸಂದರ್ಭದಲ್ಲಿ ಬಳಗದ ಸೇವಾರ್ಥಿಗಳಿಗೆ ಪ್ರಶಸ್ತಿ ನೀಡಿ ಹರಸಿದರು . ಸಾದ್ವಿ ಮಾತಾನಂದಮಯಿ ಅಶಿರ್ವಚನ ನೀಡಿದರು, ವೇದಿಕೆಯಲ್ಲಿದ್ದ ಗಣ್ಯರು ಶುಭ ನುಡಿಗಳನ್ನಾಡಿದರು .
ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇವರಿಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು .ಹಾಗೂ ಶ್ವೇತಾ ಎಚ್ ಮೂಡಬಿದ್ರಿ ಮತ್ತು ತಂಡದ ನಿರ್ದೇಶನದಲ್ಲಿ ಶ್ರೀ ಗುರುದೇವ ಚಿಣ್ಣರ ಬಳಗ ಮತ್ತು ಸದಸ್ಯರಿಂದ ಕುಣಿತ ಭಜನೆ ನಡೆಯಿತು .ಮುಂಬಯಿ ,ನಾಸಿಕ್, ಔರಂಗಾಬಾದ್,ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಗವದ್ಭಕ್ತರು ಪ್ರಸಾದ ಸ್ವೀಕರಿಸಿದರು . ಈ ವಾರ್ಷಿಕೋತ್ಸವದ ಯಶಸ್ವಿಗೆ ಪುಣೆ ಬಳಗದ ಸದಸ್ಯರು ಹಾಗು ಮಹಿಳಾ ಕೇಂದ್ರ ದ ಸದಸ್ಯೆಯರು ಶ್ರಮಿಸಿದರು. ತಾರಾನಾಥ್ ಶೆಟ್ಟಿ ಮಡಂತ್ಯಾರ್ ಮತ್ತು ಬಳಗದ ಪ್ರ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಕಾರ್ಯಕ್ರಮ ನಿರೂಪಿಸಿ ವಂದಿಸಿದರು .
ಜಗತ್ತಿನಲ್ಲೇ ಶ್ರೇಷ್ಠ ಸಂಸ್ಕ್ರತಿಯನ್ನು ಹೊಂದಿರುವ ದೇಶ ಭಾರತ .ಎಷ್ಟೇ ಆಕ್ರಮಣ ಆದರು ನಮ್ಮ ಸಂಸ್ಕ್ರತಿ ಅಳಿಯಲಿಲ್ಲ. ಅದನ್ನು ಉಳಿಸಿಕೊಂಡವರು ನಾವುಗಳು ,ಇದು ನಿರಂತರವಾಗಿ ನಡೆಯಬೇಕು .ಇಲ್ಲಿ ಇಂದು ಅಂತಹ ವೈಭವದ ನಮ ಸಂಸ್ಕ್ರತಿಯ ಬೆಳೆಸುವಲ್ಲಿ ನೋಡುವ ಅವಕಾಶ ಸಿಕ್ಕಿದೆ.,ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗಿನ ಕುಣಿತ ಭಜನೆ ಮನ ತುಂಬಿ ಬಂತು .ಇದನ್ನು ಕೇಳಿದರೆ ಸಾಲದು ನೋಡಿ ತಿಳಿಯಬೇಕು .ಇಂತಹ ಉತಮ ಸಂಸ್ಕಾರವನ್ನು ಮಕ್ಕಳಿಗೆ ನೀಡಬೇಕು.ಪುಣೆಯ ಬಳಗ ಪ್ರತಿ ವರ್ಷ ವಿಶಿಷ್ಟ ಉತ್ತಮ ಸಂಸ್ಕಾರ ನೀಡುವ ಕಾರ್ಯಕ್ರಮವನ್ನು ಮಾಡುತಿದೆ .ಪೂಜ್ಯ ಶ್ರೀಗಳು ಸಮಾಜದಲ್ಲಿ ತಾನು ಬದುಕಿ ಸಮಾಜವನ್ನು ಬದುಕಬೇಕು ಎಂಬ ಚಿಂತನೆಯ ಮೂಲಕ, ಸಮಜಾಮುಖಿಯಾದ ಸೇವೆಯನ್ನು ಮಾಡುತಿದ್ದಾರೆ . ಸೇವೆ ಮಾಡುವಂತಹ ಸದಾವಕಾಶವನ್ನು ಭಗವಂತ ನಮಗೆಲ್ಲರಿಗೂ ಕರುಣಿಸಿದ್ದಾನೆ. ಗುರು ಅನುಗ್ರಹ ಮತ್ತು ಸಂಕಲ್ಪದಂತೆ ನಡೆದಾಗ ಸೇವೆಯಂಥ ಸದ್ಭಾವನೆಯ ನಮಲಿದ್ದರೆ ಸಮಾಜ ಸದೃಡವಾಗಬಹುದು. ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಕ್ಕಿದರೆ ಸತ್ಪ್ರಜೆಗಳಾಗಿ ಮುಂದೆ ಸಮಾಜದ ಶಕ್ತಿಗಳಾಗಿ ಬೆಳೆಯುತ್ತಾರೆ .ನಮ್ಮ ಜೀವನದಲ್ಲಿ ಸಾರ್ಥಕತೆ ಪಡೆಯಬೇಕೆಂದರೆ ಸಂಸ್ಕಾರ ,ಸಂಸ್ಕ್ರತಿ ಮುಖ್ಯ,ಉತ್ತಮ ಸಂಸ್ಕಾರ ದೊಂದಿಗೆ ,ದ ನಿಸ್ವಾರ್ಥ ಸೇವೆಯಿಂದ ದೇವರ, ಗುರುವರ್ಯರ ಅನುಗ್ರಹ ಪಡೆಯಲು ಸಾದ್ಯ– ಸಾದ್ವಿ ಶ್ರೀ ಮಾತಾನಂದಮಯಿ ,ಒಡಿಯೂರು.
ಒಡಿಯೂರು ಶ್ರೀಗಳ , ಸಮಾಜ ಮುಖಿ ಸೇವಾ ಕಾರ್ಯಗಳು ಸಮಾಜಭಿವೃದ್ದಿಯ ನಿಟ್ಟ ನಿಲುವಿನಲ್ಲಿ ನಡೆಯುತಿದೆ .ಕೃಷಿ ಅದಾರಿತ ನಮ್ಮ ಸಂಸ್ಕ್ರತಿಯ ಜೊತೆಯಲ್ಲಿ ಆಧ್ಯಾತ್ಮಿಕ ಚಿಂತನೆ ,ಶೈಕ್ಷಣಿಕ ,ಅಯುರ್ವೇದ ಮತ್ತು ಹಲವಾರು ಸೇವಾ ಯೋಜನೆಗಳ ಕೇಂದ್ರವಾಗಿ ಶ್ರೀಗಳು ಕೈಗೊಂಡ ಕಾರ್ಯಗಳು ದೇಶ ಕಟ್ಟುವಲ್ಲಿ ಪಲಪ್ರದವಾಗಿ ಪರಿಣಮಿಸಲಿದೆ .ನಾವು ಎಲ್ಲೇ ಹೋದರು ಎಲ್ಲೇ ಇದ್ದರು ಎಷ್ಟೇ ದೊಡ್ಡ ವ್ಯಕ್ತಿಯಾಗಿ ಗುರುತಿಸಿಕೊಂಡರು ನಮ್ಮ ಜನ್ಮಭೂಮಿಯ ಪ್ರೀತಿ ನಮಲ್ಲಿರಲಿ, ತಾಯ್ನಾಡಿನ ನಮ್ಮತನವನ್ನು ಉಳಿಸಿಕೊಂಡು ಹೋಗುವ ಕಾರ್ಯ ನಮ್ಮಿಂದ ಅಗಲಿ ,ನಮ್ಮ ಬಾಷೆ ,ಕಲೆ ,ಸಂಸ್ಕ್ರತಿ ,ಅಚಾರ ವಿಚಾರಗಳನ್ನು ಉಳಿಸಿಕೊಂಡು ಹೋಗುವ ಕಾರ್ಯ ಅಗಲಿ – ಶ್ರೀ ರಾಜೇಶ್ ನಾಯ್ಕ್ ಉಳೆಪ್ಪಾಡಿ ಗುತ್ತು- ಶಾಸಕರು ಬಂಟ್ವಾಳ ವಿದಾನ ಸಭಾ ಕ್ಷೇತ್ರ.
ನಮ್ಮ ಸಂಸ್ಕಾರ ,ಸಂಸ್ಕ್ರತಿ ಎನಿದೆಯೋ ಅದರ ಪ್ರಕಾರವಾಗಿ ಸಮಾಜ ಬೆಳೆಯಬೇಕು ,ಧರ್ಮ ಪ್ರಜ್ಞೆಯ ಉತ್ತಮ ವಿಚಾರಗಳಿಗೆ ಸಮಾಜ ಹೊಂದಿಕೊಂಡು ಹೋದರೆ ಸದೃಡ ಸಮಾಜ ನಿರ್ಮಾಣವಾಗುತ್ತದೆ ,ನಿಸ್ವಾರ್ಥದಿಂದ ಸೇವೆ ಮಾಡುವ ಭಾಗ್ಯ ನಮಗೆ ದೇವರು ಕರುಣಿಸಿದ್ದಾರೆ,
ಅದನ್ನು ನಿಷ್ಕಳಂಕ ಮನಸ್ಸಿನಿಂದ ಮಾಡಿ ತೋರಿಸುವುದು ನಮ್ಮ ಕರ್ತವ್ಯ ,ಉತ್ತಮ ಕಾರ್ಯಗಳಿಗೆ ಸಹಕಾರ ,ಪ್ರೋತ್ಸಾಹ ನೀಡುವುದು ಕೂಡಾ ನಮ್ಮ ಕಾರ್ಯ . ದೈವ ದೇವರು ಮತ್ತು ಗುರುವಿನ ಆಶಿರ್ವಾದದಿಂದ ನಮ್ಮ ಸತ್ಕರ್ಮಗಳು ತನ್ನಿಂತಾನೆ ನಿರ್ವಿಘ್ನವಾಗಿ ನಡೆಯುತ್ತವೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ . ಜ್ಞಾನ ದಾರೆ ನೀಡುವ ಗುರುವೀನ ಆಶಿರ್ವಾದ ನಮಗೆ ಸಿಗಬೇಕು , ,ಗುರು ಚರಣದ ಸ್ಪರ್ಶ ನಮ್ಮನ್ನು ಮತ್ತಷ್ಟು ಶುದ್ದವಾಗಿಸಬಹುದು ,ಧರ್ಮ ಪ್ರಜ್ಞೆಯೊಂದಿಗೆ ನಮ್ಮನ್ನು ಸದೃಡವಾಗಿಸಬಹುದು,ಹಾಗೆಯೇ ಸಮಾಜವನ್ನು ದೇಶವನ್ನು ಕಟ್ಟುವ ಕಾರ್ಯವನ್ನು ಮಾಡಬೇಕು . ಪುಣೆಯ ಶ್ರೀ ಗುರುದೇವ ಸೇವಾ ಬಳಗ ಉತ್ತಮ ಸೇವಾ ಕಾರ್ಯಗಳ ಮೂಲಕ ಕಾರ್ಯ ಗೈಯುತಿದೆ , ಗುರುವೀನ ಸತ್ಕಾರ್ಯಗಳಲ್ಲಿ ನಾವು ಕೂಡ ಬಾಗಿಗಲಾಗೋಣ- ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು- ಅಧ್ಯಕ್ಷರು ಬಂಟರ ಸಂಘ ಪುಣೆ.
ಗುರುವಿನ ಮಾರ್ಗದರ್ಶನದಲ್ಲಿ ಸನ್ಮಾರ್ಗದಲ್ಲಿ ನಡೆದರೆ ಜೀವನದ ಪಯಣ ಸುಖಕರವಾಗಿ ಇರುತ್ತದೆ , ಯಾವುದೇ ಅಧಿಕಾರ ಪದವಿ,ಸನ್ಮಾನ ಸತ್ಕಾರದ ಆಸೆಯನ್ನು ಮಿರಿ ನಾವು ಮಾಡುವ ಸೇವಾ ಕಾರ್ಯ ಸಮಾಜಕ್ಕೆ ಅರ್ಪಣೆಯಾದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ,ಅದುವೇ ನಮಗೆ ದೊಡ್ಡ ಸತ್ಕಾರ .ನಾವು ತುಳುಕೂಟದ ಮುಖೇನ ಇದೆ ಉದ್ದೇಶವನ್ನು ಇಟ್ಟುಕೊಂಡು ಮುನ್ನಡೆಯುತಿದ್ದೇವೆ ,ಗುರುಗಳ ಆಶಿರ್ವಾದ ಸದಾ ನಮಗೆ ಇರಲಿ , -ಶ್ರೀ ದಿನೇಶ್ ಶೆಟ್ಟಿ ಕಳತ್ತೂರು ಅಶ್ವಥ್ಹಗುತ್ತು -ಅಧ್ಯಕ್ಷರು ತುಳುಕೂಟ ಪುಣೆ.
ಒಡಿಯೂರು ಕ್ಷೇತ್ರದ ಮುಖಾಂತರ ಸಮಾಜದ ಒಳಿತನ್ನು ಬಯಸುವ ಸಮಾಜಮುಖಿ ಸೇವೆಯಲ್ಲಿ ನಗುವನ್ನು ಕಾಣುವ, ಒಡಿಯೂರು ಗುರುವಿನಂತಹವರಿಗೆ ನಮ್ಮ ಭಕ್ತರ ಸಹಕಾರ ಸದಾ ಇರುತ್ತದೆ ,ಕ್ಷೇತ್ರ ಇಂದು ಬ್ರಹತ್ ರೂಪದಲ್ಲಿ ಬೆಳೆದಿದೆ ಹಾಗೆಯೇ ಸೇವಾ ಕಾರ್ಯಗಳು ನಿರಂತವಾಗಿ ನಡೆಯುತಿವೆ , ಇಂತಹ ಕ್ಷೇತ್ರದಲ್ಲಿ ನಡೆಯುವ ಸೇವಾ ಕಾರ್ಯಗಳನ್ನು ಮತ್ತು ದೇವಸ್ಥಾನದ ಸೊಬಗನ್ನು ನಮ್ಮ ಮಕ್ಕಳಿಗೆ ಜನಮಾನಸಕ್ಕೆತಿಳಿಸುವ ಕಾರ್ಯ ಆಗಬೇಕು.- ಶ್ರೀ ರಾಕೇಶ್ ಶೆಟ್ಟಿ ಬೆಳ್ಳಾರೆ -ಅಧ್ಯಕ್ಷರು ಬಂಟರ ಸಂಘ ಪಿಂಪ್ರಿ -ಚಿಂಚ್ವಾಡ್.
ಸಮಾಜ ಮುಖಿ ಚಿಂತನೆಯ ಮೂಲಕ ಒಡಿಯೂರು ಶ್ರೀಗಳು ಕೈಗೊಂಡ ಸೇವಾ ಕಾರ್ಯಗಳು ಎಲ್ಲೆಡೆ ಹರಡಿದೆ ,ಜನರ ಮದ್ಯೆ ಇದ್ದುಕೊಂಡು ಕಷ್ಟ ಸುಖ ಅರಿತು ,ಸಮಾಜಕ್ಕಾಗಿ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸೇವಾ ಕಾರ್ಯಗಳು ನಡೆಯುತಿವೆ .ಆಧ್ಯಾತ್ಮಿಕ ಚಿಂತನೆಯಲ್ಲಿ ,ಧರ್ಮ ಸಂರಕ್ಷಣೆಯಲ್ಲಿ ಶ್ರೀಗಳು ತನ್ನನು ತೊಡಗಿಸಿಕೊಂಡವರು .ಶ್ರೀಗಳ ಸಂಸ್ಥೆ ಶ್ರೀಗುರುದೇವ ಸೇವಾ ಬಳಗದ ಕುಣಿತ ಭಜನೆಯಿಂದ ಉತ್ತಮ ಸಂಸ್ಕ್ರತಿಯ ಅನಾವರಣ ಆಗಿದೆ .ಕುಣಿತ ಭಜನೆ ಮಕ್ಕಳಿಗೆ ನಮ ಸಂಸ್ಕಾರವನ್ನು ತಿಳಿಸುವ ಕಾರ್ಯ ಮಾಡುತ್ತದೆ ಮತ್ತು ಭಕ್ತಿ ಭಾವವನ್ನು ತಿಳಿಸುವ ಕಾರ್ಯ ಮಾಡುತ್ತದೆ .,ಇದು ಮುಂದುವರಿಯಲಿ ,ನಮ್ಮ ಸಂಸ್ಥೆಯ ಮೂಲಕ ಕೂಡಾ ಕುಣಿತ ಭಜನೆ ಮಾಡುವ ಉದ್ದೇಶವನ್ನು ಮಾಡುತ್ತೇವೆ -ಶ್ರೀ ವಿಶ್ವನಾಥ್ ಪೂಜಾರಿ ಕಡ್ತಲ -ಅಧ್ಯಕ್ಷರು ಬಿಲ್ಲವ ಸಂಘ ಪುಣೆ .
ಸುಸಂಸ್ಕ್ರತ ಸಮಾಜ ನಿರ್ಮಾಣಕ್ಕೆ ಗುರುವಿನ ಸಾನಿದ್ಯಬೇಕು , ಸಮಾಜದ ಒಳಿತನ್ನು ಬಯಸುವ ಸಮಾಜಮುಖಿ ಸೇವೆಯಲ್ಲಿ ನಗುವನ್ನು ಕಾಣುವ ಒಡಿಯೂರು ಗುರುವಿನಂತಹವರಿಗೆ ನಮ್ಮ ಭಕ್ತರ ಸಹಕಾರ ಸದಾ ಇರುತ್ತದೆ ಪುಣೆ ಬಳಗದವರು ಉತ್ತಮ ಕಾರ್ಯಕ್ರಮಗಳ ಮೂಲಕ ಜನರಿಗೆ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯವನ್ನು ವರ್ಷಂಪ್ರತಿ ಮಾಡುತ್ತಾ ಇದ್ದಾರೆ ,ನಮ್ಮ ಸಹಕಾರ ಸದಾ ಇದೆ ಶುಭವಾಗಲಿ -ಶ್ರೀ ಸುಭಾಶ್ ಶೆಟ್ಟಿ -ಅಧ್ಯಕ್ಷರು ಶ್ರೀ ಅಯ್ಯಪ್ಪಸ್ವಾಮೀ ಸೇವಾ ಸಂಘ ಕಾತ್ರಜ್ ಪುಣೆ.
ಫೋಟೋ ವರದಿ ಹರೀಶ್ ಮೂಡಬಿದ್ರಿ
.