Author: admin
ದೈವರಾಧನೆ, ಆತ್ಮಗಳ ಆರಾಧನೆಗಳಿಗೆ ಸಂಬಂಧ ಪಟ್ಟ ಕುರುಹುಗಳನ್ನು ನಾವು ವೇದ ಪೂರ್ವ ಕಾಲದ ಸಿಂಧೂ ನಾಗರಿಕತೆಯಲ್ಲಿ ಕಾಣಬಹುದು. ಸಿಂಧು ಸಂಸ್ಕೃತಿಯ ಕಾಲ, ಸಿಂಧು ಸಂಸ್ಕೃತಿಗೆ ನಾಗರಿಕತೆ ಹರಡಿದ್ದು ದಕ್ಷಿಣದಿಂದ ಎಂಬ ಮಾತಿನ ಪ್ರಕಾರದಂತೆ ನೋಡುವಾಗ ದಕ್ಷಿಣದಿಂದ ಹರಡಿದ್ದ ಸಿಂಧು ಸಂಸ್ಕೃತಿಯು ದ್ರಾವಿಡ ಹಾಗು ಆರ್ಯ ಸಂಸ್ಕೃತಿಯಿಂದ ಪೂರ್ವದ್ದು. ಆನಂತರ ಭಾರತದಲ್ಲಿ ಹಲವಾರು ಬದಲಾವಣೆಗಳು ಆದವು. ಅವುಗಳಲ್ಲಿ ಧಾರ್ಮಿಕತೆಗೆ ಪ್ರಾಧಾನ್ಯತೆ ಉಳ್ಳ ಭಕ್ತಿ ಪಂಥಗಳು ಉದಯಿಸಿದವು. ಅದುವೆ “ಆಳುಪರ” ಕಾಲ, ಈ ಕಾಲದಲ್ಲಿ ರಾಜ ಕುಟುಂಬಗಳು ಧಾರ್ಮಿಕತೆಗೆ ಹಾಗೂ ದೈವಾರಾಧನ ಪದ್ಧತಿಗಳಿಗೆ ಒತ್ತು ನೀಡಿದ್ದವು. ಈ ಆಳುಪರು ತುಳುನಾಡನ್ನು ಕ್ರಿ.ಶ 2ನೆ ಶತಮಾನದಿಂದ ಕ್ರಿ.ಶ 7ನೆ ಶತಮಾನದವರೆಗೆ, ತುಳುನಾಡಿನ ಯಾವುದೇ ಆರಾಧನಾ ಪದ್ಧತಿಗಳಿಗೆ ಒಂದಿಷ್ಟು ಚ್ಯುತ್ತಿ ಬಾರದಂತೆ ಸ್ವತಂತ್ರವಾಗಿ ಆಳಿದರು. ನಂತರದ ಕ್ರಿ.ಶ 7 ರಿಂದ ಕ್ರಿ.ಶ 12 ನೇ ಶತಮಾನದ ತನಕ ಈ ಆಳುಪರು “ಕದಂಬರ” ಸಾಮಂತರಾಗಿ ತುಳುನಾಡನ್ನು ಆಳಿದರು. ಇವರೇ ತುಳುನಾಡಿನ ಬಂಗ, ಚೌಟ, ಅಜಿಲ, ಕಾಜವ, ಶೇನವ ಮುಂತಾದವರು.…
ಮೂಡುಬಿದಿರೆ: ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಮೂಲಕ ಅನನ್ಯವಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು 2023-24ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಕಾಲೇಜಿಗೆ 2023-24ರಿಂದ ಮುಂದಿನ ಹತ್ತು ವರ್ಷಗಳಿಗೆ ಅನ್ವಯವಾಗುವಂತೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) 2023ರ ಮೇ 31ರಂದು ಮಂಗಳೂರು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯ ಮಂಗಳೂರು ವಿಶ್ವವಿದ್ಯಾಲಯವು ವಿದ್ಯಾವಿಷಯಕ ಪರಿಷತ್ ಸಮಾಲೋಚನೆಯೊಂದಿಗೆ ಸಿಂಡಿಕೇಟ್ ಮಾಡಿರುವ ಶಿಫಾರಸ್ಸು ಅನುಸರಿಸಿ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸಹಮತ ಸೂಚಿಸಿ ಆದೇಶಿಸಿದೆ ಎಂದು ತಿಳಿಸಿದರು. ಮೌಲ್ಯಾಧಾರಿತ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆಯುವ ಕಾರಣ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಪದವಿಗಳನ್ನು ಇನ್ನಷ್ಟು ಕಾಲಬದ್ಧ…
ಜೀವನದಲ್ಲಿ ಎಲ್ಲ ಮಜಲುಗಳಿಗೂ ನಾವು ಮತ್ತೆ -ಮತ್ತೆ ಕರ್ಮವನ್ನೇ ಹೋಲಿಸಿ ತಳುಕು ಹಾಕುತ್ತೇವೆ. ನಮ್ಮ ಪುರಾಣ ಕಥೆಗಳು, ಪುರಾಣ ಪಾತ್ರಗಳು ಮತ್ತು ದೇವರುಗಳು ಆವತರಿಸಿದ ಮರ್ಮ ಕರ್ಮವೇ ಆಗಿರುವುದರಿಂದ ಕರ್ಮವನ್ನು ಹೊರತುಪಡಿಸಿ ನಾವು ಜೀವನವನ್ನು ಪೃಥಕ್ಕರಿಸುವುದು ಕಷ್ಟ ಸಾಧ್ಯ. ದೇವತೆಗಳಿಗೂ ಹಾಗೆಯೇ ಕರ್ಮವನ್ನು ಹೊರತುಪಡಿಸಿ ಧರ್ಮವನ್ನು ರಕ್ಷಿಸಿಕೊಂಡು ಹೋಗಲು ಸಾಧ್ಯವಿಲ್ಲ. ಯಾಕೆಂದರೆ ಅವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇದಕ್ಕೆ ಪೂರಕವಾಗಿ ಯಮಧರ್ಮ ಮತ್ತು ಅಣಿಮಾಂಡವ್ಯರ ಕಥೆಯನ್ನು ನೋಡೋಣ. ಯಾವುದೇ ವಿಷಯ, ವಸ್ತು, ರಾಕ್ಷಸ, ಮಾನವ ಮತ್ತು ದೇವತೆಗಳಲ್ಲಾದರೂ ಸರಿಯೆ, ಅವರವರ ತಪ್ಪು ಕರ್ಮಗಳನ್ನು ನಿರ್ಧರಿಸಿ ನ್ಯಾಯವನ್ನೇ ಹೇಳುವ ಧರ್ಮದ ಅಧಿಕಾರಿ ಯಮ, ಯೂರ್ಯ ಹೇಗೆ ಲೋಕವನ್ನು ತನ್ನ ಬೆಳಕಿನಲ್ಲಿ ನಡೆಸುತ್ತಾನೆಯೋ ಹಾಗೆ ತಮ್ಮ, ತನ್ನ ಧರ್ಮದ ತಕ್ಕಡಿಯಲ್ಲಿ ಲೋಕವನ್ನು ಸಮತೋಲನ ಮಾಡುತ್ತಾನೆ. ಯಮನಿಗೆ ಧರ್ಮವನ್ನು ಹೊರತುಪಡಿಸಿ ಮಾತನಾಡುವ ಯಾವುದೇ ದಾರಿಗಳೂ ತಿಳಿದಿಲ್ಲ. ಇಂತಹ ಒಂದು ಧರ್ಮದ ಪರಿಸ್ಥಿತಿಯಿಂದಾಗಿ ಯಮನು ಶಾಪಗ್ರಸ್ಥನಾಗುತ್ತಾನೆ. ದ್ವಾಪರಯುಗದ ಆರಂಭದಲ್ಲಿ ಅಣಿಮಾಂಡ್ಯ ಎಂಬ ಋಷಿಯೊಬ್ಬರು ಕಾಶೀ ದೇಶದ…
ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ, ಚಿಣ್ಣರಬಿಂಬ, ಮುಂಬಯಿ, ನಾರಾಯಣಾಮೃತ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಚಿಣ್ಣರಬಿಂಬದ ಶಿಕ್ಷಕರ ಸಮಾವೇಶ, ಗೌರವಾರ್ಪಣೆ ಕಾರ್ಯಕ್ರಮ ಕನ್ನಡ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮ ದಿನಾಂಕ 17/8/2023ರ ಗುರುವಾರ ಇಳಿಹೊತ್ತು 4ರಿಂದ ಮುಂಬಯಿ ವಿಶ್ವವಿದ್ಯಾಲಯದ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ನಡೆಯಲಿದೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿಣ್ಣರಬಿಂಬದ ರೂವಾರಿಗಳಾದ ಶ್ರೀ ಪ್ರಕಾಶ್ ಭಂಡಾರಿ ಹಾಗೂ ಶ್ರೀ ಸುರೇಂದ್ರಕುಮಾರ್ ಹೆಗ್ಡೆ, ನಾರಾಯಣಾಮೃತ ಫೌಂಡೇಶನ್ನಿನ ಎನ್.ಆರ್.ರಾವ್ ಅವರು ಪಾಲ್ಗೊಳ್ಳಲಿರುವರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಸಂಯೋಜಿಸಲಿದ್ದಾರೆ. ಅಂದು ಚಿಣ್ಣರಬಿಂಬದ ಸುಮಾರು 56 ಶಿಕ್ಷಕರನ್ನು ಗೌರವಿಸಲಾಗುವುದು. ಚಿಣ್ಣರಬಿಂಬದ ಕೇಂದ್ರ ಸಮಿತಿಯ ಸದಸ್ಯರು, ವಲಯ ಮುಖ್ಯಸ್ಥರು, ಶಿಬಿರ ಮುಖ್ಯಸ್ಥರು, ಸಾಂಸ್ಕೃತಿಕ ಮುಖ್ಯಸ್ಥರು ಹಾಗೂ ಪಾಲಕರು ಉಪಸ್ಥಿತರಿರುವರು ಎಂದು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ…
ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಜೂ. ೧೮ ರಂದು ಪುತ್ತೂರು ಎಮ್. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನೂತನ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ಕರ್ನಾಟಕ ಸರಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವಾಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ನೃತ್ಯ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಅಧಿಕಾರದಲ್ಲಿರುವ ಕರ್ನಾಟಕ ಸರ್ಕಾರದ ಏಕ ಮಾತ್ರ ಬಂಟ ಶಾಸಕ ಶಾಸಕ ಅಶೋಕ್ ಕುಮಾರ್ ರೈಯವರನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಸಭಾ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸನ್ಮಾನಿಸಿದರು. ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಅಭಿನಂದನಾ ಭಾಷಣ ಮಾಡಿದರು. ಬಂಟರ ಸಂಘದ ಮಾಜಿ ಅಧ್ಯಕ್ಷ ‘ಸಹಕಾರರತ್ನ’ ಸವಣೂರು ಕೆ.ಸೀತಾರಾಮ ರೈಯವರು ವಿದ್ಯಾರ್ಥಿ ವೇತನ ವಿತರಿಸಿದರು. ಮಾತೃ…
2022-23ನೇ ಶೈಕ್ಷಣಿಕ ಸಾಲಿನ ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಮುಂಬಯಿ ಕಾಂದಿವಲಿ ಪೂರ್ವದ ಅಶೋಕ್ ನಗರ ಚಿಲ್ಡ್ರನ್ಸ್ ಅಕಾಡೆಮಿ ಶಾಲೆಯ ವಿದ್ಯಾರ್ಥಿ ಆರ್ಯವೀರ್ ಅಡ್ಯಂತಾಯ ರವರು ಶೇ. 99.40 ಅಂಕಗಳನ್ನು ಪಡೆಯುವುದರೊಂದಿಗೆ ದೇಶದಲ್ಲಿಯೇ 3ನೇ ಸ್ಥಾನ ಪಡೆದು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈತ ಕಾಂದಿವಲಿ ಪೂರ್ವದ ಅಶೋಕ ನಗರದ ಸುದರ್ಶನ್ ಸೊಸೈಟಿಯ ನಿವಾಸಿ ಸುಜೀರ್ ಗುತ್ತು ರವಿರಾಜ್ ಅಡ್ಯಂತಾಯ ಮತ್ತು ಹೆಜಮಾಡಿ ಗರಡಿಮನೆ ವಿಂದ್ಯಾ ಅಡ್ಯಂತಾಯ ದಂಪತಿಯವರ ಸುಪುತ್ರ.
ವಸುದೈವ ಕುಟುಂಬಕಂ ತತ್ವವನ್ನು ಪ್ರತಿಪಾದಿಸುವ ಕಾರಣದಿಂದ ಪ್ರಸ್ತುತ ಭಾರತ ವಿಶ್ವಗುರು ಸ್ಥಾನದಲ್ಲಿದೆ. ಸ್ವಾರ್ಥವಿಲ್ಲದ ಮನಸ್ಥಿತಿಯಿಂದ ಸರ್ವರ ಏಳಿಗೆಯನ್ನು ಬಯಸುವುದು, ಎಲ್ಲರೂ ಸುಖವಾಗಿರಬೇಕು ಎಂಬುದು ನಮ್ಮ ಪ್ರಾರ್ಥನೆಯಾಗಬೇಕು. ಈ ಬಗೆಯ ನಿಷ್ಕಲ್ಮಶ ಭಕ್ತಿ ಮಾತ್ರವೆ ದೇವರಿಗೆ ತೃಪ್ತಿ ನೀಡುತ್ತದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು. ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಪ್ರಯುಕ್ತ ನಡೆದ “ಸಮರ್ಪಣ ದಿವಸ್’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜದ ಒಳಿತಿಗೆ ಮಾಡುವ ಎಲ್ಲ ಧಾರ್ಮಿಕ ಕೆಲಸವನ್ನು ದೇವರು ಸ್ವೀಕರಿಸಿ, ಅನುಗ್ರಹಿಸುತ್ತಾರೆ. ಭಕ್ತ ವರ್ಗದ ಸಂಕಲ್ಪದಂತೆ ನಡೆಸುತ್ತಿರುವ ಈ ಅತಿರುದ್ರ ಮಹಾಯಾಗದಿಂದ ಸಮಾಜಕ್ಕೆ ಒಳಿತಾಗಲಿದೆ ಎಂದು ಹಾರೈಸಿದರು. ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ತುಳುಕೂಟ ಬರೋಡಾ ಅಧ್ಯಕ್ಷ ಶಶಿಧರ್ ಶೆಟ್ಟಿ ವಹಿಸಿದ್ದರು. ಮಣಿಪಾಲ ಸ್ಟೋರ್ ನ ಆತ್ಮಾರಾಮ ನಾಯಕ್, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ವ್ಯವಸ್ಥಾಪನಾ ಸಮಿತಿ…
ಮಾತೃಭೂಮಿ,ಕ್ರೆಡಿಟ್ ಕೋ ಆಪ್ ಸೊಸೈಟಿ ವತಿಯಿಂದ ಐಕಳ ಹರೀಶ್ ಶೆಟ್ಟಿ ಹಾಗೂ ಸದಾಶಿವ ಶೆಟ್ಟಿ ಕನ್ಯಾನರಿಗೆ ಸನ್ಮಾನ
ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ಇದರ ಪದಗ್ರಹಣ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಮತ್ತು ನಿರ್ದೇಶಕರಾದ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ಇದರ ನೂತನ ಅಧ್ಯಕ್ಷರಾದ ಶ್ರೀ ಉಳ್ತೂರು ಮೋಹನದಾಸ್ ಶೆಟ್ಟಿ, ಉಪಾಧ್ಯಕ್ಷರಾದ ಡಾ. ಆರ್ ಕೆ ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀ ಪ್ರವೀಣ್ ಭೋಜ ಶೆಟ್ಟಿ, ಕೋಶಾಧಿಕಾರಿ ಸಿ ಎ. ಹರೀಶ್ ಬಿ. ಶೆಟ್ಟಿ, ನಿರ್ದೇಶಕರಾದ ಶ್ರೀ ಮಹೇಶ್ ಎಸ್. ಶೆಟ್ಟಿ, ಒಕ್ಕೂಟದ ಮಹಾಪೋಷಕರಾದ ಶ್ರೀಮತಿ ಉಮಾ ಕೃಷ್ಣ ಶೆಟ್ಟಿ, ಪೋಷಕರಾದ ಶ್ರೀ ರತ್ನಾಕರ್ ಶೆಟ್ಟಿ ಮುಂಡ್ಕೂರು, ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಹಾಸ್ ಶೆಟ್ಟಿ, ಸಿ. ಎ. ರಮೇಶ್ ಶೆಟ್ಟಿ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ತಂದೆಯಾದವನು ರಾತ್ರಿ, ಹಗಲು ದುಡಿದು ಒಂದೊಂದು ಪೈಸೆ ಕೂಡಿ ಇಟ್ಟು ಮಗಳಿಗಾಗಿ ಒಂದೊಂದೇ ಬಂಗಾರದ ಆಭರಣ ಮಾಡಿಸಿ ಅದನ್ನು ಕಪಾಟಿನಲ್ಲಿ ಇಟ್ಟು ಕಣ್ಣಿನಲ್ಲಿ ಒಂದು ತಣ್ಣನೆಯ ತೃಪ್ತಿ ಪಡುತ್ತಾನಲ್ಲ, ಅದಕ್ಕೆ ಬೆಲೆ ಕಟ್ಟಲು ಆಗುತ್ತಾ… ಮಗಳು ಡಾಕ್ಟರೋ, ಇಂಜಿನಿಯರೋ ಆಗಲಿ ಎಂದು ಹೊರಗೆ ಹೆಚ್ಚುವರಿ ದುಡಿದು ದಣಿದು ಬಂದು ಮಗಳು ತನ್ನ ಕೋಣೆಯಲ್ಲಿ ಓದುತ್ತಾ ಕುಳಿತಿದ್ದಾಳಲ್ಲ ಎಂದು ವಿಶ್ವಾಸದಿಂದ ಇಣುಕಿ ಸಂತೃಪ್ತಿ ಪಡುತ್ತಾನಲ್ಲ, ಅದನ್ನು ತುಲನೆ ಮಾಡಲು ಅಗುತ್ತಾ… ಮಗಳು ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ನಲ್ಲಿ ಭಾಗವಹಿಸಬೇಕು, ಸ್ಕೂಲ್ ಟ್ರಿಪ್ಪಿಗೆ ಹೋಗಬೇಕು ಹಣ ಬೇಕು ಎಂದು ಹೇಳುವಾಗ ತನ್ನ ಸಂಜೆಗಳ ಚಾ ತಿಂಡಿಗೆ ಇಟ್ಟ ಹಣವನ್ನು ಅದಕ್ಕೆ ಕೊಟ್ಟು ತಾನು ನೀರು ಕುಡಿದು ಸಾಕು ಅಂದುಕೊಳ್ಳುತ್ತಾನಲ್ಲ ಅದಕ್ಕೆ ಸಮ ಬೇರೆ ಉಂಟೆ… ಇನ್ನೇನೂ ಮಗಳಿಗೆ ಮದುವೆಯ ವಯಸ್ಸು ಹತ್ತಿರ ಬಂದಾಗ ಆಕೆಗೆ ಒಳ್ಳೆಯ ಗಂಡ ಸಿಗುವ ತನಕ ಅದೇ ಗುಂಗಿನಲ್ಲಿ ತನ್ನ ರಾತ್ರಿಗಳ ನಿದ್ರೆಯನ್ನು ಕನವರಿಕೆಯಲ್ಲಿ ಕಳೆದು ಬೆಳಿಗ್ಗೆ ಎಳುವಾಗ ತಲೆ…
ಯಕ್ಷಗಾನ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಅಜೆಕಾರು ಕಲಾಭಿಮಾನಿ ಬಳಗ ಇದೀಗ ಇಪ್ಪತ್ತೊಂದು ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಇದರ ಸ್ಥಾಪಕ ಸಂಚಾಲಕ, ಕಲಾವಿದ, ಸಂಘಟಕ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಮಾತಾಡಿಸಿದಾಗ ಅವರಿಂದ ದೊರೆತ ಉತ್ತರಗಳ ಸಾರವೇ ಪ್ರಸ್ತುತ ಲೇಖನ. ಮುಂಬಯಿ ನಗರ ಸೇರಿದ ಶೆಟ್ಟರು ಕ್ಯಾಂಟೀನ್ ನಡೆಸಿಕೊಂಡು, ಹಲವಾರು ಕಡೆ ಕೆಲಸ ಮಾಡಿಕೊಳ್ಳುತ್ತಲೇ ತನ್ನ ಆಸಕ್ತಿಯ ಯಕ್ಷಗಾನವನ್ನೂ ಬಿಟ್ಟಿರಲಾಗದೆ ಅವಕಾಶ ಸಿಕ್ಕಾಗಲೆಲ್ಲಾ ಇಲ್ಲಿನ ಮೇಳಗಳಲ್ಲಿ ವೇಷ ಮಾಡತೊಡಗಿದರು. ಬಾಲ್ಯದಿಂದಲೂ ಯಕ್ಷಗಾನ ಕಲೆಯ ಕುರಿತಂತೆ ತೀವ್ರ ಸೆಳೆತ ಒಲವು ಹೊಂದಿದ್ದ ಬಾಲಕೃಷ್ಣ ಶೆಟ್ಟರು ಊರಿಗೆ ಬರುತ್ತಿದ್ದ ಯಕ್ಷಗಾನ ಮೇಳಗಳ ಪ್ರದರ್ಶನಗಳನ್ನು ನೋಡುತ್ತಲೇ ಹಿರಿಯ ಕಲಾವಿದರನೇಕರ ಸಂಪರ್ಕ ಹೊಂದಿ ಯಕ್ಷಗಾನ ಕುರಿತಂತೆ ಅನುಭವ ಸಂಪಾದಿಸಿ ಯಕ್ಷಗಾನ ಕಲಾವಿದನಾಗಬೇಕೆಂಬ ಅದಮ್ಯ ಆಸೆಯನ್ನು ಅದುಮಿಟ್ಟಕೊಳ್ಳಲಾಗದೆ ಪ್ರೌಢ ಶಿಕ್ಷಣ ಮುಗಿಯುತ್ತಲೆ ಊರಿನ ಪ್ರಸಿದ್ಧ ಮೇಳದಲ್ಲಿ ಗೆಜ್ಜೆ ಕಟ್ಟಿ ಕಲಾವಿದನೆಂಬಂತೆ ಗುರುತಿಸಿಕೊಂಡು ಒಂದು ವರ್ಷ ಊರಿನಲ್ಲೆ ತಿರುಗಾಟ ನಡೆಸಿದರು. ಆದರೆ ಆ ಸಮಯದಲ್ಲಿ ಯಕ್ಷಗಾನವನ್ನೇ ನಂಬಿಕೊಂಡು…















