Author: admin

ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಇದು ಮಾನವರು, ಸಸ್ಯಗಳು, ಪ್ರಾಣಿಗಳು, ನೀರು, ಗಾಳಿ ಇತ್ಯಾದಿಗಳನ್ನು ಒಳಗೊಂಡಂತೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಜೀವಂತ ಮತ್ತು ನಿರ್ಜೀವ ಘಟಕಗಳನ್ನು ಒಳಗೊಂಡಿದೆ. ನಾವು ಬದುಕಲು ಬೇಕಾದ ಎಲ್ಲವನ್ನು ನಮ್ಮ ಪರಿಸರ ನಮಗೆ ಒದಗಿಸುತ್ತದೆ. ನಮ್ಮ ಪರಿಸರವನ್ನು ಉಳಿಸುವ ಮತ್ತು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಪ್ರಕೃತಿಯು ನಮ್ಮ ಪರಿಸರ ವ್ಯವಸ್ಥೆಯನ್ನು ನಿಖರವಾಗಿ ವಿನ್ಯಾಸಗೊಳಿಸಿದೆ. ಮನುಷ್ಯ ತನ್ನ ವೈಯಕ್ತಿಕ ಪ್ರಯೋ ಜನಕ್ಕಾಗಿ ಪರಿಸರದ ಮೇಲೆ ನಿರಂತರ ವಾಗಿ ದಾಳಿ ನಡೆಸು ತ್ತಲೇ ಬಂದಿದ್ದಾನೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ. ಇದು ನಡೆಯಬಾರದೆಂದರೆ ಪರಿಸರ ಸಂರಕ್ಷಣೆ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸುವುದು ಅತೀಮುಖ್ಯ. ಪರಿಸರ ಸಂರಕ್ಷಣೆಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮ ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ. ನಿಸರ್ಗದ ಜತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರ ಉಳಿವಿಗೆ ಪೂರಕ ವಾಗುವ…

Read More

ಕರ್ನಾಟಕದ ದೂರದ ಊರುಗಳಿಂದ ನೀವೆಲ್ಲಾ ಈ ಮುಂಬಯಿ ಮಹಾನಗರಕ್ಕೆ ಬಂದು ನೆಲೆಸಿ ಸಂಘ – ಸಂಸ್ಥೆಗಳನ್ನು ಕಟ್ಟುವುದರ ಜೊತೆಗೆ ಸಮಾಜಪರ ಕೆಲಸಗಳನ್ನು ಮಾಡುತ್ತಿರುವಿರಿ. ಕರ್ನಾಟಕ ಸಂಘ ಅಂಧೇರಿ ಮುಖಾಂತರ ಕಳೆದ ಹತ್ತು ವರ್ಷಗಳಿಂದ ಯಾವುದೇ ಜಾತಿ – ಭೇದವಿಲ್ಲದೆ ನೀವು ವಿಧವೆಯರಿಗೆ ಮಾಸಾಶನ, ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವನ್ನು ನೀಡುತ್ತಾ ಬಂದಿರುವಿರಿ. ಅಲ್ಲದೆ ಪ್ರತಿ ತಿಂಗಳು ಮನೆ – ಮನೆಗಳಲ್ಲಿ ಕನ್ನಡ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಯುವ ಜನಾಂಗದವರಲ್ಲಿ ಕನ್ನಡದ ಅಭಿರುಚಿ ಉಂಟು ಮಾಡುತ್ತಿದ್ದೀರಿ. ನಿಮ್ಮ ಕನ್ನಡ ಪರ ಹಾಗೂ ಸಮಾಜಪರ ಸೇವಾ ಕಾರ್ಯಗಳು ತುಂಬಾ ಮೆಚ್ಚುವಂತದ್ದು. ಮಹಾರಾಷ್ಟ್ರದಲ್ಲಿ ಅಂದಾಜು 45 ಲಕ್ಷ ಜನ ಕನ್ನಡಿಗರಿದ್ದಾರೆ. 35ಕ್ಕೂ ಮಿಕ್ಕಿ ಕನ್ನಡ ಮಾಧ್ಯಮ ಶಾಲೆಗಳು ಮುಂಬಯಿಯಲ್ಲಿ ಇವೆ ಎಂಬುದಾಗಿ ತಿಳಿದು ಬಂದಿದೆ. ನಾಡಿನ ನೆಲ – ಜಲ – ಭಾಷೆಯ ಮೇಲೆ ನೀವೆಲ್ಲ ಅಪಾರ ಪ್ರೀತಿ ತೋರಿಸುತ್ತಿದ್ದೀರಿ. ಸಂಘ – ಸಂಸ್ಥೆಗಳ ಮುಖೇನ ನೀವೆಲ್ಲ ಸೇರಿ ಕನ್ನಡವನ್ನು ಉಳಿಸಿ ಬೆಳೆಸುವ…

Read More

ಬಂಟರ ಯಾನೆ ನಾಡವರ ಸಂಘ ಬೈಂದೂರು ತಾಲೂಕು ಇದರ ಯುವ ಬಂಟರ ವೇದಿಕೆಯ ನೂತನ ಅಧ್ಯಕ್ಷರಾಗಿ ರವಿ ಶೆಟ್ಟಿ ಕುದ್ರುಕೋಡು ಹಾಗೂ ನೂತನ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಉಪಾಧ್ಯಕ್ಷರಾಗಿ ಗುರುರಾಜ್ ಶೆಟ್ಟಿ ಹಾಗೂ ಗೌರವಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಗಂಟಿಹೊಳೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಚಿಕ್ಕಮಗಳೂರು ಸೇಂಟ್‌ ಮೆರೀಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕಲಿಯುತ್ತಿರುವ ಉಡುಪಿ ಮೂಲದ ಸಫಲ್ ಎಸ್.ಶೆಟ್ಟಿ ಈ ಬಾರಿಯ ಐ.ಸಿ.ಎಸ್.ಇ. ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 98.2 ಅಂಕಗಳನ್ನು ಪಡೆಯುವುದರೊಂದಿಗೆ 10ನೇ ಸ್ಥಾನವನ್ನು ಪಡೆಯುವುದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ. ಈತ ಉಡುಪಿ ಮೂಲದ ಚಿಕ್ಕಮಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಎನ್.ಸಖಾರಾಂ ಶೆಟ್ಟಿ ಮತ್ತು ಡಾ.ಬೆಳ್ಕಳೆ ಶರ್ಮಿಳಾ ಶೆಟ್ಟಿಯವರ ಪುತ್ರ. ಮುಂದೆ ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಸಫಲ್ ಶೆಟ್ಟಿ ಪ್ರಸ್ತುತ ಕ್ರಿಕೆಟ್ ನಲ್ಲಿ ಕೂಡಾ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಈತ ಕೊಕ್ಕರ್ಣೆ ಬಂಡ್ಸಾಲೆ ಮನೆ ದಿ.ಶೇಖರ್ ಶೆಟ್ಟಿ ಮತ್ತು ಶ್ರೀಮತಿ ಬೆಳ್ಕಳೆ ಲಲಿತಾ ಎಸ್.ಶೆಟ್ಟಿಯವರ ಮೊಮ್ಮಗ.

Read More

ನಾವು ಏನಾದರೂ ವ್ಯಾಪಾರ, ವ್ಯವಹಾರ ಆರಂಭಿಸುವಾಗ ವ್ಯವಹಾರಕ್ಕೆ ಒಳ್ಳೆಯದಾಗಲಿ ಅಂತ ದೇವರ ಬಳಿಗೆ ಹೋಗಿ ಭಕ್ತಿಯಿಂದ ಕೇಳುತ್ತೇವೆ. ಅದೇ ರೀತಿ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ನಾನು ನಿಮ್ಮನ್ನೇ ದೇವರಂತೆ ಭಾವಿಸಿ, ನಿಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ. ಬೈಂದೂರಿನ ಜನ ನನಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಹೇಳಿದರು. ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ ಸಮೀಪದ ಜಾಡ್ಕಟ್ಟುವಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಟಿಕೆಟ್‌ ಘೋಷಣೆಯಾದ 5 ನಿಮಿಷದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ಮಾಡಿ, ಹೆಮ್ಮೆಯ ಬಿಜೆಪಿ ಪಕ್ಷದ ಅಭ್ಯರ್ಥಿ ನೀವು. ನಾವು ನಿಮ್ಮೊಂದಿಗೆ ನಿಂತು, ಗೆಲ್ಲಿಸಿ ಕೊಡುತ್ತೇವೆ. ಊರು ಒಳ್ಳೆಯದು ಮಾಡುವ ಅಂದಿದ್ದರು. ನನ್ನಂತೆ ಅವರು ಸಹ ಸಾಮಾನ್ಯ ಮನೆಯಿಂದ ಬಂದವರು ಎಂದು ಗಂಟಿಹೊಳೆ ಹೇಳಿದರು. ಸಮರ್ಥ ವ್ಯಕ್ತಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಕ್ಷದ ಜನಸಾಮಾನ್ಯರ ಮುಂದೆ ಓಡಾಟ ಮಾಡಿದವರು.…

Read More

ಕೇವಲ ಕಟ್ಟಡಗಳ ನಿರ್ಮಾಣದಿಂದ ಪ್ರಯೋಜನವಿಲ್ಲ, ಬದಲಿಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರಂತಹ ಪರಾಕ್ರಮಿಗಳ ಹಾಗೂ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದ ವಿಚಾರವನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿದಾಗ ಅದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡುವ ಭರವಸೆ ಇದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ನಡೆದ ಸಂಸ್ಮರಣ ದಿನಾಚರಣೆ – ರಾಜ್ಯ ಶೌರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಅನುಗ್ರಹ ಸಂದೇಶವಿತ್ತರು. ಬಾವುಟಗುಡ್ಡೆಯಲ್ಲಿ ಅವರ ಪ್ರತಿಮೆ ಸ್ಥಾಪಿಸುವ ಮೂಲಕ ಅವರಿಗೆ ಗೌರವ ಸಂದಿದೆ. ಕೆದಂಬಾಡಿ ರಾಮಯ್ಯ ಗೌಡ ಹಾಗೂ ಅವರ ಹೆಸರಿನ ಶೌರ್ಯ ಪ್ರಶಸ್ತಿ ಪಡೆದ ಏಕನಾಥ ಶೆಟ್ಟಿ ಅವರು ಸಮಾಜಕ್ಕಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿದವರು, ಅಂತಹ ಮಹಾತ್ಮರ ನೆನಪಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ಆಶೀರ್ವಚನ ನೀಡಿದ ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ…

Read More

ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ 2022- 23ನೇ ಸಾಲಿನ ವೀರ ರಾಣಿ ಅಬ್ಬಕ್ಕ ಉತ್ಸವ ಫೆ. 4ರಂದು ಶನಿವಾರ ಉಳ್ಳಾಲದ ಮಹಾತ್ಮಾಗಾಂಧಿ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಸ್ವಾಗತಾಧ್ಯಕ್ಷ ಕೆ. ಜಯರಾಮ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಫೆ. 4ರಂದು ಬೆಳಗ್ಗೆ 8.30ಕ್ಕೆ ತೊಕ್ಕೊಟ್ಟು ಮೇಲ್ಸೇತುವೆಯಿಂದ ವೀರರಾಣಿ ಅಬ್ಬಕ್ಕ ಉತ್ಸವ ವೇದಿಕೆಗೆ ಜಾನಪದ ದಿಬ್ಬಣ ಹೊರಡಲಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ| ಸಿ. ಸೋಮಶೇಖರ್‌ ಮತ್ತು ಕೆಎಸ್‌ಆರ್‌ಪಿ ಕಮಾಂಡೆಂಟ್‌ ಬಿ.ಎಂ. ಪ್ರಸಾದ್‌ ದಿಬ್ಬಣ ಉದ್ಘಾಟಿಸಲಿದ್ದಾರೆ ಎಂದರು. ಬೆಳಗ್ಗೆ 10ಕ್ಕೆ ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾಂತಾರ ಚಲನಚಿತ್ರ ಖ್ಯಾತಿಯ ನಟಿ ವಿದುಷಿ ಮಾನಸಿ ಸುಧೀರ್‌ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬ್ಯಾರಿ ಭಾಷಾ ಸಾಂಸ್ಕೃತಿಕ ಕಾರ್ಯಕ್ರಮ, ಬಹು ಬಾಷಾ ಕವಿ- ಕಾವ್ಯ-ಗಾಯನ, ಸ್ಥಳೀಯ ಪ್ರತಿಭೆಗಳ…

Read More

‘ಮರಗಿಡಗಳ ಕಲೆಯ ಒರೆಸಿ, ಹಿಮ ಬಿದ್ದ ನೆಲವ ಒರೆಸಿ’ ಎಂಬ ಕವಿವಾಣಿಯು ಹೇಗೆ ಸೂರ್ಯನಿಗೆ ಅನ್ವಯಿಸುತ್ತದೆಯೋ ಹಾಗೆಯೇ ತಮ್ಮ ಕ್ರೀಡಾ ಸಾಧನೆಯ ಕಿರೀಟದೊಂದಿಗೆ ಅನೇಕ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿರುವ ಹೆಮ್ಮೆಯ ಬಂಟ ಕ್ರೀಡಾ ಸಾಧಕ ಡಾ.ಕರುಣಾಕರ ಶೆಟ್ಟಿಯವರು 15-05-1983 ರಲ್ಲಿ ವಿಠಲ್ ಶೆಟ್ಟಿ ಮತ್ತು ಕುಮುದಾಕ್ಷಿ ಶೆಟ್ಟಿ ದಂಪತಿಗಳ ದ್ವಿತೀಯ ಪುತ್ರನಾಗಿ ಬೆಳ್ತಂಗಡಿ ತಾಲೂಕಿನ ಮುಂಡಾಡಿಯಲ್ಲಿ ಜನಿಸಿದರು. ಕರುಣಾಕರ ಶೆಟ್ಟಿ ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ ವಿದ್ಯಾಲಯ ಮಡಂತ್ಯಾರಿನಲ್ಲಿ ವ್ಯಾಸಂಗ ಮಾಡಿ ತನ್ನ B.P.Ed ಪದವಿಯನ್ನು ಆಳ್ವಾಸ್ ಕಾಲೇಜು ಮೂಡಬಿದಿರೆಯಲ್ಲಿ ಮುಗಿಸಿದರು. ನಂತರ ತಮ್ಮ M.P.Ed ಪದವಿಯನ್ನು 2006-2008 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಡೆದರು. ಶಾಲಾ ದಿನಗಳಲ್ಲಿ ಊರಿನ ವಿವಿಧ ಸಂಘ ಸಂಸ್ಥೆಗಳು ಆಯೋಜಿಸುತ್ತಿದ್ದ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಹಿರಿಯ ಕ್ರೀಡಾಪಟುಗಳ ಆಟದ ಶೈಲಿಯು ಡಾ.ಕರುಣಾಕರ ಶೆಟ್ಟಿಯವರ ಕ್ರೀಡಾ ಬಲವನ್ನು ಹೆಚ್ಚಿಸಿತ್ತು. ಆದರೆ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಮತ್ತು ತರಬೇತಿ…

Read More

ಸೈತಿನಕಲೆನ ಪುನೊಕು ಕುಟುಂಬದಕುಲು, ಪೊದ್ದರೆ ಇಷ್ಟೆರ್ ಕುಂಟು ಪಾಡುನ ಒಂಜಿ ಸಂಪ್ರದಾಯ. ದುಂಬು ಪುನೊಕು ಪಾಡುನ ಪನ್ದ್ ತೆಲ್ಪುದ ಕುಂಟು ತಿಕೊಂದು ಇತ್ತಿಂಡ್. ಮಲ್ಲಕುಲು ಬೊಕ್ಕ ಪಾಪದಕುಲು ಪನ್ಪಿನ ಭೇಧ ದಾಂತೆ ಮಾತೆರ್ಲಾ ಅಂಚಿನ ಕುಂಟುನೇ ಪುನೊಕು ಪಾಡೊಂದಿತ್ತಿನಿ. ಕಾಲ ಪೋಯಿಲೆಕ ಪುನೊಕು ಕುಂಟು ಪಾಡುನ ಪದ್ಧತಿ ಮಲ್ಲಾ ಮಟ್ಟ್ ಆಂಡ್. ವೇಷ್ಟಿ, ಎಡ್ಡೆ ಕಿರಾಯಿದ ಮುಂಡು. ಪೊಂಜೋವುನ ಪುನೊಕು 3-4 ಸಾವಿರ ರೂಪಾಯಿದ ಸೀರೆ ಪಾಡ್ದ್ ಮಲ್ಲಾದಿಗೆ ತೊಜಾಪುನ ಸುರು ಆಂಡ್. ಬೊಜ್ಜೊಗು ಹೊರೆ ಕಾಣಿಕೆ ಸ್ವೀಕರಿಸುವುದಿಲ್ಲ ಪನ್ಪಿನ ಹೇಳಿಕೆ ದಾಯೆಗ್ ಪಂಡ್ಡಾ ಇತ್ತೆ ಇಲ್ಲಡೇ ಬೊಜ್ಜದ ಅಟಿಲ್ ಮಲ್ಪಂದೆ ಕ್ಯಾಟರಿಂಗಿದಕಲೆಗ್ ಕೊರ್ಪಿನೆಟ್ಟಾತ್ರ. ಬೊಜ್ಜದಾನಿ ಕಿಲೆಸಿ (ಕ್ಷೌರಿಕ) ಬರ್ರೇ ಇತ್ತಿಂಡ್, ಪುನೊಕು ಪಾಡ್ದಿನ ಎಡ್ಡೆಂತಿನ ವೇಷ್ಟಿ, ಮುಂಡು ಆಯೆ ಕೊನೊಂದಿತ್ತೆ. ನಮ ಕುಚ್ಚಿ ದೆಪ್ಪರೆ ಪೋಯಡಾ ನಂಕ್ ಪೊದುಪುನು ಆಯೆ ಕೊನೊತಿನ ಪುನೊಕು ಪಾಡ್ದಿನ ಕುಂಟುನೇ 😃 ಕಿಲೆಸಿ ದೆತ್ತಿನೆರ್ದ್ ಬೊಕ್ಕ ಒರಿನ ಕುಂಟುಲೆನ್ ಡೋಲು ಬೊಟ್ಟುನ ಕೊರಗೆರ್ ಕೊನೊಂದಿತ್ತೆರ್.…

Read More

ಯಂಗ್ ಇಂಡಿಯನ್ಸ್ ಸಂಘಟನೆಯ ಮಂಗಳೂರು ಚಾಪ್ಟರ್ ವತಿಯಿಂದ ದೀಪಾವಳಿ ಹಬ್ಬದ ಮಹತ್ವವನ್ನು ಸಾರುವ ಕಾರ್ಯಕ್ರಮ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಬಿ.ಇ.ಎಂ. ಶಾಲೆಯಲ್ಲಿ ನಡೆಯಿತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಮಂಗಳೂರಿನ ಅಶೋಕ ನಗರದಲ್ಲಿರುವ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿಗಳು ತಾವು ತಯಾರಿಸಿದ ಅಲಂಕರಿಸಲ್ಫಟ್ಟ ಹಣತೆ ದೀಪಗಳೊಂದಿಗೆ ಬಿ.ಎ.ಎಂ.ಶಾಲೆಗೆ ಆಗಮಿಸಿ ಅಲ್ಲಿಯ ವಿದ್ಯಾರ್ಥಿಗಳಿಗೆ ಅವುಗಳನ್ನು ಹಂಚಿದರು ಜೊತೆಗೆ ಸಂಘಟನೆಯ ವತಿಯಿಂದ ಸಿಹಿತಿಂಡಿಯನ್ನು ವಿತರಿಸಲಾಯಿತು. ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಯಂಗ್ ಇಂಡಿಯನ್ಸ್ ಸಂಘಟನೆಯ ಗ್ರಾಮೀಣ ಉಪಕ್ರಮದ ಸಂಚಾಲಕ ಈಶ್ವರ ಶೆಟ್ಟಿ ಮಾತನಾಡಿ, ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮೂರು ದಿನಗಳ ಕಾಲ ಆಚರಿಸುವ ಈ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ಬಹಳ ದೊಡ್ಡ ಹಬ್ಬ ಎಂದು ಪರಿಗಣಿತವಾಗಿದೆ. ದೇಶಾದ್ಯಂತ ಇದನ್ನು ಆಚರಿಸಲಾಗುತ್ತದೆ. ಕತ್ತಲೆಯನ್ನು ದೂರ ಮಾಡಲು ಹಣತೆ ಹಚ್ಚುವ ಆಚರಣೆಯ ಈ ಹಬ್ಬ ಬಹಳ ದೊಡ್ದ ಸಂದೇಶವನ್ನು ಸಾರುತ್ತದೆ ಎಂದರು. ಯಂಗ್ ಇಂಡಿಯನ್ಸ್ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ಅವರು ವಿವರಗಳನ್ನು ನೀಡಿದರು.…

Read More