ಬಂಟರ ಸಂಘ ಮುಂಬಯಿ ಸಂಚಾಲಿತ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ ಗೌರವ ಕಾರ್ಯದರ್ಶಿಯಗಿ ಕಾರ್ಯನಿರ್ವಹಿಸಿಕೊಂಡಿರುವ ಪ್ರವೀಣ್ ಭೋಜ ಶೆಟ್ಟಿ ಅವರು ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಅವರನ್ನು ನವಂಬರ್ 27ರಂದು ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಸಂಕೀರ್ಣದಲ್ಲಿರುವ ಮಾತೃಭೂಮಿಯ ಕಚೇರಿಯಲ್ಲಿ ನಡೆದ ಆಡಳಿತ ಸಭೆಯಲ್ಲಿ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿಯವರು ಮತ್ತು ಆಡಳಿತ ಪದಾಧಿಕಾರಿಗಳು ಗೌರವಿಸಿದರು.
ಗೌರವವನ್ನು ಸ್ವೀಕರಿಸಿದ ಪ್ರವೀಣ್ ಭೋಜ ಶೆಟ್ಟಿ ಕೃತಜ್ಞತೆ ಸಲ್ಲಿಸುತ್ತಾ ಅಧ್ಯಕ್ಷನಾಗಿ ಪ್ರಥಮ ಗೌರವ ಇದಾಗಿದೆ. ಈ ಗೌರವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಸಲ್ಲುತ್ತದೆ. ನನ್ನ ಮುಂದಿನ ಸೇವಾ ಕಾರ್ಯಗಳಿಗೆ ತಾವೆಲ್ಲರೂ ಸಹಕರಿಸಬೇಕು ಎಂದು ನುಡಿದರು. ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿಯವರು ಪ್ರವೀಣ್ ಭೋಜ ಶೆಟ್ಟಿ ಅವರು ಮಾತೃಭೂಮಿಗೆ ನೀಡಿದ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡು ಬಂಟರ ಸಂಘದ ಮೂಲಕ ಸಮಾಜದ ಉತ್ತಮ ಸೇವಾ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಉಪ ಕಾರ್ಯಧ್ಯಕ್ಷ ಡಾ. ಆರ್ ಕೆ ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್ ಡಿ ಶೆಟ್ಟಿ, ನಿರ್ದೇಶಕರುಗಳಾದ ಮಹೇಶ್ ಎಸ್ ಶೆಟ್ಟಿ, ಶಶಿಧರ್ ಕೆ ಶೆಟ್ಟಿ ಇನ್ನಂಜೆ, ಸಿಎ ಜಗದೀಶ್ ಬಿ ಶೆಟ್ಟಿ, ಕಿಶೋರ್ ಕುಮಾರ್ ಕುತ್ಯಾರ್, ಸುನಂದ ಡಿ ಶೆಟ್ಟಿ, ಸಿಎ ರಾಜಶ್ರೀ ಶೆಟ್ಟಿ, ಹಿರಿಯ ಪ್ರಬಂಧಕಿ ಮಲ್ಲಿಕಾ ಪಿ ಶೆಟ್ಟಿ, ಪ್ರಬಂಧಕಿ ಶಶಿಕಲಾ ಎಸ್ ಶೆಟ್ಟಿ, ಮ್ಯಾನೇಜರ್ ಅಡ್ಮಿನ್ ಮಹೇಂದ್ರ ಸಕ್ಪಾಲ್ ಹಾಗೂ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.