ಬಂಟ್ಸ್ ಸಂಘ ಮುಂಬಯಿ ಇದರ ಅಧ್ಯಕ್ಷ ಸ್ಥಾನವನ್ನು ನಿಷ್ಠೆಯಿಂದ ನಿರ್ವಹಿಸಿದ ಅಭಿಮಾನ ನನಗಿದೆ. ಸಂಘದ ಪದಾಧಿಕಾರಿಗಳ ಅಚಲ ಬೆಂಬಲ, ಸಮರ್ಪಣೆ ಮತ್ತು ಬದ್ಧತೆ ನಮ್ಮ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿದೆ. ನಾವೆಲ್ಲರೂ ಒಟ್ಟಾಗಿ ಈ ಸಂಘವನ್ನು ಮತ್ತಷ್ಟು ಎತ್ತರಕ್ಕೆ ಏರಿಸಲು ಅವಿರತವಾಗಿ ಶ್ರಮಿಸಿದ್ದೇವೆ. ನನ್ನವಧಿಯ ಮೂರು ವರ್ಷಗಳು ವೇಗವಾಗಿ ಕಳೆದವು ಮತ್ತು ನಾನು ಈ ಪ್ರತಿಷ್ಠಿತ ಸ್ಥಾನದ ಗಮನಾರ್ಹ ಪ್ರಯಾಣವನ್ನು ಪ್ರತಿಬಿಂಬಿಸುವಾಗ, ನಾವು ಒಟ್ಟಾಗಿ ಸಾಧಿಸಿದ ಎಲ್ಲವುಗಳ ಬಗ್ಗೆ ನಮ್ಮ ತಂಡದ ಸಾಧನೆ ಹೆಮ್ಮೆಯ ಭಾವದಿಂದ ತುಂಬಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.
ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ನಡೆಸಲ್ಪಟ್ಟ ಬಂಟರ ಸಂಘದ 95ನೇ ವಾರ್ಷಿಕ ಮಹಾಸಭೆಗೆ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಚಂದ್ರಹಾಸ ಕೆ.ಶೆಟ್ಟಿ ಮಾತನಾಡಿದರು. ಬಂಟ್ಸ್ ಸಂಘ ಮುಂಬಯಿ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆ, ಮಹಿಳಾ ವಿಭಾಗಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗಧ್ಯಕ್ಷ ಸಾಗರ್ ದಿವಾಕರ ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ಶಾಂತರಾಮ ಬಿ.ಶೆಟ್ಟಿ, ಪೆವಾಯಿ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬಿ.ಆರ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಸಿಎ|ಐ.ಆರ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಐಕಳ ಹರೀಶ್ ಶೆಟ್ಟಿ (ಅಧ್ಯಕ್ಷರು ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಕರ್ನಿರೆ ವಿಶ್ವನಾಥ ಶೆಟ್ಟಿ, ವಿಶ್ವಸ್ಥ ಸದಸ್ಯ ಡಾ| ವಿರಾರ್ ಶಂಕರ್ ಬಿ.ಶೆಟ್ಟಿ ವೇದಿಕೆಯಲ್ಲಿದ್ದರು.
ಬಂಟ್ಸ್ ಸಂಘ ಮುಂಬಯಿ ಇದರ 2023-2026ರ ಸಾಲಿನ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಐಕ್ಯಮತದಿಂದ ಆಯ್ಕೆಯಾದರು. ಮುಖ್ಯ ಚುನಾವಣಾ ಅಧಿಕಾರಿ ನ್ಯಾ| ಡಿ.ಕೆ ಶೆಟ್ಟಿ ನೂತನ ಅಧ್ಯಕ್ಷರ ಆಯ್ಕೆಯನ್ನು ಬಹಿರಂಗ ಪಡಿಸಿದರು. ಸಂಘದ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡ ಅರ್ವತ್ತು ಸದಸ್ಯರ ಯಾದಿ ಶೇಖರ್ ಶೆಟ್ಟಿ ಪ್ರಕಟಿಸಿದರು.
ನೂತನ ಅಧ್ಯಕ್ಷ ಪ್ರವೀಣ್ ಬಿ.ಶೆಟ್ಟಿ ಅಧಿಕಾರ ಸ್ವೀಕರಿಸಿ ಮಾತನಾಡಿ ನಾನೆಂದೂ ಬಂಟರ ಸಂಘದ ಸಾರಥ್ಯವನ್ನು ಮುನ್ನಡೆಸುವ ಕನಸೂ ಕಂಡವನಲ್ಲ ಅಧ್ಯಕ್ಷನಾಗುವುದನ್ನೂ ಭಾವಿಸಿಲ್ಲ. ಆದರೆ ಉಪಾಧ್ಯಕ್ಷನಾಗುವೆ ಎಂಬ ಆಶಯವಿತ್ತು. ಬಂಟರ ಸಂಘದ ಅಧ್ಯಕ್ಷನಾಗುವುದು ಎಂದರೆ ಮುಳ್ಳು ಇರುವ ಹಾಸಿಗೆಯಂತೆ ಇದನ್ನು ನಾನು ಹೂವಿನ ಹಾಸಿಗೆಯನ್ನಾಗಿ ಮಾರ್ಪಾಡಿಸಲು ಪ್ರಯತ್ನಿಸುತ್ತೇನೆ. ನನಗೆ ಒದಗಿದ ಮೂರು ವರ್ಷಗಳ ಅಧ್ಯಕ್ಷೀಯ ಕಾಲಾವಧಿಯನ್ನು ನಿಷ್ಠಾವಂತನಾಗಿ ಸದುಪಯೋಗಗೊಳಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಸಂಘದ ಆವರಣದ ಜ್ಞಾನ ಮಂದಿರದಲ್ಲಿನ ಶ್ರೀಮಹಾವಿಷ್ಣು ದೇವರಿಗೆ ಪೂಜೆ ನೆರವೇರಿಸಿ ಸಾಂಕೇತಿಕವಾಗಿ ಸಭೆಗೆ ಚಾಲನೆಯನ್ನೀಡಲಾಗಿದ್ದು, ಬಂಟಗೀತೆಯೊಂದಿಗೆ ಮಹಾಸಭೆ ಆದಿಗೊಂಡಿತು. ಡಾ| ಆರ್.ಕೆ ಶೆಟ್ಟಿ ಗತ ವಾರ್ಷಿಕ ಮತ್ತು ವಿಶೇಷ ಮಹಾಸಭೆಯ ವರದಿ, ವಾರ್ಷಿಕ ಕಾರ್ಯ ಚಟುವಟಿಕೆಗಳ ವಿವರವನ್ನೀಡಿದರು. ಸಿಎ| ಹರೀಶ್ ಡಿ.ಶೆಟ್ಟಿ ಗತ ವಾರ್ಷಿಕ ವಾರ್ಷಿಕ ಆಯವ್ಯಯ ಲೆಕ್ಕಪತ್ರಗಳನ್ನು ಮಂಡಿಸಿದರು. ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಸಮಿತಿ
ಕಾರ್ಯಾಧ್ಯಕ್ಷ ಶಾಂತರಾಮ ಬಿ.ಶೆಟ್ಟಿ ತನ್ನ ಸಮಿತಿ ವರದಿಯನ್ನು, ಎಸ್.ಎಂ.ಶೆಟ್ಟಿ ಶೈಕ್ಷಣಿಕ ಸಂಸ್ಥೆ ಪೆವಾಯಿ
ವರದಿಯನ್ನು ಕಾರ್ಯಾದರ್ಶಿ ಸಿಎಸ್ ಉತ್ತಮ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ವರದಿಯನ್ನು ಕೋಶಾಧಿಕಾರಿ ಸಿಎ| ಪ್ರದೀಪ್ ಜೆ.ಶೆಟ್ಟಿ, ಬೋರಿವಿಲಿ ಶಿಕ್ಷಣ ಸಂಸ್ಥೆಯ ವರದಿಯನ್ನು ಕಾರ್ಯಾದರ್ಶಿ ನಿತ್ಯಾನಂದ ಎಸ್.ಹೆಗ್ಡೆ ಸಭೆಗೆ ತಿಳಿಸಿದರು.
ಬಂಟರ ಸಂಘವು ಕೊಡಮಾಡುವ ಸ್ವರ್ಗೀಯ ವೈ.ಜಿ ಶೆಟ್ಟಿ ಸ್ಮಾರಕ ಪ್ರಶಸ್ತಿಯನ್ನು ಬಂಟರವಾಣಿ ಗೌ| ಪ್ರ| ಸಂಪಾದಕ
ಅಶೋಕ್ ಪಕ್ಕಳ ಇವರಿಗೆ ಪ್ರದಾನಿಸಿ ಅಧ್ಯಕ್ಷರು ಅಭಿನಂದಿಸಿದರು. ಐಕಳ ಹರೀಶ್ ಶೆಟ್ಟಿ ಪ್ರಾಯೋಜಕತ್ವದ ಉತ್ತಮ ಪ್ರಾದೇಶಿಕ ಸಮಿತಿ ಪ್ರಥಮ ಸ್ಥಾನದ ಫಲಕವನ್ನು ನವಿಮುಂಬಯಿ ಪ್ರಾದೇಶಿಕ ಸಮಿತಿಗೆ ಹಾಗೂ ದ್ವೀತಿಯ ಸ್ಥಾನವನ್ನು ಜೋಗೆಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಗೆ ಪ್ರದಾನಿಸಲಾಯಿತು. ಗತಸಾಲಿನಲ್ಲಿ ಸಂಘಕ್ಕೆ ಗರಿಷ್ಠ ಸದಸ್ಯತ್ವ ನೋಂದಾಯಿಸಿದ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಶಾಂತಾ ಎನ್.ಶೆಟ್ಟಿ ಅವರಿಗೆ ಗೌರವಿಸಿ ಅಭಿನಂದಿಸಲಾಯಿತು.
ಸಭೆಯ ಮಧ್ಯಾಂತರದಲ್ಲಿ ರಮಾನಾಥ ಎಸ್.ಪಯ್ಯಡೆ ಸ್ಮಾರಕ ಎಸ್ಎಸ್ಸಿ ಮತ್ತು ಹೆಚ್ಎಸ್ಸಿ (ಸಯನ್ಸ್, ಕಾಮರ್ಸ್) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ತೇಜ ಮಂಜರಿ ಸ್ಮಾರಕ ಇಂಜಿನಿಯರಿಂಗ್ ಪೂರ್ಣ ಗೊಳಿಸಿದ ಪ್ರತಿಭಾವಂತ ವಿದ್ಯಾರ್ಥಿಗೆ ಪ್ರದಾನಿಸಿ ಗೌರವಿಸಲಾಯಿತು. ಅಂತೆಯೇ ಉತ್ಕೃಷ್ಟ ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯ ವಿತರಿಸಲಾಯಿತು. ಸಂಘಕ್ಕೆ ದೇಣಿಗೆ ನೀಡಿದ ಗಣ್ಯರನ್ನು ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು.
ಸಂಘದ ಸಂಘದ ವಿಶ್ವಸ್ಥ ಸದಸ್ಯರು, ಮಾಜಿ ಅಧ್ಯಕ್ಷರು, ಹಾಲಿ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಸಮನ್ವಯಕರು, ಉಪ ಸಮಿತಿಗಳ ಮುಖ್ಯಸ್ಥರು, ಮಾಜಿ ಪದಾಧಿಕಾರಿಗಳು, ಮಹಿಳಾ ಮತ್ತು ಯುವ ವಿಭಾಗದ ಪದಾಧಿಕಾರಿಗಳು ಸೇರಿದಂತೆ ಸದಸ್ಯರನೇಕರು ಹಾಜರಿದ್ದು,, ಸಂಘದ ಮಾಜಿ ಅಧ್ಯಕ್ಷರುಗಳಾದ ನ್ಯಾ| ಆರ್.ಸಿ ಶೆಟ್ಟಿ, ಬಿ.ವಿವೇಕ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಪದ್ಮನಾಭ ಎಸ್.ಪಯ್ಯಡೆ, ಜಯ ಎ.ಶೆಟ್ಟಿ, ಶಾಂತಾರಾಮ ಬಿ.ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್, ಉಳ್ತೂರು ಮೋಹನ್ದಾಸ್ ಶೆಟ್ಟಿ, ನ್ಯಾ| ಡಿ.ಕೆ ಶೆಟ್ಟಿ, ನ್ಯಾ| ಆರ್.ಜಿ ಶೆಟ್ಟಿ, ವಿರಾರ್ ಶಂಕರ ಬಿ.ಶೆಟ್ಟಿ, ಮೊರ್ಲ ರತ್ನಾಕರ ಶೆಟ್ಟಿ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಂಘದ ಶ್ರೇಯೋನ್ನತಿಗೆ ಹಾರೈಸಿದರು. ಚಂದ್ರಹಾಸ ಕೆ.ಶೆಟ್ಟಿಸ್ವಾಗತಿಸಿ ಸಭಾ ಕಲಾಪ ನಿರ್ವಹಿಸಿದರು. ದಿವಾಕರ್ ಶೆಟ್ಟಿ ಇಂದ್ರಾಳಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಕೊನೆಗೊಂಡಿತು.