ಕುಡುಂಬೂರು ಗುತ್ತು ಪಿಲಿಚಾಮುಂಡಿ, ಧೂಮಾವತಿ ಜಾರಂದಾಯ ಮತ್ತು ಪರಿವಾರ ದೈವಗಳಿಗೆ ಜ.19 ರಂದು ಧರ್ಮ ನೇಮವು ಸುರತ್ಕಲ್ ಸಮೀಪದ ಕೋಡಿಕೆರೆಯ ಕುಡುಂಬೂರು ಗುತ್ತು ದೈವಸ್ಥಾನ ವಠಾರದಲ್ಲಿ ಜರಗಲಿದೆ. ಜ.17 ರಂದು ಬೆಳಿಗ್ಗೆ 8.30 ಕ್ಕೆ ಉಗ್ರಾಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನಾಗದೇವರಿಗೆ ತಂಬಿಲ ಮತ್ತು ಆಶ್ಲೇಷಾ ಬಲಿ ನಡೆದಿದೆ.
ಪಣಂಬೂರು ಮಾಗಣೆಯ ಕನಿಲ ದೈವಸ್ಥಾನದಲ್ಲಿ ನವಕ ಕಲಶ ಮತ್ತು ಕುಡುಂಬೂರು ಗುತ್ತು ದೈವದ ಚಾವಡಿಯಲ್ಲಿ ನವಕ ಕಲಶ ಹಾಗೂ ಶುದ್ಧ ಕಲಶ ಸೇವೆ ನಡೆಯಲಿದೆ. 18 ರಂದು ಭೋಜನ ಶಾಲೆಯಲ್ಲಿ ಶುದ್ಧ ಮುದ್ರಿಕೆ ಮಾಡಿ ಕೊಪ್ಪರಿಗೆ ಏರಿಸುವುದು, ಜ.19 ರಂದು ಬೆಳಗ್ಗೆ ಶುದ್ಧ ಕಳಶದ ಅನಂತರ 10 ಗಂಟೆಗೆ ಧರ್ಮದೈವಗಳ ಭಂಡಾರ ಏರಿಸುವುದು,12.30 ಕ್ಕೆ ಮಹಾ ಅನ್ನಸಂತರ್ಪಣೆ,1 ಗಂಟೆಗೆ ಹರಿಕಥೆ, ಸಂಜೆ 4 ಕ್ಕೆ ಮೂಲ ಮೈಸಂದಾಯ ದೈವದ ಧರ್ಮನೇಮ, ಸಂಜೆ 6.30 ಕ್ಕೆ ಕಾಂತೇರಿ ಧೂಮಾವತಿ ಬಂಟ, ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ ಮತ್ತು ಬಬ್ಬರ್ಯ ದೈವಗಳಿಗೆ ಧರ್ಮನೇಮ, ರಾತ್ರಿ 10 ಕ್ಕೆ ಪಿಲಿಚಾಮುಂಡಿ ದೈವದ ಎಣ್ಣೆ ಬೂಳ್ಯ ಮತ್ತು ಧರ್ಮನೇಮ, ರಾತ್ರಿ ನಿರಂತರ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಜ. 21ರಂದು ರಾತ್ರಿ 8 ಗಂಟೆಗೆ ಕುಟುಂಬದ ಪಂಜುರ್ಲಿ ದೈವದ ನೇಮ ಜರಗಲಿದೆ.