ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಅ. 12 ರಂದು ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಕಾರ್ಯಕ್ರಮಕ್ಕೆ ಉಡುಪಿ ಡಾ. ಎ. ವಿ. ಬಾಳಿಗ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ. ವಿರುಪಾಕ್ಷ ದೇವರಮನೆ ಆಗಮಿಸಿದ್ದರು. ಅವರು ಹೊಸ ಜನರೇಶನ್ ಪೇರೆಂಟಿಂಗ್ ವಿಷಯದ ಕುರಿತು ಪೋಷಕರಿಗೆ ಮಾಹಿತಿಯನ್ನು ನೀಡಿ, ನಾವು ಮಕ್ಕಳಿಗೆ ಸಮಯವನ್ನು ನೀಡಬೇಕು. ನಮ್ಮ ದಿನಚರಿಯ ಭಾಗದಲ್ಲಿ ಮಕ್ಕಳ ನೆನಪು ಇರಬೇಕು ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ ಮಕ್ಕಳು ಇಂದು ಮೊಬೈಲ್ ದಾಸರಾಗಿದ್ದಾರೆ. ಅವರಿಗೆ ತಾತ್ವಿಕ ಜೀವನದ ಅರಿವನ್ನು, ಸರಿ ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯವನ್ನು
ಬೆಳೆಸಬೇಕೆಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶ್ರೀನಿಧಿ ಸಚಿನ್ ಕುಮಾರ್ ಜಿ ಎಮ್ ವಿದ್ಯಾಸಂಸ್ಥೆಯ
ಪ್ರತಿಯೊಂದು ಮಗುವಿಗೂ ಮೌಲ್ಯ ಶಿಕ್ಷಣದ ಜೊತೆಗೆ ವೈಯಕ್ತಿಕ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿದೆ.
ಇದು ನಮಗೆಲ್ಲರಿಗೂ ಹೆಮ್ಮೆ ಎಂದರು. ಪಿಟಿಎ ಉಪಾಧ್ಯಕ್ಷ ನಾಗರಾಜ ಸೋಮಯಾಜಿ ಮಾತನಾಡಿ ನಾವೆಲ್ಲರೂ ಮಕ್ಕಳ ಮೊದಲ ಅಗತ್ಯತೆಗಳನ್ನು ಪೂರೈಸಬೇಕು, ಎಲ್ಲರೂ ಪೋಷಕರ ಸಭೆಗಳಲ್ಲಿ ಭಾಗವಹಿಸಿ ಮಕ್ಕಳ ಬಗ್ಗೆ
ತಿಳಿದುಕೊಳ್ಳಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ಮಕ್ಕಳು
ನಮ್ಮ ಆಸ್ತಿ, ಅವರಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಡುವುದು ನಮ್ಮ ಆದ್ಯತೆ. ನಿಮ್ಮೆಲ್ಲರ ಸಹಕಾರ ಹೀಗೆ
ನಿರಂತರವಾಗಿರಲಿ ಎಂದರು. ಪೋಷಕರು ವಿದ್ಯಾಸಂಸ್ಥೆಯ ಕುರಿತು ಅಭಿಮಾನದ ನುಡಿಗಳನ್ನಾಡಿದರು. ಶಿಕ್ಷಕ ರಕ್ಷಕ ಸಂಘದ ನೂತನ ಅಧ್ಯಕ್ಷರಾಗಿ ನಾಗರಾಜ ಸೋಮಯಾಜಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ಪ್ರೀತಿ ಆಯ್ಕೆಗೊಂಡರು. ಕಾರ್ಯಕ್ರಮದಲ್ಲಿ ಪೋಷಕವೃಂದ, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
Previous Articleಕಲಾ ಜಗತ್ತು ಮುಂಬಯಿಯ ಆಟಿದ ಪೊರ್ಲು- ತಿರ್ಲ್ ಕಾರ್ಯಕ್ರಮದ ಪೂರ್ವಭಾವಿ ಸಭೆ.
Next Article ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ವತಿಯಿಂದ ಶೈಕ್ಷಣಿಕ ನೆರವು