ಮಾತೃ ಸಂಘ ತಾಲೂಕು ಸಮಿತಿ ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದೊಂದಿಗೆ ನೆಲ್ಯಾಡಿ ವಲಯ ಬಂಟರ ಸಂಘ ಇದರ ಆಶ್ರಯದಲ್ಲಿ ಕಡಬ ತಾಲೂಕಿನ ಗೋಳಿತೋಟ್ಟು ಗ್ರಾಮದ ಶ್ರೀಮತಿ ಲೀಲಾವತಿ ವಿಠಲ ಶೆಟ್ಟಿ ಇವರ ಪುತ್ರಿ ಕು ಶ್ರುತಿ ಇವರ ವಿವಾಹಕ್ಕೆ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಶಶಿ ಕುಮಾರ್ ರೈ ಬಾಲ್ಯೊಟ್ಟು ಇವರ ಮುಖಾಂತರ ಆರ್ಥಿಕ ಸಹಾಯ ನೀಡಲಾಯಿತು.

ಈ ಸಂಧರ್ಭದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಪ್ರತಾಪ್ ಚಂದ್ರ ರೈ, ಶ್ರೀ ಸತೀಶ ರೈ ಕೊಣಾಲು ಗುತ್ತು, ಶ್ರೀ ನಿತ್ಯಾನಂದ ಶೆಟ್ಟಿ ಮನವಳಿಕೆ, ತಾಲೂಕು ಮಹಿಳಾ ಬಂಟರ ಸಂಘದ ಕೋಶಾಧಿಕಾರಿ ಶ್ರೀಮತಿ ವಾಣಿ ಎಸ್ ಶೆಟ್ಟಿ, ರತ್ನಾಕರ ಶೆಟ್ಟಿ ಕೊಲ್ಯೊಟ್ಟು ಅಶ್ವಮೇಧ, ಸುಂದರ ಶೆಟ್ಟಿ ಉಪಸ್ಥಿತರಿದ್ದರು.







































































































