Author: admin

ಕನ್ನಡ ಕರಾವಳಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಗಾಧ ಮತ್ತು ಅನನ್ಯ. ಆಧುನಿಕ ವೈದ್ಯವಿಜ್ಞಾನದ ಜೊತೆಜೊತೆಗೆ ಆಯುರ್ವೇದ ವಿಜ್ಞಾನದ ಬೆಳವಣಿಗೆ ಮತ್ತು ವಿಸ್ತಾರ ಅಷ್ಟೇ ವೇಗವಾಗಿ ಸಾಗಿದೆ. ಆಯುರ್ವೇದ ವೈದ್ಯ ವಿಜ್ಞಾನದ ಅಭ್ಯಾಸ, ಅನ್ವೇಷಣೆ, ಮಾನಕೀಕರಣ,ಪ್ರಯೋಗಶೀಲತೆ ಹಾಗೂ ವೃತ್ತಿಪರತೆ ಸಾವಿರಸಾವಿರ ಸಂಖ್ಯೆಯ ರೋಗಿಗಳ ಮೊಗದಲ್ಲಿ ನಗು ಹೊಮ್ಮಿಸಿದೆ. ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಆಯುರ್ವೇದ ವೃತ್ತಿಪರ ಸಂಸ್ಥೆಗಳನ್ನು ಹೊರತುಪಡಿಸಿ ಅಲೋಪತಿ ನರ್ಸಿಂಗ್ ಹೋಮ್ ಗಳಂತೆ ಸುಸಜ್ಜಿತ ಖಾಸಗಿ ಆಯುರ್ವೇದ ಆಸ್ಪತ್ರೆಗಳು ರಾಜ್ಯದಲ್ಲಿ ಕೇವಲ ಬೆರಳೆಣಿಕೆಯಷ್ಟು. ಆರ್ಥಿಕ ಸವಾಲುಗಳನ್ನು ಎದುರಿಸಿ ದೂರಗಾಮಿ ಸ್ಥಿರತೆಯನ್ನು ಕಾಪಾಡಿಕೊಂಡು ಉನ್ನತ ಸೇವಾತತ್ಪರತೆಯನ್ನು ಮೆರೆಯುವುದು ನಿಜಕ್ಕೂ ಕಠಿಣ. ಹಾಗಾಗಿಯೇ ಏನೋ ಬಡ ಮಧ್ಯಮವರ್ಗದ ಜನರಿಗೆ ಆಯುರ್ವೇದ ಔಷಧ, ಚಿಕಿತ್ಸೆ, ಶುಶ್ರೂಷೆ ಮರೀಚಿಕೆಯಾಗಿದ್ದು ಮಾತ್ರವಲ್ಲದೆ ಆಯುರ್ವೇದದ ಬಗೆಗಾಗಿನ ಪ್ರಚಾರ ಪ್ರಸಾರ ತೀರಾ ನೀರಸವಾಯಿತು. ಲಾಭಾನಾಂ ಶ್ರೇಯಃ ಆರೋಗ್ಯಮ್ – ಬದುಕಿನಲ್ಲಿ ಸಂಪಾದಿಸುವ ಎಲ್ಲಾ ಲಾಭಗಳಿಗಿಂತ ಆರೋಗ್ಯ ಸಂಪಾದನೆ ಶ್ರೇಷ್ಠ ಲಾಭ. ಆಯುರ್ವೇದ ಜೀವನ ಪದ್ಧತಿ ಸಾರ್ವಕಾಲಿಕ ಮತ್ತು ಸರ್ವಮಾನ್ಯ. ಆರೋಗ್ಯ…

Read More

ನಾವೆಲ್ಲ ಹುಟ್ಟುತ್ತಲೇ ಮಾತೃ ಋಣ, ಪಿತೃ ಋಣ ಹಾಗೂ ಸಮಾಜದ ಋಣವನ್ನು ಕೂಡಿಕೊಂಡೇ ಹುಟ್ಟುತ್ತೇವೆ. ಈ ಋಣಗಳನ್ನು ನಮ್ಮ ಜೀವಮಾನದಲ್ಲಿ ತೀರಿಸಲು ಸಾಧ್ಯವಿಲ್ಲ. ಕಿಂಚಿತ್ ಪ್ರಮಾಣದಲ್ಲಿಯಾದರೂ ಋಣಭಾರವನ್ನು ಹಗುರ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದುದು ಪ್ರತಿಯೊಬ್ಬ ಮಾನವನ ಕರ್ತವ್ಯ. ಈ ದೆಸೆಯಲ್ಲಿ ಕೆಲವರಾದರೂ ಪ್ರಯತ್ನ ಶೀಲರಾಗಿ ಸತತ ಸಂಘರ್ಷಗಳಿಂದ ಇಂಥ ಪಥದಲ್ಲಿ ಅಗ್ರೇಸರರಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿರುವುದಷ್ಟೇ ಅಲ್ಲದೇ ತಮ್ಮ ಮಾತಾಪಿತರ ಹಾಗೂ ಹುಟ್ಟಿದ ಊರಿನ ಹೆಸರನ್ನು ಗೌರವದಿಂದ ಆಡಿಕೊಳ್ಳುವಂತೆ ಸಾಧನೆ ಮಾಡಿದವರನ್ನು ನೆನೆಸಿ ಕೊಂಡರೆ ಹೆಮ್ಮೆಯೆನಿಸುತ್ತದೆ. ಇಂಥವರ ಸಾಲಿನಲ್ಲಿ ನಿಸ್ಸಂಶಯವಾಗಿ ಹೆಸರಿಸಬಹುದಾದ ಹೆಸರು ಕಾರ್ಕಳ ತಾಲೂಕಿನ ಅಜೆಕಾರು ಮೂಲದ ಸಂಘಟಕ, ಸಮಾಜಸೇವಕ, ಜನಪರ ಕಾಳಜಿಯ ಸ್ನೇಹಜೀವಿ ಶ್ರೀ ವಿಜಯ್ ಶೆಟ್ಟಿ ಅವರದ್ದು. ಕಾರ್ಕಳ ತಾಲೂಕಿನ ಅಜೆಕಾರು ಕೊರಗ ಶೆಟ್ಟಿ ಹಾಗೂ ಶ್ರೀಮತಿ ಸರಸ್ವತಿ ಕೆ ಶೆಟ್ಟಿ ದಂಪತಿಗಳಿಗೆ ಆರನೇ ಪುತ್ರನಾಗಿ ಜನಿಸಿದ ವಿಜಯ್ ಶೆಟ್ಟಿ ಅವರು ಅಜೆಕಾರು ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಹಾಗೂ ಅಜೆಕಾರು ಜ್ಯೋತಿ ಹೈಸ್ಕೂಲ್ ನಲ್ಲಿ…

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದ್ರೆ ಆಶ್ರಯದಲ್ಲಿ ನ.17 ರಂದು ಸಂಜೆ 6.30 ಕ್ಕೆ ಮೂಡುಬಿದ್ರೆ ಸ್ಕೌಟ್ ಗೈಡ್ ಕನ್ನಡಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ ಡಾ.ನಾಡೋಜ ಹಂಪನಾ ವಿರಚಿತ ಚಾರುವಸಂತ ದೇಸೀ ಕಾವ್ಯದ ರಂಗರೂಪದ ಪ್ರದರ್ಶನವನ್ನು ಎರಡನೇ ಬಾರಿಗೆ ಏರ್ಪಡಿಸಲಾಗಿದೆ. ಈಗಾಗಾಲೇ ಬೆಂಗಳೂರು, ಮೈಸೂರು, ಗೌರಿಬಿದನೂರು, ತುಮಕೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ ಮುಂತಾದೆಡೆ ಅಪಾರ ಜನಮೆಚ್ಚುಗೆ ಪಡೆದ ಈ ನಾಟಕವನ್ನು ಪ್ರಸಿದ್ಧ ರಂಗನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿಯವರು ರಂಗರೂಪ ನೀಡಿದ್ದಾರೆ. ಬಹುಜನರ ಅಪೇಕ್ಷೆಯ ಮೇರೆಗೆ ಈ ಪ್ರದರ್ಶನವನ್ನು ಮತ್ತೆ ಮೂಡುಬಿದ್ರೆಯಲ್ಲಿ ಏರ್ಪಡಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ನಡೆಯುವ ಈ ನಾಟಕ ನೋಡಲು ಪ್ರವೇಶ ಉಚಿತವಾಗಿದೆ ಯೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

Read More

ಪರಿಶುದ್ಧವಾದ ಬಿಳುಪು ಶುಭ್ರ ವರ್ಣದ ಸುಂದರ ‌ಕೋಮಲ ಸುಗಂಧಯುಕ್ತ‌ ಮನಸೂರೆಗೊಳ್ಳುವ ಸುವಾಸನಾಭರಿತ ಉಡುಪಿ ಶಂಕರಪುರ ಮಲ್ಲಿಗೆಯ ಸೌಂದರ್ಯ ಅವರ್ಣನೀಯ. ಬೆಳ್ಳಿ ನೊರೆಗಳು ಹಸಿರು ಪ್ರಕೃತಿಯನ್ನು ಅಪ್ಪಿಕೊಂಡಂತೆ ಇರುವ ಮಲ್ಲಿಗೆಯ ತೊಟ್ಟು ಹಾಗೂ ತನ್ನ ಪರಿಮಳದಿಂದ ಎಲ್ಲರನ್ನೂ ಸ್ವಾಗತಿಸುವ ಮಲ್ಲಿಗೆಯ ಸೌಂದರ್ಯಕ್ಕೆ, ಸುಂದರತೆಗೆ ಪ್ರತೀಕವಾಗಿ ಜಿ.ಐ ಮಾನ್ಯತೆ‌ ಹೊಂದಿದೆ. ಭೌದ್ಧಿಕ ಆಸ್ತಿ ಹಕ್ಕಿನಡಿ ನೊಂದಣಿಯಾದ ಉಡುಪಿ ಮಲ್ಲಿಗೆ ಬೌಗೋಳಿಕ ಸೂಚ್ಯಂಕದ ಪಟ್ಟಿಯಲ್ಲಿ ಸ್ಥಾನ ಪಡೆದು ಟ್ಯಾಗ್ ಹೊಂದಿದ್ದು ಘಮ ಘಮಿಸುವ ಪರಿಮಳದೊಂದಿಗೆ ಕಣ್ಣಿಗೆ ಮನಸ್ಸಿಗೆ ತಂಪನ್ನು‌ ಮೂಗಿಗೆ ಕಂಪನ್ನು ನೀಡುವ ಉಡುಪಿ ಮಲ್ಲಿಗೆ 700 ರಿಂದ 800 ಹೂವುಗಳು ಸೇರಿದರೆ ಒಂದು ಚೆಂಡು. ನಾಲ್ಕು ಚೆಂಡು ಸೇರಿದರೆ ಒಂದು ಅಟ್ಟಿ, ಒಂದು ಅಟ್ಟಿಯಲ್ಲಿ ಸರಾಸರಿ 3 ಸಾವಿರ ಹೂವಿರುತ್ತದೆ. ಭೌಗೋಳಿಕ ಸೂಚನೆ ಜಿ ಐ ಒಂದು ನಿರ್ದಿಷ್ಟ ಸ್ಥಳ ಪ್ರದೇಶಕ್ಕೆ ಅನುರೂಪವಾಗಿ ಕೆಲವು ವಸ್ತುಗಳಿಗೆ ಬಳಸುವ‌ ಚಿಹ್ನೆ ಅಥವಾ ಮಾನ್ಯತೆ. ಸಂಪ್ರದಾಯಕ ವಿಶೇಷತೆಗಳನ್ನು ಹೊಂದಿರುವ ವಿಶ್ವ ವಾಣಿಜ್ಯ ಸಂಸ್ಥೆ ಸದಸ್ಯರಾಗಿ ನೊಂದಣಿ ಮತ್ತು…

Read More

ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆ ಮಾಡಿ ಆಸ್ಪತ್ರೆಗೆ ದಾಖಲಾಗುವ ಯುವಕ ಯುವತಿಯರ ಸಂಖ್ಯೆ ಜಾಸ್ತಿಯಾಗಿದೆ. ಬಹಳಷ್ಟು ಯುವ ಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ, ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು ದೇಹದ ಮೇಲೆ ಕೆಲಸ ಮಾಡುತ್ತದೆ. ಗಾಂಜ ತೆಗೆದುಕೊಂಡ ಕೂಡಲೇ ಮನಸ್ಸಿಗೆ ಆರಾಮವಾಗುತ್ತದೆ ಮತ್ತು ಖುಷಿ ಸಿಗುತ್ತದೆ. ಆದ್ದರಿಂದಲೇ ಯುವಕರು ಇದನ್ನು ಇಷ್ಟ ಪಡುತ್ತಾರೆ. ಆದರೆ ಅದನ್ನು ತೆಗೆದುಕೊಂಡ ಕೂಡಲೇ ಮನಸ್ಸಿಗೆ ಒಂದು ರೀತಿಯ ಕನ್ಫ್ಯೂಷನ್, ಸುಸ್ತು, ನೆನಪಿನ ಶಕ್ತಿಯ ಕೊರತೆ, ಏಕಾಗ್ರತೆಯ ಕೊರತೆ, ಗಮನ ಕೊಡಲು ಆಗದೆ ಇರುವುದು, ಒಂದು ರೀತಿಯ ಹೆದರಿಕೆ ಭಯ ಮತ್ತು ಸುತ್ತಮುತ್ತಲು ನಡೆಯುತ್ತಿರುವ ವಿಷಯಗಳಿಗೆ ಪ್ರತಿಕ್ರಿಯಿಸಲು ಕಷ್ಟವಾಗುವುದು ಇವೆಲ್ಲ ಉಂಟಾಗುತ್ತದೆ. ಇನ್ನು ಕೆಲವರಲ್ಲಿ ಸಂಶಯ ಪ್ರವೃತ್ತಿ, ವಿಚಿತ್ರ ಭ್ರಮೆಗಳು ಹಾಗೂ ಶೂನ್ಯದಲ್ಲಿ ಕಣ್ಣಿಗೆ ವಿಚಿತ್ರ ಆಕೃತಿಗಳು ಕಾಣುವುದು ಅಥವಾ…

Read More

ಜಾಗತಿಕ ತಾಪವು ಸರಾಸರಿ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೆ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಜಾಗತಿಕ ಉಷ್ಣಾಂಶವು ಸರಾಸರಿ 1.23 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳ ಕಂಡಿದೆ. ಇದು ಅಪಾಯಕಾರಿ ಮಟ್ಟ ತಲುಪುವುದನ್ನು ತಡೆಯಬೇಕಿದೆ. ಇದಕ್ಕಾಗಿ ದೇಶದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತಲಾ 10 ಗಿಡಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮವನ್ನು ಕೇಂದ್ರ ಸರಕಾರ ತುರ್ತಾಗಿ ಹಮ್ಮಿಕೊಳ್ಳಬೇಕು. ಈ ಬಗ್ಗೆ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟ ತಿಳಿಸಿದೆ. ಒಕ್ಕೂಟದ ಸದಸ್ಯ ಬೆನೆಡಿಕ್ಟ್ ಫೆರ್ನಾಂಡಿಸ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ವಿವಿಧ ಶಾಲಾ ಕಾಲೇಜುಗಳಲ್ಲಿ 26.5 ಕೋಟಿ ನೋಂದಾಯಿತ ವಿದ್ಯಾರ್ಥಿಗಳಿದ್ದಾರೆ.ವಿದ್ಯಾರ್ಥಿಗಳು ತಲಾ 10 ಗಿಡಗಳನ್ನು ನೆಟ್ಟರೂ ದೇಶದಲ್ಲಿ ವರ್ಷಕ್ಕೆ 270 ಕೋಟಿ ಗಿಡಗಳನ್ನು ಬೆಳೆಸಬಹುದು. ಅದರಲ್ಲಿ ಶೇ. 30ರಷ್ಟು ಗಿಡಗಳು ಉಳಿದರೂ 80 ಕೋಟಿ ಗಿಡಗಳನ್ನು ಬೆಳೆಸಿದಂತಾಗುತ್ತದೆ ಎಂದರು. ನಂದಿಗುಡ್ಡೆ: ಮರ ಕಡಿಯದಂತೆ ತಡೆಯಾಜ್ಞೆ ಮಂಗಳೂರಿನ ನಂದಿಗುಡ್ಡೆಯಲ್ಲಿ ರಸ್ತೆ ಅಭಿವೃದ್ಧಿ…

Read More

ಬಂಟರ ಯಾನೆ ನಾಡವರ ಮಾತೃ ಸಂಘ ಉಡುಪಿ ತಾಲೂಕು ಸಮಿತಿ ವತಿಯಿಂದ ಸಂಘದ ಕಾರ್ಯ ವ್ಯಾಪ್ತಿಯಾದ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಗ್ರಾಮೀಣ ಬಂಟರ ಸಂಘದ 36 ಪ್ರತಿಭಾನ್ವಿತ ಆರ್ಥಿಕವಾಗಿ ಸಂಕಷ್ಟದಲ್ಲಿರುವ ದ್ವಿತೀಯ ಪಿ. ಯು. ಸಿ ಯ ಬಂಟ ವಿದ್ಯಾರ್ಥಿಗಳಿಗೆ ನೀಟ್ ಸಿಇಟಿ ಉಚಿತ ತರಬೇತಿ ಶಿಬಿರ ಉಡುಪಿಯ ವಿನಯ್ ಅಕಾಡೆಮಿಯಲ್ಲಿ ನಡೆಯಲಿದೆ. ಎ.1 ರಿಂದ ಮೇ.5 ರ ತನಕ ಬೆಳಗ್ಗೆ 9.30ರಿಂದ ಸಂಜೆ 5.30 ರ ತನಕ 35 ದಿನಗಳ ತರಬೇತಿಯು ನಡೆಯಲಿದ್ದು ಸಂಘದ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶವಿದೆ. ನಿಗದಿತ ಅರ್ಜಿ ನಮೂನೆ ಸಂಘದ ಕಚೇರಿಯಲ್ಲಿ ಲಭ್ಯವಿದ್ದು ಮಾ.20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು (8884130064) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದ ಶಿರ್ವ ಮಂಚಕಲ್‌ ಪೇಟೆಯ ಮುಖ್ಯರಸ್ತೆ ಬಳಿಯ ಶಾಮ್ಸ್‌ ಸ್ಕ್ವೇರ್‌ ವಾಣಿಜ್ಯ ಸಂಕೀರ್ಣ ಮತ್ತು ವಸತಿಗೃಹದ ಪ್ರವರ್ತಕರ ಭಾರತ್‌ ಪೆಟ್ರೋಲಿಯಂನ ನೂತನ ಪೆಟ್ರೋಲ್‌ಪಂಪ್‌ ಆನ್ಯ ಫ್ಯೂಯೆಲ್ಸ್‌ ಕಾರ್ಕಳ-ನಿಟ್ಟೆ ರಾಜ್ಯ ಹೆದ್ದಾರಿಯ ಬಳಿ ಶುಭಾರಂಭಗೊಂಡಿತು. ಸಂಸ್ಥೆಯ ಪ್ರವರ್ತಕರಾದ ಶಿರ್ವ ಅಟ್ಟಿಂಜ ಶೆಟ್ಟಿ ನಿವಾಸ ಹೇಮಲತಾ ಶೆಟ್ಟಿ ಮತ್ತು ಶಂಭು ಶೆಟ್ಟಿ ದಂಪತಿ ಆನ್ಯ ಫ್ಯೂಯೆಲ್ಸ್‌ನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆಗಮ ವಿದ್ವಾಂಸ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಮಾತನಾಡಿ, ಮನುಷ್ಯ ತಾನು ಮಾಡಿದ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸಿದರೆ ಜನ್ಮ ಸಾರ್ಥಕವಾಗುತ್ತದೆ. ಸಮಾಜದ ಒಳಿತಿಗಾಗಿ ವಿವಿಧ ಕೊಡುಗೆ ನೀಡುತ್ತಿರುವ ಅಟ್ಟಿಂಜೆ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳ ವ್ಯವಹಾರ,ಉದ್ದಿಮೆ ಯಶಸ್ವಿ ಪಥದತ್ತ ಮುನ್ನಡೆಯಲಿ ಎಂದು ಹೇಳಿದರು. ಕಾರ್ಕಳ ಅತ್ತೂರು ಸೈಂಟ್‌ ಲಾರೆನ್ಸ್‌ ಬಸಿಲಿಕಾದ ಸಹಾಯಕ ಧರ್ಮಗುರು ವಂ| ಆಲ್ಬನ್‌ ಡಿಸೋಜಾ ಮಾತನಾಡಿ ಸರ್ವಧರ್ಮ ಸಮನ್ವಯದ ಮೂಲಕ…

Read More

ಕಾರ್ಕಳ ಈಗ ಜನರ ಗಮನ ಸೆಳೆಯುತ್ತಿದೆ. ಜೊತೆಗೆ ತುಳುನಾಡಿಗರ ಆಕ್ರೊಶಕ್ಕೂ ಕಾರಣವಾಗಿದೆ. ಕಾರ್ಕಳದಲ್ಲೊಂದು ಪರಶುರಾಮ ಥೀಮ್ ಪಾರ್ಕ್ ರಚನೆ ಮಾಡಿದೆ ಘನ ಸರಕಾರ. ಇಂಡಾಲಜಿ ವಿದ್ಯಾರ್ಥಿಗಳಾಗಿ ಇಂದಿರ ಗಾಂಧಿ ನ್ಯಾಶನಲ್‌ ಮ್ಯೂಸಿಯಂಗೆ ನಾವು ಭೇಟಿ ನೀಡಿದ್ದಾಗ ತುಳುನಾಡಿನ ಉಯ್ಯಾಲೆಯಲ್ಲಿ ಇರುವಂತ ಸಣ್ಣ ಸಣ್ಣ ಹಿತ್ತಾಳೆಯ ಪ್ರತಿಮೆಗಳನ್ನು ನಾನು ಅಲ್ಲಿ ಗಮನಿಸಿದೆ. ಈ ಬಗ್ಗೆ ನಮ್ಮ ಇಂಡಾಲಜಿ ಗುರುಗಳಾದ ಎಸ್ ನಾಗರಾಜು ಅವರಲ್ಲಿ ಚರ್ಚೆ ನಡೆಯಿತು. “ನಿಮ್ಮ ಕಡೆ ಅಧ್ಯಯನ ನಡೆಯಲು ಬಹಳಷ್ಟು ಇದೆ. ಪರಂಪರೆಯನ್ನು ಉಳಿಸಿಕೊಳ್ಳುವುದರಲ್ಲಿ ನಿಮ್ಮನ್ನು ಮೆಚ್ಚಬೇಕು. ನೀವು ರಾಕೆಟ್ ಯುಗಕ್ಕೆ ಹೋದರೂ ಲೋಹಯುಗದ ಪಳೆಯುಳಿಕೆಗಳನ್ನು ಬಿಟ್ಟಿಲ್ಲ ಎಂದರು. ಅದು ನಿಜವೇ. ಜಗದಗಲ ತಮ್ಮ ಛಾಪನ್ನು ಛಾಪಿಸಿದ ತುಳುವರು ಆದಿ ಕಾಲದ ಭೂತಾರಾಧನೆಯನ್ನು ಅಭಿಮಾನದಿಂದ ಸಮರ್ಪಣಾ ಭಕ್ತಿಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. “ ತುಳುವ ನಂಬಿಕೆಯ ಪ್ರಕಾರ ‘ನಾರಾಯಣ (ಸೂರ್ಯ) ಚಂದ್ರರ ಉದಯದೊಂದಿಗೆ ನೀರು ತುಂಬಿಕೊಂದ್ದ ಭೂಮಿಯಲ್ಲಿ ಜೀವಿಗಳೂ ಹುಟ್ಟಿದುವು. ಆದ್ದರಿಂದಲೇ ಏನೋ ತುಳುನಾಡಿನ ದೇವಾಲಯಗಳ ಬಾಗಿಲಲ್ಲಿ ಸೂರ್ಯ ಚಂದ್ರರ ಚಿಹ್ನೆಗಳನ್ನು…

Read More

ಸುರತ್ಕಲ್: “ರಾಜ್ಯಕ್ಕೆ ಮಾದರಿ ಶಾಲೆ ಎನಿಸಿರುವ ಮಧ್ಯ ಸರಕಾರಿ ಪ್ರಾಥಮಿಕ ಶಾಲೆಗೆ ಸರಕಾರದ ವತಿಯಿಂದ ಆಟದ ಮೈದಾನ ನಿರ್ಮಿಸಲು 2 ಎಕ್ರೆ ಜಾಗ ದೊರೆತಿದ್ದು ಅದರಲ್ಲಿ ಟ್ರಸ್ಟ್ ಗೌರವಾಧ್ಯಕ್ಷರಾದ ಕರುಣಾಕರ ಎಂ ಶೆಟ್ಟಿ ಇವರ ನೇತೃತ್ವದಲ್ಲಿ ಸುಮಾರು 2 ಕೋಟಿ ಅಂದಾಜು ವೆಚ್ಚದಲ್ಲಿ ಶಾಲೆಗೆ ಹೆಚ್ಚುವರಿ ಕೊಠಡಿ ಮತ್ತು 9 ಮತ್ತು 10 ನೇ ತರಗತಿ ಹಾಗೂ ಸುಸಜ್ಜಿತವಾದ ಆಟದ ಮೈದಾನವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ” ಎಂದು ವಿದ್ಯಾನಿಧಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 2015-16 ರ ಸಾಲಿನಲ್ಲಿ 75 ಮಕ್ಕಳನ್ನು ಹೊಂದಿದ್ದ ಶಾಲೆಯು ಸುವರ್ಣ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ಕರುಣಾಕರ ಎಂ.ಶೆಟ್ಟಿ ಮಧ್ಯ ಗುತ್ತು ಮತ್ತು ಮೋಹನ್ ಚೌಟ ಮಧ್ಯ ಇವರ ಮುತುವರ್ಜಿಯಿಂದ ಮುಂಬೈಯ ಉದ್ಯಮಿಗಳಿಂದ, ಮಹಾ ದಾನಿಗಳಿಂದ, ಸಂಘ ಸಂಸ್ಥೆಗಳಿಂದ, ಊರಿನ ಹಿರಿಯರಿಂದ, ಹಳೆ ವಿದ್ಯಾರ್ಥಿಗಳಿಂದ, ಸರಕಾರದಿಂದ ಮತ್ತು ಜನಪ್ರತಿನಿಧಿಗಳಿಂದ ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆಯ ಚಿತ್ರಣವೇ ಬದಲಾಗಿ,…

Read More