ಈ ಆದುನಿಕ ಯುಗದಲ್ಲಿ ಬದಲಾಗುತ್ತಿರುವ ದಿನಮಾನಗಳಲ್ಲಿ ನಮ್ಮ ಸಂಪ್ರದಾಯಗಳು ಮೂಲೆ ಸೇರಿ ನವ ನಾಗರೀಕತೆ ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಮಧ್ಯೆಯೂ ನಮ್ಮ ಕೌಟುಂಬಿಕ ಸಮಾರಂಭಗಳು ದಿಕ್ಕು ತಪ್ಪದಂತೆ ಎಚ್ಚರಿಕೆ ವಹಿಸುತ್ತಲೇ ತಮ್ಮ ಮಕ್ಕಳ ನಿಶ್ಚಿತಾರ್ಥ, ಮೆಹೆಂದಿ, ವಿವಾಹ, ಅತಿಥಿ ಭೋಜನ ಸಮ್ಮಿಲನಗಳ ಪಾವಿತ್ರ್ಯ ಮಹತ್ವ ಕೆಡದಂತೆ ಆಚರಿಸಿಕೊಳ್ಳುತ್ತಾರೆ ಎಂಬುವುದಕ್ಕೆ ಮಹಾನಗರಿ ಮುಂಬಯಿಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮ ಸಾಕ್ಷಿಯಾಗಿದೆ.
ಮಹಾನಗರಿಯ ಬಂಟ ಕುಟುಂಬವೊಂದು ತಮ್ಮ ಮಗನ ಮೆಹೆಂದಿ ಕಾರ್ಯಕ್ರಮದಲ್ಲಿ ಮುಂಬಯಿಯ ಜನಪ್ರಿಯ ಗಾಯಕ ಶ್ರೀ ವಿಜಯ್ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾ ಕಾರ್ಯಕ್ರಮ ಆಯೋಜಿಸಿದ್ದು, ಜಾತಿ ಬಾಂಧವರ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಯಿತು. ವಿಜಯ್ ಶೆಟ್ಟಿ ಅವರ ಭಕ್ತಿ ಪ್ರಧಾನ ಹಾಡುಗಳು ಆಗಮಿಸಿದ್ದ ಬಂಧುಮಿತ್ರರ ಹರ್ಷೋದ್ಗಾರಗಳ ಮೂಲಕ ಪ್ರಸ್ತುತಗೊಂಡು ಅಲ್ಲಿ ಸೇರಿದ್ದ ಗಣ್ಯರು ಈ ಕಾರ್ಯಕ್ರಮ ಆಯೋಜಿಸಿದ ಕುಟುಂಬದ ಕುರಿತು ಮೆಚ್ಚುಗೆ ನುಡಿಗಳನ್ನಾಡಿದರು. ಇಂಥಹ ಆರೋಗ್ಯಕರ ಬೆಳವಣಿಗೆ ಮುಂದಿನ ದಿನಗಳಲ್ಲಿ ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು. ಒಟ್ಟಿನಲ್ಲಿ ಇದೊಂದು ಮಾದರಿ ಮೆಹೆಂದಿ ಕಾರ್ಯಕ್ರಮ ಎನ್ನಬಹುದು.