ಬಂಟ ಸಮಾಜ ಬಾಂಧವರ ಐಕ್ಯಮತ ಒಗ್ಗಟ್ಟಿನಿಂದ ಪುಣೆಯಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ಬಂಟರ ಸಂಘದ ಸ್ಥಾಪನೆಯಾಗಿ ಸಂಘದ ಸ್ಥಾಪಕರಿಂದ ಹಿಡಿದು ಸಮಾಜದ ಹಿರಿಯರು, ದಾನಿಗಳು, ಸೇವಾಕರ್ತರು, ಪ್ರೋತ್ಸಾಹಕರು, ಮಹಿಳೆಯರು, ಯುವ ಸಂಘಟನೆಯ ಸಹಕಾರದಿಂದ ಬೆಳೆದು ಬಂದು ಇದೀಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ. ಸಂಸ್ಥೆಯ ಬೆನ್ನೆಲುಬಾಗಿ ನಿಂತು ಸಮಾಜದ ಅಭಿವೃದ್ದಿಗಾಗಿ, ಸಂಘಟನೆಗಾಗಿ ದುಡಿದವರು ಬಹಳಷ್ಟು ನಮ್ಮ ಹಿರಿಯರಿದ್ದಾರೆ. ಪರಿಶ್ರಮದಿಂದ ಫಲ ಪ್ರಾಪ್ತಿ ಎಂಬಂತೆ ಕೆಲವು ವರ್ಷಗಳ ಹಿಂದೆ ನಮ್ಮ ನೇತೃತ್ವದಲ್ಲಿ ಹೆಮ್ಮೆಯ ಭವ್ಯ ಬಂಟರ ಭವನ ನಿರ್ಮಾಣ ಆಗಿ, ಇದೀಗ ಇದೇ ಭವನದಲ್ಲಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸುವ ಭಾಗ್ಯ ನಮಗೆ ಒದಗಿ ಬಂದಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ನುಡಿದರು.
ಡಿ 5ರಂದು ಪುಣೆ ಬಂಟರ ಭವನದ ಪ್ರತಿಭಾ ದಯಾಶಂಕರ್ ಶೆಟ್ಟಿ ಕಾನ್ಫರೆನ್ಸ್ ಹಾಲ್ ನಲ್ಲಿ ಜರಗಿದ ಬಂಟರ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತೋಷ್ ಶೆಟ್ಟಿಯವರು ನಮ್ಮ ಸಮಾಜದ ಎಲ್ಲಾ ಸೇವಾಕರ್ತರನ್ನು ಕೂಡಿಕೊಂಡು ಹಲವಾರು ಸಮಾಜ ಸೇವಾ ಕಾರ್ಯಗಳು, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಸುವರ್ಣ ಮಹೋತ್ಸವವನ್ನು ನಡೆಸುವ ಯೋಜನೆ ನಮ್ಮದಾಗಿದೆ. ಅದಕ್ಕೆ ಪೂರಕವಾಗಿ ಕ್ರೀಡೋತ್ಸವ, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಅಂತೆಯೇ ಸಂಘಕ್ಕಾಗಿ, ಸಮಾಜಕ್ಕಾಗಿ ಅವಿರತವಾಗಿ ದುಡಿದ ಮಹಾನೀಯರನ್ನು ಗುರುತಿಸುವ ಕಾರ್ಯವು ಈ ಸಂದರ್ಭದಲ್ಲಿ ನಡೆಯಲಿದೆ. ಸಂಘದ ಕಾರ್ಯಕಾರಿ ಸಮಿತಿ, ವಿವಿದ ಉಪ ಸಮಿತಿಗಳು ಮಹಿಳಾ ವಿಭಾಗ, ಯುವ ವಿಭಾಗದವರ ಕಾರ್ಯ ಯೋಜನೆಗಳ ಶ್ರಮದೊಂದಿಗೆ, ಸಮಾಜದ ಹಿರಿಯರು, ಮಾಜಿ ಅಧ್ಯಕ್ಷರುಗಳು, ಟ್ರಸ್ಟಿಗಳು, ಮಹಾ ದಾನಿಗಳು, ದಾನಿಗಳ ಸಲಹೆ ಸೂಚನೆ, ಸಹಕಾರದೊಂದಿಗೆ ಸುವರ್ಣ ಮಹೋತ್ಸವವನ್ನು ಬಹಳ ಶಿಸ್ತುಬದ್ದವಾಗಿ ನಡೆಸಿ ಅರ್ಥಪೂರ್ಣವಾಗಿ ಯಶಸ್ವಿಗೊಳಿಸೋಣ ಎಂದರು.
ಈ ಸಭೆಯಲ್ಲಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಶೆಟ್ಟಿ ಎರ್ಮಾಳ್, ಪ್ರವೀಣ್ ಶೆಟ್ಟಿ ಪುತ್ತೂರು, ಕೋಶಾಧಿಕಾರಿ ಶ್ರೀನಿವಾಸ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸುಚಿತ್ರಾ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ನಿಟ್ಟೆ, ಜೊತೆ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೇರ್ಡೆ ಬೀಡು, ಕಲ್ಪವೃಕ್ಷ ಸಮಾಜ ಕಲ್ಯಾಣ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಕಟ್ಟಡ ಸಮಿತಿ ಸಮನ್ವಯಕರು ಮೋಹನ್ ಶೆಟ್ಟಿ, ಜನ ಸಂಪರ್ಕಾಧಿಕಾರಿ ಗಣೇಶ್ ಹೆಗ್ಡೆ, ಕಾನೂನು ಸಮಿತಿಯ ಗಣೇಶ್ ಶೆಟ್ಟಿ, ಸಮನ್ವಯಕರುಗಳಾದ ಬಾಲಚಂದ್ರ ಶೆಟ್ಟಿ ಎರ್ಮಾಳ್, ಸುಧೀರ್ ಶೆಟ್ಟಿ ಕಣಂಜಾರು, ವಸಂತ್ ಶೆಟ್ಟಿ, ಕ್ಯಾಟರಿಂಗ್ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಸಾಂಸ್ಕ್ರತಿಕ ಸಮಿತಿಯ ಕಾರ್ಯಾಧ್ಯಕ್ಷ ತಾರಾನಾಥ್ ರೈ ಮೇಗಿನ ಗುತ್ತು, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಆವರ್ಸೆ, ಉಪ ಕಾರ್ಯಾಧ್ಯಕ್ಷ ರವಿ ಶೆಟ್ಟಿ, ಸಾಮಾಜಿಕ ಜಾಲತಾಣ ಕಾರ್ಯಾಧ್ಯಕ್ಷ ಕಿಶೋರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ, ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ಉತ್ತರ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ಪ್ರಾದೇಶಿಕ ಸಮಿತಿಯ ಪ್ರಮುಖರಾದ ಪ್ರಸನ್ನ ಶೆಟ್ಟಿ, ದಾಮೋದರ್ ಶೆಟ್ಟಿ ಮತ್ತಿರರು ಉಪಸ್ಥಿತರಿದ್ದರು. ಸಮಿತಿಯ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ, ಚಿತ್ರ – ಹರೀಶ್ ಮೂಡಬಿದಿರೆ