Author: admin

ಶ್ರೀ ಕೃಷ್ಣನಗರಿ ಉಡುಪಿಯ ರಥಬಿದಿಯಲ್ಲಿ ತಿಂಗಳ ಹಿಂದೆ ಸಾಗುತ್ತಾ‌ ಇದ್ದೆ. ತಾಳೆ ಹಣ್ಣು ತುಂಬಿದ ಕೈಗಾಡಿಯೆದುರು ಹಿರಿಯ ಕಿರಿಯರು ತಾಳೆ ಸೊಳೆ ತಿನ್ನುವುದಕ್ಕೆ ಸೇರಿದ್ದರು. ಆರೋಗ್ಯದಾಯಕ ನೈಸರ್ಗಿಕ ಆಹಾರದ ಮಹತ್ವಕ್ಕೆ ಕೊಡಬೇಕಾದ ಕಾಲ ಘಟ್ಟವಿದು. ದೇಹದಲ್ಲಿ ರೋಗ ನೀರೊಧಕ ಶಕ್ತಿ ಹೆಚ್ಚಿಸಿಕೊಳ್ಳವುದರ ಮಹತ್ವದ ಅರಿವು ಇಂದು ಜನಸಾಮಾನ್ಯರಿಗೆ ಆಗಿದ್ದು, ತಾಳೆಹಣ್ಣು ತಿನ್ನುವುದರಲ್ಲಿ ಮುಗಿಬಿದ್ದರೊ ಎನಿಸಿತು. ಸರಿ ನಾನು ಹೋಗಿ ತಿಂದೆ. ಬಿಸಿಲ ಬೇಗೆಯಿಂದ ಧಣಿವಾರಿಸಿಕೊಳ್ಳಲು ಜನ ತಂಪು ಪದಾರ್ಥಗಳನ್ನೇ ಬಯಸುತ್ತಿದ್ದು ಅದರಲ್ಲಿ ಆರೋಗ್ಯಕ್ಕೆ ಹಿತಕರ ತಾಟಿನಿಂಗು ಪ್ರಮುಖ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಎಪ್ರಿಲ್ ಆರಂಭದಲ್ಲಿ ಕೊಯ್ಲಿಗೆ ಬಂದರೆ ಜೂನ್‌ ಜುಲೈವರೆಗೂ ಲಭ್ಯವಿರುತ್ತದೆ. ಸಾಕಷ್ಟು ಔಷಧೀಯ ಗುಣಗಳ ಪೋಷಕಾಂಶಗಳ ಆಗರವಾಗಿದ್ದು ದೇಹಕ್ಕೆ ಚೈತನ್ಯ ನೀಡುತ್ತದೆ. ಮಾರುಕಟ್ಟೆಯಲ್ಲಿ ಅಷ್ಟೊಂದು ಬೇಡಿಕೆ ಇಲ್ಲದೆ ಇದ್ದ ಈ‌ ಹಣ್ಣು ಇತ್ತೀಚೆಗೆ ಕೆಲ ವರ್ಷಗಳಿಂದ ಜನ ಮುಂಚಿತವಾಗಿ ನಿಗದಿಗೊಳಿಸಿ ತರಿಸಿಕೊಂಡು ತಿನ್ನುತ್ತಾರೆ. ದಾಹ ತಣಿಸುವ ತಾಟಿಹಣ್ಣು ಬೇಸಿಗೆಯಲ್ಲಿ ಮಾತ್ರವಲ್ಲ ವರ್ಷದ 12 ತಿಂಗಳಲ್ಲಿ ‌ಬೇಡಿಕೆ ಇದ್ದು ಕೇವಲ ನೀರಡಿಕೆ ಇಂಗಿಸುವುದಕ್ಕಷ್ಟೆ…

Read More

ಕಳೆದ 5 ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸುಮಾರು 2095 ಕೋ.ರೂ.ಗಳ ಅನುದಾನದ ಅಭಿವೃದ್ಧಿ ಕಾರ್ಯ ಅನುಷ್ಠಾನಗೊಳಿಸಲಾಗಿದ್ದು, ಬಂಟ್ವಾಳವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಹಲವು ಯೋಜನೆಗಳ ಅನುಷ್ಠಾನಕ್ಕೆ ಕ್ಷೇತ್ರದ ಮತದಾರರು ಮತ್ತೂಮ್ಮೆ ಆಶೀರ್ವಾದ ಮಾಡಬೇಕು ಎಂದು ಬಂಟ್ವಾಳ ಬಿಜೆಪಿ ಅಭ್ಯರ್ಥಿ, ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು. ಅವರು ಬಂಟ್ವಾಳ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಮನೆ ಮನೆ ಭೇಟಿಯ ಮೂಲಕ ಮತಯಾಚನೆ ನಡೆಸಿ ಕಾರ್ಯಕರ್ತರ ಸಭೆಯಲ್ಲಿ ಮಾತ ನಾಡಿದರು. ನಾನು ಶಾಸಕನಾಗುವ ಮೊದಲು ಬಂಟ್ವಾಳದಲ್ಲಿ ಬರೀ ಕೋಮು ಗಲಭೆಗಳು, ಹತ್ಯೆಗಳು, ಇನ್ನಿತರ ಅಹಿತಕರ ಘಟನೆಗಳು ಮರುಕಳಿಸುತ್ತಲೇ ಇತ್ತು. ಹೀಗಾಗಿ ತಾನು ಶಾಸಕನಾದರೆ ಶಾಂತಿಯ ಬಂಟ್ವಾಳವನ್ನು ನಿರ್ಮಾಣ ಮಾಡಬೇಕು ಎಂಬ ಪಣತೊಟ್ಟಿದ್ದು, ಅದರಂತೆ ಕಳೆದ 5 ವರ್ಷಗಳಿಂದ ಒಂದೇ ಒಂದು ಕೋಮುಗಲಭೆ, ಕೊಲೆಗಳು ನಡೆಯದೆ ಶಾಂತಿಯ ಬಂಟ್ವಾಳ ನಿರ್ಮಾಣವಾಗಿದೆ. ಗ್ರಾಮೀಣ ಭಾಗಗಳಿಗ ತೆರಳಿದ ಸಂದರ್ಭ ಕ್ಷೇತ್ರದ ಜನತೆ ಇದೇ ಮಾತನ್ನು ಹೇಳಿ ಮತ್ತೊಮ್ಮೆ ಗೆಲ್ಲಿಸುವ ಭರವಸೆ ನೀಡುತ್ತಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ…

Read More

ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಡಾ ಇಂದಿರಾ ಎನ್ ಶೆಟ್ಟಿ ಮತ್ತು ಡಾ ಗೀತಾ ಶರತ್ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಹಿಳೆಯರಿಗೆ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಸಮಾರಂಭದಲ್ಲಿ ಮಹಿಳಾ ವೇದಿಕೆಯ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಉಪಾಧ್ಯೆಕ್ಷೆ ಭವ್ಯಾ ಎ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸರೋಜ ಟಿ ಶೆಟ್ಟಿ, ಕೋಶಾಧಿಕಾರಿ ಶೈಲಾ ಎಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಭಾರತಿ ಜಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಕೇಸರಿ ಎಸ್ ಪೂಂಜ, ಕ್ರೀಡಾ ಕಾರ್ಯದರ್ಶಿ ಅಕ್ಷತಾ ಜಿ ಶೆಟ್ಟಿ, ಮಹಿಳಾ ವೇದಿಕೆಯ ಮಾಜಿ ಅಧ್ಯೆಕ್ಷೆ, ಆಶಾ ಶೆಟ್ಟಿ ಬೇಬಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

80,90 ದಶಕದವರಿಗೆ ದೂರದರ್ಶನ ಅಂದ್ರೆ ಒಂದು ರೋಮಾಂಚನಕಾರಿ ಅನುಭವ. ಅದರೊಂದಿಗೆ ಒಂದು ಅವಿನಾಭಾವ ನಂಟು ಬೆಳೆದಿರುತ್ತೆ. ಅದ್ರಲ್ಲೂ ಹಳ್ಳಿಯವರಾದರೆ ಆ ನಂಟಿನ ಸೊಗಸೇ ಅದ್ಭುತ. ಈಗಲೂ ಆ ದಿನಗಳನ್ನು ನೆನಪಿಸಿ ಮಿಸ್ ಮಾಡಿಕೊಳ್ಳೋರಿಗೆ ಆ ಮಜಭೂತನ್ನು ತೆರೆ ಮೇಲೆ ಕಟ್ಟಿಕೊಡಲು ಸಿದ್ದವಾಗಿರೋ ಸಿನಿಮಾ ‘ದೂರದರ್ಶನ’. ಟೈಟಲ್ ಕೇಳಿದಾಕ್ಷಣ ಬಹಳ ಬೇಗ ಕನೆಕ್ಟ್ ಆಗುತ್ತೆ ಅದೇ ರೀತಿ ಸಿನಿಮಾ ಕೂಡ ಹಳ್ಳಿ ಸೊಗಡಲ್ಲೇ ಮೋಡಿ ಮಾಡೋಕೆ ಸಿದ್ದವಾಗಿದೆ. ಹಾಡುಗಳ ಮೂಲಕ ಮೋಡಿ ಮಾಡಿರೋ ‘ದೂರದರ್ಶನ’ ಚಿತ್ರತಂಡ ಪ್ರಾಮಿಸಿಂಗ್ ಆಗಿರೋ ಟೀಸರ್ ಬಿಡುಗಡೆ ಮಾಡಿದೆ. ಮಾಸ್ ಸಿನಿಮಾ ಭರಾಟೆಯಲ್ಲಿ ಹಳ್ಳಿ ಸೊಗಡಿರೋ, ಹಳ್ಳಿಯಲ್ಲಿ ನಡೆಯೋ ಕಥಾನಕಗಳಿರೋ ಸಿನಿಮಾಗಳು ಕಡಿಮೆ ಆಗಿದೆ ಅನ್ನೋರಿಗೆ ಪಕ್ಕಾ ಹಳ್ಳಿ ಸೊಗಡಿರೋ, 80, 90 ದಶಕದ ಚಿತ್ರಣವನ್ನೊಳಗೊಂಡ ‘ದೂರದರ್ಶನ’ ಸಿನಿಮಾ ಮನರಂಜನೆ ನೀಡಲು ಸಜ್ಜಾಗಿದೆ. ಹಾಗೆಂದ ಮಾತ್ರಕ್ಕೆ ಕ್ಲಾಸ್ ಆಡಿಯನ್ಸ್ ಸಿನಿಮಾವೇನಲ್ಲ. ಮಾಸ್ ಆಡಿಯನ್ಸ್ ಗಳನ್ನು ಸೆಳೆಯೋ ಕಟೆಂಟ್ ಚಿತ್ರದಲ್ಲಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಪ್ರಾಮಿಸಿಂಗ್ ಟೀಸರ್ ಬಿಡುಗಡೆ ಮಾಡಿ…

Read More

ಕ್ರೀಡೆ ಸಹಬಾಳ್ವೆ ಹಾಗೂ ಭ್ರಾತ್ವತ್ವದ ಸಂಕೇತ ಮಾತ್ರವಲ್ಲದೆ, ಜೀವನ ಕೌಶಲಗಳನ್ನು ಕಲಿಸಿಕೊಡುವುದರ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕರಿಸುತ್ತದೆ ಎಂದು ಟೋರ್ಪೆಡೋಸ್ ಟೆನ್ನಿಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಗೋವಿಂದದಾಸ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟಕರಾಗಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ನಿರ್ದೇಶಕ ಪ್ರೊ ವೈ.ವಿ. ರತ್ನಾಕರ್ ರಾವ್ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಪ್ರಾಂಶುಪಾಲೆ ಲಕ್ಷ್ಮೀ ಪಿ, ಉಪಪ್ರಾಂಶುಪಾಲೆ ಸುನೀತಾ ಕೆ, ವಿದ್ಯಾರ್ಥಿ ಕ್ಷೇಮಪಾಲೆ ಪಲ್ಲವಿ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ನಿಖಿಲ್ ಭೂಷಣ್ ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿ ಅನೀಶ್ ಶೆಟ್ಟಿ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ನಿಹಾರಿಕಾ ಅತಿಥಿಗಳ ಪರಿಚಯ ನೆರವೇರಿಸಿದರು. ಗಣಕಶಾಸ್ತ್ರ ಉಪನ್ಯಾಸಕರಾದ ರಾಕೇಶ್ ಹೊಸಬೆಟ್ಟು ವಂದಿಸಿದರು. ಯಶ್ರಿತಾ ನಿರೂಪಿಸಿದರು. ಸಭಾ ಕಾರ್ಯಕ್ರಮದ ಅನಂತರ ವಿವಿಧ ಕ್ರೀಡಾ ಸ್ವರ್ಧೆಗಳು ನಡೆದವು.

Read More

ಗೋಪಿತಲಾಬ್ ಒಂದು ಪುರಾತನ ಸುಂದರ ಸರೋವರ. ಗುಜರಾತಿನ ಗೋಪಿಪುರ ‌ಪ್ರದೇಶದಲ್ಲಿ ಅಂದರೆ ದ್ವಾರಕಾದಿಂದ 20 ಕಿ.ಮಿ ದೂರದಲ್ಲಿರುವ ಗೋಪಿ ತಲಾಬ್ ಶ್ರೀಕೃಷ್ಣ ಮನಸಾರೆ ಮೆಚ್ಚಿದ ಜನಪ್ರೀಯ ಮನರಂಜನಾ ತಾಣವಾಗಿತ್ತು ಯುವ ಪ್ರೇಮಿಗಳಿಗೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿ ಪ್ರೇಮಿಗಳಿಗಿಂತ ಭಕ್ತಾದಿಗಳೇ ಹೆಚ್ಚು ಕಾಣಿಸುತ್ತಾರೆ ಎನ್ನುತ್ತಾರೆ ‌ಇಲ್ಲಿನ ‌ಸ್ಥಳಿಯರು. ಈ ತಲಾಬ್ ನಲ್ಲಿ ಗೋಪಿಕೆಯರು ಮತ್ತು ಭಗವಾನ್ ಶ್ರಿ ಕೃಷ್ಣ ಜೊತೆಯಾಗಿ ನೀರಾಟ ಆಡುತ್ತಿದ್ದರಂತೆ. ಶ್ರೀ ಕೃಷ್ಣ ಪ್ರ ತಿವರ್ಷ ಶ್ರಾವಣ ಮಾಸದ ಏಕಾದಶಿಯಂದು ದೇವಾದಿ ದೇವತೆಗಳೊಂದಿಗೆ ಗೋಪಿ ತಲಾಬ್ ನಲ್ಲಿ ಸ್ನಾನ ಮಾಡಲು ಇಲ್ಲಿಗೆ ಬರುತ್ತಾನೆ ಎಂಬ ನಂಬಿಕೆ ಇಂದಿಗೂ ಇಲ್ಲಿನ ಭಕ್ತರು ಭಕ್ತಿಯಿಂದ ನಂಬುತ್ತಾರೆ. ಶ್ರಿ ಕೃಷ್ಣ ಗೋಪಿಕೆಯರಿಗೆ ನಾನು ‌ನಿಮ್ಮನ್ನು ಸೇರಲು ಇಲ್ಲಿಗೆ ಪ್ರತಿವರ್ಷ ಬರುತ್ತೇನೆ. ಯಾರು ಇಲ್ಲಿ ಪುಣ್ಯ ‌ಸ್ನಾನ ಮಾಡುತ್ತಾರೊ ಅವರು ಖಂಡಿತಾ ‌ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ‌ಫಲ ಅನುಭವಿಸುತ್ತಾರೆ ಎಂದು ವರವಿತ್ತಿದ್ದನಂತೆ. ಶ್ರೀ ಕೃಷ್ಣ ವಿಶ್ವಕರ್ಮನಿಗೆ ಕಮಲದ ಹೂವಿನಿಂದ ಈ ಕೊಳ ಅಥವಾ…

Read More

ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಇದರ ಆಶ್ರಯದಲ್ಲಿ ಶ್ರೀ ಸಿದ್ದಿ ವಿನಾಯಕ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಓಂಕಾರ ನಗರ ಬಂಟ್ಸ್ ಹಾಸ್ಟೇಲ್ ಮಂಗಳೂರು ಇಲ್ಲಿ ಸೆಪ್ಟಂಬರ್ 16 ರಂದು ಬಂಟ ಯುವ ಸಮ್ಮೇಳನ ನಡೆಯಲಿದೆ. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯನ್ನು ಒಳಗೊಂಡ ಯುವ ಸಮುದಾಯವನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನ ಇದಾಗಿದೆ. ಸಭೆಯ ಪೂರ್ವಭಾವಿ ಸಭೆಯು ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ಸಮ್ಮೇಳನ ಸಮಿತಿಯ ಉಸ್ತುವಾರಿ ಅಶ್ವತ್ತಾಮ ಹೆಗ್ಡೆ ಅವರು ಮಾತನಾಡಿ, ಸೆಪ್ಟಂಬರ್ 16 ಭಾನುವಾರ ಬೆಳಗ್ಗೆ ಉದ್ಘಾಟನಾ ಸಮಾರಂಭ, ಬಳಿಕ ವಿಚಾರಗೋಷ್ಠಿ, ಸಾಧಕರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ ದಿಗ್ಗಜರೊಂದಿಗೆ ಪಟ್ಟಾಂಗ ಕಾರ್ಯಕ್ರಮ ನಡೆಯಲಿದೆ ಎಂದರು. ಇಡೀ ದಿನ ಯುವ ಜನತೆಗಾಗಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಿನಿ ತಾರೆಯರು ಭಾಗವಹಿಸಲಿದ್ದಾರೆ. ಸಂಜೆ ಆಕರ್ಷಕ ರಸಮಂಜರಿ ಆಯೋಜಿಸಲಾಗಿದೆ. ಸುಮಾರು 3,000 ಮಂದಿ ಬಂಟ ಯುವಕ ಯುವತಿಯರು…

Read More

ಕ್ಯಾನ್ಸರ್‌ ಎನ್ನುವುದು ದೇಹದಲ್ಲಿನ ಜೀವಕೋಶಗಳು ನಿಯಂತ್ರಣವಿಲ್ಲದೆ ಬೆಳೆಯುವ ಕಾಯಿಲೆಯಾಗಿದೆ. ಕ್ಯಾನ್ಸರ್‌ ದೇಹದ ಇತರ ಭಾಗಗಳಿಗೆ ಹರಡಿದರೂ ಅದನ್ನು ಯಾವಾಗಲೂ ಅದು ಪ್ರಾರಂಭವಾಗುವ ದೇಹದ ಭಾಗದಿಂದ ಹೆಸರಿಸ ಲಾಗುತ್ತದೆ. ಗರ್ಭಕಂಠದಲ್ಲಿ ಕ್ಯಾನ್ಸರ್‌ ಪ್ರಾರಂಭವಾದಾಗ, ಅದನ್ನು ಗರ್ಭಕಂಠದ ಕ್ಯಾನ್ಸರ್‌ ಎಂದು ಕರೆಯಲಾಗುತ್ತದೆ. ಗರ್ಭಕಂಠವು ಯೋನಿಯನ್ನು (ಜನ್ಮ ಕಾಲುವೆ) ಗರ್ಭಾಶಯದ ಮೇಲಿನ ಭಾಗಕ್ಕೆ ಸಂಪರ್ಕಿಸುತ್ತದೆ. ಮಹಿಳೆ ಗರ್ಭಿಣಿಯಾಗಿದ್ದಾಗ ಮಗು ಗರ್ಭಾಶಯದಲ್ಲಿ ಬೆಳೆಯುತ್ತದೆ. ಗರ್ಭಕಂಠದ ಕ್ಯಾನ್ಸರ್‌ ಸಾಮಾನ್ಯವಾಗಿ ಕಾಲಾಂತರದಲ್ಲಿ ನಿಧಾನವಾಗಿ ಬೆಳೆಯುತ್ತದೆ. ಗರ್ಭಕಂಠದಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಮೊದಲು, ಗರ್ಭಕಂಠದ ಜೀವಕೋಶಗಳು ಡಿಸ್ಪಾಸಿಯಾ ಎಂದು ಕರೆಯಲ್ಪಡುವ ಬದಲಾವಣೆ ಹೊಂದುತ್ತವೆ, ಇದರಲ್ಲಿ ಗರ್ಭಕಂಠದ ಅಂಗಾಂಶದಲ್ಲಿ ಅಸಹಜ ಜೀವಕೋಶಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕಾಲಾನಂತರದಲ್ಲಿ ಅಸಹಜ ಜೀವಕೋಶಗಳು ನಾಶವಾಗದಿದ್ದರೆ ಅಥವಾ ಅವನ್ನು ತೆಗೆದುಹಾಕದಿದ್ದರೆ, ಅಸಹಜ ಜೀವಕೋಶಗಳು ಕ್ಯಾನ್ಸರ್‌ ಕೋಶಗಳಾಗಿ ಬದಲಾಗಬಹುದು ಮತ್ತು ಗರ್ಭಕಂಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚು ಆಳವಾಗಿ ಬೆಳೆಯಲು ಪ್ರಾರಂಭಿಸಬಹುದು. ಇದು 30 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವಾದ್ಯಂತ ಗರ್ಭಕಂಠದ ಕ್ಯಾನ್ಸರ್‌,…

Read More

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರನ್ನು ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಅಭಿನಂದಿಸಲಾಯಿತು. ವಿರಾಜಪೇಟೆಯ ನಿವಾಸದಲ್ಲಿ ಭೇಟಿಯಾದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಮತ್ತು ಪದಾಧಿಕಾರಿಗಳು ಕರಾವಳಿಯ ಕಲೆ ಯಕ್ಷಗಾನ ಕಿರೀಟದ ಪ್ರತಿರೂಪವನ್ನು ನೀಡಿ ಶುಭ ಹಾರೈಸಿದರು. ಸಂಘದ ಪ್ರಮುಖ ಬೇಡಿಕೆಯುಳ್ಳ ಮನವಿ ಪತ್ರವನ್ನು ಶಾಸಕರಿಗೆ ನೀಡಲಾಯಿತು. ಸಮುದಾಯದ ಬೆಳವಣಿಗೆ ಜತೆಗೆ ಎಲ್ಲಾ ವರ್ಗದವರನ್ನು ಜತೆ ಸೇರಿಸಿಕೊಂಡು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುವಂತೆ ಪೊನ್ನಣ್ಣ ಸಲಹೆ ನೀಡಿದರು. ಜಿಲ್ಲಾ ಸಹಕಾರ್ಯದರ್ಶಿ ಮನೋಜ್ ಶೆಟ್ಟಿ, ನಿರ್ದೇಶಕರಾದ ಬಾಲಕೃಷ್ಣ (ಅಪ್ಪು) ರೈ, ಸತೀಶ್ ರೈ ಫಾರೆಸ್ಟ್ ವ್ಯಾಲಿ, ಪ್ರಭು ರೈ, ವಿರಾಜಪೇಟೆ ತಾಲೂಕು ಅಧ್ಯಕ್ಷ ಲೀಲಾಧರ ರೈ ನೀಲುಮಾಡು, ಉಪಾಧ್ಯಕ್ಷ ಪ್ರಕಾಶ್ ರೈ, ಕಾರ್ಯದರ್ಶಿ ಸಂಪತ್ ಕುಮಾರ್ ಶೆಟ್ಟಿ, ಜಂಟಿ ಕಾರ್ಯದರ್ಶಿ ನೀತ ರೈ, ಸದಸ್ಯರಾದ ಜಗನ್ನಾಥ ರೈ ಈ ಸಂದರ್ಭ ಇದ್ದರು.

Read More

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವವು ಏಪ್ರಿಲ್ 14ರಿಂದ 21ರ ವರೆಗೆ ನಡೆಯಲಿದೆ. ಏಪ್ರಿಲ್ 13 ರಂದು ರಾತ್ರಿ ದೊಡ್ಡ ರಂಗಪೂಜೆ, ಅಂಕುರಾರೋಪಣ ಎ.14ರಂದು ಹಗಲು ಧ್ವಜಾರೋಹಣ ರಾತ್ರಿ ಉತ್ಸವ ಬಲಿ, ಎ.15ರಂದು ಪ್ರಾತಃ ಯುಗಾದಿ ದೀಪದ ಬಲಿ, ರಾತ್ರಿ ಉತ್ಸವ ಬಲಿ, ಪಂಚಾಂಗ ಪಠಣ, ಎ.16ರ ರಾತ್ರಿ ಉತ್ಸವ ಬಲಿ, ಮೂಡುಸವಾರಿ, ಎ. 17ರಂದು ಪ್ರಾತಃ ದೀಪದ ಬಲಿ, ರಾತ್ರಿ ಉತ್ಸವ ಬಲಿ, ಎ.18ರಂದು ಹಗಲು ಭ್ರಾಮರೀವನದಲ್ಲಿ ಪ್ರತಿಷ್ಠಾ ವರ್ಧಂತಿ, ರಾತ್ರಿ ಬೆಳ್ಳಿ ರಥೋತ್ಸವ ಉತ್ಸವ ಬಲಿ, ಎ. 19 ರಂದು ಹಗಲು ಬ್ರಹ್ಮಸನ್ನಿದಿಯಲ್ಲಿ ಪರ್ವ ರಾತ್ರಿ ಉತ್ಸವ ಬಲಿ, ಪಡುಸವಾರಿ, ಎ. 20ರಂದು ಹಗಲು ಬ್ರಹ್ಮರಥೋತ್ಸವ ರಾತ್ರಿ ಉತ್ಸವ ಬಲಿ, ಶ್ರೀ ಭೂತಬಲಿ, ಶಯನ, ಎ. 21ರಂದು ಪ್ರಾತಃ ಕವಾಟೋದ್ಘಾಟನೆ ರಾತ್ರಿ ಅವಭೃಥ (ಆರಾಟ) ನಡೆಯಲಿದೆ.

Read More