Author: admin

ಮೊನ್ನೆ ಉಡುಪಿಯ ಕಾರ್ ಶೋರೂಮ್ ಗೆ ಹೋಗಿದ್ದೆ, ಮುಂದಿನ ವರ್ಷ ಒಂದೊಳ್ಳೆ ಕಾರ್ ತಗೋಳ್ಳೋ ಪ್ಲಾನ್ ಹಾಕುತಿದ್ದೆ. ಟೆಸ್ಟ್ ಡ್ರೈವ್ ಮಾಡಿ ರೇಟ್ ಕೇಳಿ, ಲೋನ್ ಬಗ್ಗೆ ಮಾತಾಡಿದ್ದೆ. ಕೊನೆಗೆ ಅಡ್ರೆಸ್, ಫೋನ್ ನಂಬರ್ ಕೇಳಿದ್ದರು. ತಕ್ಷಣ ಆ ಅಜ್ಜಿ ನೆನಪಾಗಿದ್ದರು. ಉಡುಪಿಯ ಇಂದಿರಾನಗರದ ಆ ಒಂಟಿ ಅಜ್ಜಿ ಕೆಳೆದ 25 ವರ್ಷ ಗಳಿಂದ ಬಿಟ್ಟು ಹೋಗಿದ್ದ ಮಗನಿಗಾಗಿ ಶಬರಿಯಂತೆ ಕಾಯುತಿದ್ದರು. ಅವರಲ್ಲಿ ಚಿಕ್ಕ ಮೊಬೈಲ್ ಒಂದಿತ್ತು. ಅಜ್ಜಿ ಆವತ್ತು ಬೇಸರದಿಂದ ಹೇಳಿದ್ದು ನೆನಪು ಒಂದೇ ಒಂದು ಕಾಲ್ ಬರುವುದಿಲ್ಲ ಮಗ, ನಾನಂತು ಪ್ರತಿದಿನ ಮಗ, ಸಂಬಂಧಿಗಳ ಕಾಲ್ ಬರಬಹುದೆಂದು ಕಾಯುತ್ತಿರುತ್ತೇನೆ ಎನ್ನುವಾಗ ಅವರ ಒಂಟಿತನದ ನೋವುಗಳುಳ್ಳ ಕಣ್ಣುಗಳು ಮಂಜಾಗಿ ಹನಿದಿದ್ದವು. ಅವರಿಗೆ ಕಿವಿ ಸ್ವಲ್ಪ ಕೇಳುತ್ತಿರಲಿಲ್ಲ. ಅವರ ಫೋನ್ ನಂಬರ್ ಅಲ್ಲಿ ಹಾಕಿ ಬಂದೆ. ಒಂದೆರಡು ದಿನ ಬಿಟ್ಟು ಅಜ್ಜಿ ಮನೆಗೆ ಹೊದೆ. ಈ ಬಾರಿ ಅಜ್ಜಿ ಬಾರಿ ಖುಷಿಯಲ್ಲಿದ್ದರು.. “ಏನಜ್ಜಿ ಬಾರಿ ಖುಷಿಯಲ್ಲಿದ್ದೀರಿ?” … ಎಂದೆ. “ಏನಿಲ್ಲ ಮಗ…

Read More

ವಿದ್ಯಾಗಿರಿ: ‘ಏಕಾಗ್ರತೆಯಿಂದ ಆಟದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಭಾರತೀಯ ಖೋ- ಖೋ ಒಕ್ಕೂಟದ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ ಹೇಳಿದರು. ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಖೋ- ಖೋ ಸಂಸ್ಥೆ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ಖೋ -ಖೋ ಕ್ರೀಡಾಧಿಕಾರಿಗಳ ಕಾರ್ಯಾಗಾರದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಖೋ -ಖೋ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚುತ್ತಿದೆ. ಈ ಹಿಂದೆ ಇದ್ದ ಆಟಕ್ಕೂ ಪ್ರಸ್ತುತ ಇರುವ ಆಟಕ್ಕೂ ಬಹಳ ವ್ಯತ್ಯಾಸ ಇದೆ. ಖೋ ಖೋ ಅಮೂಲಾಗ್ರವಾಗಿ ಬದಲಾಗುತ್ತಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಗಟ್ಟಿಗೊಳಿಸುತ್ತಾ ಮುಂದುವರಿಯಬೇಕು ಎಂದರು. ಕರ್ನಾಟಕ ರಾಜ್ಯ ಖೋ -ಖೋ ಸಂಸ್ಥೆಯ ಕಾರ್ಯದರ್ಶಿ ಆರ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಆಟಗಾರನಿಗೆ ಆತ್ಮವಿಶ್ವಾಸ ಇರಬೇಕು. ಆದರೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಕಷ್ಟಪಟ್ಟು ಮಾಡಿದ ಕೆಲಸದಲ್ಲಿ ತೃಪ್ತಿ ಇರುತ್ತದೆ. ಸೋಲು – ಗೆಲುವು ಸಹಜ. ಯಾವುದಕ್ಕೂ…

Read More

ಮುಂಬಯಿ (ಆರ್‍ಬಿಐ), ಎ.06: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದ ಕಾಲಾವಧಿಯಲ್ಲಿ ರಾಷ್ಟ್ರದ ಚಿತ್ರಣಬದಲಾಗಿದೆ. ವಿಶ್ವದ ನಾಯಕರು ಇಂದು ಮೋದಿ ಅವರ ವಿಶ್ವಾಸ ಪಡೆಯದೆ ವಿಶ್ವದ ಸಮಸ್ಯೆಗಳನ್ನು ಬಗೆಹರಿಸಲಾಗದ ಮಟ್ಟಕ್ಕೆ ನಮ್ಮ ರಾಷ್ಟ್ರ ಬೆಳೆದಿದೆ. ಸಂಘ ಪರಿವಾರದ ಹಾಗೂ ಸ್ವಾಮಿ ವಿವೇಕಾನಂದರ ವಿಚಾರದಿಂದ ಮುನ್ನಡೆಯುತ್ತಿರುವ ಭಾರತ ಜಗತ್ತಿನಲ್ಲೇ ಬಲಶಾಲಿಯಾಗಿದ್ದು ಇದು ದೇಶದಲ್ಲಿನ ಕ್ರಾಂತಿಯಾಗಿದೆ. ಆದ್ದರಿಂದ ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿದ ನಾವೆಲ್ಲರೂ ಭಾಗ್ಯವಂತರು. ಉಪನ್ಯಾಸಕರು ನವ ಭಾರತದ ಸೃಷ್ಟಿಕರ್ತರು ಆದ್ದರಿಂದ ಪ್ರಾಧ್ಯಾಪಕರು ಯುವಪೀಳಿಗೆಯಲ್ಲಿ ಭವಿಷ್ಯರೂಪಿಸುವ ಕ್ರಾಂತಿ ಮಾಡುವ ಅಗತ್ಯವಿದೆ. ಇಂತಹ ದೂರದೃಷ್ಠಿತ್ವವನ್ನೇ ರಾಧಾಕೃಷ್ಣ ಭಕ್ತ ಹೊಂದಿದ್ದು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವ ಅವಶ್ಯಕತೆವಿದೆ ಎಂದು ‘ಸಂಸತ್ ರತ್ನ ಪ್ರಶಸ್ತಿ’ ಪುರಸ್ಕೃತ ಮುಂಬಯಿ ಉತ್ತರ ಲೋಕಸಭಾ (ಬೋರಿವಿಲಿ) ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ತಿಳಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ವಿವೇಕಾನಂದ ಇಂಜಿನೀಯರಿಂಗ್ ಕಾಲೇಜು ಪುತ್ತೂರು ಇದರ ಸ್ಥಾಪನೆಯ ಪ್ರಧಾನ ರೂವಾರಿ, ಸಂಚಾಲಕ, ಸಾಮಾಜಿಕ, ಧಾರ್ಮಿಕ ಸೇವಾಕರ್ತರಾಗಿದ್ದು ಕಳೆದ ಗುರುವಾರ ನಿಧನರಾದ…

Read More

ಇನ್ನಂಜೆಯ ಎಸ್. ವಿ. ಎಚ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೇಘನಾ ಆರ್. ಶೆಟ್ಟಿಗೆ 600 ಅಂಕದಲ್ಲಿ 549 ಅಂಕಗಳನ್ನು ಪಡೆದು ಶೇ. 91.5 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಈಕೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಭಿವಂಡಿ ಹೋಟೆಲ್ ಉದ್ಯಮಿ ಕುರ್ಕಾಲು ಕುಲೇದು ರಮೇಶ್ ಶೆಟ್ಟಿ ಮತ್ತು ನಿಟ್ಟೆ ಪರಪ್ಪಾಡಿ ವಿಮಲಾ ಶೆಟ್ಟಿ ದಂಪತಿಯ ಪುತ್ರಿ.

Read More

“ರಸಋಷಿ ರಘುರಾಮಂ” “ಯಕ್ಷಕವಿ ವಂದನಂ” ಕಾರ್ಯಕ್ರಮವು ಶ್ವೇತಛತ್ರ ಯಕ್ಷಮಿತ್ರ ಕೋಣಿ, ಕುಂದಾಪುರ ಇವರ ಸಹಯೋಗದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಏ. 29ರಂದು ಸಂಜೆ 4:30ಕ್ಕೆ ಕಂದಾವರ ರಘುರಾಮ ಶೆಟ್ಟಿಯವರಿಗೆ ಅಭಿನಂದಿಸುವ ಕಾರ್ಯಕ್ರಮವಾಗಿ ಜರುಗಲಿದೆ. ಪೆರ್ಡೂರು ಮೇಳದ ಯಜಮಾನರಾದ ವೈ. ಕರುಣಾಕರ ಶೆಟ್ಟಿ, ಸಂಕಾಪುರ ಶಿವರಾಮ ಶೆಟ್ಟಿ ಅರ್ಥದಾರಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಕಲಾವಿದ ಎಂ.ಕೆ. ರಮೇಶ್ ಆಚಾರ್ಯ, ಎಂ.ಐ.ಟಿ ಉಪನ್ಯಾಸಕರಾದ ಎಸ್.ವಿ. ಉದಯ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀ ದುರ್ಗಾ ಕನ್ಸ್ಟ್ರಕ್ಷನ್ ದಾಂಡೇಲಿ, ಬೆಳ್ವೆ ಶ್ರೀನಿವಾಸ ಆಚಾರ್ಯ, ಪ್ರಸಂಗಕರ್ತ ಪ್ರಸಾದ್‍ಕುಮಾರ್ ಮೊಗೆಬೆಟ್ಟು ಗೌರವ ಉಪಸ್ಥಿತಿಯಲ್ಲಿದ್ದಾರೆ. ಸತೀಶ್ ಶೆಟ್ಟಿ ಮೂಡುಬಗೆ ನಿರೂಪಣೆಯಲ್ಲಿರುತ್ತಾರೆ. ಬಳಿಕ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ ಕಾರ್ಯಕ್ರಮ ರಂಗದಲ್ಲಿ ಪ್ರಸ್ತುತಿಗೊಳ್ಳಲಿದೆ ಎಂದು ಶ್ವೇತಛತ್ರ ಯಕ್ಷಮಿತ್ರದ ಅಧ್ಯಕ್ಷ ಸುರೇಶ್ ಶೆಟ್ಟಿ ಶಂಕರನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಹಿಳೆ ಮೂಕವಾದರೆ ಲೋಕವೂ ಲೂಟಿ ಮಾಡಿತು : ನಳಿನಾ ಪ್ರಸಾದ್ ಮುಂಬಯಿ (ಆರ್‍ಬಿಐ), ಮಾ.05: ಪರಿಪೂರ್ಣ ಅರ್ಪಣೆಯ ಸಂಸ್ಕಾರಯುತ ಜೀವನ ಮಹಿಳೆಯದ್ದಾಗಿದೆ. ಸದಾ ಸಮರ್ಪಣಾ ಭಾವನೆಯ ಸ್ತ್ರೀಯರು ಮಾನವತೆಯ ಪರಿಪಾಠವಾಗಿದ್ದಾರೆ. ಇಂತಹ ನಾರಿಶಕ್ತಿಯ ಆತ್ಮಸ್ಥೆರ್ಯ ಸಾಂಪ್ರದಾಯಿಕವಾಗಬೇಕು. ಮಿತ್ಯವನ್ನು ಭಗ್ನಗೊಳಿಸಲು ಮತ್ತು ಸತ್ಯವನ್ನು ನಗ್ನಗೊಳಿಸಲು ಸ್ತ್ರೀಯರು ತಮ್ಮ ಆತ್ಮಧ್ಯೇಯ ಬಲವಾಗಿಸಬೇಕು. ಮಹಿಳೆಯರು ಮೂಕವಾದರೆ ಲೋಕವೂ ಲೂಟಿ ಮಾಡಿತು ಜೋಕೆ ಎಂದು ಬೃಹನ್ಮುಂಬಯಿಯಲ್ಲಿನ ಪ್ರತಿಭಾನ್ವಿತ ಕಂಠದಾನ ಕಲಾವಿದೆ ನಳಿನಾ ಪ್ರಸಾದ್ ತಿಳಿಸಿದರು. ಮಮೂರವರ್ಮ ಸಾಂಸ್ಕøತಿಕ ಪ್ರತಿಷ್ಠಾನ(ರಿ.) ಮುಂಬಯಿ ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಸಂಜೆ ಫಾಟ್ಕೋಪರ್ ಪೂರ್ವದ ಪಂತ್‍ನಗರ್‍ನಲ್ಲಿನ ಕನ್ನಡ ವೆಲ್ಫೇರ್ ಸೊಸೈಟಿ ಸಭಾಗೃಹದಲ್ಲಿ `ತವರು ಮನೆಯ ಬಾಂಧವ್ಯ’ ಮಹಿಳಾ ಸ್ನೇಹ ಸಮ್ಮಿಲನ ಆಯೋಜಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಳಿನಾ ಪ್ರಸಾದ್ ಮಾತನಾಡಿದರು. ನಳಿನಾ ಪ್ರಸಾದ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಸ್ತ್ರೀಶಕ್ತಿ ಫೌಂಡೇಶನ್ ವಿೂರಾ ಭಯಂದರ್ ಇದರ ಕಾರ್ಯಾಧ್ಯಕ್ಷೆ ಶಾಲಿನಿ ಶೆಟ್ಟಿ ಮತ್ತು ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗಧ್ಯಕ್ಷೆ…

Read More

ಬೆಳಗಾವಿಯಲ್ಲಿ ಆಸರೆಯನ್ನರಸಿ ಹೊರಟವರಿಗೆ ಸಂತೈಸುವ ಸಣ್ಣ ಪ್ರಯತ್ನವಾಗಿ ದಾನಿ – ದೀನರ ನಡುವಿನ ಸೇತುವೆಯಾಗಿ ಯುವ ಬಂಟರ ಸಂಘವೊಂದು ಸ್ಥಾಪನೆಯಾಗಲು ಹೊರಟಿವೆ. ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ಪಾಲುದಾರ ರಂಜಿತ್ ಶೆಟ್ಟಿ ಕಾರ್ಕಳ ಇವರು ಉದ್ಯಮ ಕ್ಷೇತ್ರದ ಗುರು, ಸೋದರ ಸಂಬಂಧಿ, ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ ರಾಜೇಂದ್ರ ವಿ ಶೆಟ್ಟಿಯವರ ಆಶೀರ್ವಾದ ಪ್ರೋತ್ಸಾಹದೊಂದಿಗೆ ಈ ಮಹಾನ್ ಕಾರ್ಯಕ್ಕೆ ಕೈ ಹಾಕಿದ್ದಾರೆ. ಬೆಳಗಾವಿಯ ಬಂಟ ಯುವಕರೆಲ್ಲರೂ ರಂಜಿತ್ ಶೆಟ್ಟಿ ಕಾರ್ಕಳ ಇವರನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು. ಸಮಸ್ತ ಬಂಟ ಸಮಾಜದ ಪ್ರೋತ್ಸಾಹ, ಆಶೀರ್ವಾದ ಬೆಳಗಾವಿಯ ಯುವ ಬಂಟ ತಂಡಕ್ಕಿರಲಿ.ರಂಜಿತ್ ಶೆಟ್ಟಿ ಕಾರ್ಕಳ – 7411745666

Read More

ನವೆಂಬರ್ 1 ಎಲ್ಲೆಡೆ ಕನ್ನಡಗೀತೆಗಳ ಮಾರ್ದನಿ, ಹಳದಿ ಕೆಂಪು ಬಣ್ಣಗಳಿಂದ ಅಲಂಕೃತಗೊಂಡ ಜಿ ಎಮ್ ಛತ್ರ ಛಾಯದಲ್ಲಿ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಮತ್ತು ಜಿ ಎಮ್ ಗ್ಲೋಬಲ್ ಸ್ಕೂಲ್ ಜಂಟಿಯಾಗಿ ಸುವರ್ಣ ಕರ್ನಾಟಕದ 68ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿತು. ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಕನ್ನಡ ಧ್ವಜವನ್ನು ಅರಳಿಸಿ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭವನ್ನು ಹಾರೈಸಿ ಮಾತನಾಡಿ, ನಮ್ಮ ಮಾಧ್ಯಮ ಯಾವುದಾದರೇನು ನಮ್ಮೆಲ್ಲರ ಮಾತೃಭಾಷೆ ಕನ್ನಡವಾಗಿದೆ. ಸ್ಪಷ್ಟ ಓದು, ಶುದ್ಧ ಬರಹದ ಮೂಲಕ ಕನ್ನಡ ಭಾಷೆಯನ್ನು ಅಭಿವೃದ್ಧಿ ಪಡಿಸುವ. ಕನ್ನಡ ನಮ್ಮೆಲ್ಲರ ಉಸಿರಾಗಲಿ, ಕನ್ನಡದ ಕಂಪು ಎಲ್ಲ ಕಡೆ ಪಸರಿಸಲಿ ಎಂದರು. ಕಾರ್ಯಕ್ರಮದಲ್ಲಿ ಜಿ ಎಮ್ ಗ್ಲೋಬಲ್ ಸ್ಕೂಲ್‍ನ ಉಪ ಪ್ರಾಂಶುಪಾಲೆ ದೀಪ್ತಿ ನವೀನ್ ಶೆಟ್ಟಿ, ಜಿ ಎಮ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿರಿದ್ದರು. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಸಮೂಹ ಗಾಯನ, ನೃತ್ಯಗಳು…

Read More

ಬಂಟ್ಸ್ ಅಸೋಸಿಯೇಷನ್ ಪುಣೆ ವತಿಯಿಂದ ನವರಾತ್ರಿಯ ಪ್ರಯುಕ್ತ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಅಕ್ಟೋಬರ್ 22 ರಂದು ರವಿವಾರ ಸಂಜೆ 5 ಗಂಟೆಗೆ ಪುಣೆಯ ಕ್ಯಾಂಪ್ ನಲ್ಲಿಯ ಪುಣೆ ಕ್ಲಬ್ ಸಿನೆಮಾ ಹಾಲ್ ನಲ್ಲಿ ವಿವಿಧ ಧಾರ್ಮಿಕ, ಮನೋರಂಜನಾ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ದಸರಾ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಹಾಗೂ ಗೌರವ ಅತಿಥಿಯಾಗಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವೀಜೆತೆ, ಕಾರ್ಕಳದ ಹೆಸರಾಂತ ನೃತ್ಯ ಶಿಕ್ಷಕಿ, ಕಲಾ ಸಂಕುಲ ರಾಜ್ಯ ಮಟ್ಟದ ಶಿಕ್ಷಕಿ ರತ್ನ ಪ್ರಶಸ್ತಿ -23 ವಿಜೇತೆ ವಂದನಾ ಜಿ. ರೈ ಆಗಮಿಸಲಿದ್ದಾರೆ. ದಸರಾ ನಿಮಿತ್ತ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀದೇವಿ ದುರ್ಗಾ ಪೂಜೆ,…

Read More

ಚಿಣ್ಣರ ಬಿಂಬ ಮುಂಬಯಿ ಇದರ ಮೀರಾರೋಡ್ ಶಿಬಿರದ ಮಕ್ಕಳ ಪ್ರತಿಭಾನ್ವೇಷಣೆ ಸ್ವರ್ಧೆ ಆ.13 ರಂದು ಮಧ್ಯಾಹ್ನ ಭಾಯಂದರ್ ಪೂರ್ವದ ನ್ಯೂ ಸೈಂಟ್ ಅಗ್ನೇಸ್ ಹೈಸ್ಕೂಲ್ ಸಭಾಗೃಹದಲ್ಲಿ ಚಿಣ್ಣರ ಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಶಿಬಿರದ ಮಕ್ಕಳ ಭಜನೆಯೊಂದಿಗೆ ಪ್ರತಿಭಾ ಸ್ವರ್ಧೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಭಾಷಣ, ಭಾವಗೀತೆ, ಜಾನಪದ ಗೀತೆ, ಏಕಪಾತ್ರಾಭಿನಯ, ಛದ್ಮವೇಷ ಹಾಗೂ ಪಾಲಕರಿಗಾಗಿ ದೇಶ ಭಕ್ತಿಗೀತೆ ಸ್ವರ್ಧೆ ನಡೆಯಿತು. ಶಿಬಿರ ಮುಖ್ಯಸ್ಥೆ ವೀಣಾಕ್ಷಿ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟರ ಸಂಘ ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್ ಎಂ.ಶೆಟ್ಟಿ ಸಿದ್ಧಕಟ್ಟೆ ಮಾತನಾಡಿ, ಚಿಣ್ಣರ ಬಿಂಬ ಸಂಸ್ಥೆ ಮಕ್ಕಳ ಭವಿಷ್ಯಕ್ಕೆ ಉತ್ತಮ ಆಡಿಪಾಯ ಹಾಕಿ ಕೊಡುತ್ತಿದೆ. ಪಾಲಕರು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಈ ಸಂಸ್ಥೆಗೆ ಚಿಣ್ಣರಿಗೆ ನನ್ನಿಂದಾಗುವ ಅಳಿಲ ಸೇವೆ ಸದಾ ಇದೆ ಎಂದರು. ಕಾರ್ಯಕ್ರಮವನ್ನು ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ನ ಕಾರ್ಯಧ್ಯಕ್ಷ ಡಾ. ಅರುಣೋದಯ ರೈ…

Read More