ನಮ್ಮ ಆರ್ಥಿಕತೆಯನ್ನು ಮುಂದುವರಿದ ರಾಷ್ಟ್ರಗಳು ಅಭ್ಯಸಿಸುವಂತೆ ಬೆಳೆದ ಭಾರತ ಒಂದು ಕಾಲದಲ್ಲಿ ಸಾಲ ಮಾಡಿ, ಚಿನ್ನದ ಗಣಿಯನ್ನೇ ಅಡವಿಟ್ಟು ಆಹಾರ ಮೂಲಸೌಕರ್ಯ ಒದಗಿಸಬೇಕಾದ ಸ್ಥಿತಿಯಿತ್ತು. ಮುಂದಿನ ಪ್ರಜೆಗಳಾದ ನೀವು ಅದೃಷ್ಟವಂತರು ಎಂದು ಸಿ.ಎ. ತುಕಾರಾಮ್ ರೈ ಬೆಂಗಳೂರು ನುಡಿದರು. ಅವರು ಕರ್ನಾಟಕ ಪ್ರೌಢಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆ ಇವುಗಳ ಜಂಟಿ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ವಕೀಲರಾದ ಜತ್ತನಕೋಡಿ ಶ್ರೀ ಶಂಕರ್ ಭಟ್ ಮಾತನಾಡಿ, ಬಾಲ್ಯದ 14 ವರ್ಷದ ಬದುಕು, ಜೀವನ ಏನೆಂದು ತಿಳಿಸುತ್ತದೆ. ನಿರಂತರವಾದ ಅಭ್ಯಾಸ ಮತ್ತು ಸ್ಥಿರತೆ ಇದ್ದಾಗ ಜೀವನ ಸುಗಮ ಎಂದು ಶುಭ ಹಾರೈಸಿದರು. ಧ್ವಜಾರೋಹಣಗೈದ ಸಿ.ಹಿ. ಪ್ರಾ. ಶಾಲೆ ಅನಂತಾಡಿಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಮತ್ತು ಸಹ ಶಿಕ್ಷಕಿ ಸುನೀತಾ ಬಹುಮಾನ ವಿತರಣೆ ಮಾಡಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸ. ಪ. ಪೂ. ಕಾಲೇಜು ನಾರ್ಶಾ ಮೈದಾನದ ಶಿಕ್ಷಕರಾದ ಶ್ರೀ. ಗೋಪಾಲಕೃಷ್ಣ ನೇರಳಕಟ್ಟೆ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕೂಸಪ್ಪ ಪೂಜಾರಿ (ಹಳೆ ವಿದ್ಯಾರ್ಥಿ), ಸದಸ್ಯ ಕುಶಲ ಎಂ.ಪೆರಾಜೆ (ಹಳೆ ವಿದ್ಯಾರ್ಥಿ), ಮಾಣಿ ಗ್ರಾ. ಪಂ. ಅಧ್ಯಕ್ಷ – ಶಾಲಾ ಸಂಚಾಲಕರಾದ ಹಾಜಿ ಇಬ್ರಾಹಿಂ, ಬಾಲಕೃಷ್ಣ ಆಳ್ವ ಕೊಡಾಜೆ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಬಡ್ಡಿ, ಆಟೋಟ, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮತ್ತು ಕಳೆದ ಎಸ್. ಎಸ್. ಎಲ್. ಸಿ. ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿದ್ಯಾಭಿವರ್ಧಕ ಸಂಘ (ರಿ) ಮಾಣಿ ಇದರ ಅಧ್ಯಕ್ಷರಾದ ರೊ. ಕಿರಣ್ ಹೆಗ್ಡೆ ಅನಂತಾಡಿ ಅಧ್ಯಕ್ಷತೆ ವಹಿಸಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕೊಡಾಜೆ, ಸನತ್ ಕುಮಾರ್ ಜೈನ್, ಗಂಗಾಧರ ಆಳ್ವ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಮೆಲ್ವಿನ್ ಕಿಶೋರ್ ಮಾರ್ಟಿಸ್, ಶಾಲಾ ನಾಯಕ ವಿಜೇತ್, ಬಿ.ಆತುಫ್ ಇಬ್ರಾಹಿಂ ಹಾಗೂ ಇತರು ಉಪಸಿತರಿದ್ದರು.
ಗಣ್ಯರನ್ನು ಸ್ವಾಗತಿಸಿದ ಮುಖ್ಯ ಶಿಕ್ಷಕ ಎಸ್.ಚೆನ್ನಪ್ಪ ಗೌಡ ಹಾಗೂ ಸಾರಿಕಾ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕಿ ಸವಿತಾ ಮತ್ತು ಜಯರಾಮ ಕಾಂಚನ ವಂದಿಸಿ, ಶಿಕ್ಷಕಿಯರಾದ ಜೀವಿತ ಅಂಕಿತ, ಶ್ಯಾಮಲಾ ಕೆ, ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆದವು.