Author: admin
‘ಕಾಂತಾರ’ ನಟ ರಿಷಬ್ ಶೆಟ್ಟಿಗೆ ಕುಂದಾಪುರ ವಕೀಲರ ಸಂಘದ ವತಿಯಿಂದ ದಿನಾಂಕ 07-12-2022 ರಂದು ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ್ ಹೆಗ್ಡೆ ಸನ್ಮಾನಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕಾಂತಾರ ನಟ ರಿಷಬ್ ಶೆಟ್ಟಿ “ಕಾಲೇಜು ದಿನಗಳಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು, ನ್ಯಾಯಾಲಯದ ಪರಿಸರದಲ್ಲಿ ಓಡಾಡಿದ್ದ ನೆನಪುಗಳನ್ನು ಹೊಂದಿರುವ ನನಗೆ ಇದೇ ನ್ಯಾಯಾಲಯದ ಸಂಕೀರ್ಣದಲ್ಲಿ ಗೌರವಾನ್ವಿತ ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಕುಂದಾಪುರ ವಕೀಲರ ಸಂಘದವರು ನೀಡಿದ ಸನ್ಮಾನ ಪಡೆದುಕೊಳ್ಳಲು ತುಂಬಾ ಹೆಮ್ಮೆಯಾಗುತ್ತಿದೆ” ಎಂದರು. ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್, ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ರಾಜು, ಪ್ರಧಾನ ಸಿವಿಲ್ ನ್ಯಾಯಾಧೀಶ ಧನೇಶ್ ಮುಗಳಿ, ಹೆಚ್ಚುವರಿ ಸಿವಿಲ್ & ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ರೋಹಿಣಿ ಡಿ, ಎರಡನೇ ಹೆಚ್ಚುವರಿ ಸಿವಿಲ್ & ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ವಿದ್ಯಾ ಎ.ಎಸ್ ಉಪಸ್ಥಿತರಿದ್ದರು. ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬಾರ್ ಅಸೋಸೀಯೇಶನ್ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ಸ್ವಾಗತಿಸಿದರು, ರೇಶ್ಮಾ…
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಪಟ್ಲ ಫೌಂಡೇಶನ್ ಟ್ರಸ್ಟ್ ಉತ್ತಮ ಸಮಾಜ ಸೇವೆ ಮಾಡುತ್ತಿದ್ದು ಸರ್ವ ರೀತಿಯ ಬೆಂಬಲವನ್ನು ಎಲ್ಲರೂ ನೀಡಬೇಕು. ಯಾರೂ ಸಮಾಜಕ್ಕಾಗಿ ವಿಶ್ವಾಸ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೋ ನಾನು ಅವರ ಜತೆಗಿರುತ್ತೇನೆ ಎಂದು ಉದ್ಯಮಿ ಕೂಳೂರು ಸದಾಶಿವ ಶೆಟ್ಟಿ ಕನ್ಯಾನ ಹೇಳಿದರು. ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸಹಯೋಗದಲ್ಲಿ ಡಿ. 4ರಂದು ಮುಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದ ನಿವೇಶನದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನಡೆಯುವ ಸಮಾಜ ಕಲ್ಯಾಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯ ಮಧ್ಯಮ ವರ್ಗದ ಬಡ ಕುಟುಂಬದಲ್ಲಿ ಜನಿಸಿ ಶಿಕ್ಷಣ ಪಡೆಯಲು ಕಷ್ಟವಾದಾಗ ಬಂಟರ ಸಂಘವು ಆರ್ಥಿಕ ಸಹಾಯ ಮಾಡಿ ಬೆಂಬಲಿಸಿ ಬೆಳೆಸಿದೆ. ಇದೀಗ ನಾನು ಆರ್ಥಿಕವಾಗಿ ಬಲವಾದಾಗ ನಮ್ಮ ಬಂಟ ಸಮಾಜ ಹಾಗೂ ಇತರ ಸಮಾಜಕ್ಕೆ ತನ್ನಿಂದಾಗುವ ಸಹಾಯ ಮಾಡುತ್ತಿದ್ದೇನೆ. ಐಕಳ ಹರೀಶ್…
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲ. ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಇವರ ಅಧ್ಯಕ್ಷತೆಯಲ್ಲಿ 2 ನೇ ವಲಯದ ಸಮಾಜಸೇವಾ ಕಾರ್ಯಕ್ರಮ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನದಲ್ಲಿ ದಿನಾಂಕ 26-11-2022 ನೇ ಶನಿವಾರ ನಡೆಯಿತು. ಝೋನ್ ಚಯರ್ ಪರ್ಸನ್ ಲ. ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ ಕೇವಲ “ಫೋಟೋ” ಕ್ಕೋಸ್ಕರ ಸೇವಾ ಕಾರ್ಯಕ್ರಮಗಳನ್ನು ಮಾಡದೇ, “ನೇತ್ರದಾನ, ರಕ್ತ ದಾನ, ಪರಿಸರ ಸಂರಕ್ಷಣೆ, ಲಯನ್ಸ್ ಇಮೇಜ್ ಬಿಲ್ಡಿಂಗ್ ಮುಂತಾದ ಕಾರ್ಯಕ್ರಮಗಳನ್ನು ಮನಃಪೂರ್ವಕ ಬಾಗಿ ಮಾಡುವುದರ ಜೊತೆಗೆ ಆರ್ಥಿಕ ಸಂಕಸ್ಟದಲ್ಲಿರುವವರಿಗೆ, ಬಡ ವಿದ್ಯಾರ್ಥಿಗಳಿಗೆ ಸಹಾಯವನ್ನು ಕ್ಲಬ್ ಗಳು ಮಾಡಬೇಕು” ಎಂದು ಹೇಳಿದರು. ಸೇವಾ ಕಾರ್ಯಕ್ರಮದ ಅಂಗವಾಗಿ, ಇತ್ತೀಚೆಗೆ ಸಣ್ಣ ಪ್ರಾಯದಲ್ಲಿ ಅಕಾಲಿಕ ಮರಣ ಹೊಂದಿದ ಕ್ಲಬ್ ವ್ಯಾಪ್ತಿಯ ಓರ್ವರ ಮಗಳ ವಿದ್ಯಾಭ್ಯಾಸಕ್ಕೆ ಕ್ಲಬ್ ಸದಸ್ಯರಿಂದ ಸಂಗ್ರಹಿಸಿದ ಮೊತ್ತವನ್ನು ನೀಡಲಾಯಿತು. ಹಾಗೂ ಈ ಸಂದರ್ಭ ಇದೇ ಕುಟುಂಬಕ್ಕೆ ಪ್ರತೀ ತಿಂಗಳು ಆರ್ಥಿಕ ಸಹಾಯ ಮಾಡುತ್ತಿರುವ ಕ್ಲಬ್ ನ ಸದಸ್ಯರಾದ ಲ. ವಸಂತ್ ಶೆಟ್ಟಿ…
ಎಂ.ಆರ್.ಜಿ. ಗ್ರೂಪಿನ ಸ್ಥಾಪಕಾಧ್ಯಕ್ಷರು ಶ್ರೀ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ದಕ್ಷಿಣ ಭಾರತದ ಆತಿಥ್ಯ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಎಸ್.ಐ.ಎಚ್.ಆರ್.ಎ. ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಕ್ಷಿಣ ಭಾರತದ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕರ್ನಾಟಕದ ಪ್ರವಾಸೋದ್ಯಮ ಸಚಿವರಾದ ಶ್ರೀ ಆನಂದ ಸಿಂಗ್, ತಮಿಳುನಾಡಿನ ಪ್ರವಾಸೋದ್ಯಮ ಸಚಿವ ಡಾ. ಮತಿವೆಂತನ್, ಪುದುಚೇರಿ ಪ್ರವಾಸೋದ್ಯಮ ಸಚಿವ ಕೆ.ಲಕ್ಷ್ಮೀನಾರಾಯಣನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸುರತ್ಕಲ್ ಬಂಟರ ಸಂಘ, ರೋಟರಿ ಕ್ಲಬ್ ಬೈಕಂಪಾಡಿ, ಶ್ರೀನಿವಾಸ ಆಸ್ಪತ್ರೆ ಮುಕ್ಕ ಐ ನೀಡ್ಸ್ ಆಪ್ಟಿಕಲ್ಸ್ ಸುರತ್ಕಲ್ ಇದರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ನೇತ್ರ ತಪಾಸಣೆ ಇಎನ್ಟಿ ಟೆಸ್ಟ್ ಮತ್ತು ತಪಾಸಣೆ ಶಿಬಿರ ಸುರತ್ಕಲ್ ಬಂಟರ ಸಂಘದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಎಂಜೆ, ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮ ಶ್ಲಾಘಿಸಿ, ಆರೋಗ್ಯ, ಜಲ ಸಿರಿ, ಮತ್ತು ವಿದ್ಯಾನಿಧಿ ಯೋಜನೆ ಇವು ರೋಟರಿಯ ಈ ವರ್ಷದ ಧ್ಯೇಯವಾಕ್ಯಗಳಾಗಿದ್ದು ಈ ಕ್ಷೇತ್ರಗಳಲ್ಲಿ ಕನಿಷ್ಟ ಒಂದು ಲಕ್ಷ ಮಂದಿಗೆ ಸೇವೆ ಸಲ್ಲಿಸುವ ಗುರಿಇದೆ ಎಂದು ಹೇಳಿದರು. ಮುಕ್ಕ ಶ್ರೀನಿವಾಸ ವಿವಿ ಪ್ರೊ. ಛಾನ್ಸಲರ್ ಡಾ ಎ ಶ್ರೀನಿವಾಸ ರಾವ್, ರೋಟರಿ ಸಹಾಯಕ ಗವರ್ನರ್ ಬಾಲಕೃಷ್ಣ ಶೆಟ್ಟಿ, ಸುರತ್ಕಲ್ ವಿಜಯ ಮೆಡಿಕಲ್ಸ್ ನ ದಯಾನಂದ ಶೆಟ್ಟಿ, ರೋಟರಿ ವಲಯಾಧಿಕಾರಿ ಜಯ ಕುಮಾರ್ , ಶ್ರೀನಿವಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಡೇವಿಡ್, ಐ ನೀಡ್ಸ್ ಆಪ್ಟಿಕಲ್ಸ್ ನ ಯೋಗೀಶ್ ನಾಯಕ್, ಸುರತ್ಕಲ್…
ಸಮಾಜಸೇವಕ, ನ್ಯಾಯವಾದಿ ಎಂ.ದಾಮೋದರ ಶೆಟ್ಟಿಯವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸ್ಥಾಯಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದು ಕಾಸರಗೋಡು ಜಿಲ್ಲೆಗೆ ತುಂಬಾ ಮಾನ್ಯತೆ ಕೊಟ್ಟಂತಹ ಸ್ಥಾನವಗಿದೆ. ವೃತ್ತಿಯಲ್ಲಿ ನ್ಯಾಯವಾದಿಯಾಗಿ ಪ್ರವೃತ್ತಿಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿರುವ ಶೆಟ್ಟರು ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿವಸಗಳಲ್ಲಿ ಯಕ್ಷಗಾನದ ಪ್ರೌಢ ಕಲಾವಿದರಾಗಿ ಗುರಿತಿಸಿಕೊಂಡಿದ್ದಾರೆ. ಉಪ್ಪಳ ದಿ. ಕೃಷ್ಣ ಮಾಸ್ಟರವರಿಂದ ಯಕ್ಷಗಾನದ ನಾಟ್ಯವನ್ನು, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಬೆಳಿಂಜ ವೆಂಕಪ್ಪ ರೈಯವರಿಂದ ಭಾಗವತಿಕೆಯನ್ನು ಹಾಗೂ ಪೆರುವಾಯಿ ನಾರಾಯಣ ಶೆಟ್ಟಿಯವರಿಂದ ಬಣ್ಣಗಾರಿಕೆಯನ್ನು ಕಲಿತರು. ಮುಮ್ಮೇಳ- ಹಿಮ್ಮೇಳ ಪ್ರಾವೀಣ್ಯತೆಯನ್ನು ಪಡೆದು ರಾವಣ, ಅತಿಕಾಯ, ಅರ್ಜುನ, ದೇವೇಂದ್ರ, ಶುಂಭ, ಕಂಸ, ದಶರಥ, ರಕ್ತಬೀಜ, ಇಂದ್ರಜಿತ್, ಕರ್ಣ ಹೀಗೆ ಹತ್ತು ಹಲಾವರು ವೇಷಗಳಿಗೆ ಜೀವ ತುಂಬಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಹಲವಾರು ಅಭಿಮಾನಿಗಳ ತಂಡವನ್ನೇ ರೂಪಿಸಿಕೊಂಡಿದ್ದಾರೆ. ಉತ್ತಮವಾದ ವ್ಯಾಕ್ಚತುರ್ಯ ವನ್ನು ಹೊಂದಿದ್ದ ಶೆಟ್ಟರು ತಾಳಮದ್ದಳೆಯ ಅರ್ಥದಾರಿಯಾಗಿ ಅತಿಕಾಯ, ಕರ್ಣ, ಭೀಷ್ಮ, ರಕ್ತಬೀಜನ ಪಾತ್ರದಲ್ಲಿ ಮಿಂಚಿ ಕಲಾ ರಸಿಕರ…
ಭಾರತೀಯ ರೆಡ್ಕ್ರಾಸ್ ಸೊಸೈಟಿ (ಐಆರ್ಸಿ ಎಸ್)ಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ರಕ್ತ ನಿಧಿಯನ್ನು ನಿರ್ವಹಿಸಿ ಅತಿ ಹೆಚ್ಚು ಬಡ ರೋಗಿಗಳಿಗೆ ರಕ್ತ ಪೂರೈಸಿದ ರಾಜ್ಯದ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬೆಂಗಳೂರಿನ ರಾಜಭವನದಲ್ಲಿ ನಡೆದ ರೆಡ್ಕ್ರಾಸ್ ರಾಜ್ಯ ಘಟಕದ ಮಹಾಸಭೆಯಲ್ಲಿ ರಾಜ್ಯಪಾಲ ಹಾಗೂ ಐಆರ್ಸಿಎಸ್ ರಾಜ್ಯ ಘಟಕದ ಅಧ್ಯಕ್ಷ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಜಿಲ್ಲಾ ಘಟಕದ ಚೇರ್ಮನ್ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಘಟಕದ ದ.ಕ. ಜಿಲ್ಲಾ ಪ್ರತಿನಿಧಿ ಯತೀಶ್ ಬೈಕಂಪಾಡಿ, ಜಿಲ್ಲಾ ಘಟಕದ ನಿರ್ದೇಶಕರಾದ ಡಾ. ಸಚ್ಚಿದಾನಂದ ರೈ, ಗುರುದತ್ ಎಂ. ನಾಯಕ್, ಪಿ.ಬಿ. ಹರೀಶ್ ರೈ, ರಾಜ್ಯ ಘಟಕದ ಉಪಾಧ್ಯಕ್ಷ ಗೋಪಾಲ್ ಹೊಸೂರು, ಚೇರ್ಮನ್ ವಿಜಯಕುಮಾರ್ ಪಾಟೀಲ್ ಉಪಸ್ಥಿತರಿದ್ದರು. ರೆಡ್ಕ್ರಾಸ್ ದ.ಕ. ಶಾಖೆಯ ಬ್ಲಿಡ್ ಬ್ಯಾಂಕ್ನಿಂದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಪ್ರತೀ ತಿಂಗಳು 450ಕ್ಕೂ ಅಧಿಕ ಯೂನಿಟ್ ರಕ್ತವನ್ನು ಉಚಿತವಾಗಿ ನೀಡುತ್ತಿದೆ. ಈಗ ಅತ್ಯುತ್ತಮ ರಕ್ತ ನಿಧಿ ಪ್ರಶಸ್ತಿ…
ಸನ್ನಯೆ ಕೇಂದಿ ಇಪ್ಪರ್ ನಿಗುಲು. ಉಂದು ಸಾಸಯ ಪಂಡ ದಾದ? ಪೊನ್ನು ಕಡೀರ ಬಂಜಿನಾಲ್ ಆಯಿನದಗ ಬೊಕ್ಕ ಪದ್ ರಾಡ್ ವರ್ಸೊಡ್ದ್ ಬೊಕ್ಕ ಬಂಜಿನಾಲ್ ಆಯಿನದಗ ಬಾಯಕೆ ಪಾಡುವೆರ್. ಬಂಜಿಗ್ ಏಲ್ ತಿಂಗೊಲ್ ಆನಗ ಅಪ್ಪೆ ಇಲ್ಲಡ್ ಬಾಯಕೆ ಪಾಡುವೆರ್. ಅಪ್ಪೆಲ್ಲದ ಬಾಯಕೆನ್ “ಪೂ ಮುಡಿಪಾವುನು” ಪನ್ಪೆರ್, ಕಂಡ್ಯಾನಿಲ್ಲದವು “ಬಾಯಕೆ”. ಬಾಯಕೆಡ್, ಪೊಸ ಪಟ್ಟೆ ಸೀರೆ ತುತ್ತದ್, ಮದಿಮಾಲೆ ಸಿಂಗಾರ ಮಲ್ತ್ ದ್ ಕುರ್ಸುಗೊಂಜಿ ಮಡಿಕುಂಟು ಪಾಡ್ದ್, ಬಂಜಿನಾಲೆನ್ ಕುಲ್ಲದ್ ಅಡ್ಡೆ ಬಲಸುವೆರ್. ಬಂಜಿನಾಲೆನ ದತ್ತ್ ಬಲತ್ತ್ ಡ್ ಒಂಜಿ ಎಲ್ಯ ಆನ್ ಬಾಲೆನ್, ಒಂಜಿ ಎಲ್ಯ ಪೊನ್ನು ಬಾಲೆನ್ ಉಂತಾವರೆ. ಬಂಜಿನಾಲ್ ಬೆಯಿಪಾದಿನ ಒಂಜಿ ಕೋರಿ ತೆತ್ತಿನ್ ಅರ್ಧ ತಿಂದ್ ದ್ ಅರ್ದೊನು ಒಂಜಿ ಬಾಲೆಗ್ ಕೊರ್ಪೊಲು. ಅಂಚೆನೆ ಬೆಯಿಪಾದಿನ ನುರ್ಗೆ ತಪ್ಪುನು ಒಂಜಿ ಬಾಯಿ ತಿಂದ್ ದ್, ಅರ್ದೊನು ಕುಡೊಂಜಿ ಬಾಲೆಗ್ ಕೊರ್ಪೊಲು. ಬಾಯಕೆದ ಮೂಲ ಉದ್ದೇಶ ದಾದ ಪಂದ್ ನಿಗುಲು ಮಾತ ತೆರಿದ್ ಉಲ್ಲರ್. ಐಟ್ ಇ…
ಪ್ರೀತಿಯ ಸಮಾಜ ಬಾಂಧವರೆ, ನಮ್ಮ ಸಮಾಜದ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಹೆಮ್ಮೆ ಇದೆ. ಇದು ನಿಜವಾಗಲೂ ಇರಬೇಕು. ಯಾಕೆಂದರೆ ನಮ್ಮ ಸಮಾಜದಲ್ಲಿ ಹುಟ್ಟಿ ಬೆಳೆದವರು ನಾವು ದುಡಿದು ತಿನ್ನಬೇಕು. ಬೇರೆಯವರಿಗೂ ನೀಡಬೇಕು ಅನ್ನುವ ಮನೋಭಾವನೆ ಇರಬೇಕು ಮತ್ತು ಯಾರಿಗೂ ಕಡಿಮೆ ಇಲ್ಲದಂತೆ ಬದುಕಬೇಕು. ಯಾರೊಂದಿಗೂ ಬೇಡಬಾರದು. ಎಲ್ಲರಿಗೂ ತನ್ನಿಂದಾದ ಸಹಾಯ ಮಾಡಬೇಕು. ಇದು ನಮ್ಮ ಬಂಟ ಸಮಾಜದ ಹೆಗ್ಗುರುತು. ಇಂದು ಜಗತ್ತಿನಾದ್ಯಂತ ನಮ್ಮ ಸಮಾಜಕ್ಕೆ ಕೊಡುವ ಗೌರವ, ಪ್ರತಿಷ್ಠೆ, ಮುಂದಾಳತ್ವ ನೋಡಿದರೆ ತುಂಬಾ ಹೆಮ್ಮೆ ಅನಿಸುತ್ತದೆ. ಒಂದು ಸಮಾಜ ಕಟ್ಟುವುದು, ಬೆಳೆಸುವುದು ಆ ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ ಅಂದರೆ ಖಂಡಿತಾ ತಪ್ಪಾಗಲಾರದು. ಹಿಂದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಕಡಿಮೆ ಸಂಖ್ಯೆಯಲ್ಲಿ ಇದ್ದೆವು. ಹೆಚ್ಚಿನ ಬಂಟರು ಜಮೀನ್ದಾರರಾಗಿದ್ದರು. ಆದರೆ ಭೂ ಮಸೂದೆ ಕಾನೂನಿನಲ್ಲಿ ಉಳುವವನೆ ಹೊಲದೊಡೆಯ ಅನ್ನುವ ಕಾನೂನು ನಮ್ಮಲ್ಲಿ ಕೆಲವರನ್ನು ನಿರ್ಗತಿಕರನ್ನಾಗಿ ಮಾಡಿತು. ಆದರೆ ನಮ್ಮ ಬಂಟ ಸಮುದಾಯ ಇದನ್ನು ಸವಾಲಾಗಿ…
ಮಂಗಳೂರಿನ ನ್ಯಾಯವಾದಿ ಕೆ. ದಯಾನಂದ ರೈ ಅವರ ಸುಸಜ್ಜಿತ ಕಚೇರಿ ಉದ್ಘಾಟನೆ ನಗರದ ಪಿ.ವಿ.ಎಸ್. ಜಂಕ್ಷನ್ ಬಳಿಯ ಮಾನಸ ಟವರಿನ 1ನೇ ಮಹಡಿಯಲ್ಲಿ ನಡೆಯಿತು. ಖ್ಯಾತ ನ್ಯಾಯವಾದಿ ಎಂ. ವಿ. ಶಂಕರ್ ಭಟ್ ಅವರು ಉದ್ಘಾಟಿಸಿದರು. ಉದ್ಘಾಟನೆ ಪೂರ್ವದಲ್ಲಿ ನ್ಯಾಯವಾದಿ ಕೆ. ದಯಾನಂದ ರೈ ಅವರು ಗುರುಗಳಾದ ನ್ಯಾಯವಾದಿ ಕೆ. ಶಂಕರ್ ಭಟ್ ಅವರಿಗೆ ಕಾರ್ಯಕ್ರಮದಲ್ಲಿ ಗುರುವಂದನೆ ಸಲ್ಲಿಸಿ ಅವರನ್ನು ಸನ್ಮಾನಿಸಿದರು. ನ್ಯಾಯವಾದಿ ಕೆ. ದಯಾನಂದ ರೈ ಅವರ ತಾಯಿ ಎಲ್ನಾಡುಗುತ್ತು ಕೆ. ಲಲಿತಾ ರೈ ನ್ಯಾಯವಾದಿ ಕೆ. ದಯಾನಂದ ರೈ, ಪತ್ನಿ ಡಾ. ವೀಣಾ ಕೆ. ಆರ್., ಸಹಾಯಕ ಕೃಷಿ ನಿರ್ದೇಶಕ ಅಂಬಾಬೀಡು ಕೆ. ಜಗನ್ನಾಥ್ ರೈ, ಮಾಜಿ ಪಂಚಾಯತ್ ವಿಸ್ತರಣಾ ಅಧಿಕಾರಿ ಅಂಬಾಬೀಡು ಪದ್ಮಾವತಿ ರೈ ಮತ್ತು ವಾಸುದೇವ ರೈ ಪಿಲತ ಬೆಟ್ಟು ಉಪಸ್ಥಿತರಿದ್ದರು. ಮಂಗಳೂರಿನ ಖ್ಯಾತ ನ್ಯಾಯವಾದಿಗಳಾದ ಓ.ಟಿ.ಭಟ್, ವಾಸುದೇವ ರಾವ್, ಮಹಾಬಲ ಶೆಟ್ಟಿ, ಜಗದೀಶ್ ರಾವ್, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ, ಮಾಜಿ ವಿಧಾನ…