Author: admin
ಮೂಡುಬಿದಿರೆ: ‘ನಾ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ’ ಎಂಬ ಮನುಸ್ಮತಿಯ ನಾಲ್ಕನೇ ಸಾಲನ್ನು ಮಾತ್ರ ಅರಿತರೆ ಸಾಲದು, ಆ ಶ್ಲೋಕದ ಮೊದಲ ಮೂರು ಸಾಲುಗಳಲ್ಲಿ ಗಂಡು- ತಂದೆಯಾಗಿ, ಗಂಡನಾಗಿ ಕೊನೆಗೆ ಮಗನಾಗಿ ಹೆಣ್ಣನ್ನು ಪೋಷಿಸುವ ಜವಾಬ್ದಾರಿ ಪುರುಷನಿಗಿದೆ ಎಂಬ ಸಾರವನ್ನು ಅರಿಯಬೇಕು ಎಂದು ಉಡುಪಿ ವೈಕುಂಠ ಬಾಳಿಗ ಕಾನೂನು ಕಾಲೇಜಿನ ನಿರ್ದೇಶಕಿ ಪ್ರೊ. ನಿರ್ಮಲಾ ಕುಮಾರಿ ಕೆ ನುಡಿದರು. ಆಳ್ವಾಸ್ ಪದವಿ ಪೂರ್ವಕಾಲೇಜಿನ ಆಂತರಿಕ ಸಮಿತಿ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಹಿಳಾ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮ'ದಲ್ಲಿ ಅವರು ‘ಮಹಿಳೆ ಮತ್ತು ಕಾನೂನು ಎಂಬ ವಿಷಯದ ಕುರಿತು ಮಾತನಾಡಿದರು. ಮನೆಯಲ್ಲಿ ಯಾವುದೇ ತಪ್ಪಾದಾಗ ಮೊದಲು ಹೆಣ್ಣು ದೂಷಣೆಗೆ ಒಳಗಾಗುತ್ತಾಳೆ. ಮದುವೆಯ ನಂತರ ಹೆಣ್ಣು ಗಂಡನ ಸೊತ್ತು ಎಂಬ ಕಲ್ಪನೆಯು ತಪ್ಪು. ವರದಕ್ಷಿಣೆ ನಿಷೇಧ ಕಾಯಿದೆ 1961ರಲ್ಲಿ ಬಂತಾದರೂ ಇಂದು ಕೆಲಸದಲ್ಲಿರುವ ಹೆಣ್ಣನ್ನು ಮದುವೆ ಆಗುವ ಮೂಲಕ ಪರೋಕ್ಷ ವರದಕ್ಷಿಣೆ ಶೋಷಣೆ ನಡೆಯುತ್ತಿದೆ. ಅನಗತ್ಯವಾಗಿ ಕಾನೂನಿನ ಮೊರೆ ಹೋಗಬಾರದು, ಆದರೆ ನಮ್ಮ ಮೇಲೆ…
ಮಹಿಳೆಯರಿಗೆ ಸಮಾನತೆ ನೀಡುವ ದೇಶ ಪ್ರಗತಿಯ ಪಥದಲ್ಲಿ ಸಾಗುತ್ತದೆ ಎಂದು ಬೆಂಗಳೂರಿನ ವೈದ್ಯೆ ಹಾಗೂ ಸಾಹಿತಿ ಡಾ. ವಸುಂಧರಾ ಭೂಪತಿ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಂತರಿಕ ಸಮಿತಿ ಹಮ್ಮಿಕೊಂಡ ಮಹಿಳಾ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಹೆಣ್ಣನ್ನು ಕೀಳರಿಮೆಯಿಂದ ನೋಡುತ್ತಿದೆ. ಅಂತಹ ತಾರತಮ್ಯ ಹೋಗಲಾಡಿಸಿ ಹೆಣ್ಣು ಗಂಡಿನಷ್ಟೆ ಸಮಾನಳು ಎಂಬ ಮನಸ್ಥಿತಿ ಸಮಾಜದಲ್ಲಿ ಮೂಡಬೇಕು. ಎμÉ್ಟೂೀ ವಿಚಾರಗಳಲ್ಲಿ ಹೆಣ್ಣನ್ನು ತಪ್ಪು ಕಲ್ಪನೆಗಳಿಂದ ನೋಡುವುದಲ್ಲದೆ ಬಹಿಷ್ಕರಿಸುವ ಪದ್ದತಿಯನ್ನು ನಾವು ನೋಡುತ್ತಿದ್ದೇವೆ. ಆದರೆ ಅಂತಹ ತಪ್ಪಿನಲ್ಲಿ ಗಂಡಿನ ಪಾತ್ರವು ಇರುವುದೆಂದು ಯಾರು ಯೋಚಿಸುವುದಿಲ್ಲ. ದೌರ್ಜನ್ಯಕ್ಕೆ ಒಳಗಾದವರನ್ನು ಅನುಕಂಪದಿಂದ ನೋಡಬೇಕೆ ಹೊರತು ಬಹಿಷ್ಕರಿಸುವುದಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳು ಕಳೆದರೂ ಕೂಡ ನಾವು ದೌರ್ಜನ್ಯದ ಪ್ರಕರಣಗಳನ್ನು ನೋಡುತ್ತಿದ್ದೆವೆ ಎಂದರೆ ನಾವು ಈಗಿನ ಸಮಾಜಕ್ಕಿಂತ ಹಿಂದಕ್ಕೆ ಹೋಗುತ್ತಿದ್ದೇವೆ ಎಂಬುದಲ್ಲ, ಹಿಂದಕ್ಕೆ ಓಡುತ್ತಿದ್ದೇವೆ ಎನ್ನುವುದಾಗಿದೆ ಎಂದು…
ವಿಶ್ವ ಬಂಟ ಪ್ರತಿಷ್ಠಾನವು ಡಾ.ಡಿ.ಕೆ.ಚೌಟ ದತ್ತಿನಿಧಿಯಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದ ತುಳು ಮತ್ತು ಕನ್ನಡ ಯಕ್ಷಗಾನ ಪ್ರಸಂಗಗಳ ವಿಭಿನ್ನ ಗತಿಯ ವೇಷಧಾರಿ ಜಪ್ಪು ದಯಾನಂದ ಶೆಟ್ಟಿ ಆಯ್ಕೆ ಆಗಿದ್ದಾರೆ. ಪ್ರೊ.ಜಿ.ಆರ್.ರೈ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಪಳ್ಳಿ ಕಿಶನ್ ಹೆಗ್ಡೆಯವರನ್ನು ಒಳಗೊಂಡ ಸಲಹಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ದಯಾನಂದ ಶೆಟ್ಟಿ ಜಪ್ಪು: ಕರ್ನಾಟಕ, ಕುಂಡಾವು, ದೇಲಂತಪುರಿ ಮತ್ತು ಸಸಿಹಿತ್ಲು ಮೇಳಗಳಲ್ಲಿ ಒಟ್ಟು 52 ವರ್ಷ ತಿರುಗಾಟ ಮಾಡಿರುವ ದಯಾನಂದ ಶೆಟ್ಟರು ಬೆಳ್ತಂಗಡಿ ಸವಣಾಲಿನ ದಿ.ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ದಂಪತಿಯ ಮಗನಾಗಿ 1948ರಲ್ಲಿ ಜನಿಸಿದರು. ಕೇವಲ ಎರಡನೆಯ ತರಗತಿ ಕಲಿತ ಇವರು ತನ್ನ 12ನೇ ವಯಸ್ಸಿನಲ್ಲಿ ಯಕ್ಷಗಾನ ವೃತ್ತಿಗಿಳಿದು ಹಲವು ಹಿರಿಯ ಕಲಾವಿದರ ಒಡನಾಟದಲ್ಲಿ ಖ್ಯಾತರಾದರು. ಕರ್ನಾಟಕ ಮೇಳವೊಂದರಲ್ಲೇ 36 ವರ್ಷ ಪೂರೈಸಿದ ಅವರು ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ರಾ.ಸಾಮಗ, ಮಿಜಾರು, ಅರುವ, ಕೋಳ್ಯೂರು ಮೊದಲಾದ ದಿಗ್ಗಜರೊಂದಿಗೆ ಸ್ತ್ರೀವೇಷ, ಪುಂಡು ವೇಷ,…
ಮಣ್ಣನ್ನು ಕೊಳಕು ಎಂದು ಅಂದುಕೊಳ್ಳುವುದು ಆಧುನಿಕರ ರೂಢಿ. ಕೊಳಕು ಎಂದರೆ ತ್ಯಾಜ್ಯ – ಯಾವುದು ಬಳಕೆಗೆ ಯೋಗ್ಯವಲ್ಲದ್ದೋ ಅದು, ಉಪಯೋಗ ಮುಗಿದು ಹೋದದ್ದು, ಎಸೆಯಬೇಕಾದ್ದು, ದೂರ ಇರಿಸಬೇಕಾದ್ದು. ಹೌದೇ ಇದು? ನಾವು ಯಾವುದನ್ನು ನಮ್ಮ ದೇಹ ಎಂದು ಹೇಳುತ್ತೇವೆಯೋ ಅದು ಈ ಭೂಮಿಯ ಒಂದು ಭಾಗ. ನಾವು ಸೇವಿಸಿದ ಆಹಾರದ ಸಂಸ್ಕರಿತ, ಪರಿಷ್ಕೃತ ಸಂಗ್ರಹ ರೂಪವೇ ಈ ದೇಹ. ಈ ಭೂ ಗ್ರಹದಿಂದ ಪುಟಿದೆದ್ದು ನಾಲ್ಕು ದಿನ ಕೈ ಕಾಲಾಡಿಸುವವರು ನಾವು. ಕೆಲವು ವರ್ಷಗಳ ಬಳಿಕ ಮತ್ತೆ ಅದೇ ಭೂಮಿಯಲ್ಲಿ ಒಂದು ಗುಪ್ಪೆಯಾಗಿ ಬಿಡುತ್ತೇವೆ. ಅಂದರೆ “ಕೊಳಕಿ’ಗೆ ಕಚ್ಚಾ ವಸ್ತುವಾಗುತ್ತೇವೆ. ನಮ್ಮ ದೇಶದಲ್ಲಿ ತಾಯ್ನಾಡು, ತವರು ನೆಲ, ಭೂಮಿ ತಾಯಿ ಎಂದೆಲ್ಲ ಕರೆಯುವ ಕ್ರಮವಿದೆ. ಎಲ್ಲವನ್ನೂ ಸಜೀವವಾಗಿ, ಬದುಕಿನ ಭಾಗವಾಗಿ ಕಾಣುವ ಸಂಸ್ಕೃತಿ ನಮ್ಮದು. ಆಹಾರ, ನೀರು, ನೆಲ, ಆಕಾಶ, ಸೂರ್ಯ, ಚಂದ್ರ, ಕಲ್ಲು, ಮರ –ಎಲ್ಲದಕ್ಕೂ ನಾವು ಶಿರಬಾಗಿ ನಮಿಸುವುದು ಇದೇ ಕಾರಣಕ್ಕೆ. ಯಾವುದನ್ನೂ ಉಪಯೋಗಿಸಿ ಎಸೆಯಬಹುದಾದದ್ದು ಎಂದು ನಾವು…
ಹುಟ್ಟಿದ ವ್ಯಕ್ತಿ ಎಷ್ಟು ದಿನ ಬದುಕಿದ ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಮುಖ್ಯವಾಗುತ್ತದೆ. ಮಾನವ ಬಡವನಾಗಿ ಹುಟ್ಟುವುದು ಅವನ ತಪ್ಪಲ್ಲ ಆದರೆ ಬಡವನಾಗಿ ಸಾಯುವುದು ತಪ್ಪು ಎಂಬ ಮಾತನ್ನು ಕೂಡಾ ನಾವು ಕೇಳುತ್ತಾ ಬಂದಿದ್ದೇವೆ. ಈ ಎಲ್ಲಾ ಮಾತುಗಳ ತಾತ್ಪರ್ಯ ಅಂದರೆ ಮನುಷ್ಯ ಕಷ್ಟಪಟ್ಟು ದುಡಿಯಬೇಕು, ಹುಟ್ಟಿದ ಮಾನವ ಏನನ್ನಾದರೂ ಸಾಧಿಸಬೇಕು, ಆತನಲ್ಲಿ ಕೃತ್ವಶಕ್ತಿ, ನಿರಂತರ ಶ್ರಮ, ಸಾಧಿಸುವ ಛಲ, ಹಠ ಎಲ್ಲಕ್ಕಿಂತ ಮಿಗಿಲಾಗಿ ಕನಸು ಇವೆಲ್ಲವೂ ಸಮ್ಮಿಳಿತವಾದಾಗ ಒಂದಲ್ಲ ಒಂದು ಫಲಪ್ರಾಪ್ತಿ ಆಗುವುದು ಖಚಿತ. ಜೊತೆಯಲ್ಲಿ ಸ್ವಲ್ಪ ಅದೃಷ್ಟವೂ ಇರಬೇಕೆನ್ನಿ. ನಮ್ಮ ಜೀವನದಲ್ಲಿ ಯಶಸ್ಸು ಎನ್ನುವುದು ಹಿರಿಯರು ಕಟ್ಟಿಕೊಟ್ಟ ಬುತ್ತಿಯಲ್ಲ. ಅದನ್ನು ಬಿಚ್ಚಿಟ್ಟರೆ ನಮ್ಮದಾಗುವುದಿಲ್ಲ. ಅದಕ್ಕೆ ಬೇಕಾಗಿರುವುದು ನಿತ್ಯ ನಿರಂತರ ಪರಿಶ್ರಮ. ಪ್ರಾಮಾಣಿಕ ದುಡಿಮೆ ಇವೆಲ್ಲವೂ ಆವಿರ್ಭವಿಸಿದಾಗ ಸಾಧನೆಯ ಸಾರ್ಥಕತೆ ದೊರೆಯುತ್ತದೆ. ತನ್ನ ಜೀವನದುದ್ದಕ್ಕೂ ಪ್ರಾಮಾಣಿಕ ದುಡಿಮೆಯಿಂದ, ಅಚಲವಾದ ಶ್ರಮದಿಂದ ಇಂದು ಯಶಸ್ಸಿನ ಉತ್ತುಂಗಕ್ಕೇರಿದವರು, ಬಂಟ ಸಮಾಜಕ್ಕೆ ಕಿರೀಟಪ್ರಾಯರಾಗಿ ಹೆಸರುವಾಸಿಯಾದವರು ಶ್ರೀಕಾಂತ ಶೆಟ್ಟಿಯವರು. ಜೀವಂತಿಕೆಗೆ, ಲವಲವಿಕೆಗೆ, ಚೈತನ್ಯಶೀಲತೆಗೆ ಮತ್ತೊಂದು ಹೆಸರು…
ಉದಾಸೀನನೇ ಉದಲ್ ದ ತಾದಿ ಹಂಕಾರ ನೇ ನಾಸದ ತಾದಿ ಸಂಸಯನೇ ಸಂಕಡೊಗು ತಾದಿ ದೊಡ್ದುದ ಬಡವೇ ದುಃಖದ ತಾದಿ! ! ಬಂಜರ ವಣಸೇ ರೋಗದ ತಾದಿ ಪಗೆತನ ಬುಡುಂಡ ಪಿರ್ತಿದ ತಾದಿ ನಿರ್ಮಲ ಮನಸೇ ಸಾಂತಿದ ತಾದಿ ಒಂಜೆ ಬಾವನೆ ಒಗ್ಗಟ್ಟ್ ದ ತಾದಿ ನನ ಯಾವು ಇನ್ಪಿನ ಸೇಮದ ತಾದಿ ಉಡಲ್ ದ ಪಾತೆರ ಸತ್ಯದ ತಾದಿ ಪರೋಪಕಾರನೇ ಪುಣ್ಯದ ತಾದಿ ಪುಣ್ಯದ ಕೆಲಸನೇ ಸೊರ್ಗದ ತಾದಿ ಆರೋಗ್ಯನೇ ಸಂಪೊತ್ತ್ ದ ತಾದಿ ಗೇನದ ಬದ್ ಕೆ ದೇವೆರೆಡೆ ತಾದಿ ದೇವೆರೆ ದಯೆನೇ ಸುಕತ್ತ ತಾದಿ ಸುರ್ಪದ ಗುರ್ತನೇ ಮುಕ್ತಿದ ತಾದಿ! ! -ಗುತ್ತಿನಾರ್ ಸುಧಾಕರ್ ಶೆಟ್ಟಿ ದೆಪ್ಪುಣಿಗುತ್ತು
ಉತ್ತಮ ವ್ಯಕ್ತಿತ್ವ ಉತ್ತಮ ಸಮಾಜದ ನಿರ್ಮಾಣದಲ್ಲಿ ಕುಟುಂಬದಲ್ಲಿ ಸಿಗುವ ಸಂಸ್ಕಾರ ಪ್ರಮುಖ ಪಾತ್ರ ವಹಿಸುತ್ತದೆ. ಎಂದು ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಪಕ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು. ಕರಾವಳಿ ಲೇಖಕಿಯರ ವಾಚಕಿಯರ (ಕ. ಲೇ. ವಾ.) ಸಂಘದ ವತಿಯಿಂದ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ಜರಗಿದ ಸಮಾರಂಭದಲ್ಲಿ ಕುಲಕಸುಬು ಕಮ್ಮಾರಿಕೆಯಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಲೀಲಾವತಿ ಆಚಾರ್ಯ ಪೈಕ ಗುತ್ತಿಗಾರು ಅವರಿಗೆ ಸಂಜೀವಿನಿ ನಾರಾಯಣ ಅಡ್ಯಂತಾಯರ ಸ್ಮರಣಾರ್ಥ ‘ಸಂಜೀವಿನಿ ಪ್ರಶಸ್ತಿ’ ಪ್ರಧಾನ ಸಮಾರಂಭದಲ್ಲಿ ‘ಕುಟುಂಬ ಸಹವಾಸ ಮತ್ತು ಸಂಬಂಧ ‘ ವಿಷಯದ ಕುರಿತು ಮಾತನಾಡಿದರು. ಇಂದು ಸಂವೇದನೆಯನ್ನು ಕಳೆದುಕೊಂಡು ಯಾಂತ್ರಿಕತೆಯ ಬದುಕಿನತ್ತ ಸಾಗುತ್ತಿರುವ ಸಮಾಜದಲ್ಲಿ ಕುಟುಂಬ ಪ್ರೀತಿಯ ಅಗತ್ಯವಿದೆ ಎಂದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ಲೇಖಕಿ ಬಿ. ಎಂ. ರೋಹಿಣಿ ಅವರು, ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳಲ್ಲಿ ಅವುಗಳದ್ದೇ ಆದ ಒಳ್ಳೆಯ ಮತ್ತು ಕೆಟ್ಟ ಅಂಶಗಳು ಇವೆ. ಆದಾಗ್ಯೂ ಅವಿಭಕ್ತ ಕುಟುಂಬದಲ್ಲಿ…
ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದ ಹಂತಹಂತವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನಾಂಗದ ಪ್ರತಿಯೊಬ್ಬರು ಕೂಡಾ ಸಂಘದ ಜತೆಗೆ ಕೈಜೋಡಿಸುವಂತೆ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ಜಗದೀಶ್ ರೈ ಮನವಿ ಮಾಡಿದರು. ಮಡಿಕೇರಿಯ ಗಾಂಧಿ ಮೈದಾನ ಬಳಿಯಿರುವ ಖಾಸಗಿ ಕಟ್ಟಡದಲ್ಲಿ ನಡೆದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮುದಾಯ ಬಾಂಧವರಿಗಾಗಿ ಸಂಘದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ತುಳು ಭಾಷಿಕರ ಹೊಸ ವರ್ಷವಾದ ಬಿಸು ಹಬ್ಬವನ್ನು ಮುಂದಿನ ವರ್ಷದಿಂದ ಸಂಘದ ನೇತೃತ್ವದಲ್ಲಿ ಸಂಭ್ರಮದಿಂದ ಆಚರಿಸುವ ಉದ್ದೇಶವಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬಿಂಬಿಸುವ ಆಚರಣೆಯಾಗಿ ಎಲ್ಲರೂ ಸಂಭ್ರಮಿಸುವ ರೀತಿಯ ಕಾರ್ಯಕ್ರಮ ಮಾಡಲಾಗುವುದೆಂದರು. ಜಿಲ್ಲಾ ಬಂಟರ ಸಂಘದ ಜತೆಗೆ ತಾಲೂಕು ಘಟಕ, ನಗರ ಮಹಿಳಾ ಘಟಕ, ಯುವ ಬಂಟ್ಸ್ ಅಸೋಸಿಯೇಷನ್ ಕಾರ್ಯಚಟುವಟಿಕೆಗಳಿಗೆ ಈ ಕಚೇರಿಯನ್ನು ಬಳಸಿಕೊಳ್ಳಬಹುದು. ಸಂಘದ ಕಾರ್ಯಚಟುವಟಿಕೆಗಳು ಜಿಲ್ಲಾ ಬಂಟರ ಭವನದಲ್ಲಿ ಆಗಬೇಕೆಂಬ ಕನಸು ಜನಾಂಗ ಬಾಂಧವರಲ್ಲಿದೆ. ಅದು ಈಡೇರಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದರು. ಕಾರ್ಯದರ್ಶಿ ರವೀಂದ್ರ ವಿ. ರೈ ಮಾತನಾಡಿ…
ಬಂಟರು ಆರ್ಥಿಕವಾಗಿ ಬಲಿಷ್ಟರಾಗುತ್ತಿದ್ದಂತೆ ತಮ್ಮ ಪದ್ದತಿ, ಸಂಪ್ರದಾಯಕ್ಕೆ ನಿಧಾನವಾಗಿ ಎಳ್ಳುನೀರು ಬಿಡುತ್ತಿದ್ದಾರೆ. ಯಾಕೋ ನಾಗಾರಾಧನೆಯಲ್ಲಾಗಲೀ, ಭೂತಾರಾಧನೆಯಲ್ಲಾಗಲೀ, ವಿವಾಹ ಅಪರಕ್ರಿಯೆಯಂತಹ ಕಾರ್ಯಕ್ರಮಗಳಲ್ಲಿಯೂ ನಮಗೆ ತೌಳವ ಸಂಪ್ರದಾಯವೆಂದರೆ ಒಂದು ರೀತಿ ಅಸಡ್ಡೆ. ವೈದಿಕ ಸಂಪ್ರದಾಯವೇ ಶ್ರೇಷ್ಟ ಎಂಬ ಭಾವನೆ. ಇದಕ್ಕೆ ಸರಿಯಾಗಿ ತೌಳವ ಸಂಪ್ರದಾಯದ ಬಗ್ಗೆ ಮಾರ್ಗದರ್ಶನ ಮಾಡಬಲ್ಲ ಹಿರಿಯರ ಕೊರತೆಯೂ ನಮ್ಮಲ್ಲಿದೆ. ನಮ್ಮ ಭೂತಗಳಿಗೆ ಬ್ರಹ್ಮಕಲಶ ಮಾಡಿಸುವ, ನಾಗನ ಪ್ರಾಕೃತಿಕ ಆವಾಸ ಸ್ಥಾನವನ್ನು ಕಡಿದು ಕಾಂಕ್ರೀಟ್ ಗುಡಿಯಲ್ಲಿ ಕುಳ್ಳಿರಿಸಲು ಪ್ರಯತ್ನಿಸುವ ನಮಗೆ ವಿವಾಹವೇನು ಮಹಾ? ವೈದಿಕ ಸಂಪ್ರದಾಯದಂತೆ ಹೋಮ, ಸಪ್ತಪದಿ, ಕನ್ಯಾದಾನ ಮಾಂಗಲ್ಯಧಾರಣೆ ಇದ್ದರೇನೆ ಅದು ಮದುವೆ. ಸದ್ಯಕ್ಕೆ ವರಪೂಜೆ, ಕಾಶೀಯಾತ್ರೆ, ಉರುಟಣೆ ಇತ್ಯಾದಿಗಳು ಪ್ರಾಂಭವಾಗಿಲ್ಲ. ಕ್ರಮೇಣ ಪ್ರಾರಂಭವಾಗಲೂಬಹುದು. ಬಂಟರು ಮೂಲತಃ ಕ್ಷತ್ರಿಯರು ಹಾಗೂ ಕೃಷಿಯನ್ನು ನಂಬಿ ಬದುಕಿದವರು. ನಮ್ಮಲ್ಲಿ ಭೂಮಿ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗುವುದೇ ಸಂಪ್ರದಾಯ. ಹಿಂದೆ ಅಂದರೆ ಸುಮಾರು ಅರುವತ್ತು ಎಪ್ಪತ್ತು ವರ್ಷಗಳ ಹಿಂದೆ ಮಾಂಗಲ್ಯ ಧಾರಣೆಯೂ ನಮ್ಮಲ್ಲಿ ಇರಲಿಲ್ಲವಂತೆ. ವಧುವನ್ನು ಅಲಂಕರಿಸುವಾಗ ಮುತ್ತೈದೆಯರೇ ಅವಳ ಕೊರಳಿಗೆ ಕರಿಮಣಿ…
ದೇಹದಲ್ಲಿನ ಬೌದ್ಧಿಕ ಉಷ್ಣಾಂಶವನ್ನು ತೀವ್ರ ಸ್ವರೂಪದಲ್ಲಿ ಕಡಿಮೆಗೊಳಿಸುವ ಎಳ್ಳೆಣ್ಣೆ …..! ಆಯುರ್ವೇದದ ಮುಖ್ಯವಾಹಿನಿಯಲ್ಲಿ ಸಂಗ್ರಹಿಸಲ್ಪಟ್ಟ ಪರಿಪೂರ್ಣವಾದ ನಾರಿನಂಶದ ಪದಾರ್ಥ….! ಪ್ರತಿ ನಿತ್ಯ ಜೀವನದಲ್ಲಿ ಉಪಯೋಗಿಸಿ ಆರೋಗ್ಯಕರ ಎಳ್ಳು…..! ದೇಹದಲ್ಲಿನ ನರಮಂಡಲಗಳನ್ನು ಆರೋಗ್ಯ ಯುಕ್ತವಾಗಿ ಗ್ರಹಿಸುವ ಶಕ್ತಿ ಹೊಂದಿರುವ ಎಳ್ಳಣ್ಣೆ….! ✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. (ಪತ್ರಕರ್ತರು &ಅಂಕಣಕಾರರು)ಮೊ:9632581508 ಎಳ್ಳು ಎಣ್ಣೆಯನ್ನು ಅದನ್ನು ಉಪಯೋಗಿಸುವ ರೀತಿ ನೀತಿಗಳನ್ನು ತಿಳಿದುಕೊಂಡರೆ ಜೀವನದಲ್ಲಿ ಕಾಯಿಲೆ ನಿಮ್ಮ ಹತ್ತಿರ ಸುಳಿಯುವುದಿಲ್ಲ .ಆರೋಗ್ಯಕರ ಮತ್ತು ಆರೋಗ್ಯಕ್ಕೆ ಪರಿಪೂರ್ಣವಾಗಿರುವ ತೇವಾಂಶ ಮತ್ತು ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡಲು ಎಳ್ಳು ಎಣ್ಣೆಯನ್ನು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಈ ಎಳ್ಳು ಎಣ್ಣೆ ಆಯುರ್ವೇದದ ಪ್ರಕಾರ ಆಯುರ್ವೇದದ ಪ್ರಕಾರ ಎಳ್ಳಿನ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದೇಹದಲ್ಲಿನ ಸುಸ್ತು ,ಆಯಾಸ ಮತ್ತು ಉಷ್ಣಾಂಶದ ತೀವ್ರತೆಯನ್ನು ಕಡಿಮೆಗೊಳಿಸುವಲ್ಲಿ ಮತ್ತು ಜಡತ್ವ ಮತ್ತು ನಿದ್ರಾಹೀನತೆ ಸಹಕಾರಿಯಾಗಿ ಎಳ್ಳು ಎಣ್ಣೆ ಕಾರ್ಯನಿರ್ವಹಿಸುತ್ತದೆ .ಇದು ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಎಳ್ಳನ್ನು ನೂರಾರು ವರ್ಷಗಳಿಂದ ಆಯುರ್ವೇದ…