Author: admin

ಬಂಟರಿಗೆ ನಿಗಮ ಒದಗಿಸುವ ಕುರಿತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಮಹಾ ನಿರ್ದೇಶಕರು ಹಾಗೂ ಜೊತೆ ಕಾರ್ಯದರ್ಶಿ ಶ್ರೀ ಪ್ರವೀಣ್ ಭೋಜ ಶೆಟ್ಟಿ, ನಿರ್ದೇಶಕರಾದ ಶ್ರೀ ಅರವಿಂದ್ ಎ ಶೆಟ್ಟಿ, ಮಹಾ ಪೋಷಕರಾದ ಶ್ರೀ ಶಶಿಧರ್ ಶೆಟ್ಟಿ ಇನ್ನಂಜೆ ಮತ್ತು ಕೋಶಾಧಿಕಾರಿ ಶ್ರೀ ಮೋಹನದಾಸ್ ಶೆಟ್ಟಿಯವರನ್ನು ಒಳಗೊಂಡ ಒಕ್ಕೂಟದ ತಂಡವು ಮಹಾರಾಷ್ಟ್ರದ ಸಂಸದ ಶ್ರೀ ಗೋಪಾಲ್ ಶೆಟ್ಟಿಯವರನ್ನು ಭೇಟಿಯಾಗಿ ಬಂಟರಿಗೆ ನಿಗಮ ಒದಗಿಸುವ ಬಗ್ಗೆ ಮನವಿ ಮಾಡಿದರು. ಈ ಸಂದರ್ಭ ಸಂಸದರು ಕರ್ನಾಟಕ ಸರಕಾರದ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ, ಕರ್ನಾಟಕ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಕರ್ನಾಟಕ ಸರಕಾರದ ಇಂಧನ ಸಚಿವರಾದ ಶ್ರೀ ಸುನೀಲ್ ಕುಮಾರ್ ರವರಲ್ಲಿ ಈ ಕುರಿತು ಮಾತನಾಡುವುದಾಗಿ ಭರವಸೆ ನೀಡಿದರು.

Read More

ಬೆಳಗ್ಗಿನ ತಿಂಡಿ ಮಾಡುವುದು ಎಲ್ಲರಿಗೂ ಒಂದು ಟಾಸ್ಕ್. ಪ್ರತಿ ಬಾರಿ ನೀವು ಡಿಫರೆಂಟ್ ಆಗಿ ಏನಾದರೂ ಟ್ರೈ ಮಾಡಬೇಕು ಎಂದುಕೊಂಡರೆ ಇಲ್ಲಿದೆ ಒಂದು ಹೊಸ ರುಚಿ. ನೀವು ಸಾಮಾನ್ಯವಾಗಿ ಇಡ್ಲಿ ಮಾಡುವಾಗ ಒಂದು ಹೆಚ್ಚಿನ ಸಾಮಾಗ್ರಿಯನ್ನು ಹಾಕಿದರೆ ಇಡ್ಲಿಯ ಸ್ವಾದವನ್ನೇ ಬದಲಿಸಬಹುದು. ಹೌದು ನೀವೊಮ್ಮೆ ಸಬ್ಬಕ್ಕಿ ಇಡ್ಲಿ (Sago Idli) ಮಾಡಿ ಡಿಫರೆಂಟ್ ರುಚಿಯನ್ನು ಆನಂದಿಸಿ. ಬೇಕಾಗುವ ಪದಾರ್ಥಗಳು: ಇಡ್ಲಿ ರವೆ/ ಅಕ್ಕಿ ರವೆ – 1 ಕಪ್ ಸಬ್ಬಕ್ಕಿ – ಮುಕ್ಕಾಲು ಕಪ್ ಹುಳಿ ಮೊಸರು – ಒಂದೂವರೆ ಕಪ್ ನೀರು – 1 ಕಪ್ ತುರಿದ ತೆಂಗಿನಕಾಯಿ – ಕಾಲು ಕಪ್ ಅಡುಗೆ ಸೋಡಾ – ಕಾಲು ಟೀಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ಒಗ್ಗರಣೆಗೆ: ಸಾಸಿವೆ – ಅರ್ಧ ಟೀಸ್ಪೂನ್ ಮುರಿದ ಗೋಡಂಬಿ – 10 ಹಸಿರು ಮೆಣಸಿನಕಾಯಿ – 2 ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ…

Read More

ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಇದ್ದಂತೆ. ಹಣ ಆಸ್ತಿ ಸಂಪಾದನೆಕ್ಕಿಂತ ಆರೋಗ್ಯವಂತರಾಗಿ ಬದುಕುವುದೇ ದೊಡ್ಡ ಸಂಪತ್ತು. ಅದಕ್ಕಿಂತ ಮಿಗಿಲಾದದು ಇನ್ನೊಂದಿಲ್ಲ ಎಂದು ಶತಾಯುಶಿ ಹುತ್ರುರ್ಕೆ ಪುಟ್ಟಣ್ಣ ಶೆಟ್ಟಿ ಹೇಳಿದರು. ಅವರು ನವೆಂಬರ್ 5 ರಂದು ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ನೇತೃತ್ವದಲ್ಲಿ ಹಿರಿಯ ಬಂಟರ ಬಾಂಧವ್ಯ ಕಾರ್ಯಕ್ರಮದ ಅಡಿಯಲ್ಲಿ ಹೆಬ್ರಿ ಹುತ್ತುರ್ಕೆ ಅವರ ನಿವಾಸದಲ್ಲಿ ಬಂಟರ ಸಂಘದ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಹಿರಿಯರನ್ನು ಪ್ರೀತಿಯಿಂದ ಗೌರವಿಸಿ : ನಮ್ಮಮನೆಯಲ್ಲಿರುವ ತಂದೆ, ತಾಯಿ, ಅಜ್ಜ, ಅಜ್ಜಿಯಂದಿರನ್ನು ಪ್ರೀತಿಯಿಂದ ಮಾತನಾಡಿಸುವುದರ ಜತೆ ಗೌರವಿಸಿ. ಅದಕ್ಕಿಂತ ದೊಡ್ಡ ಕೊಡುಗೆ ಇನ್ನೊಂದಿಲ್ಲ. ತಮ್ಮಮಕ್ಕಳು ಮೊಮ್ಮಕ್ಕಳಿಂದ ಹಿರಿಯರು ಅಪೇಕ್ಷೆ ಪಡುವುದು ಇಷ್ಟೇ. ಈ ನಿಟ್ಟಿನಲ್ಲಿ ಹೆಬ್ರಿ ಬಂಟರ ಸಂಘದಿಂದ ಪ್ರತಿ ತಿಂಗಳ ಮೊದಲ ಭಾನುವಾರ ಸಂಘದ ವ್ಯಾಪ್ತಿಯ ಹಿರಿಯ ಬಂಟರ ಮನೆಗೆ ತೆರಳಿ ಅವರೊಂದಿಗೆ ಪ್ರೀತಿಯಿಂದ ಮಾತನಾಡಿಸಿ ಗೌರವಿಸುವ ಹಿರಿಯ ಬಂಟರ ಬಾಂದವ್ಯ ಕಾರ್ಯಕ್ರಮ ಇದಾಗಿದೆ ಎಂದು ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ಅಧ್ಯಕ್ಷ ಸೀತಾನದಿ…

Read More

ಬಂಟರ ಸಂಘ ಮುಂಬಯಿ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯಿಂದ ಆಗಸ್ಟ್ 15 ರಂದು ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದಲ್ಲಿ ಸಂಜೆ ಅಜೆಕಾರು ಕಲಾಭಿಮಾನ ಬಳಗ ಮುಂಬಯಿ ಇವರ ತವರೂರ ನಾಮಾಂಕಿತ ಕಲಾವಿದರ ಕೂಡುವಿಕೆಯಲ್ಲಿ “ನಳ ದಮಯಂತಿ” (ತುಳು) – “ಶ್ರೀರಾಮ ದರ್ಶನ” (ಕನ್ನಡ) ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ನಿಟ್ಟೆ ಎಂಜಿ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿದರು. ವೇದಿಕೆಯಲ್ಲಿ ಮುಂಬಯಿ ಬಂಟರ ಸಂಘದ ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ, ಹಿರಿಯ ಹೋಟೆಲ್ ಉದ್ಯಮಿ ಕೃಷ್ಣ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಎಸ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಕೆ ಪ್ರೇಮನಾಥ್ ಶೆಟ್ಟಿ, ಕಾರ್ಯದರ್ಶಿ ಅಶೋಕ್ ವಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಎ. ಶೆಟ್ಟಿ, ಜೊತೆ ಕಾರ್ಯದರ್ಶಿ ರಘುನಾಥ ಎನ್. ಶೆಟ್ಟಿ, ಜೊತೆ ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಹಿರಿಯ ಸಲಹೆಗಾರ ಮನೋಹರ ಎನ್. ಶೆಟ್ಟಿ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೈಲಜ ಎ ಶೆಟ್ಟಿ,…

Read More

ತಾ 23.07.2023 ರಂದು ಸಾಂತಕ್ರೂಸ್ ಪೇಜಾವರ ಮಠದಲ್ಲಿ ಜರುಗಿದ ತೋನ್ಸೆ ವಿಜಯ್ ಕುಮಾರ್ ಶೆಟ್ಟಿ ಅವರ ಕಲಾಜಗತ್ತು ಬಳಗದ ವತಿಯಿಂದ ನಡೆದ ಆಟಿಯ ಗೌಜಿ, ಗಮ್ಮತ್ತು ಕಾರ್ಯಕ್ರಮವು ನೆರೆದವರ ಮನಸೂರೆಗೊಂಡಿತು ಎಂಬುದಕ್ಕೆ ನಿರಂತರ ಕರತಾಡನವೇ ಸಾಕ್ಷಿಯಾಗಿತ್ತು. ಕಾರ್ಯಕ್ರಮದ ಚಾಲನೆಯೇ ಒಂದು ವಿನೂತನ ಕಲ್ಪನೆಯಾಗಿತ್ತು. ನಮ್ಮ ತುಳುನಾಡಿನ ಎಲ್ಲಾ ಬಗೆಯ ತರಕಾರಿಗಳನ್ನು ವೇದಿಕೆ ಮೇಲೆ ತಂದು ಅವುಗಳನ್ನು, ಅದರಲ್ಲೂ ದೊಡ್ಡ ಹಲಸಿನ ಹಣ್ಣನ್ನು ಕೊಯ್ದು ಕಾರ್ಯಕ್ರಮ ಶುರು ಮಾಡಿದ್ದು ಒಂದು ವಿನೂತನ ಪ್ರಯೋಗವಾಗಿತ್ತು. ಬಹುಷಃ ಇಂತಹ ಆಲೋಚನೆಗಳು ವಿಜಯ್ ಕುಮಾರ್ ಶೆಟ್ಟಿಯಂತವರಿಗೆ ಮಾತ್ರ ಮಾಡಲು ಸಾಧ್ಯ. ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ, ಸುವಾಸನೆ ಭರಿತ, ದೇಹಕ್ಕೆ ಅಗತ್ಯವಾದ ಎಲ್ಲಾ ಬಗೆಯ ಶಕ್ತಿಗಳನ್ನು ನೀಡುವ ತರಕಾರಿಗಳನ್ನು ಒಟ್ಟು ಮಾಡಿ ಅದನ್ನು ಅಲ್ಲಿಯೇ ಶುಚಿ ಮಾಡಿ, ಅಡುಗೆ ತಯಾರಿಸಿ ಅದನ್ನು ಅಥಿತಿ, ಅಭ್ಯಗತರಿಗೆ ಉಣ ಬಡಿಸಿದ ಪರಿ ಸಾಮಾನ್ಯರ ಕಲ್ಪನೆಗೆ ಮೀರಿದ್ದಾಗಿತ್ತು. ಬಿಡದೆ ಸುರಿಯುತ್ತಿದ್ದ ಮಳೆಯ ನಡುವೆಯೂ ಈ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಕಲಾಜಗತ್ತು ಹಾಗೂ…

Read More

ಮಳೆಗಾಲ ಬಂದಾಗ ಮನಸ್ಸುಗಳು ಚೈತನ್ಯದಿಂದ ನಲಿಯುತ್ತವೆ. ಮಳೆಗಾಲ ಬಂದರೆ ಆರೋಗ್ಯ ಸಮಸ್ಯೆಗಳೂ ಅದರೊಂದಿಗೆ ಆಗಮನಿಸುತ್ತವೆ. ಸ್ವಲ್ಪ ಹೊತ್ತು ಮಳೆಯಲ್ಲಿದ್ದರೆ ಸಾಕು ಥಂಡಿ ಆವರಿಸಿ ಶೀತವಾಗಿ ಬಿಡುತ್ತದೆ. ಶೀತವನ್ನು ಕೆಮ್ಮು, ಜ್ವರ ಹಿಂಬಾಲಿಸುತ್ತವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಈ ಸಮಸ್ಯೆಗಳು ಜನರ ಜೀವಹಿಂಡಿ ಬಿಡುತ್ತವೆ. ಇದರೊಂದಿಗೆ ವೈರಲ್‌ ಹಾಗೂ ಬ್ಯಾಕ್ಟೀರಿಯಾದ ಸೋಂಕುಗಳು ಹೆಚ್ಚಾಗುತ್ತವೆ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಬಹು ಬೇಗನೇ ಕಡಿಮೆಗೊಂಡು ಶೀತ, ಜ್ವರದಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ. ಮಳೆಗಾಲ ಬಂದಾಗ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಿದರೆ ಶೀತದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಗಟ್ಟಬಹುದು. ಅದರಲ್ಲೂ ನೈಸರ್ಗಿಕ ದೊರಕುವ ಮನೆ ಮದ್ದುಗಳನ್ನು ಸಿದ್ದಪಡಿಸಿಕೊಂಡ ಸೇವಿಸಿದ್ದೇ ಆದಲ್ಲಿ ಈ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಆದರೆ ಇಂದಿನ ಮನೆಗಳಲ್ಲಿ ಹಿರಿಯರಿಲ್ಲದ ಕಾರಣ ಶೀತದಂತಹ ಸಮಸ್ಯೆಗಳಿಗೆ ಯಾವ ಮನೆ ಮದ್ದುಗಳು ಒಳ್ಳೆಯದು ಎಂದು ತಿಳಿದುಕೊಳ್ಳುವುದು ಕಷ್ಟವಾಗಬಹುದು. ಹಿಂದೆ ಇಂತಹ ಸಾಮಾನ್ಯ ಕಾಯಿಲೆಗಳಿಗೆ ಯಾರೂ ಕೂಡ ವೈದ್ಯರ ಬಳಿ ಓಡುತ್ತಿರಲಿಲ್ಲ. ಬದಲಾಗಿ ಮನೆಯ ಅಡುಗೆ…

Read More

ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜೂನ್ 18 ರಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ಅಭಿನಂದನಾ ಸಮಾರಂಭ ಮತ್ತು ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಲಿದ್ದು ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಜೂ. 8 ರಂದು ಜರಗಿತು. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ‘ಸಹಕಾರ ರತ್ನ ‘ ಸವಣೂರು ಕೆ. ಸೀತಾರಾಮ ರೈ ಯವರು ಆಮಂತ್ರಣ ಪತ್ರವನ್ನು ಅನಾವರಣಗೊಳಿಸಿದ್ದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆ ಗುತ್ತು, ಸಹಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಮಾತೃ ಸಂಘದ ನೀರ್ದೇಶಕರುಗಳಾದ…

Read More

“ನಂಬಿಕೆ ವಿಶ್ವಾಸ ಬಲ ನಮ್ಮಲ್ಲಿದ್ದರೆ ಬದುಕು ಚೆನ್ನಾಗಿ ಸಾಗುತ್ತದೆ. ನಂಬಿಕೆ ಬೇಕು ಆದರೆ ಮೂಢನಂಬಿಕೆ ಬೇಡ. ತುಳುನಾಡಿನ ಮಣ್ಣಿನಲ್ಲಿ ನಾಗದೇವರ ಇರುವಿಕೆ ಬಗ್ಗೆ ನಂಬಿಕೆ ಮಣ್ಣಲ್ಲಿ ಬೆರೆತುಹೋಗಿದ್ದು ಬಾಳ ತೊತ್ತಾಡಿಯಂತಹ ಧಾರ್ಮಿಕ ಕೇಂದ್ರಗಳು ಪುನರುಜ್ಜೀವನಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ” ಎಂದು ಒಡಿಯೂರು ಶ್ರೀ ದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬಾಳ ತೊತ್ತಾಡಿ ನಾಗಬ್ರಹ್ಮ ಸ್ಥಾನದಲ್ಲಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು. “ಕಡಲಿಗೆ ಕಸ ತ್ಯಾಜ್ಯ ಎಸೆದರೆ ವಾಪಾಸ್ ಬರುತ್ತದೆ, ಅದೇ ಚಿನ್ನ ಎಸೆದರೆ ಬರುವುದಿಲ್ಲ ಯಾಕೆಂದರೆ ಒಳ್ಳೆಯದನ್ನು ಕಡಲು ಸ್ವೀಕರಿಸುತ್ತದೆ. ನಮ್ಮ ಜೀವನ ಕೂಡ ಹಾಗೆ ನಮಗೆ ಬೇಕಾದ್ದನ್ನು ಮಾತ್ರ ಸ್ವೀಕರಿಸಿ ಬೇಡವಾದ್ದನ್ನು ತಿರಸ್ಕರಿಸಬೇಕು” ಎಂದರು. ವೇದಿಕೆಯಲ್ಲಿ ಮುಂಬೈ ಸಮಿತಿ ಅಧ್ಯಕ್ಷರು ಕುಶಾಲ್ ಭಂಡಾರಿ ಐಕಳ ಬಾವ, ಬ್ರಹ್ಮಶ್ರೀ ಪಾಂಗಾಳ ಅನಂತ ಪದ್ಮನಾಭ ತಂತ್ರಿಗಳು, ಉದ್ಯಮಿ ಜೆ.ಡಿ ವೀರಪ್ಪ, ಡಾ| ರೋಹಿತ್, ರವೀಂದ್ರನಾಥ ಜಿ. ಶೆಟ್ಟಿ, ಕಳತ್ತೂರು, ಮುಂಬೈ ಸಮಿತಿ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್…

Read More

ಘಮಘಮ ಪರಿಮಳ ಬೀರುವ ಗುಲ್ವಾಡಿ ಸಣ್ಣಕ್ಕಿಯ ಅನ್ನವನ್ನು ಯಾರೆಲ್ಲಾ ಉಂಡಿದ್ದೀರಿ? ಊಟ ಮಾಡಿದವರಿಗಷ್ಟೇ ಗೊತ್ತು ಅದರ ರುಚಿ ಹಾಗೂ ಸುವಾಸನೆ. ಕರಾವಳಿಯ ನೆಲದಲ್ಲಿ ಅತ್ಯಂತ ವಿಶಿಷ್ಟವಾಗಿ ಬೆಳೆಯುತ್ತಿದ್ದ ಸುವಾಸನೆಯೇ ಪ್ರಧಾನವಾದ ಗುಲ್ವಾಡಿ ಸಣ್ಣಕ್ಕಿ ಭತ್ತದ ಬೇಸಾಯ ಈಗ ಇತಿಹಾಸದ ಪುಟ ಸೇರಿದೆ. ಕಲೆ, ಸಾಹಿತ್ಯ, ಕೃಷಿ ಸಂಸ್ಕೃತಿಯ ತವರೂರೆಂದೇ ಖ್ಯಾತಿ ಪಡೆದ ಗುಲ್ವಾಡಿ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಕರ್ನಾಟಕಕ್ಕೆ ಪ್ರಸಿದ್ಧಿ ತಂದುಕೊಟ್ಟ ಮೊಟ್ಟಮೊದಲ ಪ್ರತಿಷ್ಠಿತ ಸಾಮಾಜಿಕ ಕಾದಂಬರಿ “ಇಂದಿರಾ ಬಾಯಿ”ಯ ಕಾದಂಬರಿಕರ್ತ ಗುಲ್ವಾಡಿ ವೆಂಕಟರಾಯರು, ತರಂಗ ಸಂಪಾದಕ ಹಾಗೂ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿಯವರ ಕೌಟುಂಬಿಕ ನೆಲೆಯೂ ಆಗಿದೆ. ಈ ಗುಲ್ವಾಡಿಯ ದಾಸರಬೆಟ್ಟು ಎಂಬ ಪ್ರದೇಶದ ಮಣ್ಣಿನಲ್ಲಿ ಮಾತ್ರ ಹಿಂದೆ ಅತ್ಯಂತ ಪರಿಮಳ ಭರಿತ ಈ ಸಣ್ಣಕ್ಕಿಯ ಭತ್ತ ಸೊಗಸಾಗಿ ಬೆಳೆಯುತ್ತಿತ್ತು. ಅವರ ಗದ್ದೆಬಯಲಿಗೆ ತಾಗಿಕೊಂಡಂತೆಯೇ ಇದ್ದಂಥ ನಮ್ಮ ಕರ್ಕಿ ಬೈಲಿನಲ್ಲೂ ಕೂಡಾ ನಮ್ಮ ತಂದೆ ಬಿ. ರಾಮಣ್ಣ ಹೆಗ್ಡೆಯವರು ಸುಮಾರು ವರ್ಷಗಳ ಕಾಲ ಗುಲ್ವಾಡಿ ಸಣ್ಣಕ್ಕಿ…

Read More

ದೈವ, ದೇವರ ಬಗ್ಗೆ ನಂಬಿಕೆ ಇದ್ದರೆ ಧರ್ಮ ಉಳಿಯುತ್ತದೆ. ಬದುಕು ಉತ್ತಮವಾಗಿ ನಡೆಯಲು ದೈವ, ದೇವರ ಬಗ್ಗೆ ನಂಬಿಕೆ ಮುಖ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ 150 ವರ್ಷ ಪ್ರಯುಕ್ತ ಮಾ. 7ರ ವರೆಗೆ ನಡೆಯಲಿರುವ “ಕಂಕನಾಡಿ ಗರಡಿ 150-ನಮ್ಮೂರ ಸಂಭ್ರಮ’ ಸೋಮವಾರದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ತನ್ನ ಬದುಕಿನ ಉದ್ಧಾರದಂತೆಯೇ ಇನ್ನೊಬ್ಬರ ಬದುಕಿನ ಬಗ್ಗೆಯೂ ಕಾಳಜಿ ಹೊಂದುವುದು ಧರ್ಮ. ನಮ್ಮ ಬದುಕಿನ ನಿಯಂತ್ರಣಕ್ಕೆ ಧರ್ಮದ ಅಗತ್ಯವಿದೆ. ಧರ್ಮದ ಹಿಂದೆ ದೈವ, ದೇವರ ಬಗ್ಗೆ ನಂಬಿಕೆ ಇರಬೇಕು ಎಂದರು. ದೀಪ ಪ್ರಜ್ವಲನೆಗೈದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೆಟ್ಟಿ ಮಾತನಾಡಿ, ಕಂಕನಾಡ ಗರಡಿ ಕಾರಣಿಕ, ಪ್ರಸಿದ್ಧ ಕ್ಷೇತ್ರವಾಗಿದೆ. 150 ವರ್ಷಗಳ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು. ಬಹುಭಾಷಾ ಚಲನಚಿತ್ರ ನಟ ಸುಮನ್‌ ತಲ್ವಾರ್‌ ಮಾತನಾಡಿ, ದೇವರು, ದೈವದ ಶಕ್ತಿ ಇಲ್ಲದೆ ಸಾಧನೆ ಸಾಧ್ಯವಿಲ್ಲ.…

Read More