ಶಿರ್ವ ಪದವು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶಿರ್ವ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ರತನ್ ಕುಮಾರ್ ಶೆಟ್ಟಿಯವರ ಅಭಿನಂದನಾ ಸಮಾರಂಭವು ಮಾಜಿ ಸಚಿವ ವಿನಯ ಕುಮಾರ್ ಸೊರಕೆಯವರ ಅಧ್ಯಕ್ಷತೆಯಲ್ಲಿ ಶಿರ್ವ ಪದವು ಸಮಾಜ ಮಂದಿರದಲ್ಲಿ ನಡೆಯಿತು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗ್ರಾ.ಪಂ. ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ ಮತ್ತು ಸುನಾಲಿನಿ ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ ಮಾತನಾಡಿ ಯುವ ಕಾರ್ಯಕರ್ತ ರತನ್ ಶೆಟ್ಟಿಯವರ ಅಧಿಕಾರವಧಿಯಲ್ಲಿ ಗ್ರಾಮವು ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲಿ. ಗ್ರಾಮದ ಜನತೆಗೆ ಉತ್ತಮ ಸೇವೆ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಗ್ರಾ.ಪಂ. ಸದಸ್ಯ ನವೀನ್ ಕುಮಾರ್, ನಂದಳಿಕೆ ಚಾವಡಿ ಮನೆಯ ಸುಹಾಸ್ ಹೆಗ್ಡೆ, ಶಿರ್ವ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ಉದ್ಯಮಿಗಳಾದ ಸುಧೀರ್ ಶೆಟ್ಟಿ ಅಟ್ಟಿಂಜ, ರಾಜೇಶ್ ಶೆಟ್ಟಿ ಶಬರಿ, ರಾಜೇಶ್ ಪೂಜಾರಿ ಭಾಗವಹಿಸಿದ್ದರು. ಶೇಖರ ಶೆಟ್ಟಿ ನಡಾಯಿ, ನವೀನ್ ಶೆಟ್ಟಿ ಗಂಗೆಜಾರು, ರಮೇಶ್ ಶೆಟ್ಟಿ ಕಡಂಬು, ಗೀತಾ ವಾಗ್ಲೆ, ಮೋಹನ ಎಸ್, ವಿಲಿಯಂ ಡಿಸೋಜಾ, ಉಮೇಶ್ ಆಚಾರ್ಯ, ಪದವು ಸ್ಪೋಟ್ರ್ಸ್ ಕ್ಲಬ್ನ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ನಿವೃತ್ತ ಬ್ಯಾಂಕ್ ಪ್ರಬಂಧಕ ಸದಾನಂದ ಎಸ್. ಸ್ವಾಗತಿಸಿದರು. ಶಿಕ್ಷಕ ದೇವಿಪ್ರಸಾದ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ಉದಯ ವಂದಿಸಿದರು.