Author: admin
ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿಯಾಗಿದ್ದಾಗ ಇಸ್ರೋದ ಚಂದ್ರಯಾನದ ಕನಸುಗಳು ಆರಂಭವಾದವು. ವಾಜಪೇಯಿಯೇ ಚಂದ್ರಯಾನವನ್ನು ಘೋಷಿಸಿದ್ದರು. ಆದರೆ ಚಂದ್ರಯಾನ-1 ಸಾಕಾರಗೊಂಡಿದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ. 2008ರಲ್ಲಿ ಹೊರಟ ಈ ನೌಕೆ, 2009ರಲ್ಲಿ ಚಂದ್ರನಲ್ಲಿ ನೀರಿದೆ ಎಂಬ ಅದ್ಭುತ ಸುಳಿವು ನೀಡಿ ಸಂಪರ್ಕ ಕಳೆದುಕೊಂಡಿತು. ಇದೂ ಕೂಡ ಅದ್ಭುತ ಯಶಸ್ಸು. ಇದರ ಬೆನ್ನಲ್ಲೇ ಇಸ್ರೋ ತನ್ನ ಪ್ರಯತ್ನ ನಿಲ್ಲಿಸಲಿಲ್ಲ. 2019ರಲ್ಲಿ ಮತ್ತೆ ಚಂದ್ರ ಯಾನ-2ನೇ ಭಾಗ ಆರಂಭವಾಯಿತು. ಜು.22ಕ್ಕೆ ಹೊರಟ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಸೆ.6ಕ್ಕೆ ಚಂದ್ರನ ಮೇಲೆ ಇಳಿಯುವ ಹಂತದಲ್ಲಿ ಸಂಪರ್ಕ ಕಳೆದುಕೊಂಡಿತು. ಆಗ ಇಸ್ರೋ ಅಧ್ಯಕ್ಷರಾಗಿದ್ದವರು ಕೆ.ಶಿವನ್. ಈಗ ಪ್ರಧಾನಿ ನರೇಂದ್ರ ಮೋದಿಯವರ ಆಶಯ ಮತ್ತು ಎಸ್.ಸೋಮನಾಥ್ ನೇತೃತ್ವದಲ್ಲಿ ಇನ್ನೊಮ್ಮೆ ಚಂದ್ರಯಾನ ಆರಂಭವಾಗಿದೆ. ಹಿಂದೆ ಆದ ಯಾವುದೇ ತಪ್ಪಾಗದಂತೆ ನಿರಂತರ ಪರಿಶ್ರಮ ವಹಿಸಲಾಗಿದೆ. ಎಲ್‌ವಿಎಂ3-ಎಂ4 (ಹಿಂದಿನ ಜಿಎಸ್‌ಎಲ್‌ವಿ) ರಾಕೆಟ್ ಮೂಲಕ ಶುಕ್ರವಾರ ಚಂದ್ರನಲ್ಲಿಗೆ ನೌಕೆ ಹೊರಟಿದೆ. ಅಲ್ಲಿಗೆ ಉಡಾವಣೆ ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳಿಗೆ ಭಾರೀ ಯಶಸ್ಸು ಲಭಿಸಿದೆ. ನಿಜವಾದ…
ರೋಟರಿ ಮಂಗಳೂರು ಪೂರ್ವ ಇದರ 2023-24 ರ ಸಾಲಿನ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಗರದ ಮೋತಿಮಹಲ್ ಹೋಟೆಲಿನ ಸಭಾ ಭವನದಲ್ಲಿ ಜರುಗಿತು. ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲೆ 3181 ರ 2025-26ರ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ರಾಮಕೃಷ್ಣರವರು ಪದಗ್ರಹಣ ನೆರವೇರಿಸಿ ಮಾತನಾಡುತ್ತಾ ರೋಟರಿ ಅತ್ಯಂತ ಶ್ರೇಷ್ಠ ಸೇವಾ ಸಂಸ್ಥೆ. ಈ ಸಂಸ್ಥೆಯ ಮುಖಾಂತರ ಸಮುದಾಯದ ಅಸಹಾಯಕರ ಕಣ್ಣೀರೊರೆಸುವ ಕೆಲಸ ಮಾಡಬೇಕೆಂದು ಸದಸ್ಯರಿಗೆ ಕರೆ ನೀಡಿದರು. ಮುಂಡಾಡಿಗುತ್ತು ಜಯರಾಮ ಶೆಟ್ಟಿ ಅಧ್ಯಕ್ಷರಾಗಿಯೂ, ಮಾಜಿ ಸಹಾಯ ಗವರ್ನರ್ ಸದಾಶಿವ ಶೆಟ್ಟಿಯವರು ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಅಧ್ಯಕ್ಷ ಸಿ.ಎ ಹರೀಶ್ ಶೆಟ್ಟಿಯವರು ಸ್ವಾಗತಿಸಿ ಕಳೆದ ವರ್ಷ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಜೋಯಲ್ ಸಲ್ದಾನ ಗತ ವರ್ಷದ ವರದಿ ಮಂಡಿಸಿದರು. ಜಿಲ್ಲಾ ಸಹ ತರಬೇತುದಾರ ಶೇಖರ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ವಸಂತ ಶೆಟ್ಟಿ ನೂತನ ಸದಸ್ಯರನ್ನು ಪರಿಚಯಿಸಿದರು. ಕ್ಲಬ್ ವತಿಯಿಂದ…
ಧೋನಿ ಎನ್ನುವ ವ್ಯಕ್ತಿ ಕೇವಲ ಕ್ರೀಡಾಪಟುವಲ್ಲ. ಯಶಸ್ಸಿನ ಬೆನ್ನು ಹತ್ತಿ ಹೋಗುವ ಪ್ರತಿಯೊಬ್ಬ ವ್ಯಕ್ತಿಗೂ ಮಹೇಂದ್ರ ಸಿಂಗ್ ಧೋನಿ ಒಂದು ದೊಡ್ಡ ವಿಶ್ವವಿದ್ಯಾಲಯ. ಧೋನಿಯಿಂದ ಕಲಿಯಲು ಆಗದಷ್ಟು ಗುಣಗಳನ್ನು ನಾವು ಪಟ್ಟಿ ಮಾಡಬಹುದು. ಯಾರು ಏನೇ ಹೇಳಲಿ ಕ್ರಿಕೆಟ್ ಹಾಗೂ ಕ್ರೀಡಾ ಲೋಕ ನೋಡಿದ ಅಪ್ರತಿಮ ನಾಯಕ ಧೋನಿ. ಧೋನಿಯ ಆಟಕ್ಕೆ ಪೂರ್ಣ ವಿರಾಮ ಬಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕೊನೆಯುಸಿರಿನವರೆಗೆ ಧೋನಿಯನ್ನು ಮರೆಯಲು ಸಾಧ್ಯವಿಲ್ಲ. ಸಚಿನ್ ಆಟವನ್ನು ನೋಡಿಕೊಂಡು ಕ್ರಿಕೆಟ್ ಹುಚ್ಚು ಹಿಡಿಸಿಕೊಂಡವನು ನಾನು. ಆದರೆ ಧೋನಿಯ ರೀತಿ ನನ್ನಲ್ಲಿ ಕ್ರಿಕೆಟ್‌ನ ಭಾವನೆಯನ್ನು ಬಿತ್ತಿದ ಮತ್ತೋರ್ವ ಆಟಗಾರನಿಲ್ಲ. ಇತ್ತೀಚೆಗಂತೂ ಐಪಿಎಲ್ ಎಂದರೆ ಅದು ಕೇವಲ ಧೋನಿ ನೋಡಲು ಸೀಮಿತವಾಗಿತ್ತು. ಧೋನಿ ಮುಖವನ್ನು ನೋಡುತ್ತಿದ್ದರೆ ಅದೇನೋ ಮನಸ್ಸಿಗೆ ಖುಷಿ. ಇಂದು ಕೂಡ ಧೋನಿಯನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಬೆಳಗಿನ ಜಾವ ಮೂರೂವರೆಯಾದರೂ ಟಿವಿ ಆನ್ ಮಾಡಿ ಕೂತಿದ್ದೆ. ಧೋನಿಯ ಯಾವುದೇ ಕ್ಷಣವನ್ನು ನಾನು ಮಿಸ್ ಮಾಡಿಕೊಳ್ಳಬಾರದು ಎನ್ನುವುದೊಂದೇ ನನ್ನ ಉದ್ದೇಶವಾಗಿತ್ತು. ಧೋನಿಯ…
ಮನುಷ್ಯನ ಜೀವನ ಹರಿಯುವ ನೀರಾಗಬೇಕು. ಅದು ಮನುಷ್ಯನ ಮೂಲ ನಂಬಿಕೆಯಿಂದ ಸಾಧ್ಯ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಕಲಶಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಂಬಿಕೆ, ವಿಶ್ವಾಸದಿಂದ ಬದುಕು ಪಾವನವಾಗಲು ಸಾಧ್ಯ, ಹತ್ತು ವರ್ಷದ ಹಿಂದಿನ ಅತ್ತೂರು ಇದೀಗ ಸಾಕಷ್ಟು ಅಭಿವೃದ್ಧಿಗೊಂಡಿದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ ಮತ್ತು ಧಾನ ಧರ್ಮದಿಂದ ಅತ್ತೂರು ಬೆಳೆಯಲು ಸಾಧ್ಯ, ಕ್ರಿಯಾಶೀಲ ಬದುಕು ತುಳುವರದ್ದು, ಮೂರು ಗ್ರಾಮಗಳ ಐಕ್ಯತೆಯಿಂದ ಮತ್ತಷ್ಟು ಪ್ರಸಿದ್ಧಿ ಕಂಡಿದೆ. ಮಾನವೀಯ ಮೌಲ್ಯ ಅತ್ತೂರಿನಲ್ಲಿ ತುಂಬಿದೆ ಎಂದರು. ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದೈವ ದೇವರು ಎಂಬುದು ನಂಬಿಕೆ, ಅರಸು ಕುಂಜಿರಾಯ ದೈವದ ಮೇಲಿನ ಭಕ್ತಿ ಅಪಾರವಾಗಿದ್ದ ಕಾರಣ ದೈವಸ್ಥಾನ ಇಷ್ಟೊಂದು ಅಭಿವೃದ್ಧಿ ಕಾಣಲು ಸಾಧ್ಯವಾಯಿತು ಎಂದರು. ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ದೈವಗಳಿಗೆ ಸಿರಿ ಸಿಂಗಾರದ ನೇಮ ಕೊಡಬೇಕು, ಬೆಳ್ಳಿ ಬಂಗಾರದ…
ಬಂಟರ ಸಂಘ (ರಿ) ಸುರತ್ಕಲ್, ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಸಹಯೋಗದೊಂದಿಗೆ ಜನವರಿ 22 ಭಾನುವಾರ ಬೆಳಿಗ್ಗೆ 8.30 ಕ್ಕೆ ಸುರತ್ಕಲ್ ಗೋವಿಂದದಾಸ ಕಾಲೇಜು ಕ್ರೀಡಾಂಗಣದಲ್ಲಿ ಬಂಟರ ಕ್ರೀಡೋತ್ಸವ ನಡೆಯಲಿದೆ. ಬಂಟರ ಕ್ರೀಡೋತ್ಸವವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ರಾಜ್ ಗೋಪಾಲ್ ರೈ, ಬಂಟರ ಮಾತೃ ಸಂಘದ ಮಾಜೀ ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಉದ್ಯಮಿ ದೇವದಾಸ ಕೆ ಶೆಟ್ಟಿ ಬಾಳ ಸಾನದ ಹೊಸಮನೆ, ಬಂಟರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನಿಟ್ಟೆಗುತ್ತು ರವಿರಾಜ ಶೆಟ್ಟಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಸಮಾರೋಪ…
ಹೊಸ ವರ್ಷ ಎಲ್ಲರ ಬಾಳಲಿ ಹೊಸತನ ತರಲಿ ಎಂಬ ಶುಭಾಶಯಗಳೊಂದಿಗೆ ಈ ವರ್ಷ ವಿಡಿ ಉತ್ತಮವಾಗಿ ಸಾಗಲಿ ಎಂಬ ಆಶಯ, ಹಂಬಲ, ಉತ್ಸಾಹದೊಂದಿಗೆ 2023ರ ಆಗಮನದ ಹರುಷದಲ್ಲಿ ಎಲ್ಲರೂ ಸತ್ಕರ್ಮ, ಸತ್ಯನಿಷ್ಠೆ, ಪ್ರಾಮಾಣಿಕತೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದಾಗಿ ಸಂಕಲ್ಪಸಿಕೊಂಡು ಹೊಸ ಯೋಜನೆ, ನವಕಲ್ಪನೆಯೊಂದಿಗೆ ಬದುಕಿಗೆ ಅರ್ಥಕೊಡಲು ಜೀವನದಲ್ಲಿ ನಿಶ್ಚಿತ ಗುರಿಯನ್ನಿಟ್ಟು ಕೊಂಡಿರುವವರು ಯಶಸ್ವಿ ಆಗುವುದು ಖಂಡಿತಾ. ಹಾಗೆಯೇ ಹೊಸವರ್ಷವನ್ನು ಕ್ರೀಯಾ ಶೀಲತೆಯಿಂದ ಸ್ವಾಗತಿಸುತ್ತಾ ನಿಶ್ಚಿತವಾದ ಗುರಿಯೊಂದಿಗೆ ಹೊಸ ಹೆಜ್ಜೆಯಿಟ್ಟು ಹೊಸ ಅರುಣೋದ ಸಂತಸದ ಫಲಿತಾಂಶಕ್ಕಾಗಿಕಾಯೋಣ. ಡಿಸೆಂಬರ್ 31 ರ ರಾತ್ರಿ ಎಲ್ಲೆಡೆ ಗೌಜು, ಗದ್ದಲ, ಡಿಸ್ಕೋ ನೃತ್ಯ ಕುಣಿತದ ಸಂಭ್ರಮದಲ್ಲಿ ರಾತ್ರಿ ಅಲೆದಾಟ , ತಿರುಗಾಟ ಇದು ನಗರಜೀವಿಗಳ ಹೊಸ ವರ್ಷಾಚರಣೆ, ಪಾರ್ಟಿ, ಮೋಜು, ಮಸ್ತಿ, ಪಾಶ್ಚಾತ್ಯ ಅನುಕರಣೆ ಅನಿಸಿದರೂ ಅನುಸಂಧಾನಗಳಲ್ಲಿ ಜೀವನದ ಗತಿ, ಬದಲಾಗುತ್ತಿರುವ ಕಾಲ, ಸಾಮಾಜಿಕ ಪರಿಸ್ಥಿತಿ ಇಂದಿನ ಪರಿಸರದೊಂದಿಗೆ ಬಾಳುವ ಸಹಜ ಸ್ವಭಾವದಂತೆ ಹೊಸ ವರ್ಷದ ಆಚರಣೆ ಕೂಡ ಸರ್ವ ಸಾಮಾನ್ಯವಾಗಿದೆ. ನಮ್ಮೆಲ್ಲರ ಬದುಕಿನ ತುಡಿತ ,…
ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) “ಗುರು ಬ್ರಹ್ಮ -ಗುರು ವಿಷ್ಣು – ಗುರು ದೇವೋ -ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ – ತಸ್ಮೈ ಶ್ರೀ ಗುರುವೇ ನಮಃ..” ಇದು ನಾವು ಗುರುಗಳಿಗೆ ಕೊಡುವಂತಹ ಶ್ರೇಷ್ಠವಾದಂತ ಗೌರವ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಧ್ಯರ್ಜನೆ ಮಾಡುವಂತಹ ಶಿಕ್ಷಕರು ದೇವರೆಂದು ಪೋಷಕರು ನಂಬಿರುತ್ತಾರೆ . ಬುದ್ಧಿವಂತರ ಜಿಲ್ಲೆಯ, ಉಡುಪಿ ಜಿಲ್ಲೆಯಲ್ಲಿ ಶಿಕ್ಷಕರಿಗೆ ಅವಮಾನವಾಗುವಂತಹ ರೀತಿಯಲ್ಲಿ ಈ ಶಿಕ್ಷಕರ ವರ್ತನೆ ಸಮಾಜಕ್ಕೆ ಮುಜುಗರ ತಂದಿದೆ. ಅದಲ್ಲದೆ ಶ್ರೇಷ್ಠ ಶಿಕ್ಷಕರ ಪಾಲಿಗೆ ಇದು ಕಳಂಕವಾಗಿದೆ. ಆದರೆ ಪಾನಮುಕ್ತರಾದಂತಹ ಶಿಕ್ಷಕರು ಶಾಲೆಯಲ್ಲಿ ಈ ರೀತಿ ವರ್ತನೆ ಮಾಡಿರುವುದು ಸಮಾಜ ತಲೆತಗ್ಗಿಸುವಂತಹಾಗಿದೆ. ಮಕ್ಕಳಿಗೆ ಬೇಕಾದ ಹಲವಾರು ಪಠ್ಯಪುಟ್ಯಂತರ ಸೂಟಿಕೆಗಳನ್ನ ಕಾಲಕ್ಕೆ ತಕ್ಕಂತೆ ಸಮರ್ಪಕವಾಗಿ ನೀಡುವ ಶಿಕ್ಷಕರ ಪಾಡು ಹೀಗಾದರೆ ವಿದ್ಯಾರ್ಥಿಗಳ ಪರಿಸ್ಥಿತಿಯಂತೂ ಎಂದು ಪೋಷಕರು ಮರುಮರು ಮರುಗುತ್ತಿದ್ದಾರೆ ಉಡುಪಿ ಜಿಲ್ಲೆಯಲ್ಲಿ ನಡೆದಂತಹ ಘಟನೆ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಚುಂಗಮಹಾಗೆ ಎಳೆಯಲಾಗುತ್ತಿದೆ ಆದರೆ ಉಡುಪಿ…
ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ವಿ ಶೆಟ್ಟಿ ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದ ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ, ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ ಅಲ್ಲಿನ ಹೊಟೇಲ್‌ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು. ಮುಂದೆ ಅವರಿಗೆ ಹೊಟೇಲ್‌ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್‌ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೈಟರ್, ಕ್ಯಾಪ್ಟನ್‌ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂಥ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್‌ನಲ್ಲಿ 12 ವರ್ಷಗಳ ಕಾಲ ಮ್ಯಾನೇಜರ್ ಆಗಿ ದುಡಿದರು. ಮುಂಬೈಗೆ ಬಂದಾಗ ಅವರಿಗೆ 13ರಿಂದ 14 ವರ್ಷ ಆಗಿತ್ತು. ಅಲ್ಲಿ 18 ವರ್ಷಗಳ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಮುಖಿ ಕಾರ್ಯ ಶ್ಲಾಘನೀಯ. ವರ್ಷಕ್ಕೊಮ್ಮೆ ಆರ್ಥಿಕ ಸಂಕಷ್ಟದಲ್ಲಿರುವವರನ್ನು ಗುರುತಿಸುವ ಸಂಘಟನೆಗಳು ಇವೆ. ಆದರೆ ಪ್ರತೀ ತಿಂಗಳು ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಸಮಾಜಕಲ್ಯಾಣ ಯೋಜನೆಯಡಿಯಲ್ಲಿ ಬಡವರನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಸಾಧಕರನ್ನು ಕೂಡಾ ಗೌರವಿಸುತ್ತಿದೆ. ಇಂದು ಎಲ್ಲಾ ಕಡೆ ಅತೀ ಹೆಚ್ಚು ಬಂಟರ ಸಮುದಾಯದ ಭವನಗಳಿವೆ. ಇದನ್ನು ಎಲ್ಲಾ ಸಮುದಾಯ ಅನುಕರಣೆ ಮಾಡಬೇಕಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ತಿಳಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಬಂಟ್ಸ್ ಹಾಸ್ಟೇಲ್‌ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿದ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಎಲ್ಲಾ ಕಡೆ ಹೋಗಿ ಸರಕಾರಿ ಕೆಲಸ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಿದಾಗ ಸಮಾಜಕ್ಕೆ ಸಹಾಯವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ…