ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ವತಿಯಿಂದ ಸಮಾಜ ಬಾಂಧವರಿಗಾಗಿ ಬಾಕ್ಸ್ ಕ್ರಿಕೆಟ್ ಕೂಟವು ಡಿ 9 ಶನಿವಾರದಂದು ಪುಣೆಯ ಮುಂದ್ವಾ ಪ್ರೀ ಕಿಕ್ ಪುಟ್ಬಾಲ್ ಗ್ರೌಂಡ್ ನಲ್ಲಿ ನಡೆಯಿತು. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆಯವರು ಬಾಕ್ಸ್ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಚಾಲನೆ ನೀಡಿದರು.
ಕ್ರೀಡಾ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಬಾಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಪುಣೆಯ ವಿವಿಧ ಭಾಗದ ಪುಣೆ ಬಂಟ್ಸ್ ಯೂಥ್, ಸಾಯಿ ಕ್ರಿಕೆಟರ್ಸ್, ದೇಹು ರೋಡ್ ಎ, ಫಿನಿಕ್ಸ್ ಸೇವೆನ್, ಬಂಟ್ಸ್ ಅಸೋಸಿಯೇಷನ್, ಎರ್ಮಾಲ್ ಬಂಟ್ಸ್, ಇನ್ಟಿ ಡಿಬೇಲ್ಸ್, ಬಂಟ್ಸ್ ಅಸೋಸಿಯೇಷನ್ ಯೂತ್, ದೇಹು ರೋಡ್ ಬಿ, ಕಟೀಲ್ ನಂದಿನಿ, ಟೀಂ ಕಾಂತರ, ರೈಸಿಂಗ್ ಸ್ಟಾರ್ಸ್, ಟಿ. ಕೆ ಚಾಂಪಿಯನ್ಸ್, ಟೀಂ ಆರ್. ಕೆ, ಕಟೀಲ್ ಸ್ಟಾರ್ಸ್, ಬಂಟ್ಸ್ ಅಸೋಸಿಯೇಷನ್ ವಾರಿಯರ್ಸ್, ಸೇರಿದಂತೆ 16 ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯಾಟವು ನಡೆಯಿತು. ಫೈನಲ್ ಪಂದ್ಯಾಟವು ದೇಹು ರೋಡ್ ಎ ಮತ್ತು ಬಂಟ್ಸ್ ಸಂಘ ಯೂಥ್ ತಂಡಗಳೊಂದಿಗೆ ನಡೆಯಿತು. ಜಿದ್ದಾಜಿದ್ದಿನ ಪಂದ್ಯದಲ್ಲಿ ದೇಹು ರೋಡ್ ಎ ತಂಡವು ವಿಜೇತರಾಗಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಬಂಟ್ಸ್ ಸಂಘ ಯೂಥ್ ತಂಡವು ದ್ವಿತೀಯ ಸ್ಥಾನಿಯಾಯಿತು.
ಉತ್ತಮ ಬ್ಯಾಟರ್ ಆಗಿ ಅಭಿನಂದನ್ ಶೆಟ್ಟಿ ಮತ್ತು ದೀಕ್ಷಾ ರೈ ಉತ್ತಮ ಎಸೆತಗಾರರಾಗಿ ಪ್ರಿತಂ ಶೆಟ್ಟಿ ಮತ್ತು ಅನುಜಾ ಶೆಟ್ಟಿ, ಪಂದ್ಯ ಶ್ರೇಷ್ಠರಾಗಿ ವಿನಯ್ ಶೆಟ್ಟಿ ಮತ್ತು ಅನಿತಾ ಶೆಟ್ಟಿ ಪ್ರಶಸ್ತಿ ಪಡೆದರು. ಪ್ರಶಸ್ತಿ ವಿಜೇತ ತಂಡಗಳನ್ನು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಮತ್ತು ಸಮಿತಿ ಪದಾಧಿಕಾರಿಗಳು ಅಭಿನಂದಿಸಿದರು. ಈ ಸಂದರ್ಭದಲ್ಲಿ ಪುಣೆ ಬಂಟ್ಸ್ ಅಸೋಸಿಯೇಷನ್ ನ ಪ್ರಮುಖರಾದ ಮಾಜಿ ಅಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ಆನಂದ್ ಶೆಟ್ಟಿ ಮಿಯ್ಯಾರ್, ಪ್ರ. ಕಾರ್ಯದರ್ಶಿ ಅರವಿಂದ್ ರೈ, ಕ್ರೀಡಾ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ರೋಹನ್ ಶೆಟ್ಟಿ, ಕ್ರೀಡಾ ಉಪ ಕಾರ್ಯಾಧ್ಯಕ್ಷ ಅಭಿಜಿತ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಉಷಾ ಯು. ಶೆಟ್ಟಿ, ಮಾಜಿ ಅಧ್ಯಕ್ಷೆಯರುಗಳಾದ ಮಲ್ಲಿಕಾ ಎ ಶೆಟ್ಟಿ ಮತ್ತು ದೀಪಾ ಎ ರೈ, ಮತ್ತು ಸಮಿತಿಯ ಪೂರ್ಣಿಮಾ ಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರು ಕ್ರಿಕೆಟ್ ತಂಡಗಳ ಆಟಗಾರರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಅಸೋಸಿಯೇಷನ್ ನ ಕ್ರೀಡಾ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದಿರೆ