Author: admin
2002 ರಲ್ಲಿ ಸ್ಥಾಪನೆಗೊಂಡ ಬಂಟ್ಸ್ ಬಹರೈನ್ ತನ್ನ 20 ನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇತ್ತೀಚಿಗೆ ಸಂಪನ್ನಗೊಂಡ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಹಿರಿಯ ಸದಸ್ಯರಲ್ಲೋರ್ವರಾದ ಶ್ರೀ ಸೌಕೂರು ಅರುಣ್ ಶೆಟ್ಟಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವಕೀಲರಾಗಿದ್ದ ದಿವಂಗತ ಶ್ರೀ ಮೋಹನ್ ದಾಸ್ ಶೆಟ್ಟಿ ಹಾಗೂ ದಿವಂಗತ ಶ್ರೀಮತಿ ಸೌಕೂರು ಹೇಮಲತಾ ಶೆಟ್ಟಿಯವರ ಪುತ್ರ ಶ್ರೀ ಅರುಣ್ ಶೆಟ್ಟಿಯವರು ಈ ಹಿಂದೆ ಸೆಷನ್ ಕೋರ್ಟ್ ನ್ಯಾಯಾಧೀಶರಾಗಿದ್ದ ಸೌಕೂರು ನಾರಾಯಣ ಶೆಟ್ಟಿಯವರ ಮೊಮ್ಮಗ ಕೂಡ. ನಗುಮೊಗದ, ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿದ್ದ ಶ್ರೀ ಅರುಣ್ ಶೆಟ್ಟಿಯವರ ಆಯ್ಕೆ ಬಂಟ್ಸ್ ಬಹರೈನ್ ನ ಸರ್ವ ಸದಸ್ಯರಿಗೂ ಸಂತೋಷವನ್ನುಂಟುಮಾಡಿದೆ. ಅರುಣ್ ಶೆಟ್ಟಿಯವರು ಪ್ರಸ್ತುತ ಬಹರೈನ್ ನ ಪ್ರಸಿದ್ಧ ನಾಸ್ಸರ್ ಫಾರ್ಮಸಿ ಸಂಸ್ಥೆಯಲ್ಲಿ ಬ್ರಾಂಡ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ಉಡುಪಿಯ MGM ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ, ಕಬ್ಬಡ್ಡಿ ಆಟಗಾರನಾಗಿ…
ಮಾತೆಕ್ಲಾ ದರ್ಬಾರ್ಡ್ ಖರ್ಚಿ ಮಲ್ಪುನಕುಲು ಅಕಲೆಗ್ ಬೋಡಾಯಿನಕುಲು ಸೀಕಿಡ್ ಆಸ್ಪತ್ರೆಡ್ ಇತ್ತೆರ್ಡ್ ತೂವರೆ ಪೋನಗ ಬೊಂಡ್ಡಲಾ ಮುಸುಂಬಿಲಾ ಪತೊಂದು ಪೋಪಿನಿ. 😃 ಪಾಪದಕುಲು ಪನ್ದ್ ದೊಡ್ಡು ಕೊರಯೆರ್. ಆಸ್ಪತ್ರೆಡ್ ಸೀಕಿಡ್ ಇತ್ತಿನಕಲೆಗ್ ಬೊಂಡ್ಡಾ, ಮುಸುಂಬಿದ ಅಗತ್ಯ ಉಪ್ಪುಜಿ, ಅಕಲೆಗ್ ನಿಜವಾದ್ಲಾ ಅಗತ್ಯ ಉಪ್ಪುನು ಮರ್ದಿಗ್ ಬೊಕ್ಕ ಆಸ್ಪತ್ರೆದ ಬಿಲ್ಲ್ ಕಟ್ಟರೆ ದೊಡ್ಡುದ ಅವಶ್ಯಕತೆ. ಅಯಿಡ್ದಾತ್ರ ನಮ ಒಂತೆ ಸುಧಾರಿಗಾ, ಸೀಕಿಡ್ ಆಸ್ಪತ್ರೆಡ್ ಇತ್ತಿನ ಬಂಧುಲೆಗ್ ಬೊಂಡ್ಡಾ, ಮುಸುಂಬಿ ಕೊನೊಪಿನ ಉಂತಾದ ಸಾಧ್ಯ ಇತ್ತಿಂಡ್ಡಾ ದೊಡ್ಡುಡೇ ಸಹಾಯ ಮಲ್ಪುನ ಮಲ್ಲಾ ಮನಸ್ಸ್ ಮಲ್ಪುಗಾ ಪನ್ಪಿನ ಆಶಯ ಮಲ್ತ್ ಬಯ್ಯದ ಮದಿಪುನು ಮುಗ್ಯುಪುವೆ. * * * * * * ಓಂ ನಮ: ಶಿವಾಯ:
ಯುವ ಬಂಟ ಸಂಘ ಪುತ್ತೂರು ಇದರ ವತಿಯಿಂದ ಜನವರಿಯಲ್ಲಿ ನಡೆಯಲಿರುವ ಪುತ್ತೂರ್ದ ಬಂಟ ಜವನೆರೆ ಗೊಬ್ಬು ದಿ| ಅಗರಿ ಜೀವನ್ ಭಂಡಾರಿ ಸ್ಮರಣಾರ್ಥ ಜನವರಿ 6 ಮತ್ತು 7 ರಂದು ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ “ಬಂಟ್ಸ್ ಪ್ರೀಮಿಯರ್ ಲೀಗ್” ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆವರಣದಲ್ಲಿ ನಡೆಯಿತು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ, ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕೋಶಾಧಿಕಾರಿ ಕೆ ಸಿ ಅಶೋಕ್ ಶೆಟ್ಟಿ, ಕ್ರೀಡಾ ಸಂಚಾಲಕ ನವೀನ್ ರೈ ಪಂಜಳ, ಬಿಪಿಎಲ್ ಸಂಚಾಲಕ ಸಂದೇಶ್ ರೈ ಸಂಪ್ಯ, ಕ್ರಿಕೆಟ್ ಸಂಯೋಜಕರಾದ ಕಾರ್ತಿಕ್ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ, ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಯಕ್ಷ ಶಿಕ್ಷಣ ದೇವರ ಪೂಜೆಗೆ ಸಮಾನ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ 40 ಸರಕಾರಿ ಶಾಲೆಗಳ 4 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಯಕ್ಷ ಶಿಕ್ಷಣ ನೀಡಲಾಗುತ್ತಿದೆ. ಯಕ್ಷಗುರು ರಾಕೇಶ್ ರೈ ಅಡ್ಕ ಜಿಲ್ಲೆಯ ಅಗ್ರಮಾನ್ಯ ಯಕ್ಷಗಾನ ಗುರುಗಳಲ್ಲಿ ಒಬ್ಬರಾಗಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಹೇಳಿದರು. ಸುರತ್ಕಲ್ ಬಂಟರ ಸಂಘ ವತಿಯಿಂದ ನಡೆಯುತ್ತಿರುವ ಯಕ್ಷಸಿರಿ ಯಕ್ಷಗಾನ ತರಬೇತಿ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು. ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಕಟ್ಲ ಪ್ರಾಸ್ತಾವಿಕ ಮಾತನಡಿದರು. ಸಂಘದ ನಿಕಟ ಪೂರ್ವಾಧ್ಯಕ್ಷ ಸುಧಾಕರ್ ಎಸ್. ಪೂಂಜ, ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಕೇಸರಿ ಎಸ್.ಪೂಂಜ, ಜಗನ್ನಾಥ ಶೆಟ್ಟಿ ಬಾಳ, ಯಕ್ಷಸಿರಿ ಸಂಘಟಕಿ ಕವಿತಾ ಪುಷ್ಪರಾಜ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಯಕ್ಷಮಿತ್ರರು ಸುರತ್ಕಲ್ ಇದರ ಅಧ್ಯಕ್ಷ ಜಗದೀಪ್ ಶೆಟ್ಟಿ, ಉದ್ಯಮಿಗಳಾದ…
“ಮನೋರಂಜನೆ ಜತೆಗೆ ಮನೋವಿಕಸನ ಮಾಡುವ ಮತ್ತು ಮಕ್ಕಳ ಬದುಕಿನ ಸ್ಫೂರ್ತಿ ನೀಡುವ ಸಿನಿಮಾಗಳ ಅಗತ್ಯ ಇದೆ. ಈ ಪೈಕಿ ಬನ್ – ಟೀ ಚಲನಚಿತ್ರ ಸಮಾಜ ಮುಖಿ ಚಿಂತನೆಗೆ ಹಚ್ಚುವ ಪ್ರಯತ್ನವಾಗಿ ನಿರ್ಮಿಸಿರುವುದು ಶ್ಲಾಘನೀಯ” ಎಂದು ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್ ಹೇಳಿದರು. ನಗರದ ನಕ್ಸಲ್ ಮಾಲ್ ನ ಪಿವಿಆರ್ ಮಲ್ಟಿಫ್ಲೆಕ್ಸ್ ನಲ್ಲಿ ಶುಕ್ರವಾರ ಡಾ. ನಾಗತಿಹಳ್ಳಿ ಚಂದ್ರಶೇಖರ್ ಪ್ರಸ್ತುತಿಯ ಉದಯ್ ಕುಮಾರ್ ಪಿ. ಎಸ್. ನಿರ್ದೇಶನದ ಬನ್ – ಟೀ ಕನ್ನಡ ಚಲನಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹಿರಿಯ ಕಲಾವಿದ ಕದ್ರಿ ನವನೀತ ಶೆಟ್ಟಿ ಮಾತನಾಡಿ, “ಇಂದಿನ ಯುವ ಪೀಳಿಗೆಗೆ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಯ ಸಂದೇಶ ನೀಡಬಲ್ಲ ಬನ್ – ಟೀ ಎಂಬ ಮೌಲ್ಯಯುತ ಸಿನಿಮಾದಲ್ಲಿ ಮಂಗಳೂರಿನ ಬಾಲನಟ ತನ್ಮಯ್ ಶೆಟ್ಟಿ ಅಭಿನಯಿಸಿರುವುದು ಕರಾವಳಿಗರಿಗೆ ಹೆಮ್ಮೆಯ ವಿಷಯ” ಎಂದರು. ಈ ಸಂದರ್ಭ ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ವಿಜಯ…
ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಇದು ಮಾನವರು, ಸಸ್ಯಗಳು, ಪ್ರಾಣಿಗಳು, ನೀರು, ಗಾಳಿ ಇತ್ಯಾದಿಗಳನ್ನು ಒಳಗೊಂಡಂತೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಜೀವಂತ ಮತ್ತು ನಿರ್ಜೀವ ಘಟಕಗಳನ್ನು ಒಳಗೊಂಡಿದೆ. ನಾವು ಬದುಕಲು ಬೇಕಾದ ಎಲ್ಲವನ್ನು ನಮ್ಮ ಪರಿಸರ ನಮಗೆ ಒದಗಿಸುತ್ತದೆ. ನಮ್ಮ ಪರಿಸರವನ್ನು ಉಳಿಸುವ ಮತ್ತು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಪ್ರಕೃತಿಯು ನಮ್ಮ ಪರಿಸರ ವ್ಯವಸ್ಥೆಯನ್ನು ನಿಖರವಾಗಿ ವಿನ್ಯಾಸಗೊಳಿಸಿದೆ. ಮನುಷ್ಯ ತನ್ನ ವೈಯಕ್ತಿಕ ಪ್ರಯೋ ಜನಕ್ಕಾಗಿ ಪರಿಸರದ ಮೇಲೆ ನಿರಂತರ ವಾಗಿ ದಾಳಿ ನಡೆಸು ತ್ತಲೇ ಬಂದಿದ್ದಾನೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ. ಇದು ನಡೆಯಬಾರದೆಂದರೆ ಪರಿಸರ ಸಂರಕ್ಷಣೆ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸುವುದು ಅತೀಮುಖ್ಯ. ಪರಿಸರ ಸಂರಕ್ಷಣೆಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮ ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ. ನಿಸರ್ಗದ ಜತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರ ಉಳಿವಿಗೆ ಪೂರಕ ವಾಗುವ…
ಕರ್ನಾಟಕದ ದೂರದ ಊರುಗಳಿಂದ ನೀವೆಲ್ಲಾ ಈ ಮುಂಬಯಿ ಮಹಾನಗರಕ್ಕೆ ಬಂದು ನೆಲೆಸಿ ಸಂಘ – ಸಂಸ್ಥೆಗಳನ್ನು ಕಟ್ಟುವುದರ ಜೊತೆಗೆ ಸಮಾಜಪರ ಕೆಲಸಗಳನ್ನು ಮಾಡುತ್ತಿರುವಿರಿ. ಕರ್ನಾಟಕ ಸಂಘ ಅಂಧೇರಿ ಮುಖಾಂತರ ಕಳೆದ ಹತ್ತು ವರ್ಷಗಳಿಂದ ಯಾವುದೇ ಜಾತಿ – ಭೇದವಿಲ್ಲದೆ ನೀವು ವಿಧವೆಯರಿಗೆ ಮಾಸಾಶನ, ಆರ್ಥಿಕವಾಗಿ ಹಿಂದುಳಿದವರಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವನ್ನು ನೀಡುತ್ತಾ ಬಂದಿರುವಿರಿ. ಅಲ್ಲದೆ ಪ್ರತಿ ತಿಂಗಳು ಮನೆ – ಮನೆಗಳಲ್ಲಿ ಕನ್ನಡ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಯುವ ಜನಾಂಗದವರಲ್ಲಿ ಕನ್ನಡದ ಅಭಿರುಚಿ ಉಂಟು ಮಾಡುತ್ತಿದ್ದೀರಿ. ನಿಮ್ಮ ಕನ್ನಡ ಪರ ಹಾಗೂ ಸಮಾಜಪರ ಸೇವಾ ಕಾರ್ಯಗಳು ತುಂಬಾ ಮೆಚ್ಚುವಂತದ್ದು. ಮಹಾರಾಷ್ಟ್ರದಲ್ಲಿ ಅಂದಾಜು 45 ಲಕ್ಷ ಜನ ಕನ್ನಡಿಗರಿದ್ದಾರೆ. 35ಕ್ಕೂ ಮಿಕ್ಕಿ ಕನ್ನಡ ಮಾಧ್ಯಮ ಶಾಲೆಗಳು ಮುಂಬಯಿಯಲ್ಲಿ ಇವೆ ಎಂಬುದಾಗಿ ತಿಳಿದು ಬಂದಿದೆ. ನಾಡಿನ ನೆಲ – ಜಲ – ಭಾಷೆಯ ಮೇಲೆ ನೀವೆಲ್ಲ ಅಪಾರ ಪ್ರೀತಿ ತೋರಿಸುತ್ತಿದ್ದೀರಿ. ಸಂಘ – ಸಂಸ್ಥೆಗಳ ಮುಖೇನ ನೀವೆಲ್ಲ ಸೇರಿ ಕನ್ನಡವನ್ನು ಉಳಿಸಿ ಬೆಳೆಸುವ…
ಬೈಂದೂರು ಬಂಟರ ಯಾನೆ ನಾಡವರ ಸಂಘದ ಯುವ ಬಂಟರ ವೇದಿಕೆಯ ನೂತನ ಅಧ್ಯಕ್ಷರಾಗಿ ರವಿ ಶೆಟ್ಟಿ ಕುದ್ರುಕೋಡು ಹಾಗೂ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಆಯ್ಕೆ
ಬಂಟರ ಯಾನೆ ನಾಡವರ ಸಂಘ ಬೈಂದೂರು ತಾಲೂಕು ಇದರ ಯುವ ಬಂಟರ ವೇದಿಕೆಯ ನೂತನ ಅಧ್ಯಕ್ಷರಾಗಿ ರವಿ ಶೆಟ್ಟಿ ಕುದ್ರುಕೋಡು ಹಾಗೂ ನೂತನ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಉಪಾಧ್ಯಕ್ಷರಾಗಿ ಗುರುರಾಜ್ ಶೆಟ್ಟಿ ಹಾಗೂ ಗೌರವಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಗಂಟಿಹೊಳೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಿಕ್ಕಮಗಳೂರು ಸೇಂಟ್ ಮೆರೀಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕಲಿಯುತ್ತಿರುವ ಉಡುಪಿ ಮೂಲದ ಸಫಲ್ ಎಸ್.ಶೆಟ್ಟಿ ಈ ಬಾರಿಯ ಐ.ಸಿ.ಎಸ್.ಇ. ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 98.2 ಅಂಕಗಳನ್ನು ಪಡೆಯುವುದರೊಂದಿಗೆ 10ನೇ ಸ್ಥಾನವನ್ನು ಪಡೆಯುವುದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ್ದಾರೆ. ಈತ ಉಡುಪಿ ಮೂಲದ ಚಿಕ್ಕಮಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಎನ್.ಸಖಾರಾಂ ಶೆಟ್ಟಿ ಮತ್ತು ಡಾ.ಬೆಳ್ಕಳೆ ಶರ್ಮಿಳಾ ಶೆಟ್ಟಿಯವರ ಪುತ್ರ. ಮುಂದೆ ವೈದ್ಯಕೀಯ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವ ಸಫಲ್ ಶೆಟ್ಟಿ ಪ್ರಸ್ತುತ ಕ್ರಿಕೆಟ್ ನಲ್ಲಿ ಕೂಡಾ ವಿಶೇಷ ತರಬೇತಿಯನ್ನು ಪಡೆಯುತ್ತಿದ್ದಾರೆ. ಈತ ಕೊಕ್ಕರ್ಣೆ ಬಂಡ್ಸಾಲೆ ಮನೆ ದಿ.ಶೇಖರ್ ಶೆಟ್ಟಿ ಮತ್ತು ಶ್ರೀಮತಿ ಬೆಳ್ಕಳೆ ಲಲಿತಾ ಎಸ್.ಶೆಟ್ಟಿಯವರ ಮೊಮ್ಮಗ.
ನಾವು ಏನಾದರೂ ವ್ಯಾಪಾರ, ವ್ಯವಹಾರ ಆರಂಭಿಸುವಾಗ ವ್ಯವಹಾರಕ್ಕೆ ಒಳ್ಳೆಯದಾಗಲಿ ಅಂತ ದೇವರ ಬಳಿಗೆ ಹೋಗಿ ಭಕ್ತಿಯಿಂದ ಕೇಳುತ್ತೇವೆ. ಅದೇ ರೀತಿ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ನಾನು ನಿಮ್ಮನ್ನೇ ದೇವರಂತೆ ಭಾವಿಸಿ, ನಿಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ. ಬೈಂದೂರಿನ ಜನ ನನಗೆ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ ಸಮೀಪದ ಜಾಡ್ಕಟ್ಟುವಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಟಿಕೆಟ್ ಘೋಷಣೆಯಾದ 5 ನಿಮಿಷದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆ ಮಾಡಿ, ಹೆಮ್ಮೆಯ ಬಿಜೆಪಿ ಪಕ್ಷದ ಅಭ್ಯರ್ಥಿ ನೀವು. ನಾವು ನಿಮ್ಮೊಂದಿಗೆ ನಿಂತು, ಗೆಲ್ಲಿಸಿ ಕೊಡುತ್ತೇವೆ. ಊರು ಒಳ್ಳೆಯದು ಮಾಡುವ ಅಂದಿದ್ದರು. ನನ್ನಂತೆ ಅವರು ಸಹ ಸಾಮಾನ್ಯ ಮನೆಯಿಂದ ಬಂದವರು ಎಂದು ಗಂಟಿಹೊಳೆ ಹೇಳಿದರು. ಸಮರ್ಥ ವ್ಯಕ್ತಿ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಕ್ಷದ ಜನಸಾಮಾನ್ಯರ ಮುಂದೆ ಓಡಾಟ ಮಾಡಿದವರು.…