ಲೀಲಣ್ಣ ಅಜಾತಶತ್ರು. ಕೂಡಿಟ್ಟಿದ್ದರೆ ಕೋಟ್ಯಾಧಿಪತಿ. ಆದರೆ ಹಂಚಿದ ಒಂದೊಂದು ಪೈಸೆಯೂ ಕೂಡ ತನ್ನ ಕಿಸೆಯಿಂದಲೇ ಬೆವರು ಸುರಿಸಿ ದುಡಿದ ಹಣದಿಂದ ಸತ್ಯದ ಬಾಗಿಲು ಅವರ ಹಿಂದೆಯೇ ಇತ್ತು. ಮರ್ಯಾದೆ ಅಂದರೆ ಯಾವುದನ್ನೂ ಲೆಕ್ಕಿಸದೆ ಜೀವನ ಪರ್ಯಾಂತ ಬದುಕು ಸಾಗಿಸಿದ ಪುಣ್ಯಾತ್ಮ ಲೀಲಣ್ಣ. ಹೋಗ್ಬಿಟ್ರಿ ನೀವು ಮಾನದ ಹಿಂದೆ ಪ್ರಾಣವನ್ನು ಲೆಕ್ಕಿಸದೆ ಹೋಗ್ಬಿಟ್ರಿ ನಮ್ಮನ್ನು ಬಿಟ್ಟು ಹೋಗ್ಬಿಟ್ರಿ. ನಿಮ್ಮ ಕಾಲಿನ ಧೂಳಿಗೂ ಸಮಾನವಲ್ಲದ ಆ ದತ್ತು ಪುತ್ರಿಯ ಕಪಟ ನಾಟಕಕ್ಕೆ ಬಲಿಯಾಗಿ ಬಿಟ್ರಿ. ನಿಮ್ಮ ಗಟ್ಟಿ ಧ್ವನಿ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದೆ. ಕಾಪುವಿನ ಗೋಡೆ ಗೋಡೆಯು ನಿಮ್ಮ ಬಗ್ಗೆ ಮಾತಾಡುತ್ತಿದೆ. ಬೀಸುತ್ತಿರುವ ಗಾಳಿ ಲೀಲಣ್ಣ ಅನ್ನುತ್ತಿದೆ. ಒಂದು ಬಾರಿಯಾದರೂ ಓ…. ಎನ್ನುವಿರಾ ಲೀಲಣ್ಣ..!!
ಮನಸ್ಸಿನ ಭಾರವನ್ನು ನೀವು ಹಂಚಿಕೊಂಡಿಲ್ಲ. ದುಃಖವನ್ನು ಹೊರ ಪ್ರಪಂಚಕ್ಕೆ ಬಿಟ್ಟು ಕೊಟ್ಟಿಲ್ಲ. ಮಕ್ಕಳಿಗೆ ತಾತನಾದಿರಿ, ಹಿರಿಯರಿಗೆ ಗುರುವಾದಿರಿ. ಸಾವಿರಾರು ಮಂದಿಗೆ ಅಣ್ಣನಾಗಿ ಜೊತೆಗೆ ನಿಂತಿರಿ. ನೂರಾರು ಹೆಣ್ಣು ಮಕ್ಕಳಿಗೆ ಧಾರೆ ಎರೆದಿರಿ. ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ಕಟ್ಟಿ ಕೊಟ್ಟಿರಿ. ಸೂರು ಇಲ್ಲದವರಿಗೆ ನಿಮ್ಮ ಮನೆಯ ಹಂಚು ನೀಡಿದಿರಿ. ಸಮಾಜವೇ ಉಸಿರು ಎಂಬ ಬದುಕಿದ ನಿಮಗೆ ನಾವೇನು ಸಲ್ಲಿಸಲಿ. ಪ್ರಾಣಕ್ಕಿಂತ ಮಾನವೇ ಮುಖ್ಯ ಎಂದು ಒತ್ತಿ ಒತ್ತಿ ಹೇಳುತ್ತಿದ್ದ ನಿಮ್ಮ ಮಾತನ್ನು ನೀವು ರುಜು ಮಾಡಿಬಿಟ್ಟಿರಿ. ಗುಡಿಯೊಳಗಿನ ದೇವರಿಗೂ ನಿಮ್ಮ ನೋವು ಕೇಳದೆ ಹೋಯಿತಲ್ಲವೇ ಲೀಲಣ್ಣ.
ಸೀರೆಯ ಉರುಳಿಗೆ ಕೊರಲೊಡ್ಡುವ ಆ ಸಮಯದ ನೋವು ಅಯ್ಯೋ ಊಹೆಗೂ ಸಾಧ್ಯವಿಲ್ಲ. ಅಂತಹ ನೋವನ್ನು ನುಂಗಿ ಕೊರಲೊಡ್ಡಿ ಬಿಟ್ಟರಲ್ಲ ಲೀಲಾಣ್ಣ..!! ದೇವರನ್ನು ನೋಡದ ಅದೆಷ್ಟೋ ಮಂದಿಗೆ ದೇವರಂತೆ ನಿಂತು ಮಾಡಿದ ಸೇವೆಯೂ ನಿಮ್ಮನ್ನು ಉಳಿಸಲಿಲ್ಲವಲ್ಲ. ಅಯ್ಯೋ ವಿಧಿಯಾಟದ ಮುಂದೆ ಮಂಡಿಯೂರಿ ಭೂಮಿಯನ್ನು ಬಿಟ್ಟರಲ್ಲ. ನೋವು ಮರೆ ಮಾಚಲು ಸಾಧ್ಯವಿಲ್ಲ ಲೀಲಣ್ಣ ಸಾಧ್ಯವಿಲ್ಲ…!!! ಮತ್ತೆ ಹುಟ್ಟಿ ಬನ್ನಿ ಎನ್ನುವಷ್ಟು ದೊಡ್ಡವರಾಗಿಲ್ಲ. ಆದರೆ ನಿಮಗೆ ಸಿಕ್ಕಿರುವ ಆ ದತ್ತು ಪುತ್ರಿ ಈ ಪವಿತ್ರ ಭೂಮಿಯಲ್ಲಿ ಯಾವ ಮನೆತನಕ್ಕೂ ಸಿಗದಿರಲಿ. ಅಂತಹ ಸಂತಾನ ಮತ್ತೆ ಹುಟ್ಟದಿರಲಿ..!!
ನೀವಂತೂ ಹೋಗ್ಬಿಟ್ರಿ. ಸಾವಿರಾರು ಅಭಿಮಾನಿಗಳನ್ನು ಬಿಟ್ಟು ಮಾನದ ಹಿಂದೆ ಹೋಗ್ಬಿಟ್ರಿ. ಮನಸ್ಸು ಕೇಳುತ್ತಿಲ್ಲ. ಭಾಷ್ಪಾಂಜಲಿ ಅರ್ಪಿಸಲಷ್ಟೇ ಸೀಮಿತವೇ ಈ ಬದುಕು….!! ಸ್ವರ್ಗದ ಬಾಗಿಲು ತೆರೆದು ಒಂದು ಬಾರಿ ಅವಕಾಶ ಕೊಟ್ಟರೆ ಬಂದ್ಬಿಡಿ ಲೀಲಣ್ಣ. ಒಂದು ಸಲ ನಿಮ್ಮ ಪಾದಕಮಲವನ್ನು ಬಿಗಿದಪ್ಪಿಕೊಳ್ಳುವೆವು. ನಾವೂ ಬಾಯಿ ತುಂಬಾ ಅಣ್ಣಾ ಎನ್ನುವೆವು. ಮೈ ಸವರಿ ಬಿಡುವೆವು. ಕಾಪುವಿನಲ್ಲಿ ಬೀಸುತ್ತಿರುವ ಗಾಳಿಯೂ ಕೂಡ ಇಂದು ಲೀಲಣ್ಣ ಎನ್ನುತ್ತಿದೆ. ಬರುವಿರಾ ಮತ್ತೆ ಬರುವಿರಾ…. ಲೀಲಣ್ಣ…