Author: admin
ಆಧುನಿಕ ಜೀವನ ಶೈಲಿಯ ಇಂದಿನ ದಿನಗಳಲ್ಲಿ ಎಳೆಯ ಮಕ್ಕಳು ಆಗಾಗ ರೋಗಗಳಿಗೆ ತುತ್ತಾಗುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಬಡ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಕೆಲವು ಮಾರಕ ವಿಚಿತ್ರ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚು. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ನಿರಂತರ ಕ್ರಿಯಾಶೀಲರಾಗಿರುವ ಮಾನವಾಂತಕರಣ ಹೊಂದಿರುವ ಅಪರೂಪದ ವೈದ್ಯರೇ ಡಾ. ಸುಧಾಕರ ಶೆಟ್ಟರು. ಪುಣೆಯ ಎಫ್ ಸಿ ರೋಡ್ ಹಾಗೂ ಎಂ ಜಿ ರೋಡ್ ನಲ್ಲಿ “ಬೇಬಿ ಫ್ರೆಂಡ್ ಕ್ಲಿನಿಕ್” ಹೊಂದಿರುವ ಇವರು ಇಂಥಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಕಾಯಿಲೆ ಕುರಿತ ಅಧ್ಯಯನ ನಡೆಸಿ ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿ ಅದೃಷ್ಟೋ ಅಮೂಲ್ಯ ಜೀವ ಉಳಿಸಿದ ಪುಣ್ಯಾತ್ಮರು. ವೈದ್ಯೋ ನಾರಾಯಣ ಹರಿ: ಎಂಬ ಉಕ್ತಿ ಇವರ ಪಾಲಿಗೆ ಅನ್ವರ್ಥ ಎನಿಸಿದೆ. ರೋಗ ನಿರೋಧಕ ಲಸಿಕೆಗಳಿರಲಿ, ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಹರಡಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಗೆ ಮುನ್ನೆಚ್ಚರಿಕೆ…
ವಿದ್ಯಾಗಿರಿ (ಮೂಡುಬಿದಿರೆ): ‘ವಿದ್ಯಾರ್ಥಿಗಳು ಕಾಕಚೇಷ್ಟ, ಬಕ ಧ್ಯಾನ, ಶ್ವಾನ ನಿದ್ರೆ, ಅಲ್ಪಾಹಾರಿ ಹಾಗೂ ಗೃಹ ತ್ಯಾಗಿ ಎಂಬ ಪಂಚಗುಣಗಳನ್ನು ರೂಢಿಸಿಕೊಳ್ಳಬೇಕು’ ಎಂದು ಮಂಗಳೂರಿನ ಅಲೋಷಿಯಸ್ ಕಾಲೇಜು (ಸ್ವಾಯತ್ತ) ಕುಲಸಚಿವ, ಇಂಗ್ಲಿಷ್ ಸಹ ಪ್ರಾಧ್ಯಾಪಕ ಆಲ್ವಿನ್ ವಿನ್ಸೆಂಟ್ ಡೇಸಾ ಹೇಳಿದರು. ವಿದ್ಯಾಗಿರಿಯ ಮುಂಡ್ರೆದೆಗುತ್ತು ಕೆ. ಅಮರನಾಥ ಶೆಟ್ಟಿ – ಕೃಷಿ ಸಿರಿ ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಕೇಂದ್ರೀಯ (ಸಿಬಿಎಸ್ಸಿ) ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ‘ಪ್ರಯತ್ನ, ಶ್ರದ್ಧೆ, ಎಚ್ಚರ, ಇಂದ್ರಿಯಗಳ ನಿಯಂತ್ರಣ ಹಾಗೂ ಔದಾಸೀನದ ಚೌಕಟ್ಟಿನಿಂದ ಹೊರಬರುವುದೇ ಈ ಪಂಚ ಗುಣಗಳು’ ಎಂದು ಅವರು ವಿವರಿಸಿದರು. ಡಾ.ಎಂ. ಮೋಹನ ಆಳ್ವ ಅವರು ಬಿತ್ತಿದ ಶೈಕ್ಷಣಿಕ ಬೀಜ ಇಂದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳು ನೀಡುತ್ತಿದೆ ಎಂದು ಶ್ಲಾಘಿಸಿದರು. ನೀವು ಕಲಿತ ಶಾಲೆಯನ್ನು ಎಂದೂ ಮರೆಯಬೇಡಿ. ಶಾಲೆಗೆ ಮರಳಿ ಕೊಡುಗೆ ನೀಡಿ ಎಂದು ಹಿತವಚನ ಹೇಳಿದರು. ಆಳ್ವಾಸ್ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅವರು ಶೈಕ್ಷಣಿಕ ಆಡಳಿತಕ್ಕೆ ಹೊಸ ಭಾಷ್ಯ ಬರೆಯುತ್ತಿದ್ದಾರೆ. ಮಕ್ಕಳೊಂದಿಗೆ…
ದಸರಾ ಹತ್ತಿರಬರುತ್ತಿದೆ. ಮಂಗಳೂರು ಮಧುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ನವರಾತ್ರಿ ನವಶಕ್ತಿಯನ್ನು ವಿಶೇಷ ರೀತಿಯಲ್ಲಿ ಆರಾಧಿಸಿ ನಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುವ ಪರ್ವಕಾಲ. ಹಿಂದೆ ದಸರಾ ಎಂದರೆ ಮೈಸೂರು ಎನ್ನುವ ಕಾಲವಿತ್ತು. ಆದರೆ ಇಂದು ಜನಾರ್ದನ ಪೂಜಾರಿಯವರ ಕನಸಿನ ಮಂಗಳೂರು ದಸರಾ ವಿಶ್ವದ ಗಮನ ಸೆಳೆದಿರುವುದು ಸುಳ್ಳಲ್ಲ. ಮಂಗಳೂರಿನ ಅಧಿದೇವತೆ ಮಂಗಳಾದೇವಿ ಸನ್ನಿಧಿಯಲ್ಲಿ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರಮುಖವಾಗಿ ಅದ್ದೂರಿ ದಸರಾವನ್ನು ನಾವು ಕಾಣಬಹುದು. ಅಲ್ಲದೆ ಮಂಗಳೂರಿನಾದ್ಯಂತ ಶಾರದಾ ಉತ್ಸವದ ಮೆರವಣಿಗೆ ಸೇರಿದಂತೆ ದಸರಾ ಶೋಭಯಾತ್ರೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಸೇರುತ್ತಾರೆ. ಶೋಭಾಯಾತ್ರೆಯಲ್ಲಿ ನಮ್ಮ ಸಂಸ್ಕೃತಿ, ಧರ್ಮ, ಪುರಾಣದ ಕಥೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಜೊತೆಗೆ ಹಲವು ಕಲಾ ಪ್ರಕಾರಗಳನ್ನು ನಾವು ಕಾಣಬಹುದು. ಇತ್ತೀಚೆಗೆ ಕುದ್ರೋಳಿ ದಸರಾ ಸಮಿತಿಯ ನಿರ್ಧಾರದ ಒಂದು ವರದಿಯನ್ನು ಓದಿದೆ, ಅದರಲ್ಲಿ ಶೋಭಾಯಾತ್ರೆಯಲ್ಲಿ ದೈವದ ಸ್ತಬ್ಧ ಚಿತ್ರಗಳಿಗೆ ಅವಕಾಶವಿಲ್ಲ. ಅಲ್ಲದೆ ಯಾವುದೇ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸ್ತಬ್ಧ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂದಿತ್ತು. ಈ ನಿರ್ಧಾರ ಸ್ವಾಗತಾರ್ಹ. ಆದರೆ ಇಂತಹ ಧಾರ್ಮಿಕ ಶೋಭಯಾತ್ರೆಯಲ್ಲಿ…
ಯುವಜನತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಹಾಗೂ ಸಾಧಿಸಲು ಲಿಯೋ ಕ್ಲಬ್ ಉತ್ತಮ ವೇದಿಕೆ ಎಂದು ಲಿಯೋ ಜಿಲ್ಲಾ ಅಧ್ಯಕ್ಷೆ ಡಾ. ರಂಜಿತಾ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಕುಲಾಯಿ ಬಿಡಿಎಸ್ ಪ.ಪೂ ಕಾಲೇಜಿನಲ್ಲಿ ನಡೆದ ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ ಪ್ರಾಯೋಜಕತ್ವದ ನೂತನ ಲಿಯೋ ಕ್ಲಬ್ ಮಂಗಳೂರು ಕುಡ್ಲದ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಿಯೋ ಸದಸ್ಯರಿಗೆ ಪದಪ್ರದಾನ ಮಾಡಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜ, ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಲಿಯೋ ಸಂಸ್ಥೆಯಡಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಐಎಎಸ್ ಐಪಿಎಸ್ ನಂತಹ ಉನ್ನತ ಮಟ್ಟದ ಹುದ್ದೆಗೆ ತಯಾರಿಗೊಳ್ಳಬೇಕು ಎಂದರು. ಲಿಯೋ ಕ್ಲಬ್ ಅಧ್ಯಕ್ಷರಾಗಿ ಚಂದಪ್ಪ, ಕಾರ್ಯದರ್ಶಿಯಾಗಿ ಪ್ರತಿಕ್, ಖಜಾಂಚಿಯಾಗಿ ನಿಖಿತ ಮತ್ತು ಸದಸ್ಯರಿಗೆ ಪದಪ್ರದಾನ ಮಾಡಲಾಯಿತು. ಲಿಯೋ ಕ್ಲಬ್ ಬ್ಯಾನರ್ ಹಾಗೂ ಲಿಯೋ ಅಂತಾರಾಷ್ಟ್ರೀಯ ಪ್ರಮಾಣ ಪತ್ರ ಬಿಡುಗಡೆಗೊಳಿಸಿ ಲಿಯೋ ಕ್ಲಬ್ ಗೆ ಹಸ್ತಾಂತರಿಸಲಾಯಿತು. ಪ್ರಾಂತ್ಯಾಧ್ಯಕ್ಷ ಚಂದ್ರಹಾಸ ರೈ, ಭಾರತಿ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಆದರ್ಶ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ…
ಡಿಸೆಂಬರ್ ತಿಂಗಳ 5 ನೇ ತಾರೀಖು ಮಂಗಳವಾರ ಮತ್ತು 6 ನೇ ತಾರೀಖು ಬುಧವಾರದಂದು ಉಡುಪಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೋಟ ವಿವೇಕ ವಿದ್ಯಾಲಯದ ಆವರಣದಲ್ಲಿ ಸಾಹಿತ್ಯ ಗೋಷ್ಠಿ, ವಿಚಾರ ಗೋಷ್ಠಿ, ಸನ್ಮಾನ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡಿಸೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧಕ್ಷರು ನಾಡೋಜ ಡಾ. ಮಹೇಶ್ ಜೋಶಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಸಾಲಿಗ್ರಾಮ ಗುರು ನರಸಿಂಹ ದೇಗುಲದಿಂದ ಸಮ್ಮೇಳನಾ ಸ್ಥಳಕ್ಕೆ ತಾಯಿ ಭುವನೇಶ್ವರಿಯ ಜಯಕಾರದೊಂದಿಗೆ ಕನ್ನಡದ ಕಹಳೆ ಮೊಳಗುತ್ತಾ ಮೆರವಣಿಗೆ ಸಾಗಲಿದೆ. ಈ ಸಮ್ಮೇಳನವು ಮುಂಬಯಿಯ ಹಿರಿಯ ಸಾಹಿತಿ ಶ್ರೀ ಬಾಬು ಶಿವ ಪೂಜಾರಿಯವರ ಅಧ್ಯಕ್ಷತೆಯಲ್ಲಿ ವಿಶೇಷವಾದ ಮೆರುಗನ್ನು ಕಾಣಲಿದೆ. ಡಿಸೆಂಬರ್ 6 ರಂದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಉಡುಪಿ ಜಿಲ್ಲಾ ಹಿರಿಯ ಕಿರಿಯ ಕವಿಗಳಿಂದ ನಡೆಯಲಿರುವ ಕವಿ ಕಲರವ ಕವಿಗೋಷ್ಠಿಯಲ್ಲಿ ಮುಂಬಯಿ ಸಾಹಿತಿ ಲತಾ ಸಂತೋಷ…
ಮುಂಬಯಿ, ಸೆ.07: ಉಡುಪಿ ಹಿರಿಯಡ್ಕ ಇಲ್ಲಿನ ಕೊಂಡಾಡಿ ನಿವಾಸಿ ಶಾರದಾ ಯು.ಶೆಟ್ಟಿ (85.) ಕಳೆದ ಸೋಮವಾರ ವೃದ್ಧಾಪ್ಯ ಸಹಜತೆಯಿಂದ ತನ್ನ ಸ್ವನಿವಾಸದಲ್ಲಿ ನಿಧನರಾದರು. ಕಟಪಾಡಿ ಅಚಾಡ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮೂಡಬೆಟ್ಟು ಗುತ್ತು ಕಟಪಾಡಿ ದಿವಂಗತ ಉಮಾನಾಥ ಶೆಟ್ಟಿ ಇವರ ಧರ್ಮಪತ್ನಿಯಾಗಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿದ್ದರು. ಮೃತರು ಪ್ರೇಮನಾಥ ಶೆಟ್ಟಿ (ಜೋಗೇಶ್ವರಿ-ಮುಂಬಯಿ), ವಿಶ್ವನಾಥ ಶೆಟ್ಟಿ, ಶ್ರೀನಾಥ್ ಶೆಟ್ಟಿ, ಅಮರನಾಥ ಶೆಟ್ಟಿ (ನಾಲ್ಕು ಸುಪುತ್ರರು) ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಬುಧವಾರ (ಸೆ.07) ಬೆಳಗ್ಗೆ 9 ಗಂಟೆಗೆ ಉಡುಪಿ ಹಿರಿಯಡ್ಕ ಕುಧಿ ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ ಕೊಂಡಾಡಿ ಸಮೀಪದ ಹತ್ತಿರ ನೆರವೇರಿಸಲ್ಪಟ್ಟಿತು.
ಬೆಂಗಳೂರಿನ ವಿವಿದೆಡೆ ಹಲವಾರು ಉದ್ಯಮಗಳನ್ನು ಸ್ಥಾಪಿಸಿ ಪ್ರತಿಷ್ಠಿತ “Xram Marketing Solution Pvt Ltd – Experiential Marketing Agency, Restaurant Chain – Coast by Chef Ashitha, Mangalore Sea Food Restaurant, Catering Service, Cha Angadi – Modern Tea outlet ಹೀಗೆ ವಿವಿಧ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಹಲವಾರು ದುಡಿಯುವ ಕೈಗಳಿಗೆ ಆಸರೆಯಾಗಿ ಜನ ಮನ್ನಣೆಯನ್ನು ಗಳಿಸಿದ ಪುತ್ತೂರಿನ ಪ್ರೀತಮ್ ಶೆಟ್ಟಿ ಅರಿಯಡ್ಕ ಹಾಗೂ ಮೊರಂಗಲ್ಲು ಆಶಿತಾ ಶೆಟ್ಟಿ ದಂಪತಿಗಳಿಗೆ ಯಶಸ್ವಿ ಉದ್ಯಮಿಗಳು ಎಂಬ ನೆಲೆಯಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ನಡೆದ ‘ನಮ್ಮ ಊರು – ನಮ್ಮ ಹೆಮ್ಮೆ’ ಕಾರ್ಯಕ್ರಮ
ರಾಮಕೃಷ್ಣ ಮಿಷನ್, ಮಂಗಳೂರು ಇದರ ಪ್ರೇರಣೆಯಿಂದ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಜೆಪ್ಪು ಹಾಗೂ ಮಂಗಳೂರು ಮಹಾನಗರ ಪಾಲಿಕೆ ಇದರ ಸಹಯೋಗದಲ್ಲಿ ‘ನಮ್ಮ ಊರು – ನಮ್ಮ ಹೆಮ್ಮೆ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ತಾ. 26/11/2023 ರಂದು ಮಂಗಳಾದೇವಿ ಸುತ್ತಲಿನ ಪ್ರದೇಶದ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗಳನ್ನು ಗೌರವಿಸುವ ಮೂಲಕ ಚಾಲನೆ ನೀಡಲಾಯಿತು. ಬೆಳಿಗ್ಗೆ 7:30 ರಿಂದ 9.00 ಗಂಟೆಯವರೆಗೆ ಜಪ್ಪು ಪರಿಸರದ ಸುಮಾರು 800 ಮನೆಗಳಿಗೆ ಕರಪತ್ರ ಹಂಚುವ ಮೂಲಕ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸಲಾಯಿತು. ನಂತರ ನಡೆದ ‘ಮಾದರಿ ವಾರ್ಡ್ ನತ್ತ – ಸಂಘ ಸಂಸ್ಥೆಗಳ ಚಿತ್ತ’ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ನಡೆದು ಬಂದ ದಾರಿ ಹಾಗೂ ತಮ್ಮ ವಾರ್ಡ್ ಗಳನ್ನು ಮಾದರಿ ವಾರ್ಡ್ ಗಳನ್ನಾಗಿ ಮಾಡಲು ಯೋಜಿಸಿದ ವಿವಿಧ ಚಟುವಟಿಕೆಗಳ ಬಗೆಗೆ ಸಾರ್ವಜನಿಕರಿಗೆ ವಿವರಿಸಲಾಯಿತು. ‘ನಮ್ಮ ಊರು – ನಮ್ಮ ಹೆಮ್ಮೆ’ ಯೋಜನೆಯಡಿಯಲ್ಲಿ ಮುಂದಿನ 6 ತಿಂಗಳುಗಳ ಕಾಲ ನಗರ ಪಾಲಿಕೆ ಮತ್ತು…
ಅದೃಷ್ಟ ಮತ್ತು ಪ್ರಯತ್ನ ಜತೆ ಜತೆಯಾಗಿರುತ್ತದೆ. ಕೆಲವೊಮ್ಮೆ ಪ್ರಯತ್ನವಿಲ್ಲದೇ ಅದೃಷ್ಟ ಖುಲಾಯಿಸಿ ಬಿಡುತ್ತದೆ. ಇನ್ನು ಕೆಲವೊಮ್ಮೆ ಒಂದಷ್ಟು ಪ್ರಯತ್ನ ಪಟ್ಟರೂ ಗೆಲುವು ನಮ್ಮದಾಗುವುದಿಲ್ಲ. ಆದರೆ ನಮ್ಮ ಪ್ರಯತ್ನದಲ್ಲಿ ಸೋಲದೆ ಸತತ ಪ್ರಯತ್ನ ಪಟ್ಟರೆ ಯಶಸ್ಸು ನಮ್ಮದಾಗಬಹುದು. ಚಿನ್ನದ ಗಣಿಗಾರಿಕೆಯ ಕೆಲಸ ಆರಂಭಿಸಿದ ವ್ಯಕ್ತಿಯೊಬ್ಬ ತಿಂಗಳುಗಟ್ಟಲೆ ಚಿನ್ನದ ಹೊಸ ನಿಕ್ಷೇಪಕ್ಕಾಗಿ ದುಡಿದ. ಆದರೆ ಎಷ್ಟು ಆಳಕ್ಕೆ ಅಗೆದರೂ ಚಿನ್ನದ ಅದಿರು ಕಾಣಿಸಲಿಲ್ಲ. ಸುಸ್ತಾಗಿ ಸೋತು ಹೋದ. ತನ್ನಿಂದ ಆಗದು ಎಂದು ಕೈ ಚೆಲ್ಲಿ ಕುಳಿತ. ಸೋತು ತನ್ನ ಕೆಲಸವನ್ನು ನಿಲ್ಲಿಸಿದ. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ಇನ್ನೊಬ್ಬ ಗಣಿಗಾರಿಕೆಯ ವ್ಯಕ್ತಿಗೆ ತನ್ನ ವಸ್ತುಗಳನ್ನು ಮಾರಿ ಹೊರಟು ಹೋದ. ಅರ್ಧ ಅಗೆದು ಬಿಟ್ಟ ಹೊಂಡವನ್ನು ಮತ್ತಷ್ಟು ಅಗೆಯುವಂತೆ ಅಲ್ಲಿನ ತಂತ್ರಜ್ಞ ಹೊಸದಾಗಿ ಬಂದವನಿಗೆ ಹೇಳಿದ. ಮೂರು ಅಡಿಗಳಷ್ಟು ಅಗೆದರೆ ಚಿನ್ನದ ಆದಿರು ಇದೆ ಎಂದ ಹೊಸದಾಗಿ ಬಂದಾತ. ಅಗೆಯಲು ಆರಂಭಿಸಿದ. ಸುಮಾರು ಮೂರು ನಾಲ್ಕು ಅಡಿಗಳಷ್ಟು ಅಗೆಯುವಷ್ಟರಲ್ಲಿ ಅವನಿಗೆ ಚಿನ್ನದ ನಿಕ್ಷೇಪ ಕಾಣಿಸಿತು.…
ಬ್ರಹ್ಮಾವರ ಜ. 16: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ವಿಜ್ಞಾನ ಮಾದರಿ, ಚಿತ್ರಕಲೆ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಮೇಳವನ್ನು ಆಯೋಜಿಸಲಾಗಿತ್ತು. ಕಟಪಾಡಿಯ ಎಸ್.ವಿ.ಕೆ. ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ವೇತಾ ಪ್ರಶಾಂತ್ ಶೆಟ್ಟಿ ‘ಸೈನ್ಕ್ವೆಸ್ಟ್’ ಉದ್ಘಾಟಿಸಿ ಮಾತನಾಡಿ ವಿಜ್ಞಾನವು ವಾಸ್ತವದಲ್ಲಿ ನಡೆಯುವ ಒಂದು ಮ್ಯಾಜಿಕ್. ಇದು ಮಾನವರಿಗೆ ದೊರೆತ ಒಂದು ವರವಾಗಿದ್ದು ಎಂದಿಗೂ ಇದನ್ನು ಕಳೆದುಕೊಳ್ಳಬಾರದೆಂದು ಹೇಳಿ ವಿದ್ಯಾರ್ಥಿಗಳ ವಿಜ್ಞಾನ ಮಾದರಿಯನ್ನು ಪ್ರಶಂಸಿದರು. ಹಿರಿಯಡ್ಕ, ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಲಾ ಶಿಕ್ಷಕರಾದ ಮೋಹನ್ ಕಡಬ ‘ಜಿ ಎಮ್ ಸ್ಟ್ರೋಕ್ಸ್’ ಚಿತ್ರ ಸಂತೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿ ಮಕ್ಕಳು ತಮ್ಮ ಭಾವನೆಗಳನ್ನು, ರೇಖೆ ಮತ್ತು ಬಣ್ಣದ ಮೂಲಕ ಪ್ರದರ್ಶಿಸಲು ಚಿತ್ರಕಲೆಯು ಒಂದು ಉತ್ತಮ ಮಾಧ್ಯಮವೆಂದರು. ಕ್ಯಾನ್ವಸ್ ಮೇಲೆ ಅಕ್ಷರವನ್ನು ಬರೆದು ಅದಕ್ಕೆ ಮರದ ರೂಪವನ್ನು ಕೊಟ್ಟು ಸುಂದರವಾದ ಚಿತ್ರವನ್ನು ಬಿಡಿಸುವ ಮೂಲಕ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಕ್ಕಳ ಮನಸ್ಸಿನ…















