Author: admin

ಪುಣೆ ; ಯೋಗ ಆಧ್ಯಾತ್ಮಿಕ ಚಿಕಿತ್ಸೆಯಾಗಿ ಮನುಷ್ಯನ ವಿಕಾಸದ ಪ್ರಕ್ರೀಯೆಗೆ ಸಾರ್ವರ್ತಿಕ ಪ್ರಾಯೋಗಿಕದ ಒಂದು ವಿಧಾನ ,ವ್ಯಕ್ತಿಯ ಶಕ್ತಿಯನ್ನು ಸಂತುಲಿತ ರೀತಿಯಲ್ಲಿ ಸುಧಾರಿಸಲು ಮತ್ತು ಸದೃಡಗೊಳಿಸುವಲ್ಲಿ ರಾಮ ಬಾಣವಾಗಿ ಯೋಗ ಇಂದು ನಮ್ಮ ದೇಶ ಮತ್ತು ವಿದೇಶದಲ್ಲಿ ಪ್ರಚಲಿತವಾಗಿದೆ .ಮಾನ್ಯ ಮೋದಿಯವರ ಸಂಕಲ್ಪದಂತೆ ಭಾರತದಲ್ಲಿ ಯೋಗ ದಿನಾಚರಣೆಯ ಪರ್ವ ಶುರುವಾಗಿ ಇಂದು ಪ್ರಪಂಚದ ಮೂಲೆ ಮೂಲೆಯಲ್ಲೂ ಯೋಗಕ್ಕೆ ಮಾನ್ಯತೆ ಸಿಕ್ಕೀದೆ ಯೋಗದಿಂದ ಆಗುವ ಅನುಕೂಲಗಳನ್ನು ಅರಿತಿದ್ದಾರೆ .ನಮ್ಮ ದೇಶದ ಪ್ರತಿ ಕಡೆಯೂ ಯೋಗದ ಮಹತ್ವವನ್ನು ಅರಿತವರು ಅರೋಗ್ಯ ಪೂರ್ಣ ಜೀವನ ನಡೆಸುತಿದ್ದಾರೆ . ಆರೋಗ್ಯದ ದೃಷ್ಟಿಯಲ್ಲಿ ಭಕ್ತಿ ,ಜಪ ,ಕರ್ಮ,ರಾಜ ,ನಾಡಿ ,ಕುಂಡಲಿನಿ ,ಮತ್ತು ಅಷ್ಟಾಂಗ ಯೋಗ ಮೊದಲಾದ ಯೋಗಗಳ ಹಾದಿಗಳ ಮೂಲಕ ಮನುಷ್ಯನ ಶಾರೀರಿಕ ಸಮತೋಲನ ಕಾಪಾಡುವಲ್ಲಿ ಯೋಗ ಮಹತ್ತರವಾದ ಸ್ಥಾನವನ್ನು ಪಡೆದಿದೆ . ನಮ್ಮ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ಯೋಗದ ಮಹತ್ವವನ್ನು ತಿಳಿಸುವ ಅಗತ್ಯತೆ ಇದೆ .ಒಟ್ಟಾರೆಯಾಗಿ ಯೋಗ ನಮ್ಮ ದೇಹದ ಆರೋಗ್ಯಕ್ಕೆ ಪರಿಪೂರ್ಣ ಶಕ್ತಿಯನ್ನು ನೀಡುವ ಪ್ರಕ್ರಿಯೆಯಂತೆ…

Read More

ದೇಶವನ್ನೇ ತನ್ನತ್ತ ಸೆಳೆದಿದ್ದ ಕರ್ನಾಟಕ ವಿಧಾನಸಭೆಯ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದೆ. ಅತಂತ್ರ ವಿಧಾನಸಭೆ ರಚನೆಯಾಗಲಿದೆ ಮತ್ತು ಜೆಡಿಎಸ್‌ ಸರ್ಕಾರ ರಚನೆಯಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎಂದು ಹಲವು ಸುದ್ದಿ ವಾಹಿನಿಗಳು ಪ್ರಕಟಿಸಿದ ಮತಗಟ್ಟೆ ಸಮೀಕ್ಷೆಗಳು ಹುಸಿಯಾಗಿವೆ. 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 136 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಇದರಿಂದಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸೋಲು ಅನುಭವಿಸಿದೆ. ಆಡಳಿತ ವಿರೋಧಿ ಅಲೆಗೆ ಹಾಲಿ ಸರ್ಕಾರದ ಒಟ್ಟು 14 ಮಂದಿ ಸಚಿವರು ಜನರ ಕೋಪಕ್ಕೆ ತುತ್ತಾಗಿದ್ದಾರೆ. ಸಾಮಾನ್ಯವಾಗಿ ಕರ್ನಾಟಕ ಆಡಳಿತರೂಢ ಪಕ್ಷಕ್ಕೆ ಮತ್ತೆ ಮಣೆ ಹಾಕು ವುದು ಅಪರೂಪ. ಈ ಬಾರಿಯೂ ಹಾಗೆಯೇ ಆಗಿದೆ. ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಿದ್ದ ಶೇ.40 ಭ್ರಷ್ಟಾಚಾರ ಆರೋಪ, ಪೊಲೀಸ್‌ ಇಲಾಖೆಯಲ್ಲಿ ಉಂಟಾದ ನೇಮಕ ಹಗರಣ, ಬೆಲೆ ಏರಿಕೆ, ನಿರುದ್ಯೋಗ ವಿಚಾರದಲ್ಲಿ ಜನರ ಆಕ್ರೋಶವನ್ನು ಕಾಂಗ್ರೆಸ್‌ ಸಮರ್ಥ   ವಾಗಿಯೇ ಬಳಕೆ ಮಾಡಿಕೊಂಡಿದೆ. 2018ರ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಗೆದ್ದುಕೊಂಡು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಂತರ ಕಾಂಗ್ರೆಸ್‌ ಮತ್ತು ಜೆಡಿಎಸ್‌…

Read More

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ 9 ಮಂದಿ ಸಾಧಕಿಯರಿಗೆ ಸಾವಿತ್ರಿ ಸತ್ಯವಾನ್ ಸಾಧಕ ಮಹಿಳೆ-2023 ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಶಿಕ್ಷಕಿ ಪೂರ್ಣಿಮಾ ಶೆಣೈ, ಸಾಹಿತಿ ಚೈತ್ರಾ ಕಬ್ಬಿನಾಲೆ, ನಾಟಿ ವೈದ್ಯೆ ಜಯಂತಿ ಮಾಳ, ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಕೃಷಿ ಕ್ಷೇತ್ರದ ಸಾಧಕಿ ಸುಮಲತಾ ಮಾಳ, ಸಂಗೀತ ಕ್ಷೇತದ ಸಾಧಕಿ ಆರತಿ, ಸಮಾಜ ಸೇವಕಿ ಗಾಯತ್ರಿ ಪ್ರಭು, ಸುರಕ್ಷಾ ಸೇವಾಶ್ರಮದ ಆಯೇಷಾ ಭಾನು, ಶಿಕ್ಷಕಿ ಗೀತಾ ಎಸ್ ಹೆಗ್ಡೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾರ್ಚ್ 12 ರವಿವಾರದಂದು ಹೆಬ್ರಿಯ ಚೈತನ್ಯ ಸಭಾಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಸಾವಿತ್ರಿ ಸತ್ಯವಾನ್ ಟ್ರಸ್ಟ್ (ರಿ.) ಅಧ್ಯಕ್ಷೆ ಡಾ ಮಮತಾ ಹೆಗ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಷನ್ ಮಿನಿ ಹಾಲ್‌ನಲ್ಲಿ ನಡೆದ ನಗರದ ಕನ್ನಡ ಲೇಖಕಿಯರ ಬಳಗ ‘ ಸೃಜನಾ’ ದ ಸಭೆಯಲ್ಲಿ 2023 ರಿಂದ 2025 ರವರೆಗಿನ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಚಾಲಕಿಯಾಗಿ ಶೀಮತಿ ಪದ್ಮಜಾ ಮಣ್ಣೂರ್ , ಕಾರ್ಯದರ್ಶಿಯಾಗಿ ಶೀಮತಿ ಲತಾ ಸಂತೋಷ್ ಮುದ್ದುಮನೆ, ಕೋಶಾಧಿಕಾರಿಯಾಗಿ ಡಾ. ದಾಕ್ಷಾಯಣಿ ಯಡಹಳ್ಳಿ ಆಯ್ಕೆಯಾದರು.ಸಹ ಸಂಚಾಲಕಿಯಾಗಿ ಡಾ. ಜಿ.ಪಿ. ಕುಸುಮ ,ಜೊತೆ ಕಾರ್ಯದರ್ಶಿಯಾಗಿ ಕುಸುಮ ಚಂದ್ರ ಪೂಜಾರಿ,ಜೊತೆ ಕೋಶಾಧಿಕಾರಿಯಾಗಿ ಶೀಮತಿ ಸರೋಜಾ ಅಮಾತಿಯವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಬಳಗದ ಸಂಚಾಲಕಿ ಶಾರದಾ ಅಂಬೇಸಂಗೆ ಪುಷ್ಪ ಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸಿದರು. ಬಳಗದ ಸಂಚಾಲಕಿ ಶಾರದಾ ಅಂಬೇಸಂಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಅಧಿಕಾರಾವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯೆಯರಿಗೂ ಕೃತಜ್ಞತೆಯನ್ನು ಸಲ್ಲಿಸಿದ ಅವರು ಬಳಗವು ನೂತನ ಪದಾಧಿಕಾರಿಗಳ ಅಧಿಕಾರಾವಧಿ ಯಲ್ಲಿ ಉತ್ತರೋತ್ತರ ಪ್ರಗತಿಯನ್ನು ಸಾಧಿಸಲೆಂದು ಹಾರೈಸಿದರು. ಸಲಹಾ ಸಮಿತಿಯ ಸದಸ್ಯೆ, ನಗರದ ಹಿರಿಯ ಲೇಖಕಿ ಡಾ.ಸುನೀತಾ ಶೆಟ್ಟಿಯವರು…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸದೃಢ ಬೆಳವಣಿಗೆಗೆ ಸಮಾಜದ ಸಹಕಾರ ಅಗತ್ಯ. ಇಂದು ಎಲ್ಲರ ಸಹಕಾರ ಪ್ರೋತ್ಸಾಹದಿಂದ ಪಟ್ಲ ಫೌಂಡೇಶನ್ ಟ್ರಸ್ಟ್ ಬೆಳೆದು ನಿಂತಿದೆ. ಯಕ್ಷಗಾನವನ್ನು ಒಂದು ಉನ್ನತ ಮತ್ತು ಗೌರವ ಸ್ಥಾನಕ್ಕೆ ಕೊಂಡೊಯ್ಯಲು ಪಟ್ಲ ಸತೀಶ ಶೆಟ್ಟಿಯವರ ಕೊಡುಗೆಯೂ ದೊಡ್ಡದಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು. ನಗರದ ಎಂಪೇರ್ ಮಾಲ್ ನಲ್ಲಿ ನಡೆದ ಪಟ್ಲಾಶ್ರಯ ಯೋಜನೆಯಲ್ಲಿ ಐದು ಮಂದಿ ಕಲಾವಿದರಿಗೆ ಮನೆ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ ತಲಾ ಎರಡು ಲಕ್ಷ ರೂಪಾಯಿಯ ಚೆಕ್ ಗಳನ್ನು ವಿತರಿಸಿ ಅವರು ಮಾತನಾಡಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಳೆದ ಏಳು ವರ್ಷಗಳಿಂದ ಸುಮಾರು ಎಂಟೂವರೆ ಕೋಟಿ ರೂ. ಮೊತ್ತದ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕೆಲಸ ಮಾಡಿದೆ ಎಂದರು. ಸಮಾರಂಭದಲ್ಲಿ ಬಡಗುತಿಟ್ಟಿನ ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್, ಕಟೀಲು ಮೇಳದ ಕಲಾವಿದ ಶ್ರೀಧರ ಪಡ್ರೆ, ಕಟೀಲು ಮೇಳದ ಸುಖೇಶ್ ಹೆಗ್ಡೆ, ಹವ್ಯಾಸಿ ಮಹಿಳಾ…

Read More

ನಮ್ಮ ಆಹಾರದಲ್ಲಿ ದಿನವೂ ಇರಲಿ ಕರಿಬೇವು….!” ಆರೋಗ್ಯ ಸಮಸ್ಯೆ ನಿವಾರಣೆಗೆ ಎಂದೂ ಕಾಡುವುದಿಲ್ಲ ದೇಹದ ಉಷ್ಣತೆಯ ಕಾವು….!” ಕರಿಬೇವು ಔಷಧೀಯ ಸಸ್ಯ…! ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) ನಮ್ಮ ದೈನಂದಿನ ಅಡುಗೆಯಲ್ಲಿ ಬಳಸುವಂತಹ ಕರಿಬೇವು ದೇಹದಲ್ಲಿನ ಪ್ರತಿಕೂಲ ಪರಿಸ್ಥಿತಿ ಹಾಗೂ ಜಠರ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುವುದರೊಂದಿಗೆ, ಮನುಷ್ಯನ ದೇಹಕ್ಕೆ ಬೇಕಾಗುವಂತಹ ವಿಟಮಿನ್ ಗಳನ್ನು ನೀಡುವಲ್ಲಿ ಸಹಕರಿಯಾಗುತ್ತದೆ. ಮನುಷ್ಯನ ದೇಹದಲ್ಲಿನ ಉಷ್ಣಾಂಶವನ್ನು ಇರುವುದರಿಂದ ತಲೆ ಕೂದಲಿನ ಸಮಸ್ಯೆ ತಲೆ ಹೊಟ್ಟು ನಿವಾರಣೆ, ಹಾಗೂ ಅತಿ ಉಷ್ಣವದಂತಹ ಜಾಗದಲ್ಲಿನ ಭಾಗಗಳನ್ನು ವಿಶೇಷ ರೀತಿಯಲ್ಲಿ ಸಂರಕ್ಷಿಸುವುದರ ಮೂಲಕ ಕರಿಬೇವು ಕಾರ್ಯನಿರ್ವಹಿಸುತ್ತದೆ. ಮನುಷ್ಯನ ದಿನಬಳಕೆ ವಸ್ತುಗಳಲ್ಲಿ ಕರಿಬೇವು ಅಗ್ರಪಂತಿಯಲ್ಲಿ ಇರುವುದರಿಂದ ಕೃಷಿಕರು ಎಚ್ಚೆತವಾಗಿ ತಮ್ಮ ಹಿತ್ತಲು ಗಿಡಗಳಲ್ಲಿ ಕರಿಬೇವನ್ನು ಬೆಳೆಸಿ ಇತರರಿಗೆ ಮಾದರಿ ಕೂಡ ಆಗಿದ ಉದಾರಣೆ, ರಾಜ್ಯದ ವಿವಿಧ ಭಾಗದಲ್ಲಿದೆ ಕರಿಬೇವು ನಮ್ಮ ಹಿತ್ತಲಗಳಲ್ಲಿ ಒಂದು ವೈಜ್ಞಾನಿಕ ಉಪಯೋಗಗಳಲ್ಲಿ ದೈನಂದಿನ ಅಡುಗೆ ಪದಾರ್ಥದಲ್ಲಿ ಕರಿಬೇವು…

Read More

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಮೂಡಬಿದಿರೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ವೈಭವದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’. ಈ ವರ್ಷ ಆಳ್ವಾಸ್ ವಿರಾಸತ್‍ಗೆ …29ನೇ ವರ್ಷವಾಗಿದ್ದು ಅಪೂರ್ವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಸ್ಕೃತಿ ಪ್ರಿಯರಿಗೆ ರಸದೌತಣವನ್ನು ನೀಡಲು ಯೋಚಿಸಲಾಗಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದು ‘ಆಳ್ವಾಸ್ ವಿರಾಸತ್ 2023’ ಅತ್ಯಂತ ಯಶಸ್ವಿ ಉತ್ಸವವಾಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ‘ಆಳ್ವಾಸ್ ವಿರಾಸತ್ 2023’ ಕ್ಕೆ ದಿನಾಂಕ ನಿಗದಿಯಾಗಿದ್ದು ಡಿಸೆಂಬರ್ 14ರಂದು ಪ್ರಾರಂಭವಾಗಿ 17ರಂದು ಮುಕ್ತಾಯಗೊಳ್ಳಲಿದೆ. ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳು ಸೇರಿ ನಾಲ್ಕು ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ಜರುಗಲಿದೆ. ಪ್ರತಿದಿನ ಮುಸ್ಸಂಜೆ 6.00 ಗಂಟೆಗೆ ಪ್ರಾರಂಭವಾಗುವ ಈ ಉತ್ಸವವು ರಾತ್ರಿ 9.30ಕ್ಕೆ ಮುಕ್ತಾಯಗೊಳ್ಳುತ್ತವೆ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ವಿ ರಾಸತ್ ಕಾರ್ಯಕ್ರಮಗಳು ನಡೆಯಲಿದೆ. ಇದು ಬೃಹತ್ ವೇದಿಕೆಯಿದಾಗಿದ್ದು, 50 ಸಾವಿರಕ್ಕಿಂತ ಹೆಚ್ಚಿನ ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಅನುವಾಗುವಂಥಾ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಡಿಸೆಂಬರ್ 14,…

Read More

ಬಹುಮುಖ ಪ್ರತಿಭೆಯ ಖ್ಯಾತ ನೃತ್ಯ ನಿರ್ದೇಶಕ ನವೀನ್‌ ಶೆಟ್ಟಿ ಪ್ರಸ್ತುತ ತುಳು, ಕನ್ನಡ, ಕೊಂಕಣಿ ಮುಂತಾದ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಗಮನ ಸೆಳೆಯುತ್ತಿರುವ ಬಹುಮುಖ ಪ್ರತಿಭೆ ನವೀನ್‌ ಶೆಟ್ಟಿ. ರೂಪೇಶ್‌ ಶೆಟ್ಟಿ ಜತೆಗೆ ಆರಂಭದಿಂದಲೂ ಇರುವ ಇವರು ಅವರ ಪ್ರತಿಯೊಂದು ಹೆಜ್ಜೆಯಲ್ಲೂ ಜತೆಗಾರರಾಗಿದ್ದಾರೆ. ರೂಪೇಶ್‌ ಶೆಟ್ಟಿ ಬಿಗ್‌ಬಾಸ್‌ಗೆ ಹೋಗಿದ್ದಾಗ ಅವರ ಎಲ್ಲ ವ್ಯವಹಾರಗಳನ್ನೂ ಸಮರ್ಥವಾಗಿ ನಿಭಾಯಿಸಿದವರು. ಇವರ ಬಗ್ಗೆ ಒಂದು ಕಿರುಪರಿಚಯ ಇಲ್ಲಿದೆ. ಶಿವಾನಂದ ಶೆಟ್ಟಿ ಮತ್ತು ಶೋಭಾ ಶೆಟ್ಟಿ ದಂಪತಿಯ ಪುತ್ರರಾಗಿರುವ ಇವರು ಆರಂಭದ ಶಿಕ್ಷಣವನ್ನು ಕಾಸರಗೋಡಿನ ಕೂಡ್ಲು ಹೈಸ್ಕೂಲ್‌ನಲ್ಲಿ ಮುಗಿಸಿ ಬಳಿಕ ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದು ಬೊಕ್ಕಪಟ್ಣ ಕಾಲೇಜಿನಲ್ಲಿ ಪಿಯುಸಿ ಹಾಗೂ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪದವಿ ಮುಗಿಸಿದರು. ಆಗಲೇ ಅವರಿಗೆ ನೃತ್ಯ ಮತ್ತು ಸಿನೆಮಾದಲ್ಲಿ ಅಪಾರ ಆಸಕ್ತಿ. ಮಂಗಳೂರಿಗೆ ಬಂದ ಬಳಿಕ ಆ ಆಸಕ್ತಿ ಮತ್ತಷ್ಟು ಚಿಗುರಿತು, ಬೆಳೆಯಿತು. ಶಿಕ್ಷಣ ಮುಗಿಸಿದ ಬಳಿಕ ಬೆಂಗಳೂರು, ದುಬಾಯಿಯಲ್ಲಿ ಸ್ವಲ್ಪ ಕಾಲ ಉದ್ಯೋಗ ಮಾಡಿದ ಅವರು ಬಳಿಕ ಊರಿಗೆ ಮರಳಿದರು. ಪತ್ನಿ…

Read More

ಸುಮಾರು ಮೂವತ್ತೈದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶ್ರೀ ಮಾರಿಯಮ್ಮ ಮತ್ತು ಶ್ರೀ ಉಚ್ಛಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ ಧಾರ್ಮಿಕ ಕಾರ್ಯಕ್ರಮವು ಜೂ. 11 ಮತ್ತು 12 ರಂದು ನಡೆಯಲಿದೆ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೊದಲ ಹಂತದ ಕಾಮಗಾರಿಗೆ ಅನುಗುಣವಾಗಿ ಅಗ್ರಸಭೆ, ಮುಖ ಮಂಟಪ ನಿರ್ಮಾಣವಾಗಬೇಕಿದ್ದು ಅದಕ್ಕೆ ಪೂರ್ವಭಾವಿಯಾಗಿ ಪ್ರಸ್ತುತ ಇರುವ ಮಾರಿಯಮ್ಮ ಗುಡಿ ಮತ್ತು ಉಚ್ಚಂಗಿ ಗುಡಿಗಳನ್ನು ವಿಸರ್ಜಿಸಬೇಕಾಗಿದೆ. ಈ ಉದ್ದೇಶದಿಂದ ಅಮ್ಮನ ಅಭಯ ನುಡಿ ಮತ್ತು ಪ್ರಾಜ್ಞರ ಪ್ರಶ್ನಾ ಚಿಂತನೆಯಂತೆ ತಾತ್ಕಾಲಿಕ ಗುಡಿಗಳನ್ನು ನಿರ್ಮಿಸಲಾಗಿದ್ದು ಜೂ. 11ರಂದು ಬೆಳಿಗ್ಗೆ ಗಂಟೆ 8 ರಿಂದ ಚಂಡಿಕಾಯಾಗ ಪ್ರಾರಂಭಗೊಂಡು, 11 ಕ್ಕೆ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ. ಜೂ. 12ರಂದು ಅಮ್ಮನ ಗದ್ದುಗೆ…

Read More

ಮನುಷ್ಯನ ಜೀವನದಲ್ಲಿ ಸುಖ- ದುಃಖ, ಲಾಭ-ನಷ್ಟ, ನಗು- ಅಳು ಎಲ್ಲವೂ ಸಹಜ. ಇವೆಲ್ಲವೂ ಒಳಗೊಂಡಿದ್ದರೆ ಅದು ಜೀವನ. ಯಾವನೇ ವ್ಯಕ್ತಿಯಾಗಲೀ ತನ್ನ ಬದುಕಿನುದ್ದಕ್ಕೂ ಕೇವಲ ಸುಖ ಅಥವಾ ಕೇವಲ ದುಃಖವನ್ನೇ ಕಂಡಿದ್ದರೆ ಆತನ ಜೀವನದ ನಿಜಾ ರ್ಥದಲ್ಲಿ ಬರಡು. ಇವೆರಡೂ ಸಮ್ಮಿಳಿತ  ‌ಗೊಂಡಿದ್ದರೆ ಆ ಬದುಕಿಗೂ ಒಂದು ಅರ್ಥ. ಹಾಗೆಂದು ಸಂಕಷ್ಟಗಳು ಎದುರಾದವೆಂದು ಕೊರಗುವುದಾಗಲೀ ಸುಖಮಯವಾಗಿದೆ ಎಂದು ಹಿಗ್ಗುವುದಾಗಲೀ ಸರಿಯಲ್ಲ. ಸಮಸ್ಯೆ, ಕಷ್ಟಗಳು ಎದುರಾದಾಗ ಅದನ್ನು ಎದುರಿಸುವ ಛಾತಿಯನ್ನು ನಾವು ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಮನೋಭಾವದಿಂದ ಮುನ್ನಡೆದಲ್ಲಿ ಯಶಸ್ಸನ್ನು ಕಾಣಬಹುದು. ಒಮ್ಮೆ ಒಬ್ಬಳು ಗೃಹಿಣಿ ಎರಡು ಮಾವಿನ ಹಣ್ಣುಗಳನ್ನು ತಿಂದು ಅದರ ಗೊರಟುಗಳನ್ನು (ಓಟೆ) ತಿಪ್ಪೆ ಗುಂಡಿಗೆ ಬಿಸಾಡಿದಳು. ಆಗ ಒಂದನೆಯ ಗೊರಟು ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯು ಗೊಬ್ಬರ ಮತ್ತು ಪೌಷ್ಟಿಕಾಂಶ ಕೊಡುತ್ತದೆ, ಇದರಿಂದ ಸಸಿಯಾಗಿ ಸಣ್ಣ ಗಿಡವಾಗುತ್ತೇನೆ, ಕಾಲಾಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರವಾದ ಮಾವಿನ ಹಣ್ಣನ್ನು ಕೊಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆಂದು ಯೋಚಿಸಿ…

Read More