“ಭಯಾನಕ ಕಾಯಿಲೆ ಯನ್ನು ಹೊಡೆದೋಡಿಸಿ, ರೈತನಿಗೆ ಹೊಸ ಬದುಕು ತಂದುಕೊಟ್ಟ ಕೃಷಿ ಭೂಮಿ……!”ಕ್ಯಾನ್ಸರ್ ರೋಗದಿಂದ ಬದುಕಿನಲ್ಲಿ ಐಷಾರಾಮಿ ಗಲ್ಫ್ ಜೀವನ ಕ್ಯಾನ್ಸಲ್…..!” “ಕೊನೆಗೂ ಕೈ ಹಿಡಿದ ಭೂಮಿತಾಯಿ….!”
✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ, ಉಡುಪಿ ಜಿಲ್ಲೆ.
(santhoshmolahalli@gmail.com)
ಸುದ್ದಿ @ಮಂಗಳೂರು:
ಅವರು ಕೃಷಿ ಭೂಮಿಯಲ್ಲಿ ಜೀವ ಕಳೆದುಕೊಂಡ ಕುಟುಂಬ.ಕೃಷಿಗೆ ಜೀವನ ಎಂದು ನಂಬಿಕೊಂಡು ಬದುಕುವ ಕುಟುಂಬ.ಆದರೆ ಆ ಕಾಲದಲ್ಲಿ ಕೃಷಿಯಿಂದ ಬೇಸತ್ತು ವಿದೇಶದತ್ತ ಪ್ರಯಾಣ ಬೆಳೆಸಿದ ಆ ವ್ಯಕ್ತಿ ಜೀವನವೇ ಬದಲಾಯಿಸಿದ್ದು ಭಯಾನಕ ಕಾಯಿಲೆ.ಕೃಷಿ ಮಾಡುವ ಚಾಕಚಕ್ಯತೆ, ಕೃಷಿಭೂಮಿ ಹದಗೊಳಿಸುವಿಕೆ ,ಕೃಷಿಯಲ್ಲಿ ತಾನು ಪಡೆದುಕೊಂಡಂತಹ ಲಾಭಾಂಶ ಇವೆಲ್ಲವೂ ಆ ವ್ಯಕ್ತಿಗೆ ಕೃಷಿಯ ಲಾಭಾಂಶದ ಪರಿಜ್ಞಾನವಿದೆ.ಆದರೆ ಅದನ್ನು ಸರಿಯಾಗಿ ವಿನಿಯೋಗ ಮಾಡಿಕೊಳ್ಳದೆ, ಬಹುತೇಕವಾಗಿ ಅದರಲ್ಲಿನ ಕೃಷಿ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿಲ್ಲ.ಕೃಷಿ ಬದುಕನ್ನು ದೂರಗೊಳಿಸಿ ದೂರದ ಗಲ್ಫ್ ಪ್ರದೇಶಕ್ಕೆ ಹೋಗಿ ಬದುಕುವ ಆಸೆ ಕಂಡಿದ್ದರು.ಆದರೆ ಕೃಷಿ ಭೂಮಿಯ ಶಾಪವೋ ಏನೋ ಗೊತ್ತಿಲ್ಲ.ಪುನಃ ಆ ವ್ಯಕ್ತಿಯನ್ನ ಕೃಷಿ ಭೂಮಿಯತ್ತ ಸೆಳೆದ ಪರಿ ಆಶ್ಚರ್ಯ ಸಂಗತಿ.ಹೌದು ಸ್ನೇಹಿತರೆ, ಇದು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಕುಟುಂಬದ ಬದುಕಿನ ವ್ಯಥೆಯ ಕಥೆಯಾದರೂ, ಸಕ್ಸಸ್ ಆದಂತಹ ಸ್ಟೋರಿ. ಇತರರಿಗೆ ಮಾದರಿಯಾಗುವ ಮೂಲಕ ತಮಸ್ಸು ಜಗತ್ತಿಗೆ ಕಾಯಿಲೆಯನ್ನು ಎದುರಿಸಿ ಶಪಥ ಮಾಡಿದ ವ್ಯಕ್ತಿಯ ಯಶೋಗಾಥೆ….!”
ಕ್ಯಾನ್ಸರ್ ಕಾಯಿಲೆ ಬಂತೆಂದ್ರೆ ಇನ್ನು ಸಾವೇ ಗತಿ ಎನ್ನುವವರೇ ಹೆಚ್ಚು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ವ್ಯಕ್ತಿಯೋರ್ವರು ಕ್ಯಾನ್ಸರನ್ನೇ ಗೆದ್ದು ತೋರಿಸಿದ್ದಾರೆ.
ಹೌದು… ಕ್ಯಾನ್ಸರ್ ಜೊತೆ ಸೆಣಸಾಡುತ್ತಿರುವ ಅದೇಷ್ಟೋ ಸಾವಿರ ಮಂದಿಗೆ ಇವರು ಸ್ಫೂರ್ತಿದಾಯಕವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆಮೊಗರು ಗ್ರಾಮದ ನಿವಾಸಿ ಥಾಮಸ್ ಗ್ರೇಜರಿ ರೆಬೆಲ್ಲೋ ಹುಟ್ಟಿನಿಂದಲೇ ಕೃಷಿಕರಲ್ಲ. ಗಲ್ಫ್ ರಾಷ್ಟ್ರದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಅಲ್ಲೇ ಸೆಟಲ್ ಆಗುವ ಯೋಚನೆಯಲ್ಲಿದ್ದರು. ಆದರೆ ಗಂಟಲಿನ ಕ್ಯಾನ್ಸರ್ ಇವರ ಯೋಜನೆಯನ್ನೇ ಬದಲಾಯಿಸಿತು. ಕ್ಯಾನ್ಸರ್ ದೇಹದೊಳಗೆ ಆಕ್ರಮಿಸುತ್ತಾ ಹೋಯಿತು.
ಸತ್ರೆ ಜನ್ಮಭೂಮಿಯಲ್ಲೇ ಸಾಯೋಣ ಅಂತಾ ಹಳ್ಳಿಗೆ ಬಂದ ಥಾಮಸ್ ಗ್ರೇಜರಿ ರೆಬೆಲ್ಲೋ ಅವರಲ್ಲಿ ಊರಿಗೆ ಬಂದ ನಂತರ ಕಂಡಿದ್ದು ಅಚ್ಚರಿಯ ಬದಲಾವಣೆ. ಕತ್ತರಿಸಲ್ಪಟ್ಟ ಗಂಟಲು, ದೇಹದೊಳಗೆ ಕಾಡುತ್ತಿದ್ದ ಆರೋಗ್ಯದ ಸಮಸ್ಯೆಯ ನಡುವೆಯೇ ಕಾಡುತ್ತಿದ್ದ ಒಂಟಿತನವನ್ನು ದೂರಮಾಡಲು ಕೃಷಿ (Agriculture) ಕೆಲಸಕ್ಕೆ ಕೈ ಹಾಕಿದರು.
ದಿನ ಕಳೆದಂತೆ ಥಾಮಸ್ ಅವರ ಆರೋಗ್ಯದಲ್ಲಿ ಕಂಡಿದ್ದೇ ಅಚ್ಚರಿಯ ಬದಲಾವಣೆಯಾಯಿತು. ಸಾವಿನ ದಿನ ಎಣಿಸುತ್ತಿದ್ದ ಥಾಮಸ್ ತನ್ನ ಒಂದೂವರೆ ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಾ ಮಾಡುತ್ತಾ ಕ್ಯಾನ್ಸರ್ ಜೊತೆ ಹೋರಾಡುತ್ತಾ ಹನ್ನೆರಡು ವರ್ಷಗಳೇ ಕಳೆದುಹೋಗಿದೆ. ಅವರ ಪತ್ನಿ ಮತ್ತು ಮಗ ವಿದೇಶದಲ್ಲಿದ್ದು, ಥಾಮಸ್ ಮಾತ್ರ ಊರಲ್ಲೇ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.
ಅಡಿಕೆ, ತೆಂಗು, ತರಕಾರಿ ಕೃಷಿ ಮಾಡುತ್ತಾ ಮಾಡುತ್ತಾ ತನ್ನೊಳಗಿರುವ ಮಹಾಮಾರಿಯನ್ನೇ ಮರೆತು ಸ್ಫೂರ್ತಿಯಾಗಿದ್ದಾರೆ. ಪ್ರಾರಂಭದಲ್ಲಿ ಕ್ಯಾನ್ಸರ್ ಜೊತೆಗೆ ಸಕ್ಕರೆ ಖಾಯಿಲೆ ಕೂಡಾ ಕಾಡಿದ್ದರೂ ಈಗ ಅದೂ ಸಂಪೂರ್ಣ ಮಾಯವಾಗಿದೆ. ಈ ಬಗ್ಗೆ ಥಾಮಸ್ ಗ್ರೇಜರಿ ರೆಬೆಲ್ಲೊ ಮಾತನಾಡಿ, ಕ್ಯಾನ್ಸರ್ ರೋಗಿಗಳು ಧೃತಿಗೆಡದೆ ಕೃಷಿ ಮಾಡಿ. ಕೃಷಿಯಲ್ಲಿ ಖುಷಿ ಪಡಿ ಎನ್ನುವ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಕ್ಯಾನ್ಸರ್ ರೋಗಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಹೋರಾಡುವವರಿಗಿಂತ ಥಾಮಸ್ ಭಿನ್ನವಾಗಿ ಕಾಣುತ್ತಾರೆ.
“ಭಯಾನಕ ಕಾಯಿಲೆ ಬದುಕೇ ಇನ್ನು ಮುಗಿಯಿತು ಎಂದು ಜೀವನದ ಎಲ್ಲಾ ಆಸೆಗಳನ್ನ ತ್ಯಜಿಸಿ ಮೌನಕ್ಕೆ ಶರಣಾಗಿದ್ದರು .ಆದರೆ ಕೃಷಿ ಬದುಕಿನ ಚಿತ್ರಣವನ್ನೇ ಬದಲಾಯಿಸಿ ಕೃಷಿಭೂಮಿ ಇವರಿಗೆ ಮತ್ತೆ ಜೀವವನ್ನ ತಂದುಕೊಟ್ಟಿದೆ. ಆ ಬದುಕಿನ ಎಲ್ಲ ಕ್ಷಣಗಳನ್ನ ಮರೆತು ಆರೋಗ್ಯವಂತರಾಗಿ ಬದುಕುವ ಸ್ಥೈರ್ಯ ತಂದುಕೊಟ್ಟಿತು ಈ ಕೃಷಿ ಭೂಮಿ ಎನ್ನುವುದು ವಿಶೇಷ…!”ಕೃಷಿ ಭೂಮಿಯ ವಿಶೇಷವಾದ ಫಲವತ್ತತೆಯು ಥಾಮಸ್ ಅವರ ಜೀವನವನ್ನು ಬದುಕಿಸಿತು ಅದಲ್ಲದೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ಕೃಷಿ ಭೂಮಿಯಿಂದ ಅವರ ಬದುಕು ಹಸನಾಗುವಂತೆ ಮಾಡಿತು.ದಕ್ಷಿಣ ಕನ್ನಡ ಜಿಲ್ಲೆಯ ಥಾಮಸ್ ಅವರ ಬದುಕು ಇತರರಿಗೆ ಮಾದರಿ ಆಗುವುದರೊಂದಿಗೆ ಬದುಕಿನ ಸುಂದರ ಕ್ಷಣವನ್ನು ಕೃಷಿಭೂಮಿಗೆ ಕಳೆಯುತ್ತಿರುವ ರೀತಿ ವಿಶೇಷ ಅನ್ನಿಸಿತು.ಥಾಮಸ್ ಅವರ ಬದುಕಿನ ಯಶೋಗಾಥೆ ಇತರರಿಗೂ ಮಾದರಿ ಆಗುತ್ತದೆ ಎನ್ನುವುದು ಆಶಯ…!”
ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. ಉಡುಪಿ ಜಿಲ್ಲೆ .