Author: admin

ಅಪಾರ ಭಕ್ತರ ಸಮ್ಮುಖದಲ್ಲಿ ಶ್ರೀ ಮೂಕಾಂಬಿಕಾ ದೇಗುಲದ ನೂತನ ರಥದಲ್ಲಿ ರಥೋತ್ಸವ ಸಂಭ್ರಮದಿಂದ ಮಾ. 15ರಂದು ಜರಗಿತು. ಅರ್ಚಕ ಡಾ| ರಾಮಚಂದ್ರ ಅಡಿಗರ ನೇತೃತ್ವದಲ್ಲಿ ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥಬಲಿ ನಡೆದು, ಮಧ್ಯಾಹ್ನ 12.30ಕ್ಕೆ ರಥಾರೋಹಣ ನಡೆಯಿತು. ಕೆಳದಿ ಅರಸರ ಕಾಲದಲ್ಲಿ ನಿರ್ಮಿಸಲಾಗಿತ್ತೆನ್ನಲಾದ 400 ವರ್ಷಗಳ ಪುರಾತನ ರಥವನ್ನು ಬದಲಾಯಿಸಿ ದಾನಿ ಸುನಿಲ್‌ ಶೆಟ್ಟಿಯವರು ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ನೂತನ ರಥವನ್ನು ಸಮರ್ಪಿಸಿದ್ದಾರೆ. ಈ ರಥದಲ್ಲಿ ವಿರಾಜಮಾನಳಾದ ಶ್ರೀದೇವಿಯನ್ನು ವೀಕ್ಷಿ ಸಲು 20 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು. ರಥೋತ್ಸವದ ಸಂದರ್ಭ ಅರ್ಚಕರು ಎಸೆಯುವ ನಾಣ್ಯವನ್ನು ಹಿಡಿಯಲು ಭಕ್ತರು ಮುಗಿಬಿದ್ದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹಾಗೂ ಎಡಿಸಿ ವೀಣಾ ಬಿ.ಎನ್‌. ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ರಥ ಸಮರ್ಪಿಸಿದ ಉದ್ಯಮಿ ಸುನಿಲ್‌ ಶೆಟ್ಟಿ…

Read More

ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ (ವಾಪಿ, ದಮ್ಮನ್, ವಲ್ಸಡ್, ಸಿಲ್ವಾಸ ಮತ್ತು ಉಮ್ಮರ್‍ಗಾಂವ್) ಸಂಯೋಗದೊಂದಿಗೆ ತುಳುನಾಡ ಐಸಿರಿ ಪ್ರಿಮಿಯಾರ್ ಲೀಗ್ ಕ್ರಿಕೆಟ್ ಪಂದ್ಯವು ಕಳೆದ ಭಾನುವಾರ ಗುಜರಾತ್ ರಾಜ್ಯದ ವಾಪಿ ಪ್ರರಿಸರದಲ್ಲಿನ ಕೆ.ಕೆ ಭಂಡಾರಿ ಕ್ರೀಡಾಂಗಣದಲ್ಲಿ ನಡೆಸಲ್ಪಟ್ಟಿತು.ತುಳುನಾಡ ಐಸಿರಿಯ ಅಧ್ಯಕ್ಷರು ಬಾಲಕೃಷ್ಣ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಪಂದ್ಯಾಟದಲ್ಲಿ ಸ್ಥಾನೀಯ ತಂಡಗಳು ಭಾಗವಹಿಸಿದ್ದವು. ವಾಪಿ ಕನ್ನಡ ಸಂಘದ ವಿಶ್ವಸ್ಥ ಪಿ.ಎಸ್ ಕಾರಂತ ಅವರು ರಿಬ್ಬನ್ ಕತ್ತರಿಸಿ ಕ್ರಿಕೆಟ್ ಪಂದ್ಯಾಟಕೆ ಚಾಲನೆ ನೀಡಿದರು. ತುಳುನಾಡ ಐಸಿರಿ ಗೌರವಾಧ್ಯಕ್ಷ ಹಾಗೂ ಬಿಲ್ಲವರ ಸಂಘ ವಾಪಿ ಅಧ್ಯಕ್ಷ ಸದಾಶಿವ ಜಿ.ಪೂಜಾರಿ ಪ್ರಥಮ ಬ್ಯಾಟಿಂಗ್ ಮಾಡಿ ಪಂದ್ಯಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನಿತ್ತರು. ಅಥಿüತಿಗಳಾಗಿ ರಾಧಾಕೃಷ್ಣ ಮೂಲ್ಯ ಸೂರತ್, ಹರೀಶ್ ವೆಂಕಪ್ಪ ಪೂಜಾರಿ, ಸಂಜಯ ಮರ್ಪಲಿ ಕಲ್ಪವೃಕ್ಷ ಹೊಡೆದು ಕ್ರೀಡಾ ಕಾರ್ಯಕ್ರಮಕ್ಕೆ ಅನುವು ಮಾದಿ ಶುಭಕೋರಿದರು. ಎಸ್‍ಕೆಸಿ ದಮನ್, ತುಳುನಾಡ ಐಸಿರಿ-ಎ, ತುಳುನಾಡ ಐಸಿರಿ-ಬಿ, ಸಿಲ್ವಾಸ ವರಿಯರ್ಸ್, ಕೆಎಫ್‍ಸಿ-ಎ, ಕೆಎಫ್‍ಸಿ-ಬಿ, ಕೆಎಫ್‍ಸಿ ಸೂರತ್, ಅಂಕಲೇಶ್ವರ್ ತುಳು ಸಂಘ, ಶಶಿ ಹಂಟರ್ ಬರೋಡ…

Read More

ಉಳ್ಳಾಲದ ವೀರರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮನಂತಹ ಸ್ವಾತಂತ್ರ ಹೋರಾಟಗಾರರು ನಮ್ಮ ರಾಜ್ಯದ ಮಹಿಳೆಯರಿಗೆ ಪ್ರೇರಣ ಶಕ್ತಿಯಾಗಿದ್ದು, ಉಳ್ಳಾಲದಲ್ಲಿ ಅಬ್ಬಕ್ಕಳ ಶೌರ್ಯವನ್ನು ದೇಶ ವಿದೇಶಗಳಿಗೆ ತಿಳಿಸುವ ನಿಟ್ಟಿನಲ್ಲಿ ಥೀಮ್‌ ಪಾರ್ಕ್‌ ಆಗಬೇಕು, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ಇಡಲು ಪ್ರಧಾನಿಗೆ ಮತ್ತು ಸಂಬಂಧಿತ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ವೀರ ರಾಣಿ ಅಬ್ಬಕ್ಕ ಉತ್ಸವದಲ್ಲಿ ಅವರು ಮಾತನಾಡಿ ಅಬ್ಬಕ್ಕಳ ಉತ್ಸವ ಕೇವಲ ಉಳ್ಳಾಲಕ್ಕೆ ಸೀಮಿತವಾಗಬಾರದು. ರಾಜ್ಯಮಟ್ಟದ ಉತ್ಸವವಾಗಿ ಸ್ವಾತಂತ್ರ ಹೋರಾಟಗಾರರ ಉತ್ಸವ ಆಚರಿಸಲು ರಾಜ್ಯ ಸರಕಾರ ಮುಂದಾಗಬೇಕು. ಅಬ್ಬಕ್ಕ ಭವನ ನಿರ್ಮಾಣದ ಸಂದರ್ಭ ಸುಸಜ್ಜಿತ ಥಿಯೇಟರ್‌ ನಿರ್ಮಾಣ ಮಾಡಿ ಅವರ ಸಾಹಸ ಗಾಥೆಯನ್ನು ಚಿತ್ರೀಕರಣದ ಮೂಲಕ ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕು. ಇದರೊಂದಿಗೆ ಪಠ್ಯಕ್ರಮದಲ್ಲೂ ಆಬ್ಬಕ್ಕಳ ಸಾಹಸಗಾಥೆಯನ್ನು ಅಳವಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್‌…

Read More

ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 30ನೇ ವರ್ಷದ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಅಂಗವಾಗಿ ಸಂಜೆ ಸಭಾ ಕಾರ್ಯಕ್ರಮ ನಡೆಯಿತು.ರಾಜ್ಯ ಸಹಕಾರ ಮಂಡಲದ ಅಧ್ಯಕ್ಷ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸಹಕಾರ ರತ್ನ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಂಬಳ ಕೂಟಕ್ಕೆ ಸೆನ್ಸಾರ್‌ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಡಾ| ರಾಜೇಂದ್ರ ಕುಮಾರ್‌ ಅವರನ್ನು ಗೌರವಿಸಲಾಯಿತು. ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ದಿ| ಜಯಂತ್‌ ರೈ ಅವರಿಂದ ತೊಡಗಿ ದಿ| ಮುತ್ತಪ್ಪ ರೈ ಅವರ ಕಾಲದಲ್ಲೂ ಕಂಬಳ ಯಶಸ್ವಿಯಾಗಿ ನಡೆದಿದೆ. ಕಾಂತಾರ ಚಿತ್ರದ ಮೂಲಕ ನಮ್ಮ ಕಲೆ, ಸಂಸ್ಕೃತಿ, ಕಂಬಳ ಕ್ರೀಡೆ ಜಗತ್ತಿಗೆ ಆಕರ್ಷಣೆಯಾಗುವ ಕೆಲಸ ಮಾಡಿದೆ ಎಂದರು. ಐಕಳಬಾವ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಬೆಳಪು, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌, ಕಂಬಳ ಸಮಿತಿ ಮಾರ್ಗದರ್ಶಕಿ,…

Read More

ದುಬಾಯಿಯ ಮರೀನಾದಲ್ಲಿ ಖ್ಯಾತ ಉದ್ಯಮಿಯಾಗಿ, ಹುಟ್ಟೂರಲ್ಲಿ ಸಮಾಜಸೇವಕರಾಗಿ ಕಂಗೊಳಿಸುತ್ತಿರುವ ಪುತ್ತೂರಿನ ಚಿರ ಯುವಕ ಸಂದೀಪ್ ರೈ (ನಂಜೆ ಯಾಟ್ಸ್) ಅವರಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಕೃಪೆ ಸದಾ ಇರಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.

Read More

ಕನ್ನಡವನ್ನು ನಾವು ತಾಯಿಯ ರೂಪದಲ್ಲಿ ಪೂಜಿಸಿ ಗೌರವಿಸುತ್ತೇವೆ. ಕನ್ನಡವು ಮನ- ಮನೆಗಳನ್ನು ಬೆಸೆಯುವ ಭಾಷೆಯಾಗಿದೆ. ಕನ್ನಡ ನಾಡು ನುಡಿಯ ಸಂರಕ್ಷಣೆಗೆ ನಾವೆಲ್ಲರೂ ಪಣ ತೊಡುವುದರೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ನಿವೃತ್ತ ಶಿಕ್ಷಕ ರವೀಂದ್ರ ರೈ ಹರೇಕಳ ಹೇಳಿದರು. ಅವರು ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗ್ಲಾಸ್ ಹೌಸ್ ನಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕನ್ನಡರಿಗೆ ಆಂಗ್ಲ ಭಾಷೆಯ ದ್ವೇಷವಿಲ್ಲ. ಇತರ ಭಾಷೆಗಳನ್ನು ದ್ಬೇಷಿಸದೆ ಎಲ್ಲಾ ಭಾಷೆಗಳನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಿದೆ. ಕರುನಾಡು ಸರ್ವಧರ್ಮ ಸಮನ್ವಯದ‌ ಕ್ಷೇತ್ರ ಹಾಗೂ ಸಂಸ್ಕೃತಿಯ ನೆಲೆಬೀಡಾಗಿದೆ ಎಂದರು. ನಿಟ್ಟೆ ವಿವಿ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಅವರು ದ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ನೆಲ ಜಲ ಭಾಷೆಯನ್ನು ನಾವು ಮಾತೃ ಸಮಾನವಾಗಿ ನೋಡುತ್ತೇವೆ. ಇಂದಿನ ಬದುಕಿನ ಆಗುಹೋಗುಗಳ ನಡುವೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳುವಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಕನ್ನಡ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳೋಣ. ನಮ್ಮ…

Read More

ಶಿವಾಯ ಫೌಂಡೇಶನ್ ಹಮ್ಮಿಕೊಂಡ ದಾನ – ಧರ್ಮದ ಇದೊಂದು ಒಳ್ಳೆಯ ಕಾರ್ಯಕ್ರಮ. ನಾನು ಕೂಡ ಕೃಷಿ ಕುಟುಂಬದಲ್ಲಿ ಬೆಳೆದವ. ಕಷ್ಟ ಪಟ್ಟು ಶಿಕ್ಷಣವನ್ನು ಪಡೆದವನ್ನಾಗಿದ್ದೇನೆ. ಆದರೆ ಪ್ರಸ್ತುತ ಹುಟ್ಟೂರು ಎರ್ಮಾಳ್ ನಲ್ಲಿ ಶಾಲೆಯನ್ನು ದತ್ತು ಪಡೆದುಕೊಂಡು ಟ್ರಸ್ಟ್ ರಚನೆ ಮಾಡಿ ಅನೇಕ ಸೌಲಭ್ಯದೊಂದಿಗೆ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತಿದ್ದೇನೆ. ಶಿಕ್ಷಣಕ್ಕಾಗಿ ಸಹಾಯ ಹಸ್ತ ಪಡೆಯುವುದಕ್ಕೆ ಯಾರೂ ಕೂಡ ಸಂಕೋಚ ಮಾಡಬಾರದು. ಕಷ್ಟದಲ್ಲಿದ್ದು ಇತರರ ಸಹಾಯ ಹಸ್ತವನ್ನು ಪಡೆದು ವಿದ್ಯಾರ್ಜನೆಯನ್ನು ಮಾಡಿದವರೇ ಮುಂದೆ ಉನ್ನತ ಮಟ್ಟಕ್ಕೇರಿ ಪ್ರತಿಷ್ಟಿತ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದವರಿದ್ದಾರೆ. ಜೀವನದ ಯಶಸ್ಸಿಗೆ ಕೇವಲ ಶಿಕ್ಷಣವೇ ಮುಖ್ಯವಲ್ಲ. ಅದರ ಜೊತೆ ಸಂಸ್ಕೃತಿ ಸಂಸ್ಕಾರವು ಮುಖ್ಯವಾಗಿರುತ್ತದೆ. ಹಾಗಿರುವಾಗ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ನಮ್ಮ ಹಿರಿಯರ ಸಂಸ್ಕೃತಿ, ಕಲೆ, ಆಚರಣೆ, ಸಂಪ್ರದಾಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಆಗ ಮಕ್ಕಳು ಸುಸಂಸ್ಕೃತರಾಗಿ, ಒಳ್ಳೆಯ ನಾಗರಿಕರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಎಂದು ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಅಧ್ಯಕ್ಷ, ಮಾಜಿನಗರ…

Read More

ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಗೋಸ್ಟ್ 15 ರಂದು ಬಂಟ್ಸ್ ಹಾಸ್ಟೇಲ್ ನಲ್ಲಿ ನಡೆಯಲಿದ್ದು, ಬಂಟ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಂಗಳೂರು ತಾಲೂಕು ಸಮಿತಿಯು ಎಸ್‌ಎಸ್‌ಎಲ್ ಸಿ ಯಲ್ಲಿ 625 ಅಂಕಗಳಲ್ಲಿ 600 ಮತ್ತು ಅದಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಹಾಗೂ ಪಿಯುಸಿ ಯಲ್ಲಿ 600 ರಲ್ಲಿ 575 ಮತ್ತು ಅದಕ್ಕಿಂತ ಅಧಿಕ ಅಂಕ ಗಳಿಸಿದ ಸಿಬಿಎಸ್‌ ಮತ್ತು ಐಸಿಎಸ್ ಸಿಲೆಬಸ್‌ನಲ್ಲಿ ಪಡೆದ ಗ್ರೇಡ್ ಎ++ ವಿದ್ಯಾರ್ಥಿಗಳಿಗೆ ಆಗೋಸ್ಟ್ 15ರಂದು ಬೆಳಿಗ್ಗೆ 11 ಗಂಟೆಗೆ ಬಂಟ್ಸ್ ಹಾಸ್ಟೇಲ್ ನಲ್ಲಿ ಪ್ರತಿಭಾ ಪುರಸ್ಕಾರ ಏರ್ಪಡಿಸಿದೆ. ಮಂಗಳೂರು ತಾಲೂಕು ವ್ಯಾಪ್ತಿಗೆ ಒಳಪಟ್ಟ ಬಂಟ ಸಮಾಜದ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್‌ಗಳ ಪ್ರತಿ ಮತ್ತು ನಿಗದಿತ ಅರ್ಜಿ ನಮೂನೆಯೊಂದಿಗೆ ದಿನಾಂಕ 10.08.2023ರ ಒಳಗಡೆ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಯೊಂದಿಗೆ ಬಂಟ್ಸ್ ಹಾಸ್ಟೇಲ್ ನಲ್ಲಿರುವ ಬಂಟರ ಯಾನೆ ನಾಡವರ ಮಾತೃ ಸಂಘದ…

Read More

ಬಂಟರ ಸಂಘ(ರಿ) ಸುರತ್ಕಲ್ ಇದರ ವತಿಯಿಂದ ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘ ಸುಧಾಕರ್ ಪೂಂಜಾರ ಅವಧಿಯಲ್ಲಿ ಶ್ಲಾಘನೀಯ ಕಾರ್ಯವನ್ನು ಮಾಡಿದೆ. ಸಂಘ ಸಂಸ್ಥೆಗಳು ಕೇವಲ ಹೆಸರಿಗೆ ಮಾತ್ರ ಇರಬಾರದು. ಸುರತ್ಕಲ್ ಬಂಟರ ಸಂಘದಂತೆ ಬಡವರ, ಅಶಕ್ತರ ಆಶಾಕಿರಣವಾಗಿ ಸಮಾಜದಲ್ಲಿ ಹೆಸರನ್ನು ಅಚ್ಚಳಿಯದೆ ಉಳಿಯುವಂತೆ ನೋಡಿಕೊಳ್ಳಬೇಕು. ಶಿಕ್ಷಣ, ಮೂಲಭೂತ ಸೌಕರ್ಯಗಳಿಗೆ ಬಂಟರ ಸಂಘ ನೆರವು ನೀಡುತ್ತಾ ಬಂದಿದ್ದು ಮುಂದೆಯೂ ಇಂತಹ ಕೆಲಸಕ್ಕೆ ಬೆನ್ನೆಲುಬಾಗಿ ನಿಲ್ಲಲಿದೆ” ಎಂದರು. ಬಳಿಕ ಮಾತಾಡಿದ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮಾನಾಥ್ ಶೆಟ್ಟಿ ಅವರು, “ಸುರತ್ಕಲ್ ಬಂಟರ ಸಂಘ ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದಲ್ಲಿ ಇಂದು…

Read More

ಸ್ವಾತಿ ಪ್ರಕಾಶ್ ಶೆಟ್ಟಿ ಈ ಹೆಸರು ಈಗ ಎಲ್ಲೆಲ್ಲೂ ಮನೆಮಾತಾಗಿದೆ. ಇದಕ್ಕೆ ಪ್ರಮುಖ ಕಾರಣ ಈಚೆಗೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಗೌಜಿ ಗಮ್ಮತ್ತ್ ತುಳು ಸಿನಿಮಾ. ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಗೌಜಿ ಗಮ್ಮತ್ತ್ ತುಳು ಸಿನಿಮಾದಲ್ಲಿ ಇವರದ್ದು ನಾಯಕಿಯ ಪಾತ್ರ. ಈ ಚಿತ್ರದಲ್ಲಿ ಇವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇವರಿಗೆ ಸಿನಿಮಾ ರಂಗದಲ್ಲಿ ಉತ್ತಮ ಭವಿಷ್ಯ ಇದೆ ಎಂಬ ಮಾತು ಪ್ರೇಕ್ಷಕರಿಂದ ಕೇಳಿ ಬರುತ್ತಿದೆ. ಸಿನಿಮಾದಲ್ಲಿ ಇವರು ತಂದೆಯ ಜಿಪುಣತನವನ್ನು ವಿರೋಧಿಸುವ ಪಾತ್ರದಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಕೊನೆಗೆ ತಂದೆ ಯಾಕಾಗಿ ಜಿಪುಣತನ ತೋರುತ್ತಿದ್ದರು ಎಂಬುದು ತಿಳಿದಾಗ ಸ್ವಾತಿ ಶೆಟ್ಟಿ ತೋರಿದ ಅಭಿನಯ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಎಂ.ಕಾಂ. ಶಿಕ್ಷಣ ಪಡೆದಿರುವ ಈಕೆಗೆ ನಾಯಕಿಗೆ ಬೇಕಾಗುವಂಥ ಎಲ್ಲ ಅರ್ಹತೆಗಳೂ ಇವೆ. ರೂಪ, ಎತ್ತರ ದೇಹ, ಉತ್ತಮ ಸ್ವಭಾವ, ಆಕರ್ಷಕ ವ್ಯಕ್ತಿತ್ವ, ಉತ್ತಮ ಮಾತುಗಾರಿಕೆ ಎಲ್ಲವೂ ಇವರಲ್ಲಿದ್ದು, ಇವು ಇವರ ಸಿನಿಮಾ ರಂಗದ ಸಾಧನೆಯ ಪಥಕ್ಕೆ ಮಾರ್ಗಸೂಚಿಯಾಗಲಿದೆ ಎಂಬುದು…

Read More