2023 ರ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆಯಾದ ಕುಂದಾಪುರ ತಾಲೂಕು ಯುವ ಬಂಟರ ಸಂಘ ರಿ. ಕುಂದಾಪುರ ಇದರ ದಶಮ ಸಂಭ್ರಮದ ಅಂಗವಾಗಿ ‘ಭಾವೈಕ್ಯ’ ಬಂಟರ ಮಹಾಸಮಾಗಮ ಕಾರ್ಯಕ್ರಮ ಫೆಬ್ರವರಿ 11 ಭಾನುವಾರ ಪೂರ್ವಾಹ್ನ 9.30 ಕ್ಕೆ ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಕ್ರೀಡಾಂಗಣ, ಯುವ ಮೆರಿಡಿಯನ್ ಸಂಕೀರ್ಣ, ಕೋಟೇಶ್ವರ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ‘ವಿದ್ಯಾದೀವಿಗೆ’ ಯೋಜನೆಯಡಿ ಬಂಟ ಸಮುದಾಯದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ‘ನವಚೇತನ’ ಯೋಜನೆಯಡಿ ವಿಶೇಷ ಚೇತನರಿಗೆ ಪ್ರೋತ್ಸಾಹಧನ, ಬಂಟರ ಸಾಂಸ್ಕೃತಿಕ ಸಂಭ್ರಮ, ರಾಷ್ಟ್ರಮಟ್ಟದ ಬಂಟರ ಸಮೂಹ ನೃತ್ಯ ಸ್ವರ್ಧೆ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಬಂಟ ಯುವ ಸಾಧಕರಿಗೆ ಸನ್ಮಾನ, ಉಚಿತ ವಿಶೇಷ ಅರೋಗ್ಯ ತಪಾಸಣೆ, ಆಯುರ್ವೇದ ಚಿಕಿತ್ಸೆ ಹಾಗೂ ಕಣ್ಣಿನ ತಪಾಸಣಾ ಶಿಬಿರ, ನಾಡಿನ ಜನಪ್ರಿಯ ಗಾಯಕ ಗಾಯಕಿಯರಿಂದ ಸಂಗೀತ ಸಂಜೆ ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ಬಂಟರ ಸಾಂಸ್ಕೃತಿಕ ಸಂಭ್ರಮ, ರಾಷ್ಟ್ರಮಟ್ಟದ ಬಂಟರ ಸಮೂಹ ನೃತ್ಯ ಸ್ವರ್ಧೆಯನ್ನು ಬೆಂಗಳೂರು ಸೌತ್ ಫೀಲ್ಡ್ ಪೈಂಟ್ಸ್ ಆಡಳಿತ ನಿರ್ದೇಶಕ ಎಸ್. ಎಸ್. ಹೆಗ್ಡೆ ಉದ್ಘಾಟಿಸಲಿದ್ದಾರೆ. ಪೂರ್ವಾಹ್ನ 11 ರಿಂದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಎಂ.ಆರ್.ಜಿ ಸಮೂಹ ಉದ್ಯಮ ಸಂಸ್ಥೆಗಳು ಬೆಂಗಳೂರು ಇದರ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಂಬಯಿ ಹೇರಂಬ ಆಗ್ರೋ ಇಂಡಸ್ಟ್ರೀಸ್ ಸಿಎಂಡಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಮುದಾಯದ ಹಿರಿಯ ಮುಖಂಡರಾದ ಬಿ. ಅಪ್ಪಣ್ಣ ಹೆಗ್ಡೆ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೈಸೂರು ಮರ್ಕಂಟೈಲ್ ಕಂ ಪ್ರೈ.ಲಿ ಬೆಂಗಳೂರು ಇದರ ಆಡಳಿತ ನಿರ್ದೇಶಕರಾದ ಡಾ. ಎಚ್.ಎಸ್ ಶೆಟ್ಟಿ ಅವರನ್ನು ಅಭಿನಂದಿಸಲಿದ್ದಾರೆ. ಫಾರ್ಚ್ಯುನ್ ಗ್ರೂಪ್ ಆಫ್ ಹೊಟೇಲ್ಸ್ ದುಬಾಯಿ ಸಿಎಂಡಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ದಶರಥ ಸಂಚಿಕೆ ಲೋಕಾರ್ಪಣೆ ಮಾಡಲಿದ್ದಾರೆ. ಸೌತ್ ಫೀಲ್ಡ್ ಪೈಂಟ್ಸ್ ಬೆಂಗಳೂರು ಆಡಳಿತ ನಿರ್ದೇಶಕರಾದ ಎಸ್.ಎಸ್. ಹೆಗ್ಡೆ ವಿದ್ಯಾ ದೀವಿಗೆಗೆ ಚಾಲನೆ ನೀಡಲಿದ್ದಾರೆ. ಮೆರಿಟ್ ಹಾಸ್ಪಿಟಾಲಿಟಿ ಮುಂಬಯಿ ಸಿಎಂಡಿ ಬೆಳ್ಳಾಡಿ ಅಶೋಕ್ ಶೆಟ್ಟಿ ನವಚೇತನಕ್ಕೆ ಚಾಲನೆ ನೀಡಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಸಂಸ್ಥೆಯ ಡಾ. ಎಂ .ಮೋಹನ್ ಆಳ್ವ ಆಶಯ ನುಡಿಗಳನಾಡಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಶುಭ ಶಂಸನೆಗೈಯಲಿದ್ದಾರೆ.
ಈ ಸಂದರ್ಭದಲ್ಲಿ ದಿ. ಯಡ್ತರೆ ನರಸಿಂಹ ಶೆಟ್ಟಿ ಸಂಸ್ಮರಣ ಪ್ರಶಸ್ತಿಯನ್ನು ಉದ್ಯಮಿ, ಬಂಟ ಸಮುದಾಯದ ಕೊಡುಗೈ ದಾನಿ ಕೆ. ಪ್ರಕಾಶ್ ಶೆಟ್ಟಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಫಾರ್ಚ್ಯುನ್ ಗ್ರೂಪ್ ಆಫ್ ಹೊಟೇಲ್ಸ್ ದುಬಾಯಿ ಸಿಎಂಡಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಶ್ರೀ ರಾಮಕೃಷ್ಣ ಪದವಿ ಕಾಲೇಜು ಮಂಗಳೂರು ಇಲ್ಲಿನ ಪ್ರಾಂಶುಪಾಲರಾದ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಕುಂದಾಪುರ ವಿನಯ ಆಸ್ಪತ್ರೆ ಆಡಳಿತ ನಿರ್ದೇಶಕರಾದ ಡಾ. ರಂಜಿತ್ ಕುಮಾರ್ ಶೆಟ್ಟಿ ಅರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಲಿದ್ದಾರೆ. ಲಲಿತ ಕಲೆ ಸ್ವರ್ಧೆಯನ್ನು ಮಂಜುಶ್ರೀ ಕನ್ ಸ್ಟ್ರಕ್ಷನ್ ಅಂಕದಕಟ್ಟೆ ವತ್ಸಲಾ ದಯಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ. ವೈವಿಧ್ಯಮಯ ವಸ್ತು ಪ್ರದರ್ಶನ, ಮಾರಾಟ ಮೇಳ, ಆಹಾರ ವೈವಿದ್ಯ ನಡೆಯಲಿದೆ. ಅರೋಗ್ಯ ಭಾಗ್ಯ ಕಾರ್ಯಕ್ರಮ ಪೂರ್ವಾಹ್ನ 9 ರಿಂದ ಮಧ್ಯಾಹ್ನ 2ರ ತನಕ ನಡೆಯಲಿದೆ. ವಿದ್ಯಾರ್ಥಿಗಳಿಗಾಗಿ ಬಂಟರ ರಾಜ್ಯ ಮಟ್ಟದ ಲಲಿತಾ ಕಲಾ ಸ್ವರ್ಧೆಗಳು ನಡೆಯಲಿದೆ.
ಸಮಸ್ತ ಬಂಟ ಸಮಾಜ ಬಾಂಧವರು ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕುಂದಾಪುರ ಯುವ ಬಂಟರ ಸಂಘದ ಗೌರವ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.