ಗೋವಾ ಬಂಟರ ಸಂಘದ 24 ನೇ ವಾರ್ಷಿಕ ಮಹಾಸಭೆ ಹಾಗೂ ಪರಿವಾರ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮವು ಫೆಬ್ರವರಿ 4 ರ ಆದಿತ್ಯವಾರ ಬೆಳಗ್ಗೆ 9.00 ಗಂಟೆಗೆ ಲಕ್ಷ್ಮೀ ಎಂಪಾಯರ್ ಹೋಟೆಲ್, ಮಡ್ ಗಾಂವ್ ರೈಲ್ವೆ ಸ್ಟೇಷನ್ ಎದುರುಗಡೆ, ಗೋವಾ ಇಲ್ಲಿ ಜರಗಲಿದೆ. ಅಂದು ಮುಖ್ಯ ಅತಿಥಿಯಾಗಿ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಉಪಸ್ಥಿತಲಿರುವರು.
ವಿಭಿನ್ನ ರೀತಿಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯದ ಮೂಲಕ ಸಮಾಜ ಭಾಂಧವರ ಏಳಿಗೆಗೆ ಶ್ರಮಿಸುತ್ತಿರುವ ಗೋವಾ ಬಂಟರ ಸಂಘವು ಅಧ್ಯಕ್ಷರಾದ ಶಶಿಧರ ನಾಯ್ಕ್ ರ ದಕ್ಷ ಅಧ್ಯಕ್ಷತೆಯಲ್ಲಿ ಹಾಗೂ ಪದಾಧಿಕಾರಿಗಳ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಬೆಳಿಗ್ಗೆ 8.30 ರಿಂದ 9.00 ರವರೆಗೆ ಉಪಹಾರ, ಅತಿಥಿಗಳ ಸ್ವಾಗತ ಭಾಷಣ, ಕಾರ್ಯದರ್ಶಿಯವರಿಂದ ವರದಿ ವಾಚನ ಹಾಗೂ ವಾರ್ಷಿಕ ಲೆಕ್ಕ ಮಂಡನೆ, ಎಸ್.ಎಸ್., ಎಚ್. ಎಸ್. ಸಿ ಹಾಗೂ ಪದವೀಧರ ಮಕ್ಕಳಿಗಾಗಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ಸಮಾಜದ ಸಾಧಕರ ಗುರುತಿಸುವಿಕೆ, ಅತಿಥಿ ಗಣ್ಯರಿಗೆ ಸನ್ಮಾನ, ಮಧ್ಯಾಹ್ನ 1.00 ರಿಂದ 2.00 ರ ತನಕ ಪ್ರೀತಿ ಭೋಜನ ತದನಂತರ ಗೋವಾ ಬಂಟರ ಸಂಘದ ಸದಸ್ಯರಿಂದ, ಮಹಿಳಾ ವಿಭಾಗದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಗೋವಾ ಬಂಟರ ಸಂಘದ ಪದಾಧಿಕಾರಿಗಳಾದ ಎಂ. ಶಶಿಧರ್ ನಾಯ್ಕ್ (ಅಧ್ಯಕ್ಷ), ವಿಜಯೇಂದ್ರ ಶೆಟ್ಟಿ (ಉಪಾಧ್ಯಕ್ಷ), ಸುಬ್ರಹ್ಮಣ್ಯ ಶೆಟ್ಟಿ (ಉಪಾಧ್ಯಕ್ಷ), ಗಣೇಶ್ ಶೆಟ್ಟಿ ಇರ್ವತ್ತೂರು (ಪ್ರಧಾನ ಕಾರ್ಯದರ್ಶಿ), ಮೋಹನ್ ದಾಸ್ ಶೆಟ್ಟಿ (ಕೋಶಾಧಿಕಾರಿ), ವಿಶ್ವಾಸ ಶೆಟ್ಟಿ (ಜೊತೆ ಕಾರ್ಯದರ್ಶಿ), ಪ್ರಶಾಂತ್ ಶೆಟ್ಟಿ (ಜೊತೆ ಕೋಶಾಧಿಕಾರಿ), ಸಮಿತಿ ಸದಸ್ಯರಾದ ಮುರಳಿ ಮೋಹನ್ ಶೆಟ್ಟಿ, ಜಗದೀಶ್ ಶೆಟ್ಟಿ, ಶಾಂತಾರಾಮ್ ಶೆಟ್ಟಿ, ಶಶಿಧರ್ ರೈ, ರಮೇಶ್ ಶೆಟ್ಟಿ, ರಮಾನಂದ ಶೆಟ್ಟಿ, ಸದಾಶಿವ ಶೆಟ್ಟಿ, ಸುನೀಲ್ ಶೆಟ್ಟಿ, ಕರುಣಾಕರ್ ಶೆಟ್ಟಿ, ದಿವಾಕರ್ ಶೆಟ್ಟಿ, ಅನಿಲ್ ಶೆಟ್ಟಿ, ಶರತ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಸ್ನೇಹಿಲ್ ಶೆಟ್ಟಿ, ಸೃಜನ್ ಶೆಟ್ಟಿ, ರಂಜಿತ್ ಶೆಟ್ಟಿ, ರಮೇಶ್ ಶೆಟ್ಟಿ, ರಾಜೀವ್ ಶೆಟ್ಟಿ, ಸುಭ್ರತ್ ಶೆಟ್ಟಿ, ಅನಿಲ್ ಶೆಟ್ಟಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.