ಬಂಟರ ಹೆಸರಿನಲ್ಲಿಯೇ ಒಂದು ಶಕ್ತಿ ಸಂಘಟನೆ ಇದೆ. ಯಾವುದು ಅಸಾಧ್ಯವೋ ಅದನ್ನು ಸಾಧಿಸಿ ತೋರಿಸುವ ಗುಣ ಬಂಟರಲ್ಲಿದೆ. ಮುಂಬಯಿ ಬಂಟರ ಸಂಘ ಮಾಡುತ್ತಿರುವ ಸಮಾಜ ಸೇವೆ ಅನನ್ಯವಾದುದು. ದುಡಿದ ಹಣ ಸಮಾಜದ ಹಿತಕ್ಕೆ ಬಳಸಿದರೆ ಸಮಾಧಾನ, ಸಂತೃಪ್ತಿ ಎರಡೂ ಇದೆ. ಸಮಾಜ ಸೇವೆಯೇ ದೇವರ ಸೇವೆ. ಶ್ರದ್ದಾ ಭಕ್ತಿಯಿಂದ ಆ ಕೆಲಸ ಬದುಕಿದಷ್ಟು ಕಾಲ ಪ್ರಾಮಾಣಿಕವಾಗಿ ಮಾಡಿದರೆ ಸಾಕ್ಷಾತ್ಕಾರವಾಗಿ ಎಲ್ಲರ ಸಹಕಾರ ಸಿಗುತ್ತದೆ. ಮುಂಬಯಿ ಬಂಟರ ಸಂಘ ಸಮಾಜ ಬಾಂಧವರ ಅಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದೊಂದಿಗೆ 9 ಪ್ರಾದೇಶಿಕ ಸಮಿತಿ ಹೊಂದಿದ್ದು, ಪ್ರಾದೇಶಿಕ ಸಮಿತಿಯ ಆಧಾರದಿಂದ ತನ್ನ ಕಾರ್ಯಾ ಚಟುವಟಿಕೆಗಳನ್ನು ಸಮಾಜ ಬಾಂಧವರಿಗೆ ತಲುಪಿಸುವಂತೆ ಮಾಡುತ್ತಿದೆ. 2009 ರಲ್ಲಿ ಬಂಟರ ಧೀಮಂತ ನಾಯಕ ಆಗಿನ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ವಸಾಯಿ ದಹಾಣು ಸಮಿತಿಯ 2023-2026ರ ಅವಧಿಯ ನೂತನ ಕಾರ್ಯಾಧ್ಯಕ್ಷರಾಗಿ ಕೊಡುಗೈ ದಾನಿ, ನಗುಮೊಗದ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಹಾಗೂ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದು, ನೂತನ ಸಮಿತಿಯ ಪದಗ್ರಹಣ ಸಮಾರಂಭವು ಫೆಬ್ರವರಿ 4 ರಂದು ಆದಿತ್ಯವಾರ ಸಂಜೆ 5:00 ಗಂಟೆಗೆ ಹೋಟೆಲ್ ಗ್ಯಾಲಕ್ಸಿ ಸಭಾಂಗಣ ನಾಲಾಸೋಪರ ಎಸ್. ಟಿ.ಡೆಪೋ ಹತ್ತಿರ ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಉಪಸ್ಥಿತಿಯಲ್ಲಿ, ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ ಕೆ.ಶೆಟ್ಟಿ ಇನ್ನಂಜೆ, ಪಶ್ಚಿಮ ವಲಯ ಸಂಚಾಲಕ ಖಾಂದೇಶ್ ಭಾಸ್ಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸವಿನ್. ಜೆ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಸಂಚಾಲಕರಾಗಿ ಹರೀಶ್ ಪಾಂಡು ಶೆಟ್ಟಿ, ಸಲಹೆಗಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಹರೀಶ್ ಶೆಟ್ಟಿ ಗುರ್ಮೆ, ಕಾರ್ಯಕ್ರಮ ಸಮಿತಿಯ ಸಂಚಾಲಕರಾಗಿ ಜಯಂತ್ ಆರ್ ಪಕ್ಕಳ, ಉಪ ಕಾರ್ಯಾಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ಕಣಂಜಾರ್, ಕಾರ್ಯದರ್ಶಿಯಾಗಿ ಜಗನಾಥ್ ಶೆಟ್ಟಿ ಪಳ್ಳಿ, ಕೋಶಾಧಿಕಾರಿಯಾಗಿ ವಿಜಯ್ ಎಮ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ನಾರಾಯಣ ಶೆಟ್ಟಿ, ಜೊತೆ ಕೋಶಾಧಿಕಾರಿಯಾಗಿ ರತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಉಮಾ ಸತೀಶ್ ಶೆಟ್ಟಿ ಹಾಗೂ ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ವರ್ಷಾ ಶೇಖರ್ ಶೆಟ್ಟಿ ಆಯ್ಕೆಯಾಗಿದ್ದರೆ.
ಇದಲ್ಲದೇ ವಿವಿಧ ಸಮಿತಿಯ ಕಾರ್ಯಧ್ಯಕ್ಷರಾಗಿ ವಿಜಯ್ ಶೆಟ್ಟಿ ಕುತ್ತೆತ್ತೂರು (ಸಾಂಸ್ಕೃತಿಕ ಕಾರ್ಯಕ್ರಮ ಕಾರ್ಯಾಧ್ಯಕ್ಷ),
ಶ್ರೀಮತಿ ಜಯ ಅಶೋಕ್ ಶೆಟ್ಟಿ (ಕಾರ್ಯಾಧ್ಯಕ್ಷೆ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿ), ಸುಪ್ರೀತ್ ಶೆಟ್ಟಿ ನೀರೆ (ಕಾರ್ಯಾಧ್ಯಕ್ಷ ಕ್ರೀಡಾ ಸಮಿತಿ), ಸತೀಶ್ ಶೆಟ್ಟಿ ನಂದಿಕೂರು (ಕಾರ್ಯಾಧ್ಯಕ್ಷ ವೈದ್ಯಕೀಯ ಸಮಿತಿ), ತಾರಾನಾಥ್ ಶೆಟ್ಟಿ (ಕಾರ್ಯಾಧ್ಯಕ್ಷ ಮ್ಯಾರೇಜ್ ಸೆಲ್ ಸಮಿತಿ), ನವೀನ್ ಶೆಟ್ಟಿ ಪಳ್ಳಿ (ಕಾರ್ಯಧ್ಯಕ್ಷ ಸದಸತ್ವ ನೋಂದಣಿ ಸಮಿತಿ), ರಿತೇಶ್ ಶೆಟ್ಟಿ (ಕಾರ್ಯಾಧ್ಯಕ್ಷ ಇ-ಎಂಪ್ಲಾಯ್ಮೆಂಟ್ ಸಮಿತಿ) ಕ್ಯಾಟರಿಂಗ್ ಕಾರ್ಯಾಧ್ಯಕ್ಷರಾಗಿ ದಯಾನಂದ್ ಶೆಟ್ಟಿ ಮಲ್ಲಾರ್, ಡೆಕೋರೇಷನ್ ಕಾರ್ಯಾಧ್ಯಕ್ಷರಾಗಿ ಸುಭಾಶ್ ಶೆಟ್ಟಿ ಎರ್ಮಾಳ್ ಹಾಗೂ ಪ್ರಾದೇಶಿಕ ಸಮಿತಿಯ ಉತ್ಸಾಹಿ ಸಮಾಜ ಬಾಂಧವರು ವಿವಿಧ ಹುದ್ದೆಗಳನ್ನು ಪಡೆದು ಸೇವೆಗೈಯಲು ಸಿದ್ದರಾಗಿದ್ದಾರೆ. ಫೆಬ್ರವರಿ 4ರ ಆದಿತ್ಯವಾರದಂದು ನಡೆಯಲಿರುವ ಪದಗ್ರಹಣ ಕಾರ್ಯಕ್ರಮಕ್ಕೆ ಎಲ್ಲಾ ಸಮಾಜ ಬಾಂಧವರನ್ನು ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ ಹಾಗೂ ನೂತನ ಪದಾಧಿಕಾರಿಗಳು ಪ್ರೀತಿಯಿಂದ ಆಮಂತ್ರಿಸಿದ್ದಾರೆ.