Author: admin
ಮುಂಬಯಿ, ಮಾ.05:ತೋನ್ಸೆ ಜನರು ಉದಾತ್ತ ಕೊಡುಗೈದಾನಿಗಳಾಗಿದ್ದು ಇಂದು ವಿಶ್ವಮಾನ್ಯರಾಗಿದ್ದಾರೆ. ಉತ್ಕೃಷ್ಟ ನಿಸ್ವಾರ್ಥ ಸೇವೆಗೆ ತೋನ್ಸೆ ಜನತೆ ಮಾದರಿ ಆಗಿದ್ದಾರೆ. ಬಿಲ್ಲವರ ಹಸ್ತಗಳನ್ನು ಸೇರಿ ಅಭಿವೃದ್ಧಿ ಕಂಡ ಸರ್ವೋತ್ಕೃಷ್ಟ ಗರಡಿಗಳಲ್ಲೊಂದಾಗಿದ್ದು ಇಂದು ತೋನ್ಸೆ ಗರಡಿ ಸಾಮರಸ್ಯದ ತಾಣವಾಗಿ ಬೆಳೆದಿದೆ. ವಿಸ್ವಸ್ಥ ಜನರÀ ಕೈಯಲ್ಲಿ ಸಾರಥ್ಯ ನೀಡಿದಾಗ ಗರಡಿಗಳ ಸರ್ವೋಭಿವೃದ್ಧಿ ಸಾಧ್ಯವಾಗುವುದು ಅನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಗರೋಡಿ ಹೆಸರಲ್ಲಿ ಮುಂಬಯಿನಲ್ಲಿ ಮೇಲ್ಫಂಕ್ತಿತಲ್ಲಿರುವ ಟ್ರಸ್ಟ್ ತೋನ್ಸೆಯ ಸಮನ್ವಯದ ಸಂಭ್ರಮವಾಗಿಸಿದ ಈ ಕಾರ್ಯಕ್ರಮ ಪರಿಪೂರ್ಣತೆ ಕಂಡಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ತಿಳಿಸಿದರು. ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಸಮಿತಿ ತನ್ನ 14ನೇ ವಾರ್ಷಿಕೋತ್ಸವವನ್ನು ಇಂದಿಲ್ಲಿ ಭಾನುವಾರ ಅಪರಾಹ್ನ ಸಾಂತಾಕ್ರೂಸ್ ಪೂರ್ವದ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ರಚಿತ ತೋನ್ಸೆ ಶಾನ್‍ಬೋಗ್ ದಿ| ಬಾಬು ಎನ್.ಶೆಟ್ಟಿ ವೇದಿಕೆಯಲ್ಲಿ ಅದ್ದೂರಿಯಾಗಿ ಸಂಭ್ರಮಿಸಿದ್ದು ಮುಖ್ಯ ಅತಿಥಿಯಾಗಿದ್ದು ಸಮಾರಂಭವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಜಯಕೃಷ್ಣ…
ಯಕ್ಷಗಾನ ರಂಗದಲ್ಲಿ ಅದ್ವಿತೀಯರು. ಬಲಿಪ ಪರಂಪರೆಯ ಹಿರಿಯ ಕೊಂಡಿ. ನಾರಾಯಣ ಭಾಗವತರು ಪದಲೀನವಾಗುವ ಮೂಲಕ ತೆಂಕುತಿಟ್ಟಿನ ಪರಂಪರೆಯಲ್ಲಿ ಅಂತರ ಮೂಡಿದೆ. ಹಿಮ್ಮೇಳದ ಭೀಷ್ಮರಾಗಿದ್ದ ಬಲಿಪರು ಗಾನಯಾನದ ಜತೆಗೆ ಬದುಕಿನ ಯಾನಕ್ಕೂ ಮಂಗಲ ಹಾಕಿದ್ದಾರೆ. ಏರು ಪದ್ಯ ಗ ಳಿಂದಲೇ ಪ್ರಸಿದ್ಧಿ ಪಡೆದ ಯಕ್ಷ ಗಾ ನದ ಮುಕು ಟದ ಮಣಿ. ಪರಂಪರೆಯನ್ನು ಸರ್ವತಾ ಉಳಿಸಿಕೊಂಡಿದ್ದ ಮತ್ತು ಉಳಿಸಲು ಶ್ರಮಿಸಿದ ಭಾಗವತಶ್ರೇಷ್ಠರು. “ಬಲಿಪ” ಮನೆತನವೆಂದರೆ ಭಾಗವತರ ಮನೆ ಎಂದೇ ಖ್ಯಾತಿ. ಇವರ ಅಜ್ಜ ದಿ. ಬಲಿಪ ನಾರಾಯಣ ಭಾಗವತರು ( ಅಂದಿನ ಹಿರಿಯ ಬಲಿಪರು ) ಯಕ್ಷರಂಗದಲ್ಲಿ ಮೆರೆದ ದೊಡ್ಡ ಹೆಸರು. ತಮ್ಮ ಅಪಾರ ಸಾಧನೆಯಿಂದ “ಬಲಿಪ ಮಟ್ಟು’ ಎಂಬ ಶೆ„ಲಿಯನ್ನು ಹುಟ್ಟು ಹಾಕಿದ ಭಾಗವತ ಪಿತಾಮಹ. ತಮ್ಮ ಅಜ್ಜನಲ್ಲಿ ಹಾಗೂ ತಂದೆಯವರಲ್ಲಿ ಭಾಗವತಿಕೆ ಕಲಿತ ಪುಟ್ಟ ಬಾಲಕ ನಾರಾಯಣ, ಮುಂದೆ ತಮ್ಮ ಅಜ್ಜನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಏಳನೇ ತರಗತಿಗೆ ವಿದ್ಯಾಭ್ಯಾಸ ನಿಲ್ಲಿಸಿ, 13ನೇ ವಯಸ್ಸಿನಲ್ಲೇ ಯಕ್ಷರಂಗ ಪ್ರವೇಶಿಸಿದ ಅವರು ತಮ್ಮ ಅಜ್ಜನ “ಬಲಿಪ ಶೈಲಿ ‘ಯನ್ನೇ…
ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ “ಹಡಿಲು ಭೂಮಿ ಕೃಷಿ ಅಂದೋಲನ” ನಡೆಸಿ ಹಡಿಲು ಬಿಟ್ಟ ಕೃಷಿ ಭೂಮಿಯಲ್ಲಿ ಸಾವಯವ ಕೃಷಿ ಮಾಡಿ ಬೆಳೆದಿರುವ ಭತ್ತದಿಂದ ಉತ್ಪಾದಿಸಿದ ಸಂಪೂರ್ಣ ಸಾವಯವ ಕುಚ್ಚಲಕ್ಕಿ “ಉಡುಪಿ ಕೇದಾರ ಕಜೆ” ಮಹಾರಾಷ್ಟ್ರದ ಪುಣೆಯಲ್ಲಿ ಡಿ. 17 ರಂದು ಮಾರುಕಟ್ಟೆ ಬಿಡುಗಡೆ ಮಾಡಲಾಗುವುದು. “ಉಡುಪಿ ಕೇದಾರ ಕಜೆ” ಕುಚ್ಚಲಕ್ಕಿ ಮಹಾರಾಷ್ಟ್ರದ ಪುಣೆಯಲ್ಲಿ ಬಿಡುಗಡೆ ಮಾಡುವ ಸಂಬಂಧ ಇಂದು ದಿನಾಂಕ 07-12-2022 ರಂದು ಪುಣೆಯ ವಿವಿಧ ಸಂಘ ಸಂಸ್ಥೆಯವರೊಂದಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ರವರು ಸಭೆ ನಡೆಸಿ ಪೂರ್ವ ತಯಾರಿಯ ಬಗ್ಗೆ ಚರ್ಚಿಸಿದರು. ರೈತರಿಗೆ ಪ್ರೋತ್ಸಾಹ ನೀಡಬೇಕು. ಎಲ್ಲರೂ ಕೃಷಿ ಮಾಡುವಂತೆ ಪ್ರೇರೇಪಿಸಬೇಕು ಎಂಬ ಉದ್ದೇಶದಿಂದ ಕೇದಾರೋತ್ಥಾನ ಟ್ರಸ್ಟ್ (ರಿ.) ಉಡುಪಿ ಮುನ್ನಡಿಯಿಟ್ಟಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ “ಹಡಿಲು ಭೂಮಿ ಕೃಷಿ ಅಂದೋಲನ” ಮಾಡಿ ಹಡಿಲು ಭೂಮಿಯಲ್ಲಿ ಸಾವಯವ ಕೃಷಿ ಮಾಡಿ ಬೆಳೆದಿರುವ ಭತ್ತದಿಂದ ಉತ್ಪಾದಿಸಿದ ಸಂಪೂರ್ಣ ಸಾವಯುವ ಕುಚ್ಚಲಕ್ಕಿಯನ್ನು ಉಡುಪಿ…
ನಮ್ಮ ಬದುಕು ಗಿಡಮರಗಳಿಂದ ಅರಳಿದೆ ಹಿರಿಯರು ಮಕ್ಕಳಿಗೆ ಗಿಡಮರಗಳ ಅಗತ್ಯತೆ ಬಗ್ಗೆ ತಿಳಿಸಿದಲ್ಲಿ ಅವರ ಅತ್ಮಸ್ಥೆರ್ಯ ಹೆಚ್ಚುತ್ತದೆ ಎಂದು ಮಂಗಳೂರು ವಲಯಾ ಅರಣ್ಯಾಧಿಕಾರಿ ಪಿ ಶ್ರೀಧರ್ ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ನಡೆದ ಸುರತ್ಕಲ್ ಬಂಟರ ಸಂಘದ ವತಿಯಿಂದ ಮಹತ್ವಾಕಾಂಕ್ಷೆ ಯೋಜನೆಯಾದ ಮನೆಗೊಂದು ಮರ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ಕಾಲಘಟ್ಟದಲ್ಲಿ ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಸಂಧರ್ಭದಲ್ಲಿ ಗಿಡಮರಗಳನ್ನು ಹೆಚ್ಚು ಬೆಳೆಸುವುದು ಅತೀ ಅಗತ್ಯ ಇಲ್ಲವಾದಲ್ಲಿ ಮುಂದೆ ನಾವು ಸ್ವಚ್ಛ ಗಾಳಿ ಉಸಿರಾಡುವುದು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಬಂಟರ ಸಂಘವು ಮನೆಗೊಂದು ಮರ ಕಾರ್ಯ ಕ್ರಮ ಹಮ್ಮಿಕೊಂಡದ್ದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಸುರತ್ಕಲ್ ಬಂಟರ ಸಂಘವು ಬೆಳ್ಳಿಹಬ್ಬ ಅಚರಿಸುತ್ತಿರುವ ಸಂದರ್ಭದಲ್ಲಿ ಸಂಘವು ಹಲವಾರು ಸಮಿತಿಗಳನ್ನು ಸಮಾಜಮುಖಿಯಾಗಿ ಕೆಲಸ ಮಾಡಲು ರಚಿಸಿದ್ದು ಅದರಲ್ಲಿ ಕೃಷಿ ಸಮಿತಿ ಮುಖಾಂತರ ಮಹತ್ವಾಕಾಂಕ್ಷೆ ಯೋಜನೆಯಾದ ಪ್ರತಿ ಸಂಘದ…
ಬಂಟರ ಸಂಘ ಪೂರ್ವ ಆಫ್ರಿಕಾ ನೈರೋಬಿ ಕೀನ್ಯಾ ಇದರ ಮೊದಲನೇ ವಾರ್ಷಿಕೋತ್ಸವ ಹೋಟೆಲ್ ರೆಡ್ ಜಿಂಜರ್ 2 ನೇ ಪಾರ್ಕ್ ಲ್ಯಾಂಡ್ಸ್ ಅವೆನ್ಯೂ ನೈರೋಬಿ ಕೀನ್ಯಾದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಶೈಲೇಶ್ ಶೆಟ್ಟಿಯವರು ಮಾತನಾಡುತ್ತಾ ಜಗತ್ತಿನ ಯಾವ ಮೂಲೆಯಲ್ಲಿ ಸಮಾಜ ಬಾಂಧವರು ಇದ್ದರೂ ಕೂಡ ಸಮಾಜದ ಅಭಿಮಾನ ಒಗ್ಗಟ್ಟು ಗುರುತಿಸಿಕೊಂಡು ಬಂದವರು. ಭಾರತವನ್ನು ಬಿಟ್ಟು ಈ ದೇಶಕ್ಕೆ ಬಂದರೂ ಇಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಆಚರಣೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಒಗ್ಗಟ್ಟಿನಲ್ಲಿ ನಮ್ಮ ಸಮಾಜವನ್ನು ಬೆಳೆಸುವಲ್ಲಿ ಎಲ್ಲರೂ ಒಂದಾಗಿದ್ದೇವೆ. ನಮ್ಮೆಲ್ಲರ ಒಗ್ಗಟ್ಟು ಸಮಾಜದ ಮೇಲಿನ ಅಭಿಮಾನ ನಿರಂತರ ಇರಬೇಕು ಎಂದು ನುಡಿದರು. ಸಂಘದ ಮಹಿಳಾ ಸದಸ್ಯೆಯರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಮೀನನಾಥ ಖ್ಯಾತಿಯ ರಾಘವೇಂದ್ರ ರೈ ಕುಂಜತ್ತೂರು ಇವರಿಂದ ಹಾಗೂ ಸಂಘದ ಸದಸ್ಯರಿಂದ ಸಂಗೀತ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಅಕ್ಷಯ ರಾಜೇಶ್ ಶೆಟ್ಟಿ ಇವರ ಸನ್ಮಾನ ಪತ್ರ ವಾಚನದೊಂದಿಗೆ ನಟ ಹಾಗೂ ರಂಗಭೂಮಿ ಕಲಾವಿದರಾದ ರಾಘವೇಂದ್ರ ರೈ ಅವರನ್ನು…
ಮೂಡುಬಿದಿರೆ: ಕೆ.ಸಿ.ಇ.ಟಿ ಆರ್ಕಿಟೆಕ್ಚರಲ್ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಅರ್ಹತೆ ಪಡೆದು ಸಾಧನೆ ಮಾಡಿದ್ದಾರೆ. ಆ ಮೂಲಕ ಆಳ್ವಾಸ್ ಈ ಬಾರಿಯೂ ಉನ್ನತ ಸಾಧನೆ ಮಾಡಿದೆ. ಸಾನ್ವಿ ಗುರುಮೂರ್ತಿ ಬೇವಿನಕಟ್ಟಿ 30ನೇ ರ್ಯಾಂಕ್ ಗಳಿಸಿದರೆ, ಪೂರ್ವಿ ವಿ. ಧಾರೇಶ್ವರ್ 91, ನಂದಿತ ರವಿ ಕರೆನ್ನವರ್ 97, ಪ್ರಪುಲ್ ರಾಜ್ ಜಿ.ಆರ್ 205, ಯಶ್ವಂತ್ ಕೆ. 322, ಪ್ರಾರ್ಥನಾ ಎಸ್. ಗೌಡ 326, ರುಕ್ಮಿಣಿ ನಾಯರ್ 333, ಅಲ್ ಫಾಯಿಝಿಯಾ 452ನೇ ರ್ಯಾಂಕ್‍ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ಮಳೆಯೆಂದರೆ ನೀರಧಾರೆ ಮಾತ್ರವಲ್ಲ ಭೂರಮೆಯ ಹಸಿಯಾಗಿ, ಹಸಿರಾಗಿಸುವ ಮುಂಗಾರಿನ ಅಭಿಷೇಕ. ಪರಿಸರದ ವಾತಾವರಣವನ್ನೇ ಬದಲಾಯಿಸಬಲ್ಲ ಅಮೃತ ಸಿಂಚನಾ. ಈ ಜೀವ ಜಲಕ್ಕೆ ಪುಳಕಗೊಳ್ಳೋ ನಾನಂತೂ ಬಾಲ್ಯದಲ್ಲಿ ಮಳೆ ಸುರಿವಾಗ ಅಂಗಳದ ಲತೆಯಾಗುತ್ತಿದ್ದೆ. ಬಿಸಿಲ ಬೇಗೆಯಿಂದ ಕಾದ ಇಳೆಗೆ ಸುರಿವ ಧಾರಕಾರ ಮಳೆ ಹಾಗೂ ಮಳೆಗಾಲದ ಮುನ್ಸೂಚನೆ ನೀಡುವ ಹಲವು ಪ್ರಾಕೃತಿಕ ವೈಚಿತ್ರ್ಯದ ಆತಂಕದ ಕಾರ್ಮೋಡ, ಗುಡುಗು, ಸಿಡಿಲು, ಕಪ್ಪೆಗಳ ಗುಟುರುವಿಕೆ, ಮಿಂಚು ಹುಳುಗಳ ಸಂಚಾರಗಳ ನಡುವೆ ಮೊದಲ ಮಳೆ ಸ್ಪರ್ಶವಾಗುತ್ತಲೇ ಮಣ್ಣಿನಿಂದ ಹೊರ ಹೊಮ್ಮುವ ಪರಿಮಳ ಆಘ್ರಣಿಸುತ್ತಾ ಬೇಸರವಿಲ್ಲದೇ ಮಳೆಯಲ್ಲಿ ನೆನೆದು ಒದ್ದೆಯಾಗಿ ಮನೆಗೆ ಬರುತ್ತಿದಂತೆ ನಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವ ಅಮ್ಮನ ಉಪದೇಶವನ್ನು ಲೆಕ್ಕಿಸದೆ ಸುರಿವ ಮಳೆಯೊಂದಿಗೆ ನನ್ನದು ಲವಲವಿಕೆಯ ಮಳೆಯಾಟ. ಕಾರ್ಮುಗಿಲು ಕವಿದು ಧೊ ಎಂದು ಇಳೆಗೆ ತಂಪೆರೆವ ಮಳೆಗಾಲದ ಅಪೂರ್ವ ಅನುಭವ ನೋಡಿ ಅನುಭವಿಸಬೇಕು. ಮುಂಗಾರು ಮೋಡಗಳು ಸೃಷ್ಟಿಸುವ ಚಿತ್ತಾರದ ಆಟ ನೋಡುಗರಲ್ಲಿ ಮುದ ನೀಡುತ್ತದೆ. ಕ್ಷಣಾರ್ಧದಲ್ಲಿ ವಿವಿಧ ಆಕೃತಿಗಳಾಗಿ ಬದಲಾಗುತ್ತಾ ಆಗಸದಿ ಪರ್ವತ ಶ್ರೇಣಿಗಳಂತೆ,…
ಒಂದು ಮಾತಿದೆ – ರಾತ್ರಿ ಕಂಡ ಬಾವಿಯಲ್ಲಿ ಹಗಲು ಬೀಳುವುದು ಎಂದು. ಈಗೀಗ ನಮ್ಮ ಸುಶಿಕ್ಷಿತ, ಬುದ್ಧಿವಂತ ಯುವಜನತೆ ಟ್ರೋಲ್ ಪ್ರಿಯರಾಗುತ್ತಿರುವುದನ್ನು ಕಂಡಾಗ ಈ ಮಾತು ನೆನಪಾಗುತ್ತದೆ. ಟ್ರೋಲ್ ಮಾಡುವುದು ಈಗೊಂದು ಒಂದು ಫ್ಯಾಷನ್‌ನಂತಾಗಿದೆ. ತಮ್ಮ ವಿರೋಧಿಗಳು (ಅದು ವೈಯಕ್ತಿಕ ಇರಬಹುದು, ರಾಜಕೀಯ, ವೃತ್ತಿ ಇಂಥ ಯಾವುದೇ ಕ್ಷೇತ್ರದ ವಿರೋಧಿಗಳೂ ಆಗಿರಬಹುದು) ಏನು ಹೇಳಿದರೂ ಅದಕ್ಕೆ ರೆಕ್ಕೆಪುಕ್ಕ ಸೇರಿಸಿ, ಯಾವ್ಯಾವುದೋ ಹಾಸ್ಯ ಕಲಾವಿದರ ಚಿತ್ರವನ್ನೂ ಸೇರಿಸಿ ಕೊಂಡು ತಮಗೆ ತೋಚಿದಂತೆ ಬರೆದು ಅವಮಾನಪಡಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮಾತಾಡುವಾಗ ಒಂದಿಷ್ಟು ಎಡವಿದರೂ ಅದನ್ನೂ ತುಂಬಾ ಕೀಳು ಮಟ್ಟದಲ್ಲಿ ಚಿತ್ರಿಸಿ ಟ್ರೋಲ್ ಮಾಡಲಾಗುತ್ತದೆ. ಇದು ಈಗ ಎಲ್ಲ ಇತಿಮಿತಿಯನ್ನೂ ದಾಟಿ ಸಾಗುತ್ತಿದ್ದು, ಸಮಾಜದ ಆರೋಗ್ಯಕ್ಕೆ ದೊಡ್ಡ ಸವಾಲಾಗುವ ಲಕ್ಷಣ ಕಂಡು ಬರುತ್ತಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಆಪ್ತ ಬಳಗದವರನ್ನೂ ಟ್ರೋಲ್‌ಗೆ ಬಳಸುವುದೂ ಇದೆ. ನಾವು ಬುದ್ಧಿವಂತರಾದರೂ ವಿವೇಕದಿಂದ ವರ್ತಿಸುವ ಬಗ್ಗೆ ಅಜ್ಞಾನಿಗಳೇ ಆಗಿದ್ದೇವೆ. ಎಲ್ಲವೂ ಅವಸರದ ನಿರ್ಧಾರ. ನಾವು ಮಾಡುವ ಕೆಲಸದಿಂದ ಆಗಬಹುದಾದ ಪರಿಣಾಮ,…
ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಸೋಮವಾರ ಸಾವಿರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳನ್ನೊಳಗೊಂಡು ಪಾದಯಾತ್ರೆ ನಡೆಸಿ, ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಪತ್ನಿ ವಿಜಯಾ ಶೆಟ್ಟಿ ಅವರ ಸಮೇತರಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅದಕ್ಕೆ ಪೂರ್ವಭಾವಿಯಾಗಿ ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನ, ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಹಿತವಾಗಿ ವಿವಿಧ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಉಡುಪಿ ಬಿಜೆಪಿ ಅಭ್ಯರ್ಥಿ ಯಶಪಾಲ್ ಸುವರ್ಣ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಮಂಗಳೂರು ಪ್ರಭಾರಿ ಉದಯ ಕುಮಾರ್…
ತೋನ್ಸೆ ವಿಜಯಕುಮಾರ್ ಶೆಟ್ಟಿ ಯವರು, ಅವರ ಬಾಲ್ಯದಿಂದಲೇ ರಂಗಭೂಮಿಯ ಹೆಚ್ಚಿನ ಪ್ರಾಕಾರ ಗಳಲ್ಲಿ ಓರ್ವ ಬಹು ಪ್ರಸಿದ್ಧಿಯ ಕಲಾವಿದರಾಗಿ ಬೆಳೆದು ಬಂದವರು. ಅವರ ಹುಟ್ಟು ಉಡುಪಿ ಬಳಿಯ ತೋನ್ಸೆಯ ಕೋಡ್ದಬ್ಬು ದೈವ ಹುಟ್ಟಿ ಬೆಳೆದ ಕೋಡಿ ಕಂಡಾಳ ಕ್ಷೇತ್ರ. ಇವರದ್ದು ತುಳು ನಾಡಿನ ನಾಮಾಂಕಿತ ಕೊಡಂಗೆ ಬನ್ನಾರ್ರವರ ವಂಶ. ಸುಮಾರು ಹತ್ತು ಹನ್ನೆರಡು ವರ್ಷ ಪ್ರಾಯದಲ್ಲಿಯೇ ರಾಷ್ಟ್ರಪ್ರಶಸ್ತಿ ವಿಜೇತ ಗುರು ಕಾಂತಪ್ಪ ಮಾಸ್ತರ್ (ನಮ್ಮ ಪುಷ್ಕಳ ಕುಮಾರ್ ತೋನ್ಸೆಯವರ ತಂದೆ). ಮತ್ತು ಗುರು ಜಯಂತ್ ಕುಮಾರ್ ವರಿಂದ ಯಕ್ಷಗಾನ, ರಾಷ್ಟ್ರಪ್ರಶಸ್ತಿ ವಿಜೇತ ಗುರು ಗೋಪಾಲಕೃಷ್ಣ ರಾವ್ ಇವರಿಂದ ನಾಟಕ ರಂಗದ ಎಲ್ಲಾ ವಿಭಾಗಗಳಲ್ಲೂ ಪರಿಣಿತರಾದ ವಿಜಯಕುಮಾರ್ ಶೆಟ್ಟಿಯವರು ಶಾಲಾ ಮತ್ತು ಕಾಲೇಜ್ ವಿದ್ಯಾರ್ಥಿ ಯಾಗಿದ್ದಾಗಲೆ ನಾಡಿನ ಅತ್ಯಂತ ನಾಮಾಂಕಿತ ನಿರ್ದೇಶಕರಿಂದ ತರಬೇತಿ ಪಡೆದು ಬಹಳ ಪ್ರಸಿದ್ಧಿಯ ನಾಟಕಕಾರರಾಗಿ ಜನಪ್ರಿಯತೆಯನ್ನು ಪಡೆದಿದ್ದರು. 1975 ರಲ್ಲಿ ಅವರು ಬರೆದು ನಿರ್ದೇಶಿಸಿದ್ದ ವಸುಂದರಾ ನಾಟಕ ನೂರಾರು ಪ್ರಯೋಗಗಳನ್ನು ಕಂಡಿತ್ತು. ಅವರ ಎಚ್ಚಮ್ಮ ನಾಯಕ, ನೀರ್ ಕಡ್ತುಂಡ,…