Author: admin

ಬಂಟರ ಸಂಘ ಬಂಟ್ವಾಳ ತಾಲೂಕಿನ ವತಿಯಿಂದ ದಿನಾಂಕ 07-01-2024ರಂದು ಜರಗಲಿರುವ ಜಿಲ್ಲಾ ಮಟ್ಟದ ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಬಂಟರ ಸಂಘ ಬಂಟ್ವಾಳ ತಾಲೂಕು ಇದರ ಅಧ್ಯಕ್ಷ ಹಾಗೂ ಪ್ರಸ್ತುತ ಒಕ್ಕೂಟದ ಜೊತೆ ಕಾರ್ಯದರ್ಶಿಯವರಾದ ಶ್ರೀ ಚಂದ್ರಹಾಸ್ ಡಿ. ಶೆಟ್ಟಿಯವರು ಆಮಂತ್ರಣ ಪತ್ರಿಕೆ ನೀಡಿ ಪ್ರೀತಿಪೂರ್ವಕವಾಗಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವ ಕಾರ್ಯದರ್ಶಿ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ, ಬಂಟರ ಸಂಘ ಬಂಟ್ವಾಳ ತಾಲೂಕಿನ ಪದಾಧಿಕಾರಿಗಳಾದ ಶ್ರೀ ಜಗನ್ನಾಥ್ ಚೌಟ, ಶ್ರೀ ಲೋಕೇಶ್ ಶೆಟ್ಟಿ ಕೆ, ಶ್ರೀ ಪದ್ಮನಾಭ ಶೆಟ್ಟಿ, ಶ್ರೀ ರಂಜನ್ ಶೆಟ್ಟಿ, ಶ್ರೀ ಭಾಸ್ಕರ್ ಶೆಟ್ಟಿ, ಒಕ್ಕೂಟದ ಆಹ್ವಾನಿತ ಸದಸ್ಯರಾದ ಶ್ರೀ ರವಿರಾಜ್ ಶೆಟ್ಟಿ ಜತ್ತಬೆಟ್ಟು, ಆಡಳಿತಾಧಿಕಾರಿ ಶ್ರೀ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಇಂಜಿನಿಯರ್ಸ್ ಡೇ ಅಂಗವಾಗಿ, ಸಾಲಿಗ್ರಾಮದ ಇಂಜಿನಿಯರ್ ನಾಗರಾಜ್ ಸೋಮಯಾಜಿ ಯವರನ್ನು ಸಾಲಿಗ್ರಾಮದ ಅವರ ಕಛೇರಿಗೆ ತೆರಳಿ ಸನ್ಮಾನಿಸಲಾಯಿತು. ಈ ಸಂದರ್ಭ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ, ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಸ್ಥಾಪಕಾಧ್ಯಕ್ಷರಾದ ಲಯನ್ adv ಬನ್ನಾಡಿ ಸೋಮನಾಥ ಹೆಗ್ಡೆ, ಮಾಜಿ ಅಧ್ಯಕ್ಷರಾದ ಲಯನ್ Adv ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಲಯನ್ ಯಾಳಕ್ಲು ಚಂದ್ರ ಶೇಖರ್ ಶೆಟ್ಟಿ, ಲಯನ್ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಕೆ, ಲಯನ್ ಕೊಮೆ ವಸಂತ್ ಶೆಟ್ಟಿ ಅಚ್ಲಾಡಿ, ಲಯನ್ ಕೊಮೆ ಸುರೇಂದ್ರ ಶೆಟ್ಟಿ ಅಚ್ಲಾಡಿ, ಲಯನ್ ಅಕ್ಷಯ್ ಹೆಗ್ಡೆ, ಲಯನ್ ಬನ್ನಾಡಿ ಅಶಿತ್ ಕುಮಾರ್ ಶೆಟ್ಟಿ, ಲಯನ್ ಬನ್ನಾಡಿ ಜೀವನ್ ಬಿ.ಬಿ., ಲಯನ್ ಗುಂಡ ಶೆಟ್ಟಿ ಮಾನಂಬಳ್ಳಿ, ಲಯನ್ Adv ಬನ್ನಾಡಿ ವಿನಯ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Read More

ಸಂಘ ಸಮಾಜಕ್ಕೆ ದಾರಿ ದೀಪದಂತೆ ನಡೆಯಬೇಕು. ಅದೇ ರೀತಿ ಬಾಂಧವರಲ್ಲಿ ಸಂಘಟನೆ ನಮ್ಮ ಹೆಮ್ಮೆ ಎಂಬ ಭಾವನೆ ಕೂಡಾ ತುಂಬಿರಬೇಕು. ಇದು ಹೊಂದಿಕೊಂಡು ನಡೆದರೆ ಸಂಸ್ಥೆ ಮತ್ತಷ್ಟು ಅಬಿವೃದ್ದಿಯ ಪಥದಲ್ಲಿ ಸಾಗಲು ಸಾದ್ಯ. ಅಭಿವೃದ್ದಿಯಲ್ಲಿ ನಾವು ಎಲ್ಲಿಂದ ಎಲ್ಲಿಗೆ ಸಾಗಿ ಬಂದಿದ್ದೇವೆ ಎಂಬುದನ್ನು ಅವಲೋಕಿಸಿದಾಗ ನಮ್ಮ ಈ ಬೆಳವಣಿಗೆಗೆ ಮತ್ತು ಉತ್ತುಂಗಕ್ಕೆ ಏರಲು ಮುಖ್ಯವಾಗಿ ಅದರ ಹಿಂದಿರುವ ಅರ್ಥಿಕತೆಯ ಬೇರು ಹೋಟೆಲ್ ಉದ್ಯಮ. ಅದೆಷ್ಟೋ ಹೋಟೆಲು ಉದ್ಯಮಿಗಳ ಸಹಕಾರದಿಂದ ನಮ್ಮ ಸಮಾಜದ ಉದ್ದೇಶ ಏನಿದೆಯೋ ಅದು ಈಡೇರಿದೆ. ಹೆಗ್ಗುರುತಾಗಿ ನಮ್ಮ ಸಮಾಜಕ್ಕೆ ವರದಾನವಾಗಿ ಸಿಕ್ಕಿದ ಹೋಟೆಲ್ ಉದ್ಯಮ ಇನ್ನಷ್ಟು ಬದಲಾವಣೆಯೊಂದಿಗೆ ನಮ್ಮ ಯುವ ಜನತೆ ಪ್ರಾಧಾನ್ಯತೆ ನೀಡಿ ಮುನ್ನಡೆಸುವ ಅವಶ್ಯಕತೆ ಇದೆ. ನಮ್ಮ ಹಿರಿಯರು ಕಷ್ಟಪಟ್ಟು ಬೆಳೆಸಿದ ಉದ್ಯಮವು ಬಂಟ ಸಮಾಜದ ಉದ್ದಾರದ ಹಾಗೂ ಸಮಾಜದ ಪ್ರಗತಿಗೆ ಮತ್ತು ನಮ್ಮ ಅಸ್ತಿತ್ವದ ಮೂಲ ಬೇರಾಗಿದೆ. ಇಂದಿನ ಯುವ ಜನಾಂಗಕ್ಕೆ ಅದರ ಮಹತ್ವವನ್ನು ತಿಳಿಸಿ, ಉಳಿಸಿ ಬೆಳೆಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ ಕೂಡ…

Read More

ಮೂಡುಬಿದಿರೆ: ಮಂಡ್ಯದ ವಿಶ್ವಮಾನವ ಪದವಿಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಈಚೆಗೆ ಹಮ್ಮಿಕೊಂಡ ಮೈಸೂರು ವಿಭಾಗೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದ್ವಿತೀಯ ಪಿಯುಸಿಯ ವಿಭಾ ನಾಯಕ ಭಾವಗೀತೆ ಸ್ಪರ್ಧೆ ಹಾಗೂ ಯುವಿಕ ಎಲ್ ಮತ್ತು ತಿರುಪತಿ ವಿಟಿ ರಸಪ್ರಶ್ನೆಯಲ್ಲಿ ದ್ವಿತಿಯ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ, ಪ್ರಾಚಾರ್ಯರು ಅಭಿನಂದಿಸಿದ್ದಾರೆ.

Read More

ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಅ. 12 ರಂದು ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಕಾರ್ಯಕ್ರಮಕ್ಕೆ ಉಡುಪಿ ಡಾ. ಎ. ವಿ. ಬಾಳಿಗ ಆಸ್ಪತ್ರೆಯ ಖ್ಯಾತ ಮನೋವೈದ್ಯ ಡಾ. ವಿರುಪಾಕ್ಷ ದೇವರಮನೆ ಆಗಮಿಸಿದ್ದರು. ಅವರು ಹೊಸ ಜನರೇಶನ್ ಪೇರೆಂಟಿಂಗ್ ವಿಷಯದ ಕುರಿತು ಪೋಷಕರಿಗೆ ಮಾಹಿತಿಯನ್ನು ನೀಡಿ, ನಾವು ಮಕ್ಕಳಿಗೆ ಸಮಯವನ್ನು ನೀಡಬೇಕು. ನಮ್ಮ ದಿನಚರಿಯ ಭಾಗದಲ್ಲಿ ಮಕ್ಕಳ ನೆನಪು ಇರಬೇಕು ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿ ಮಕ್ಕಳು ಇಂದು ಮೊಬೈಲ್ ದಾಸರಾಗಿದ್ದಾರೆ. ಅವರಿಗೆ ತಾತ್ವಿಕ ಜೀವನದ ಅರಿವನ್ನು, ಸರಿ ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಬೆಳೆಸಬೇಕೆಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಶ್ರೀನಿಧಿ ಸಚಿನ್ ಕುಮಾರ್ ಜಿ ಎಮ್ ವಿದ್ಯಾಸಂಸ್ಥೆಯ ಪ್ರತಿಯೊಂದು ಮಗುವಿಗೂ ಮೌಲ್ಯ ಶಿಕ್ಷಣದ ಜೊತೆಗೆ ವೈಯಕ್ತಿಕ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಡುತ್ತಿದೆ. ಇದು ನಮಗೆಲ್ಲರಿಗೂ ಹೆಮ್ಮೆ ಎಂದರು. ಪಿಟಿಎ ಉಪಾಧ್ಯಕ್ಷ ನಾಗರಾಜ ಸೋಮಯಾಜಿ ಮಾತನಾಡಿ ನಾವೆಲ್ಲರೂ…

Read More

ಅಯೋಧ್ಯೆಯಲ್ಲಿ ಭಾರತೀಯರ ಶತ ಶತಮಾನಗಳ ಪ್ರಯತ್ನಗಳ ಮೂಲಕ ಇದೀಗ 2024 ಜನವರಿ 22 ರಂದು ಭವ್ಯ ರಾಮ ಮಂದಿರ ನಿರ್ಮಾಣಗೊಂಡು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವವು ಜರುಗಲಿದ್ದು ಅದೇ ಪುಣ್ಯ ಮುಹೂರ್ತದಲ್ಲಿ ಪುಣೆ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಆಶ್ರಯದಲ್ಲಿ ಸಂಘದ ಸಭಾಭವನದಲ್ಲಿ ಪ್ರಸಿದ್ಧ ಹರಿದಾಸರಾದ “ವಿಶ್ವೇಶ ದಾಸ” ಬಿರುದಾಂಕಿತ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ “ಸೀತಾರಾಮ ಕಲ್ಯಾಣ” ಎಂಬ ಹರಿಕಥೆಯು ಬೆಳಿಗ್ಗೆ 10-30 ರಿಂದ ನಡೆಯಲಿದೆ. ಮಧ್ಯಾಹ್ನ 12.22 ಕ್ಕೆ ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠಾ ಸಮಯದಲ್ಲಿ ರಾಮದೇವರಿಗೆ ರಾಮ ಭಜನೆ, ರಾಮನಾಮ ಉದ್ಘೋಷದೊಂದಿಗೆ ಮಹಾ ಮಂಗಳಾರತಿಯು ನಡೆಯಲಿದೆ. ಆನಂತರ ಪ್ರಸಾದ ಭೋಜನವು ನಡೆಯಲಿದೆ. ಹಾರ್ಮೋನಿಯಂನಲ್ಲಿ ಶೇಖರ್ ಸಸಿಹಿತ್ಲು, ತಬಲಾದಲ್ಲಿ ಜನಾರ್ಧನ ಸಾಲಿಯಾನ್, ಸಂಗೀತ ಸಹಕಾರ ವಿಖ್ಯಾತ ವಿ ಭಟ್ ಅವರು ನೀಡಲಿದ್ದಾರೆ ಎಲ್ಲಾ ಶ್ರೀರಾಮ ಭಕ್ತರು ಸಂಪ್ರದಾಯದ ಉಡುಪು, ಕೇಸರಿ ಶಾಲು ಧರಿಸಿ ಬಂದು ಭಾಗವಹಿಸಿ ಈ ಪುಣ್ಯ ಸತ್ಕಾರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು…

Read More

ಕರ್ನಾಟಕ ಮಿಲ್ಕ್ ಫೆಡರೇಶನ್ (K.M.F) ಬೆಂಗಳೂರು ಕೇಂದ್ರ ಕಛೇರಿಗೆ ನಡೆಸಿದ ನೇಮಕಾತಿಯ ಪರೀಕ್ಷೆಯಲ್ಲಿ ಅತ್ಯುತ್ತಮ ಮೆರಿಟ್ ಅಂಕಗಳೊಂದಿಗೆ ಮೈಸೂರು ಜಿಲ್ಲೆಯ ವಿಜಯನಗರ ನಿವಾಸಿ ಶಿಲ್ಪಾ ಹೆಚ್.ಎಂ ರವರು ಆಯ್ಕೆ ಆಗಿದ್ದಾರೆ. ಈ ಮೂಲಕ ಭಾಗ್ಯೆಶ್ ರೈ ನೇತೃತ್ವದ ವಿದ್ಯಾಮಾತಾ ಅಕಾಡೆಮಿಯ ಸಾಧನೆಯ ಮುಕುಟಕ್ಕೆ ಇನ್ನೊಂದು ಗರಿ ಲಭಿಸಿದಂತಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಸಹಕಾರ ಸಂಘಗಳ ಬಗ್ಗೆ ವಿದ್ಯಾಮಾತ ಅಕಾಡೆಮಿಯಲ್ಲಿ ವಿಶೇಷ ತರಬೇತಿಯನ್ನು ನೀಡಲಾಗುತ್ತಿದ್ದು ರಾತ್ರಿ 8 ರಿಂದ 9 ಗಂಟೆವರೆಗಿನ ನಿತ್ಯ 1 ಗಂಟೆಗಳ ಆನ್ಲೈನ್ ತರಬೇತಿಯನ್ನು ಶಿಲ್ಪಾರವರಿಗೆ ನೀಡಲಾಗುತ್ತಿತ್ತು. ಅತ್ಯಧಿಕ ಮೆರಿಟ್ ನೊಂದಿಗೆ ಗ್ರೇಡ್ 2 ಹುದ್ದೆಗೆ ಆಗಿರುತ್ತಾರೆ. ಸಹಕಾರ ತತ್ವ, ಸಾಮಾನ್ಯ ಜ್ಞಾನ ಇತ್ಯಾದಿಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡುವುದರ ಮೂಲಕ ಸ್ಥಳೀಯ ಸಹಕಾರಿ ಬ್ಯಾಂಕ್, K.M.F ಇತ್ಯಾದಿ ಪರೀಕ್ಷೆಗಳನ್ನು ಪಾಸ್ ಮಾಡಲು ಉತ್ತೇಜಿಸಲಾಗುತ್ತಿದೆ. ಈ ಕಾರಣದಿಂದ ಕಳೆದ K.M.F ನ ಮಂಗಳೂರು ವಿಭಾಗಕ್ಕೂ 3 ಜನ ಅಭ್ಯರ್ಥಿಗಳು ಅತ್ಯಧಿಕ ಅಂಕಗಳೊಂದಿಗೆ ಆಯ್ಕೆಯಾಗಿದ್ದರು. ಇದೀಗ ಬೆಂಗಳೂರು ವಿಭಾಗಕ್ಕೆ ಆಯ್ಕೆ…

Read More

ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ಬನ್ನಾಡಿ ದಿ.ಸುಬ್ಬಣ್ಣ ಹೆಗ್ಡೆ ಜನ್ಮ ಶತಾಬ್ದಿ ಸ್ಮಾರಕ ಭವನದಲ್ಲಿ ಮದರ ತೆರೆಸಾ ಅವರ 112ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ರಾಜಾರಾಮ ಶೆಟ್ಟಿ ಕಲ್ಕಟ್ಟೆ, ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ, ಕೋಶಾಧಿಕಾರಿ ಲಯನ್ ಬಾಲಕೃಷ್ಣ ಶೆಟ್ಟಿ ವಡ್ಡರ್ಸೆ, ಮಾಜಿ ವಲಯಾಧ್ಯಕ್ಷರಾದ ಲಯನ್ ಬನ್ನಾಡಿ ಸೋಮನಾಥ ಹೆಗ್ಡೆ, ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ‌ಮಾಜಿ ಅಧ್ಯಕ್ಷರಾದ ಲಯನ್ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ, ಹಾಗೂ ಕ್ಲಬ್ ನ ಇತರ ಸದಸ್ಯರಾದ ಲಯನ್ ಚಂದ್ರ ಶೇಖರ ಶೆಟ್ಟಿ ಯಾಳಹಕ್ಲು, ಲಯನ್ ಸುಭಾಷ್ ಶೆಟ್ಟಿ ಬನ್ನಾಡಿ, ಲಯನ್ ಪ್ರಭಾಕರ್ ಶೆಟ್ಟಿ ಬನ್ನಾಡಿ, ಲಯನ್ ಶ್ರೀಧರ್ ಶೆಟ್ಟಿ ಉಪ್ಲಾಡಿ, ಲಯನ್ ರಾಜೀವ್ ಶೆಟ್ಟಿ ಅಚ್ಲಾಡಿ, ಲಯನ್ ಜೀವನ ಬಿ.ಬಿ ಉಪ್ಲಾಡಿ, ಲಯನ್ ವಿನಯ್ ಶೆಟ್ಟಿ ಬನ್ನಾಡಿ, ಲಯನ್ ಅಶಿತ್ ಶೆಟ್ಟಿ ಬನ್ನಾಡಿ ಇವರುಗಳು ಉಪಸ್ಥಿತರಿದ್ದರು

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಹಾಗೂ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕರ್ನಿರೆ ಇದರ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ ದಂಪತಿಗಳು ತಮ್ಮ ಮಕ್ಕಳ ಸಹಿತ ಶ್ರೀ ವಿಷ್ಣುಮೂರ್ತಿ ದೇವರಿಗೆ ಚಿನ್ನ ಲೇಪಿತ ಬಿಂಬಕ್ಕೆ ಕವಚವನ್ನು ಸಮರ್ಪಿಸಿದರು. ಈ ಸಂಧರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಕರ್ನಿರೆ ಗುತ್ತು ಹರಿಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Read More

ಬಂಟರ ಸಂಘ ಮುಂಬಯಿ ಇಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅದರ ನೂತನ ಗೌರವ ಕೋಶಾಧಿಕಾರಿಯಾಗಿ ಮುಂಬಯಿಯ ಪ್ರತಿಷ್ಠಿತ ರಮೇಶ್ ಶೆಟ್ಟಿ ಎಂಡ್ ಕಂ. ಲೆಕ್ಕಪರಿಶೋಧಕ ಹಾಗೂ ವ್ಯಾಪಾರೋದ್ಯಮ ಸಂಬಂಧಿ ತೆರಿಗೆ ಸಲಹೆಗಾರ ಸಂಸ್ಥೆಯ ಸಿಎ ರಮೇಶ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾದರು. ಬಾಲ್ಯದ ದಿನಗಳಿಂದಲೇ ತೀಕ್ಷ್ಣ ಹಾಗೂ ಕುಶಾಗ್ರಮತಿಯಾಗಿದ್ದ ರಮೇಶ್ ಶೆಟ್ಟಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಕೈನಾಲ್ ಪ್ರಾಥಮಿಕ ಶಿಕ್ಷಣ ಸಂಸ್ಥೆ ಮತ್ತು ಮುಂಡ್ಕೂರು ಪ್ರಾಥಮಿಕ ಶಾಲೆಗಳಲ್ಲಿ ಪೂರೈಸಿದರು. ಹೈಸ್ಕೂಲು ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮುಂಡ್ಕೂರಿನ ಪ್ರಸಿಧ್ಧ ವಿವಿಪಿಸಿಯಲ್ಲಿ ಮುಗಿಸಿದ ಬಳಿಕ ಮುಂದಿನ ಶಿಕ್ಷಣ ಪಡೆಯಲು ಮುಂಬಯಿಗೆ ಆಗಮಿಸಿದ ಯುವಕ ರಮೇಶ್ ಅವರು ವಡಲಾದ ಪ್ರತಿಷ್ಠಿತ ಎಸ್ ಐ ಡಬ್ಲ್ಯೂ ಎಸ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರೈಸಿದವರು. ಅಲ್ಲಿಗೆ ತನ್ನ ಶಿಕ್ಷಣವನ್ನು ಕೊನೆಗೊಳಿಸದೆ ಉನ್ನತ ಶಿಕ್ಷಣ ಪಡೆಯುವ ಮಹತ್ವಾಕಾಂಕ್ಷೆಯಿಂದ ಐಸಿಎಐ ಮುಖಾಂತರ ವಿಶೇಷ ತರಬೇತಿ ಪಡೆದು ಸಿಎ ಪದವಿ ಮುಗಿಸಿದರು. ಬಳಿಕ ಆ ದಿನಗಳಲ್ಲಿ ಬಹಳ ಬೇಡಿಕೆಯಲ್ಲಿದ್ದ ಉದ್ಯಮದಲ್ಲಿ ತನ್ನನ್ನು…

Read More