ದುರ್ಗಾಪರಮೇಶ್ವರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಭಯ ಸೇವಾ ಫೌಂಡೇಶನ್ ಅಧ್ಯಕ್ಷರಾದ ಎಂ ಬಿ ಉಮೇಶ್ ಶೆಟ್ಟಿಯವರು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಪ್ರತಿಕೆ ಇವರಿಂದ ಸಮಾಜ ಸೇವೆಗೆ ಕೊಡಲಾಗುವ 2024 ರ ಸಾಲಿನ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರು ಬಂಟರ ಸಂಘದ ಮಾಜಿ ಕಾರ್ಯಕಾರಿ ಸದಸ್ಯರಾಗಿರುವ ಇವರು ಸಮಾಜಸೇವೆಗೆ ಪ್ರಸಿದ್ಧರಾಗಿದ್ದಾರೆ.
ಈ ಪ್ರಶಸ್ತಿ ದೊರಕಲು ಜೊತೆಯಿದ್ದು ಸಮಾಜದ ಸೇವೆ ಮಾಡಲು ಪ್ರತಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಾಗೂ ಶುಭ ಹಾರೈಸಿದ ಕನ್ನಡ ನಾಡಿನ ಜನತೆಗೆ ಹಾಗೂ ಎಲ್ಲಾ ಆತ್ಮೀಯ ಬಂಧುಗಳಿಗೆ ಉಮೇಶ್ ಶೆಟ್ಟಿಯವರು ಧನ್ಯವಾದಗಳನ್ನು ಸಮರ್ಪಸಿದ್ದಾರೆ.