ಜನ್ಮ ಭೂಮಿ ತುಳುನಾಡಿನ ಮಣ್ಣಿನ ಮಕ್ಕಳಾದ ತುಳುವರಾದ ತಾವೆಲ್ಲರೂ ಶಿವಾಜಿ ಮಹಾರಾಜರ ಪುಣ್ಯ ಮಣ್ಣು ಪುಣೆಯಲ್ಲಿ ನೆಲೆ ನಿಂತು ಉದ್ಯಮದ ಜೊತೆಯಲ್ಲಿ ತುಳು ಬಾಷೆ, ಕಲೆ ಸಂಸ್ಕ್ರತಿಯ ಬೆಳವಣಿಗೆಗೆ ನಿರಂತರ ಶ್ರಮಿಸುವ ನಿಮ್ಮ ಕಾರ್ಯ ಶ್ಲಾಘನೀಯ. ಪುಣೆಯಲ್ಲಿರುವ ತುಳುವರಿಗಾಗಿ ಏನಾದರು ಸೇವೆ ಮಾಡಬೇಕು, ನಮ್ಮಿಂದಾದ ಸಹಕಾರ ತುಳುವರಿಗೆ ಸಿಗಬೇಕು ಎಂದರಿತು ಸಂಘಟನೆಯನ್ನು ಕಟ್ಟಿ ಅದರ ಮುಖಾಂತರ ತುಳುವರಿಗೆ ಉಪಕಾರವಗುವಂಥಹ ಸ್ವಂತ ಕಟ್ಟಡವನ್ನು ಹೊಂದಬೇಕು ಎಂಬ ನಿಮ್ಮ ಹಂಬಲ ಆದಷ್ಟು ಬೇಗ ಈಡೇರಲಿ. ನನ್ನಿಂದಾದ ಅರ್ಥಿಕ ಸಹಾಯವನ್ನು ಘೋಷಿಸುತ್ತೇನೆ ಮತ್ತು ಯಾವ ಮಟ್ಟದಲ್ಲಿ ಸಹಾಯ ಸಿಗಬಹುದು ಎಂಬುದನ್ನು ಅರಿತು ಪ್ರಯತ್ನ ಮಾಡುತ್ತೇನೆ. ನನ್ನ ಕ್ಷೇತ್ರದಲ್ಲಿರುವ ಎಲ್ಲಾ ಜಾತಿ ಧರ್ಮ ಪಂಗಡವನ್ನು ಒಟ್ಟು ಸೇರಿಕೊಂಡು ತುಳುವರ ಸೇವಕನಾಗಿ ದುಡಿದವ ನಾನು. ದೊಡ್ಡ ಕ್ಷೇತ್ರವಾದ ಬೆಳ್ತಂಗಡಿಗೆ ಅನುದಾನ ತರುವಲ್ಲಿ ಕೈ ಮೀರಿ ಶ್ರಮಿಸಿ ದುಡಿದಿದ್ದೇನೆ. ಪುಣೆ ತುಳುಕೂಟಕ್ಕೆ ಬರುವ ಯೋಗಾನುಯೋಗ ಸಿಕ್ಕಿದೆ. ತುಂಬಾ ಸಂತೋಷವಾಯಿತು. ನಿಮ್ಮ ಯೋಜಿತ ಕಾರ್ಯ ಯೋಜನೆಗಳು ಆದಷ್ಟು ಬೇಗ ಪರಿಪೂರ್ಣವಾಗಿ ತುಳುವರಿಗೆ ಸೇವೆ ಸಲ್ಲಲಿ ಎಂದು ಶುಭ ಹಾರೈಸುತ್ತೇನೆ ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ನುಡಿದರು.
ಫೆ 3 ರಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಹರೀಶ್ ಪೂಂಜಾರವರು ಸಮಯಾವಕಾಶ ಮಾಡಿಕೊಂಡು ಪುಣೆ ತುಳುಕೂಟದ ಕಛೇರಿಗೆ ಬೇಟಿ ನೀಡಿದರು. ಪುಣೆ ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ರಜತ ಮಹೋತ್ಸವ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ ಮತ್ತು ಸೇರಿದ ಸಮಿತಿ ಪದಾಧಿಕಾರಿಗಳು ಹರೀಶ್ ಪೂಂಜಾರವರನ್ನು ಸ್ವಾಗತಿಸಿ ಶಾಲು, ಪುಷ್ಪಗುಚ್ಛ ನೀಡಿ ಗೌರವಿಸಿದರು. ದಿನೇಶ್ ಶೆಟ್ಟಿ ಕಳತ್ತೂರು ಮತ್ತು ಪ್ರವೀಣ್ ಶೆಟ್ಟಿ ಪುತ್ತೂರುರವರು ಹರೀಶ್ ಪೂಂಜಾರವರನ್ನು ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು, ಕೋಶಾಧಿಕಾರಿ ದಿನೇಶ್ ಶೆಟ್ಟಿ ಪೇಲತ್ತೂರು ಮೇಲ್ಮನೆ, ತುಳುಕೂಟದ ಉಪಾಧ್ಯಕ್ಷರುಗಳಾದ ಉದಯ್ ಶೆಟ್ಟಿ ಕಳತ್ತೂರು, ಶೇಖರ್ ಪೂಜಾರಿ, ಪ್ರ ಕಾರ್ಯದರ್ಶಿ ರಾಜರಾಮ್ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಸಮಿತಿಯ ಪ್ರಮುಖರುಗಳಾದ ನಾರಾಯಣ ಹೆಗ್ಡೆ, ಪ್ರಕಾಶ್ ಪೂಜಾರಿ, ಮಹಾಬಲೇಶ್ವರ ದೇವಾಡಿಗ, ಆನಂದ್ ಶೆಟ್ಟಿ, ಯಶವಂತ್ ಶೆಟ್ಟಿ ಉಳಾಯಿಬೆಟ್ಟು, ಬಾಲಕೃಷ್ಣ ಗೌಡ, ಶರತ್ ಭಟ್, ಹಿತೇಶ್ ಶೆಟ್ಟಿ ಕಳತ್ತೂರು, ಮಹಿಳಾ ವಿಭಾಗದ ಉಪಾಧ್ಯಕ್ಷೆಯರುಗಳಾದ ಶಶಿಕಲಾ ಶೆಟ್ಟಿ, ಗೀತಾ ಪೂಜಾರಿ, ಕಾರ್ಯದರ್ಶಿ ನಯನ ಶೆಟ್ಟಿ, ಯುವ ವಿಭಾಗ ಮಹಿಳಾ ಕಾರ್ಯಾಧ್ಯಕ್ಷೆ ಶ್ರುತಿ ಜೆ ಶೆಟ್ಟಿ ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಯುವ ವಿಭಾಗ ಮತ್ತು ಹೆಚ್ಚಿನ ಸಂಖ್ಯೆಯ ತುಳು ಬಾಂಧವರು ಉಪಸ್ಥಿತರಿದ್ದರು. ತುಳುಕೂಟದ ಸಾಂಸ್ಕ್ರತಿಕ ಉಪ ಕಾರ್ಯಾಧ್ಯಕ್ಷ ತಾರಾನಾಥ್ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ, ಚಿತ್ರ : ಹರೀಶ್ ಮೂಡಬಿದ್ರಿ ಪುಣೆ