ವಿದ್ಯಾಗಿರಿ: ‘ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ನಾವು ನಮ್ಮನ್ನುಅಳವಡಿಸಿಕೊಳ್ಳಬೇಕು’ಎಂದುಯೆನಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಗುರುರಾಜ ಎಚ್. ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ವತಿಯಿಂದ ಬುಧವಾರ ಡಾ.ವಿಎಸ್ ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ 2020-2021 ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಂಪನ್ನಮ್ ಸಮಾರಂಭದಲ್ಲಿ ಅವರು ಮಾತನಾಡಿದರು.
ಎನ್ಎಬಿಎಚ್, ಎನ್ಎಎಸಿ ನಂತಹ ಮಾನ್ಯತೆ ಪಡೆಯುವುದು ಬಹುಮುಖ್ಯ. ವೈದ್ಯಕೀಯ ಆಕಾಂಕ್ಷಿಗಳು ಅಂತಹ ಮಾನ್ಯತೆ ಪಡೆದ ಸಂಸ್ಥೆಯನ್ನು ಆಯ್ಕೆ ಮಾಡುತ್ತಾರೆ ಎಂದರು. ಇಂದು ಹೆಚ್ಚಿನ ರೋಗಿಗಳು ಗೂಗಲ್ ಮತ್ತು ಇತರ ಸಾಮಾಜಿಕ ಜಾಲತಣವನ್ನು ಬಳಸಿ ವೈದ್ಯರನ್ನು ಆಯ್ಕೆ ಮಾಡುತ್ತಾರೆ. ಆದ್ದರಿಂದ ನೀವು ಅಂತಹದರಲ್ಲಿ ಸಕ್ರಿಯರಾಗಿರಬೇಕು ಎಂದರು. ನಾವು ಮಾನಸಿಕ ಚಿಕಿತ್ಸಕರು, ಶ್ರವಣಶಾಸ್ತ್ರಜ್ಞರು, ಸ್ಪೀಚ್ ಚಿಕಿತ್ಸಕರು, ಮನೋವೈದ್ಯರಂತಹ ಸಮಕಾಲೀನ ಜನರೊಂದಿಗೆ ಸಂಪರ್ಕ ಹೊಂದಬೇಕು, ನಾವು ಸಾಮಾನ್ಯವಾಗಿ ಅಂತಹ ಚಿಕಿತ್ಸೆಯೊಂದಿಗೆ ವ್ಯವಹರಿಸುತ್ತೇವೆ. ನಾವು ಯಾವುದೇ ರೀತಿಯ ಚಿಕಿತ್ಸೆಯನ್ನು ಅಳವಡಿಸಿಕೊಂಡರೂ ಉತ್ತಮ ಫಲಿತಾಂಶ ನೀಡಲು ಅವರ ಸಹಭಾಗಿತ್ವದ ಅಗತ್ಯ ಇದೆ ಎಂದರು.
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಷ್ಟಪಟ್ಟು ಕೆಲಸ ಮಾಡುವುದು ಏಕೈಕ ಮಾರ್ಗವಾಗಿದೆ ಎಂದು ಕಿವಿಮಾತು ಹೇಳಿದರು.
ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ. ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ.ವಿನಯ್ ಆಳ್ವ ಮಾತನಾಡಿ, ನೀವು ಉನ್ನತ ಶಿಕ್ಷಣವನ್ನು ಪಡೆದ ಕಾರಣ ಒಂದು ವಿಷಯದ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದಿದ್ದು, ಯಾವುದೇ ಆರೋಗ್ಯ ಸಮಸ್ಯೆಯಾದರೂ ಅನ್ವೇಷಿಸಿ, ಚಿಕಿತ್ಸೆ ನೀಡಲು ಯೋಗ್ಯರಾಗಿದ್ದೀರಿ ಎಂದರು.
ವಿದ್ಯಾರ್ಥಿಗಳಾದ ಡಾ. ಶಿಬ್ಲಾ ಮತ್ತು ಡಾ ಅಭಿಜ್ಞಾ ರೈ ತಮ್ಮ ಅನುಭವ ವನ್ನು ಹಂಚಿಕೊಂಡರು. ಸ್ನಾತಕೋತ್ತರ ಡೀನ್ ಡಾ. ರವಿಪ್ರಸಾದ ಹೆಗ್ಡೆ ವಂದಿಸಿದರು, ಉಪನ್ಯಾಸಕಿ ಡಾ ಸ್ಮಿತಾ ಸೂರಜ್ ಕಾರ್ಯಕ್ರಮ ನಿರೂಪಿಸಿದರು. ಡಾ.ಶಿಲ್ಪಾ ಪ್ರಾರ್ಥನೆ ಹಾಡಿದರು.