Author: admin
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀಮನ್ಮಹಾರಥೋತ್ಸವ ಸಂಭ್ರಮದಿಂದ ಜರಗಿತು. ಮಧ್ಯಾಹ್ನ ರಥಾರೋಹಣ, ಅನ್ನಸಂತರ್ಪಣೆ, ಸಂಜೆ ರಥೋತ್ಸವ, ಸುಡುಮದ್ದು ಪ್ರದರ್ಶನ ನೆರವೇರಿತು. ವಿಭಿನ್ನ ವೇಷಭೂಷಣ, ಬ್ಯಾಂಡ್ ಮನಸೂರೆಗೊಂಡಿತು. ಸಹಸ್ರಾರು ಭಕ್ತರು ಪಾಲ್ಗೊಂಡರು. ಇದಕ್ಕೂ ಮೊದಲು ಕುಂಭ ಸಂಕ್ರಮಣ ದಂದು ಸೋಮವಾರ ರಾತ್ರಿ ಕೆಂಡಸೇವೆ ಜರಗಿತು. ಫೆ.15ರ ರಾತ್ರಿ ದೀಪೋತ್ಸವ, ಐದೂ ಮೇಳದವರಿಂದ ಯಕ್ಷಗಾನ ಸೇವೆ ಆಟ ನಡೆಯಲಿದೆ.
ಕರ್ನಾಟಕ ಸ್ಟೈಲ್ ಐಕಾನ್-2022 ಮಿಸ್ಟರ್-ಮಿಸ್-ಮಿಸ್ಸೆಸ್ ; ಸೀಸನ್-3 ಮಿಸ್ಟರ್ ವಿಭಾಗದಲ್ಲಿ ಕೃತೇಶ್ ಅಮೀನ್ ಮುಂಬಯಿ ಪ್ರಥಮ `ಮಿಸ್’ ರಿನಿ ವಿಶ್ವಾಸ್ ಮೈಸೂರು-`ಮಿಸೆಸ್’ ಶ್ರೀನಿಧಿ ಶೆಟ್ಟಿ ಮಂಗಳೂರು ಪ್ರಥಮ
ಮುಂಬಯಿ (ಆರ್‌ಬಿಐ), ಡಿ.09: ಈಗಾಗಲೇ ಮಂಗಳೂರು, ಮುಂಬಯಿ ಮಹಾನಗರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದ `ಮಿಸ್ಟರ್-ಮಿಸ್-ಮಿಸ್ಸೆಸ್ ಕರ್ನಾಟಕ ಸ್ಟೈಲ್ ಐಕಾನ್’ ಈ ಬಾರಿ ಕರ್ನಾಟಕ ರಾಜ್ಯದ ಮೈಸೂರು ನಾರ್ತ್ ಅವೆನ್ಯೂ ಸಭಾಗೃಹದಲ್ಲಿ 2022ರ ಸೀಸನ್-3 ಸ್ಪರ್ಧೆಯನ್ನು ಕಳೆದ ಡಿ. 6ರಂದು ಆಯೋಜಿಸಿದ್ದು ಫ್ಯಾಷನ್ ಜಗತ್ತಿನಲ್ಲಿ ಮತ್ತೊಂದು ಸಾರ್ಥಕ ಹೆಜ್ಜೆಯನ್ನಿಟ್ಟಿತು. `ನಿಜವಾದ ಸೌಂದರ್ಯವು ನಮ್ಮ ಬುದ್ಧಿವಂತಿಕೆಯಲ್ಲಿದೆ ಹಾಗೂ ನೋಡುಗರ ದೃಷ್ಟಿಯಲ್ಲಿದೆ’ ಎಂದು ಸಾಬೀತು ಪಡಿಸುವ ಇಂಥ ಪ್ರದರ್ಶನಗಳು ಹಲವಾರು ಮೌಲ್ಯಯುತ ವಿಚಾರಗಳನ್ನು ತಿಳಿಯಪಡಿಸುತ್ತವೆ. ಕರ್ನಾಟಕ ಕರಾವಳಿಯ ಮಂಗಳೂರು ಮೂಲತಃ ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿ ಅಲ್ಲಿನ ಪ್ರತಿಷ್ಠಿತ ಮತ್ತು ನಾಮಾಂಕಿತ ಫ್ಯಾಷನ್ ಪರಿಣಿತೆ ನಿಶಿತ ಸೂರ್ಯ ಸುವರ್ಣ (ಬಿಲ್ಲವ ಕುಲ ಶಿರೋಮಣಿ ಸ್ವರ್ಗೀಯ ಜಯ ಸಿ. ಸುವರ್ಣ ಅವರ ಹಿರಿಯ ಸೊಸೆ ಹಾಗೂ ಸೂರ್ಯಕಾಂತ್ ಜೆ.ಸುವರ್ಣ ಅವರ ಪತ್ನಿ) ಕರ್ನಾಟಕ ಕರಾವಳಿಯಲ್ಲಿರುವ ಪ್ರತಿಭಾವಂತರನ್ನು ಮುನ್ನೆಲೆಗೆ ತರಬೇಕೆಂದು ನಿಶಿತಾ ಸೂರ್ಯ ಬಯಸಿ ಸಾಧಿಸಿದ ಪ್ರತಿಭಾನ್ವಿತ ಗೃಹಿಣಿ, ಮಹಿಳಾ ಯುವೋದ್ಯಮಿ ಈ ಕಾರ್ಯಕ್ರಮದ ಸಂಘಟಿಸಿ ಸಾಧಕರೆಣಿಸಿದ್ದಾರೆ. ಫ್ಯಾಷನ್…
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.), ದ.ಕ.-ಉಡುಪಿ. ಜಿಲ್ಲೆ, (ಕುಂದಾಪುರ- ಬೈಂದೂರು ವಲಯ) ಇವರ ಆಶ್ರಯದಲ್ಲಿ ಮುದ್ದು ಕಂದ ಸ್ಪರ್ಧೆ
“ಮುದ್ದು ಕಂದ” ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಮಕ್ಕಳ ದಿನಾಚರಣೆ ಅಂಗವಾಗಿ ದಿನಾಂಕ 14.11.22 ರಂದು ಕುಂದಾಪುರದ ಹೋಟೆಲ್ ಹರಿಪ್ರಸಾದ್ ನ ಅಕ್ಷತಾ ಹಾಲ್ ನಲ್ಲಿ ಜರಗಿತು. ಸಂಸ್ಥೆಯ ಅಧ್ಯಕ್ಷರಾದ ದೊಟ್ಟಯ್ಯ ಪೂಜಾರಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಮುದ್ದುಕಂದ ಸ್ಪರ್ಧೆಯ ಪುಟಾಣಿಗಳಿಗೆ ಬಹುಮಾನ ವಿತರಿಸಿ “ಫೋಟೋಗ್ರಾಫರ್ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು. ಫೋಟೋಗ್ರಾಫರ್ ಗಳು ಯಾವಾಗಲೂ ಶುಭ ವನ್ನು ಬಯಸುತ್ತಾರೆ, ಎಲ್ಲರ ಮನೆಯಲ್ಲೂ ಶುಭ ಕಾರ್ಯಗಳು ನಡೆಯಲಿ ಎಂದು ಹಾರೈಸುತ್ತಾರೆ” ಎಂದು ಹೇಳಿದರು. ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಸುರೇಶ್ ಜಮದಗ್ನಿ, ಸಲಹಾ ಸಮಿತಿಯ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ವಿಠ್ಠಲ ನಾಗೂರು, ನಿಕಟ ಪೂರ್ವ ಅಧ್ಯಕ್ಷ ರಾಜಾ ಮಠದ ಬೆಟ್ಟು, ಉಪಾಧ್ಯಕ್ಷರಾದ ಪ್ರಕಾಶ್ ಹೆಗ್ಡೆ, ಶೀನ ದೇವಾಡಿಗ, ಉಪಸ್ಥಿತರಿದ್ದರು. ಛಾಯಾ ಕಾರ್ಯದರ್ಶಿ ಪ್ರಮೋದ್ ಚಂದನ್ ಸ್ವಾಗತಿಸಿದರು. ಸುರೇಶ್ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ 2 ನೇ ದಿನವಾದ ಮಂಗಳವಾರ ನಡೆದ ಹೈಸ್ಕೂಲ್ ವಿಭಾಗದ ಪಂದ್ಯಾಟದಲ್ಲಿ ಟಿ.ಎ ಪೈ ಪ್ರೌಢಶಾಲೆ ಉಡುಪಿ ಜಯ ಸಾಧಿಸಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟಿ.ಸಿ.ಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ “ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೆ, ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ” ಎಂದರು. ಹೈಸ್ಕೂಲ್ ವಿಭಾಗದಲ್ಲಿ ಒಟ್ಟು ಎಂಟು ತಂಡಗಳ ನಡುವೆ ಲೀಗ್ ಹಂತದಲ್ಲಿ ರೋಚಕ ಹಣಾಹಣಿ ಸಾಗಿತ್ತು. ಉಪಾಂತ್ಯ ಪಂದ್ಯದಲ್ಲಿ ಗ್ರೀನ್ ಪಾರ್ಕ್ ಹಿರಿಯಡ್ಕ – ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯನ್ನು ಹಾಗೂ ಟಿ.ಎ.ಪೈ – ಸೈಲಸ್ ಉಡುಪಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ವೈದಿಕ್ ಶೆಟ್ಟಿ ಸಮಯೋಚಿತ ಆಟ – ಟಿ.ಎ ಪೈ ತಂಡ ಚಾಂಪಿಯನ್ ಫೈನಲ್ ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಗ್ರೀನ್ ಪಾರ್ಕ್ ಹೈಸ್ಕೂಲ್ ಹಿರಿಯಡ್ಕ ಪವನ್ 34 ರನ್ ನೆರವಿನಿಂದ…
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಆಗೋಸ್ಟ್ 26 ರಂದು ಶನಿವಾರ ಸಾಯಂಕಾಲ 4 ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್, ಪುರಭವನದಲ್ಲಿ ನಡೆಯಲಿದೆ ಎಂದು ಡಾ ಎ ಸದಾನಂದ ಶೆಟ್ಟಿ ಸಾರ್ವಜನಿಕ ಅಭಿನಂದನಾ ಸಮಿತಿಯ ಅಧ್ಯಕ್ಷ ರವೀಂದ್ರನಾಥ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ನಿಟ್ಟೆ ವಿ.ವಿ.ಯ ಕುಲಾಧಿಪತಿ ಡಾ. ಎನ್. ವಿನಯ ಹೆಗ್ಡೆ, ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್…
‘500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು’ ವಿದ್ಯಾಗಿರಿ: ‘ಆಳ್ವಾಸ್ ಪದವಿ ಪೂರ್ವಕಾಲೇಜಿನ 500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ ಸರ್ಕಾರಿ ಕೋಟಾದ ಅಡಿಯಲ್ಲಿ ವೈದ್ಯಕೀಯ ಸೀಟು ಪಡೆಯುವ ಭರವಸೆ ಇದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಪದವಿ ಪೂರ್ವಕಾಲೇಜು ಶುಕ್ರವಾರ ಹಮ್ಮಿಕೊಂಡ ಪೋಷಕ- ಶಿಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳಿಗೆ ಗುರಿ ಸಾಧಿಸಲು ನಿರೀಕ್ಷೆ ಮತ್ತು ಕನಸು ಬೇಕು. ಆಗ ಮಾತ್ರ ಕನಸು ನನಸಾಗಲು ಸಾಧ್ಯ. ಆದರೆ, ಇನ್ನೊಬ್ಬರ ಜೊತೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ವ್ಯಕ್ತಿಯೂ ಅನನ್ಯ. ಅದಕ್ಕಾಗಿ ಗುರಿಯೆಡೆಗಿನ ನಡೆಗೆ ನಿಮ್ಮ ಸಮಯ ಮೀಸಲಿಡಿ’ಎಂದು ಹಿತವಚನ ಹೇಳಿದರು. ‘ವಿದ್ಯಾರ್ಥಿ ಜೀವನವು ಅತ್ಯಮೂಲ್ಯ ಸಮಯವಾಗಿದ್ದು, ಗಾಸಿಪ್ ಆಲಿಸಿಕೊಂಡು ವ್ಯರ್ಥ ಮಾಡಬೇಡಿ. ನಿಮಗೆ ಮಾರ್ಗದರ್ಶನ ಮಾಡಲು, ಸಂಯೋಜಕರು, ಉಪನ್ಯಾಸಕರು ಇದ್ದಾರೆ. ಅವರ ಮಾತು ಕೇಳಿ’ಎಂದು ಸಲಹೆ ನೀಡಿದರು. ‘ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುವ ಬದಲಾಗಿ ಪ್ರೋತ್ಸಾಹಿಸಬೇಕು. ಪ್ರೋತ್ಸಾಹವು ಮಕ್ಕಳಿಗೆ ಹುರುಪು ನೀಡುತ್ತದೆ.…
ನೂತನವಾಗಿ ಆಯ್ಕೆಯಾದ ಸಾಗರ ಕ್ಷೇತ್ರದ ಶಾಸಕರಾದ ಮಾನ್ಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಾಗರ ಬಂಟರ ಸಂಘದ ವತಿಯಿಂದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕರು, ಬಂಟರ ಸಂಘಗಳ ಒಳ್ಳೆಯ ಕೆಲಸಕ್ಕೆ ನನ್ನ ಸಹಕಾರ ಇದ್ದೇ ಇದೆ. ಸಮಾಜವನ್ನು ಕೆಳಸ್ತರದಿಂದ ಮೇಲೆತ್ತುವ ಕೆಲಸ ಮಾಡಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಕಾರ್ಯದರ್ಶಿ ಮಹೇಂದ್ರ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಗೋಪಾಲ್ ಶೆಟ್ಟಿ, ಸಂಘದ ಮುಖಂಡರುಗಳಾದ ಅಮರ್ ಶೆಟ್ಟಿ ಗೌತಮ್ ಪುರ, ಶ್ರೀಧರ್ ಶೆಟ್ಟಿ, ಬೆನಗೋಡು ಭುಜಂಗಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಅವಿನಹಳ್ಳಿ, ಸಂತೋಷ ಶೆಟ್ಟಿ ಸೂಲದಗುಡ್ಡೆ, ಮಹಾಬಲೇಶ್ವರ್ ಶೆಟ್ಟಿ, ಸುರೇಶ್ ಶೆಟ್ಟಿ ನಿಸ್ರಾಣಿ, ಶ್ರೀನಿವಾಸ್ ಶೆಟ್ಟಿ, ಪ್ರತಾಪ್ ಶೆಟ್ಟಿ, ಸದಾನಂದ ಶೆಟ್ಟಿ, ಜಯರಾಮ್ ಶೆಟ್ಟಿ, ಸತೀಶ್ ಶೆಟ್ಟಿ, ಕುಮಾರ್ ಶೆಟ್ಟಿ, ನಾಗರಾಜ್ ಶೆಟ್ಟಿ, ಸುನಿಲ್ ಶೆಟ್ಟಿ ಯಡೆಹಳ್ಳಿ ಉಪಸ್ಥಿತರಿದ್ದರು.
ಕರ್ನಾಟಕ ಕರಾವಳಿಯ ಜನತೆಯ ಕನ್ನಡ ಮಾತು-ಬರಹಗಳಿಗೆ ಸಾಮಾನ್ಯ ವಾಗಿ ಮೆಚ್ಚುಗೆಯ ಮಾತು ಕೇಳಿ ಬರುತ್ತಲೇ ಇರುತ್ತದೆ. ಭಾಷಾಶುದ್ಧಿ, ಪಕ್ವತೆ, ಅಲ್ಪಪ್ರಾಣ ಮಹಾಪ್ರಾಣಗಳ ಪರಿಪೂರ್ಣ ಉಚ್ಚಾರ, ಬೌದ್ಧಿಕ ಸಾಮರ್ಥ್ಯ ಸಹಿತವಾದ ವ್ಯಾಖ್ಯಾನಗಳು, ವ್ಯಾಕರಣ ಶುದ್ಧಿ.. ಹೀಗೆ ಈ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತಾ ಇರುತ್ತದೆ. ಕರಾವಳಿಯ ಈ ಕನ್ನಡ ಭಾಷಾ ಪರಿಶುದ್ಧಿಯ ಸಾಮರ್ಥ್ಯಕ್ಕೆ ಇಲ್ಲಿನ ಯಕ್ಷಗಾನದ ಬಹು ಶತಮಾನಗಳ ಪರಂ ಪರೆಯ ಮಹತ್ವದ ಕೊಡುಗೆ ಅಂತರ್ಗತ ವಾಗಿದೆ ಎಂದು ವಿಶ್ವಾಸದಿಂದ ವರ್ಣಿಸ ಬಹುದು. ಇಲ್ಲಿನ ಬಹು ಮಂದಿ ಹೀಗೆ ಯಕ್ಷಗಾನ- ತಾಳಮದ್ದಲೆಯ ಭಾಗವತಿಕೆ- ಅರ್ಥಗಾರಿಕೆ ಕೇಳುತ್ತಲೇ ಬೆಳೆಯುವವರು. ಸಹಜವಾಗಿ ಪ್ರಭಾವಿತರಾಗಿರುವವರು. ಆಯಾ ಪ್ರದೇಶದ ಅನನ್ಯವಾದ ಸಾಂಸ್ಕೃತಿಕ, ಜನಪದೀಯ ಪರಂಪರೆಗಳು ಆಯಾ ಪ್ರದೇಶದ ಜನರ ನಡೆನುಡಿಯನ್ನು ಪ್ರಭಾವಿಸುತ್ತದೆ ಎಂದು ಮಾನವಶಾಸ್ತ್ರ ತಜ್ಞರು ಹೇಳುತ್ತಾರೆ. ಅದಕ್ಕೆ ಪೂರಕವಾದ ನಿದರ್ಶನ ಇಲ್ಲಿದೆ. ಯಕ್ಷಗಾನ ಸಂಪತ್ತಿನ ತಿಟ್ಟುಗಳು, ಪ್ರಸಂಗಗಳು, ಪ್ರಯೋಗಗಳು, ಹಿಮ್ಮೇಳ- ಮುಮ್ಮೇಳ, ಬಣ್ಣಗಾರಿಕೆ, ಕಲಾವಿದರ ಪರಂ ಪರೆ, ತಾಳಮದ್ದಲೆಗಳು, ಯಕ್ಷಗಾನ ಸಂಬಂ ಧಿತ ಅಕಾಡೆಮಿ ಸಹಿತ, ಸಂಘಟನೆಗಳು, ತರಬೇತಿ-…
ಪ್ರತಿಯೊಂದು ಮಕ್ಕಳ ಚಿಂತನೆಗಳು ಭಿನ್ನವಾಗಿರುತ್ತದೆ, ಅವರಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಅವಶ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಲ್ಲಿರುವ ವಿಶೇಷ ಪ್ರತಿಭೆ ಅನಾವರಣಕ್ಕೆ ಸಹಕಾರಿಯಾಗಿದೆ. ಬೇಸಿಗೆ ಶಿಬಿರದಂತಹ ಕಾರ್ಯಕ್ರಮಗಳ ಮೂಲಕ ಯುವವಾಹಿನಿ ಯಡ್ತಾಡಿ ಘಟಕ ಸಂಘಟನೆಯ ಮೌಲ್ಯ ಎತ್ತಿ ಹಿಡಿದಿದೆ ಎಂದು ಉದ್ಯಮಿ ರಘುರಾಮ್ ಶೆಟ್ಟಿ ಅವರು ಹೇಳಿದರು. ಅವರು ಯುವವಾಹಿನಿ ಯಡ್ತಾಡಿ ಘಟಕ ಆಶ್ರಯದಲ್ಲಿ ಸ.ಹಿ.ಪ್ರಾ ಶಾಲೆ ಯಡ್ತಾಡಿ, ಜೆ.ಸಿ.ಐ ಕಲ್ಯಾಣಪುರ, ಚಿಗುರು ಕಲಾ-ಸಾಂಸ್ಕøತಿಕ ವೇದಿಕೆ ನಡೂರು, ಜೆ.ಪಿ ನಾರಾಯಣ ಸ್ವಾಮಿ ಫೌಂಡೇಶನ್ ಬ್ರಹ್ಮಾವರ, ರೋಟರಿ ಕ್ಲಬ್ ಬಾರ್ಕೂರು, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಶಿರಿಯಾರ, ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ ಬಾರ್ಕೂರು, ಸೌಜನ್ಯ ಯುವಕ ಮಂಡಲ ಯಡ್ತಾಡಿ, ಶ್ರೀ ವಿನಾಯಕ ಯುವಕ ಮಂಡಲ ಸಾಯಿಬ್ರಕಟ್ಟೆ –ಯಡ್ತಾಡಿ, ಅತುಲ ಯುವಕ ಸಂಘ ಹೇರಾಡಿ, ಇವರ ಸಹಯೋಗದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2023 (ತಿಳಿವಿನ ಬೆಳಕು) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ…
ವಡ್ಡರ್ಸೆ- ಜೇಸಿ ಅಂತರಾಷ್ಟ್ರೀಯ ಸಂಸ್ಥೆಯಿಂದ, ವ್ಯಕ್ತಿಯ ವ್ಯಕ್ತಿತ್ವ ವಿಕಸನ ಹಾಗೂ ಸಮಾಜದಲ್ಲಿ ಅವರ ಗೌರವ ಹೆಚ್ಚುತ್ತದೆ – ಕೊತ್ತಾಡಿ ಉದಯ ಕುಮಾರ್ ಶೆಟ್ಟಿ
ಜೆಸಿಐ ಸಾಲಿಗ್ರಾಮ ವಡ್ಡರ್ಸೆ ಸಿಟಿಯ 2023ರ ಪದ ಪ್ರದಾನ ಸಮಾರಂಭವು ಮಂಗಳವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರಗಿತು. 2023ನೇ ಸಾಲಿನ ಅಧ್ಯಕ್ಷರಾಗಿ ಪದ್ಮನಾಭ ಆಚಾರ್ಯ ಅವರು ಹಿಂದಿನ ಸಾಲಿನ ಅಧ್ಯಕ್ಷ ನಾಗೇಂದ್ರ ಅಡಿಗ ಅವರಿಂದ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ರಾಷ್ಟ್ರೀಯ ಸಂಸ್ಥೆಯಾದ ಜೇಸಿಐ ಯಂತಹ ಸಂಸ್ಥೆಯು ವ್ಯಕ್ತಿತ್ವ ವಿಕಸನ , ಭಾಷಾ ಕೌಶಲ್ಯ ಮತ್ತು ಸಮಾಜದಲ್ಲಿ ಗೌರವ,ಸ್ನೇಹವನ್ನು ಸಂಪಾದಿಸುವಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಅಧ್ಯಾಪಕ ಸತೀಶ್ ಪೂಜಾರಿ ವಡ್ಡರ್ಸೆ ಹಾಗೂ ಜೇಸಿಐ ವಲಯ ಉಪಾಧ್ಯಕ್ಷರಾದ ಜೆಎಫ್‍ಎಫ್ ಜಯಶ್ರೀ ಮಿತ್ರಕುಮಾರ್ ಹಾಗೂ ವಡ್ಡರ್ಸೆ ಜೇಸಿಐ ಸ್ಥಾಪಕಾಧ್ಯಕ್ಷರಾದ ಸಚ್ಚಿದಾನಂದ ಅಡಿಗ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಮತ್ತು ಉಮೇಶ್ ವಡ್ಡರ್ಸೆ, ಜೇಜೇಸಿ ಮಹೇಶ್ ಮತ್ತು ಶ್ರೀವತ್ಸ ಉಪಸ್ಥಿತರಿದ್ದರು. ನಾಗೇಂದ್ರ ಅಡಿಗ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ…