ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಲಿ., ಮಂಗಳೂರುರವರು ತಮ್ಮ ಮಾನವೀಯ ಕಳಕಳಿಯ ಸೇವೆಗಳ ಅಂಗವಾಗಿ, ಲಯನ್ಸ್ ಕ್ಲಬ್ ಇಂಟರ್ನೇಶನಲ್, ಡಿಸ್ಟ್ರಿಕ್ಟ್ 317ಡಿನ ಲಯನ್ಸ್ ಆರ್ಟಿಫೀಶಿಯಲ್ ಲಿಂಬ್ ಸೆಂಟರ್ನಲ್ಲಿ ದೈಹಿಕ ವಿಕಲ ಚೇತನರಿಗೆ ಕೃತಕ ಅಂಗ ವಿತರಣೆಗೆ ಸಹಾಯ ಧನವನ್ನು ನೀಡಿದರು.
ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಆರ್ಟಿಫೀಶಿಯಲ್ ಲಿಂಬ್ ಸೆಂಟರ್ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು, ಲಯನ್ಸ್ ಸೆಂಟರ್ ಫಾರ್ ದಿ ಫಿಸಿಕಲ್ ಹ್ಯಾಂಡಿಕ್ಯಾಪ್ಡ್ ಇದರ ಅಧ್ಯಕ್ಷರಾದ ಖ್ಯಾತ ಎಲುಬು ತಜ್ಞ ಡಾ. ಎಂ. ಶಾಂತಾರಾಮ ಶೆಟ್ಟಿ, ಲಯನ್ಸ್ ಕ್ಲಬ್ನ ಪ್ರಾದೇಶಿಕ ಅಧ್ಯಕ್ಷರಾದ ಶ್ರೀ ಚಂದ್ರಹಾಸ ರೈ, ಲಯನ್ಸ್ ಕ್ಲಬ್ನ ಪದಾಧಿಕಾರಿಗಳಾದ ಎಡ್ವಕೇಟ್ ಶ್ರೀ ಅರುಣ್ ಕುಮಾರ್ ಶೆಟ್ಟಿ, ಶ್ರೀಮತಿ ರಮ್ಯಾ ಸಿ. ರೈ, ಶ್ರೀ ವಿಜಯವಿಷ್ಣು ಮಯ್ಯ, ಶ್ರೀ ಎಚ್. ಗುರುಪ್ರೀತ್ ಆಳ್ವ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ದೈಹಿಕ ವಿಕಲಚೇತನರಿಗೆ ಕೃತಕ ಅಂಗ ವಿತರಣೆಯನ್ನು ಮಾಡಿದರು.