ಮೀರಾರೋಡ್ ನಿಂದ ದಹಾಣೂ ತನಕದ ಬಂಟ ಸಮಾಜ ಬಾಂಧವರನ್ನು ಒಗ್ಗೂಡಿಸಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಕ್ರೀಡೆ ಮುಂತಾದ ಹತ್ತು ಹಲವಾರು ಸಮಾಜಮುಖಿ ಸೇವೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಹಲವಾರು ವರ್ಷಗಳ ಹಿಂದೆ ವಿರಾರ್ ಶಂಕರ್ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಮೀರಾ ದಹಾಣೂ ಬಂಟ್ಸ್ ಇದರ ವಾರ್ಷಿಕ ಕ್ರೀಡೋತ್ಸವ ಇದೇ ಬರುವ ಫೆಬ್ರವರಿ 10 ರ ಶನಿವಾರದಂದು ವಿಜೃಂಭಣೆಯಿಂದ ನಡೆಯಲಿದೆ. ವಿರಾರ್ ನ ಹಳೇ ವಿವಾ ಕಾಲೇಜಿನ ಮೈದಾನ, ವಿರಾರ್ ಇಲ್ಲಿ ನಡೆಯಲಿರುವ ಈ ಕ್ರೀಡೋತ್ಸವವು ಬೆಳಿಗ್ಗೆ ಗಂಟೆ 7 ರಿಂದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭಗೊಳ್ಳಲಿದೆ. ಹತ್ತು ಹಲವಾರು ಕ್ರೀಡೆಗಳು ಜರುಗಿ ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭವು ನಡೆಯಲಿದೆ. ವಿವಿಧ ವೈವಿಧ್ಯತೆಗಳಿಂದ ಕೂಡಿದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೀರಾ ದಹಾಣೂ ಬಂಟ್ಸ್ ಇದರ ಅಧ್ಯಕ್ಷರಾದ ವಸಾಯಿಯ ಪ್ರಕಾಶ್ ಎಂ ಹೆಗ್ಡೆಯವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಪೊವಾಯಿ ವಿದ್ಯಾ ಸಮೂಹದ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಮೀರಾ ಭಯಂದರ್ ಮಾಜಿ ನಗರ ಸೇವಕ ಅರವಿಂದ ಆನಂದ ಶೆಟ್ಟಿ ಆಗಮಿಸಲಿದ್ದಾರೆ.
ಮೀರಾ ದಹಾಣೂ ಬಂಟ್ಸ್ ನ ಗೌ. ಅಧ್ಯಕ್ಷರಾದ ವಿರಾರ್ ಶಂಕರ್ ಬಿ. ಶೆಟ್ಟಿ, ಟ್ರಸ್ಟಿ ಭುಜಂಗ ಬಿ. ಶೆಟ್ಟಿ ಬೊಯಿಸರ್, ಸಂಚಾಲಕ ನಾಗರಾಜ್ ಎನ್. ಶೆಟ್ಟಿ, ಉಪಾಧ್ಯಕ್ಷರಾದ ಕರ್ನೂರು ಶಂಕರ್ ಆಳ್ವ, ಯುವ ವಿಭಾಗ ಮತ್ತು ಕ್ರೀಡಾ ಕಾರ್ಯಾಧ್ಯಕ್ಷ ಮುಕೇಶ್ ಶೆಟ್ಟಿ ವಿರಾರ್, ಟ್ರಸ್ಟಿ ಸುರೇಶ್ ಶೆಟ್ಟಿ ಗಂಧರ್ವ, ರಾಜಕೀಯ ನೇತಾರ ಮೀರಾ ಭಯಂದರ್ ನ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತ ಜಿ. ಶೆಟ್ಟಿ ಮೀರಾರೋಡ್, ರಾಷ್ಟೀಯ ತ್ರೋಬಾಲ್ ಆಟಗಾರ್ತಿ ನೀಶಲತಾ ಹರೀಶ್ ಶೆಟ್ಟಿ, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ವಸಾಯಿಯ ಕು. ಹರ್ಷಾ ಎಸ್. ಶೆಟ್ಟಿ, ರಾಷ್ಟ್ರೀಯ ಆಟಗಾರ್ತಿ ಚಿನ್ನದ ಪದಕ ವಿಜೇತೆ ಕು. ದೃತಿ ಅಹಿರ್ವಾಲೆ, ರಾಜ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಕು. ರುದ್ರ ಹರೀಶ್ ಕುಮಾರ್, ಐಪಿಎಲ್ ಬೌಲರ್ ಮೀರಾರೋಡಿನ ಕು. ಪ್ರಕೃತಿ ಶೆಟ್ಟಿ ಮೊದಲಾದವರು ಉಪಸ್ಥಿತರಿರುವರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಪ್ರಕಾಶ್ ಎಮ್. ಹೆಗ್ಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಸಾಯಿಯ ಎಂ.ಎಲ್.ಎ. ಹಿತೇಂದ್ರ ಠಾಕೂರ್, ನಾಲಾಸೋಪಾರ ಎಂ.ಎಲ್.ಎ. ಕ್ಷಿತಿಜ್ ಯಚ್. ಠಾಕೂರ್ ಮತ್ತು ವಸಾಯಿಯ ಮಾಜಿ ಮೇಯರ್ ಪ್ರವೀಣ್ ಸಿ. ಶೆಟ್ಟಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ವಸಾಯಿ ಕರ್ನಾಟಕ ಸಂಘದ ಅಧ್ಯಕ್ಷ ವಿಶ್ವನಾಥ್ ಪಿ. ಶೆಟ್ಟಿ, ಉದ್ಯಮಿ ಡಾ. ಹರೀಶ್ ಬಿ. ಶೆಟ್ಟಿ, ವಸಾಯಿ ಕರ್ನಾಟಕ ಸಂಘದ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಪಾಂಡು ಎಲ್. ಶೆಟ್ಟಿ, ವಸಾಯಿ ತಾಲೂಕಿನ ಹೊಟೇಲ್ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷ ಜಗನ್ನಾಥ ರೈ, ಬಂಟರ ಸಂಘ ಮುಂಬಯಿ ಇದರ ವಸಾಯಿ ದಹಾಣೂ ಪ್ರಾದೇಶಿಕ ಸಮಿತಿಯ ಸಂಚಾಲಕ ಹರೀಶ್ ಪಾಂಡು ಶೆಟ್ಟಿ, ಬೊಯಿಸರ್ ಸರೋವರ್ ಗ್ರೂಪ್ ನ ರಘುರಾಮ್ ರೈ ಬೊಯಿಸರ್, ಬಂಟರ ಸಂಘ ಮುಂಬಯಿ ಇದರ ವಸಾಯಿ ದಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಎನ್. ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ನ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ, ಮೀರಾ ಭಯಂದರ್ ಬಂಟ್ಸ್ ಫ಼ೋರಮ್ ನ ಅಧ್ಯಕ್ಷ ಉದಯ ಎಮ್. ಶೆಟ್ಟಿ ಮಲಾರಬೀಡು, ವಸಾಯಿ ತಾಲೂಕು ಯಕ್ಷಕಲಾ ವೇದಿಕೆಯ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ವಿ. ಶೆಟ್ಟಿ ಕಾಪು, ಶಿವ ಛತ್ರಪತಿ ಪ್ರಶಸ್ತಿ ವಿಜೇತ ಉದಯ ಶೆಟ್ಟಿ, ಆರ್ಯಭಟ ಪ್ರಶಸ್ತಿ ವಿಜೇತ ಮೋರ್ಲ ರತ್ನಾಕರ್ ಶೆಟ್ಟಿ, ಬೊಯಿಸರ್ ನ ಹೊಟೇಲ್ ರೆಯಾಂಶ್ ಗ್ರಾಂಡ್ ನ ಪ್ರವೀಣ್ ಶೆಟ್ಟಿ ಮೊದಲಾದವರು ಆಗಮಿಸಲಿದ್ದಾರೆ.
ಸಮಾಜ ಬಾಂಧವರು ಹಾಗೂ ತುಳು ಕನ್ನಡ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕ್ರೀಡೋತ್ಸವವನ್ನು ಯಶಸ್ವಿಗೊಳಿಸುವಲ್ಲಿ ಸಹಕರಿಸಬೇಕೆಂದು ಮೀರಾ ದಹಾಣೂ ಬಂಟ್ಸ್ ಪರವಾಗಿ ಆಡಳಿತ ಸಮಿತಿಯ ಗೌ. ಅಧ್ಯಕ್ಷರು, ಅಧ್ಯಕ್ಷರು, ಉಪಾಧ್ಯಕ್ಷರುಗಳು, ಸಲಹಾ ಸಮಿತಿ ಪದಾಧಿಕಾರಿಗಳು, ಸಂಚಾಲಕರು, ಮಹಿಳಾ ವಿಭಾಗ, ಯುವ ವಿಭಾಗ, ಕ್ರೀಡಾ ಸಮಿತಿ ಹಾಗೂ ಸದಸ್ಯರುಗಳು, ಎಲ್ಲಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರುಗಳು, ಸಮಿತಿ ಸದಸ್ಯರುಗಳು ವಿನಂತಿಸಿಕೊಂಡಿದ್ದಾರೆ.
ಚಿತ್ರ, ಲೇಖನ: ವೈ ಟಿ ಶೆಟ್ಟಿ ಹೆಜಮಾಡಿ