ಸೇವೆ ಮಾಡುವ ಸಾಮರ್ಥ್ಯವನ್ನು ನಮಗೆ ದೇವರು ನೀಡಿದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ ಎಂದು ಶ್ರೀ ರಾಜನ್ ದೈವ ಶ್ರೀ ಧೂಮಾವತಿ ದೈವಸ್ಥಾನ ಮಿತ್ತಗುತ್ತು ಬಳ್ಕುಂಜೆ, ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ವಿರಾರ್ ಶಂಕರ್ ಶೆಟ್ಟಿಯವರು ತಿಳಿಸಿದರು. ಮೀರಾ ರೋಡ್ ಪೂರ್ವ ಹೋಟೆಲ್ ಮೆಜೆಸ್ಟಿಕ್ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿದ ಶ್ರೀ ರಾಜನ್ ದೈವ ಶ್ರೀ ಧೂಮಾವತಿ ದೈವಸ್ಥಾನ ಮಿತ್ತ ಗುತ್ತು ಬಳ್ಕುಂಜೆ, ಇದರ ಮುಂಬಯಿ ಸಮಿತಿಯ ವಿಶೇಷ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಭಾರತೀಯ ಜನತಾ ಪಕ್ಷದ ಮೀರಾ ಭಾಯಂದರ್ ದಕ್ಷಿಣ ಭಾರತೀಯ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಳ್ಕುಂಜೆ ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರನ್ನು ಗೌರವಿಸಿ ಮಾತನಾಡುತ್ತಾ, ಸಮಾಜದಲ್ಲಿ ಬಹುತೇಕ ಜನರು ಸ್ವಾರ್ಥ ಸಾಧನೆಗಾಗಿ ಹವಣಿಸುತ್ತಿದ್ದಾರೆ. ಆದರೆ ಸೇವೆಯೇ ಧರ್ಮಗಳಲ್ಲಿ ಶ್ರೇಷ್ಠ ಎಂದು ನಂಬಿರುವ ರವೀಂದ್ರ ಶೆಟ್ಟಿಯವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆ ಸಲ್ಲಿಸುತ್ತಾ ಸಮಾಜಮುಖಿ ಚಿಂತನೆ ಮಾಡುತ್ತಾ ಬಂದಿದ್ದಾರೆ. ಹಾಗಾಗಿ ಅವರು ದಿನದಿಂದ ದಿನಕ್ಕೆ ಉನ್ನತ ಸ್ಥಾನಕ್ಕೆ ಏರುತ್ತಿದ್ದಾರೆ. ಇನ್ನಷ್ಟು ಸಮಾಜ ಸೇವೆಯೊಂದಿಗೆ ಅತ್ಯುನ್ನತ ಸ್ಥಾನಮಾನ ಸಿಗಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ಕೃಷ್ಣಕುಮಾರ್ ಶೆಟ್ಟಿ, ಗುತ್ತಿನಾರ್ ಶ್ರೀ ರವೀಂದ್ರ ಡಿ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಅಶೋಕ್ ಶೆಟ್ಟಿ, ಪ್ರಶಾಂತ್ ಅಜಿಲ, ಹರೀಶ್ ಶೆಟ್ಟಿ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು. ಹಿಂದಿನ ಸಭೆಯ ವರದಿಯನ್ನು ಕಾರ್ಯದರ್ಶಿ ಕರುಣಾಕರ ಶೆಟ್ಟಿ ಮಂಡಿಸಿದರು ಹಾಗೂ ದಿನಾಂಕ 10-12-2023 ರಿಂದ 4-1-2024 ರ ವರೆಗೆ ನಡೆಯುವ ಶ್ರೀ ರಾಜನ್ ದೈವ ಶ್ರೀ ಧೂಮಾವತಿ ದೈವಸ್ಥಾನ ಬಳ್ಕುಂಜೆ ಇದರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮತ್ತು ವಿಟೋಭ ರುಖುಮಾಯಿ ಮಂದಿರದ ಜೀರ್ಣೋದ್ಧಾರಕ್ಕೆ ಸಹಕರಿಸುವಂತೆ ಸಭೆಯಲ್ಲಿ ವಿನಂತಿಸಲಾಯಿತು.
ಸಭೆಯಲ್ಲಿ ಪುಷ್ಪರಾಜ್ ಎಸ್ ಶೆಟ್ಟಿ, ಗಣೇಶ್ ವಿ ಶೆಟ್ಟಿ, ಸುರೇಶ್ ವಿ ಶೆಟ್ಟಿ, ಪ್ರಸಾದ್ ಕೆ ಶೆಟ್ಟಿ, ಮಹೇಂದ್ರ ಡಿ ಶೆಟ್ಟಿ, ಸಂತೋಷ್ ಎನ್ ಶೆಟ್ಟಿ, ರಾಜೇಶ್ ಬಿ ಶೆಟ್ಟಿ, ಸುರೇಶ್ ಕೆ ಶೆಟ್ಟಿ, ಕೀರ್ತನಾ ಜೆ ರೈ, ಸುಜಾತಾ ಶೆಟ್ಟಿ, ಪ್ರಾರ್ಥನಾ ಕೆ ಶೆಟ್ಟಿ, ಸುಜಯ ಶೆಟ್ಟಿ, ಇಂದಿರಾ ಶೆಟ್ಟಿ, ಶೋಭಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಹಾಗೂ ಶ್ರೀ ರಾಜನ್ ದೈವ ಶ್ರೀ ಧೂಮಾವತಿ ದೈವಸ್ಥಾನ ಮಿತ್ತಗುತ್ತು ಬಳ್ಕುಂಜೆ ಸಮಿತಿಯ ಸದಸ್ಯರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಭೆಯನ್ನು ಸಂಘಟಕ ಬಳ್ಕುಂಜೆ ಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು ನಿರ್ವಹಿಸಿದರು.