ಬ್ರಹ್ಮಾವರ-ಡಿ.16: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಡಿ. 16 ರಂದು ಮಕ್ಕಳ ಸಂತೆ ‘ಜಿ ಎಮ್ ಬಜಾರ್’ನ್ನು ಅಯೋಜಿಸಲಾಗಿತ್ತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಜ್ಯೋತಿ ಬೆಳಗಿಸಿ ಜಿ ಎಮ್ ಬಜಾರನ್ನು ಉದ್ಘಾಟಿಸಿ ಮಾತನಾಡಿ ನಮ್ಮ ದಿನನಿತ್ಯದ ಜೀವನದಲ್ಲಿ ಹಣವು ಮುಖ್ಯವಾಗಿದ್ದು ಅದರ ಮೌಲ್ಯಗಳ ಅರಿವು ಮಕ್ಕಳಿಗೆ ಇರಬೇಕು. ಜೊತೆಗೆ ವಸ್ತುಗಳನ್ನು ಕೊಂಡುಕೊಳ್ಳುವ ಹಣವನ್ನು ವೆಚ್ಚಮಾಡುವ ಪರಿಜ್ಞಾನವಿರಬೇಕೆಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಮಕ್ಕಳ ಸಂತೆಯು ವಿದ್ಯಾರ್ಥಿಗಳಿಗೆ ವಸ್ತುಗಳ ಖರೀದಿ, ಅವುಗಳ ಬೆಲೆ, ವ್ಯವಹಾರ ಜ್ಞಾನವನ್ನು ಬೆಳೆಸುತ್ತದೆ. ಇದು ಅವರು ಸಮಾಜದಲ್ಲಿ ವ್ಯವಹರಿಸುವಾಗ ನೆರವಾಗುತ್ತದೆ ಎಂದರು. ಶಾಲೆಯ ಪ್ರಿ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ತಮ್ಮ ಪೆÇೀಷಕರ ಜೊತೆ ಹಣವನ್ನು ನೀಡಿ ವಸ್ತುಗಳನ್ನು ಖರೀದಿಸಿ ಸಂತೆಯ ಪ್ರಾತ್ಯಕ್ಷಿಕ ಅನುಭವ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.